ಸುದ್ದಿ

ಚಂದನ್-ನಿವೇದಿತ ಎಂಗೇಜ್ಮೆಂಟ್ ಬಗ್ಗೆ ಸುದೀಪ್ ಪ್ರತಿಕ್ರಿಯೆ ಏನು ಗೊತ್ತ…!

22

ಗಾಯಕ ಚಂದನ್ ಶೆಟ್ಟಿ ಅವರು ಯುವದಸರಾ ವೇದಿಕೆಯಲ್ಲಿ ತಮ್ಮ ಗೆಳತಿ ನಿವೇದಿತಾ ಗೌಡ ಅವರಿಗೆ ಲವ್ ಪ್ರಪೋಸ್ ಮಾಡಿದ್ದರು. ಯುವ ದಸರಾ ವೇದಿಕೆಯಲ್ಲಿ ಪ್ರಪೋಸ್ ಮಾಡಿದ್ದು ಭಾರಿ ವಿರೋಧಕ್ಕೆ ಗುರಿಯಾಗಿತ್ತು. ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಇಬ್ಬರು ಬಿಗ್ ಬಾಸ್ ಕನ್ನಡ 5ನೇ ಆವೃತ್ತಿಯಲ್ಲಿ ಸ್ಪರ್ಧಿಗಳಾಗಿ ಭಾಗವಹಿಸಿದ್ದರು. ಬಿಗ್ ಮನೆಯಲ್ಲಿ ಇಬ್ಬರು ಆತ್ಮೀಯ ಬಾಂಧವ್ಯ ಹೊಂದಿದ್ದರು. ಬಿಗ್ ಬಾಸ್ ಮುಗಿದ ಮೇಲೂ ತಮ್ಮ ಫ್ರೆಂಡ್ ಷಿಪ್ ಮುಂದುವರಿಸಿದ್ದರು.

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರುಕನ್ನಡ ರ‍್ಯಾಪರ್, ಬಿಗ್‍ಬಾಸ್ ವಿಜೇತ ಚಂದನ್ಶೆಟ್ಟಿ ಹಾಗೂ ನಿವೇದಿತಾ ಗೌಡಪ್ರೀತಿ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಬಿಗ್‌ಬಾಸ್‌’ ಇನ್ನೇನು ಆರಂಭವಾಗಲಿದೆ. ಈ ನಿಮಿತ್ತ ವಾಹಿನಿ ಕರೆದ ಸುದ್ದಿಗೋಷ್ಠಿಯಲ್ಲಿ ಸುದೀಪ್ ಮತ್ತು ಪರಮೇಶ್ವರ್ ಗುಂಡ್ಕಲ್ ಕೆಲಉತ್ತರ ನೀಡಿದ್ದಾರೆ.

ಬಿಗ್ ಬಾಸ್ ಶೋ ಹಿನ್ನೆಲೆಯಲ್ಲಿ ಗುರುವಾರ ಖಾಸಗಿ ವಾಹಿನಿ ಸುದ್ದಿಗೋಷ್ಠಿಯನ್ನು ಆಯೋಜಿಸಿತ್ತು. ಈ ವೇಳೆ ಸುದೀಪ್ ಅವರಿಗೆ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಪ್ರೀತಿ ಬಗ್ಗೆ ಪ್ರಶ್ನಿಸಲಾಯಿತು. ಆಗ ಸುದೀಪ್, ಇದು ಬಿಗ್ ಬಾಸ್‍ನಿಂದ ನಡೆದಿರುವುದು ಎಂದು ನಾನು ಹೇಳಲ್ಲ, ಬಿಗ್ ಬಾಸ್ ಮುಗಿದ ಮೇಲೆ ನಡೆದಿರುವುದು ಎಂದು ಪ್ರತಿಕ್ರಿಯಿಸಿದ್ದಾರೆ.

ಇದು ಅವರಿಬ್ಬರ ಜೀವನ, ಅವರು ಮದುವೆ ಆಗಬೇಕು ಎಂದು ಇದ್ದಾರೆ. ಇದು ಬಿಗ್‍ಬಾಸ್‍ನಿಂದ ನಡೆದಿರುವುದು ಎಂದು ನಾನು ಹೇಳಲ್ಲ, ಇದು ಬಿಗ್‍ಬಾಸ್ ಮುಗಿದ ಮೇಲೆ ನಡೆದಿರುವುದು. ಅವರಿಬ್ಬರ ವಿಷಯ ಕೇಳಿ ಖುಷಿಯಾಗಿದ್ದೇನೆ. ಅದಕ್ಕೂ, ನನಗೂ ಸಂಬಂಧ ಇಲ್ಲ. ಇಬ್ಬರಿಗೂ ಒಳ್ಳೆಯದಾಗಲಿ ಎಂದು ಸುದೀಪ್ ಹೇಳಿದ್ದಾರೆ.

About the author / 

admin

Categories

Date wise

  • ರಾಜ್ಯದಲ್ಲಿ ಟಫ್ ರೂಲ್ಸ್ ಮತ್ತೆ ಜಾರಿ

    ರಾಜ್ಯ ಸರ್ಕಾರವು ಇಂದಿನಿಂದ ನೈಟ್ ಕರ್ಫ್ಯೂ & ವಾರಾಂತ್ಯದ ಕರ್ಫ್ಯೂ ಜಾರಿ ಮಾಡಲು ನಿರ್ಧರಿಸಲಾಗಿದೆ.ಈಗಾಗಲೇ ನೈಟ್ ಕರ್ಫ್ಯೂ ಜಾರಿ ಮಾಡಲಾಗಿದೆ ಮುಂದಿನ 2ವಾರಗಳ ಕಾಲ ಮುಂದುವರಿಸಲು ನಿರ್ಧರಿಸಲಾಗಿದೆ ರಾತ್ರಿ 10ರಿಂದ ಬೆಳಿಗ್ಗೆ 5 ರವರೆಗೆ ನೈಟ್ ಕರ್ಫ್ಯೂ ಜಾರಿ ಮಾಡಲಾಗಿದೆ.ವಾರಾಂತ್ಯದ ಕರ್ಫ್ಯೂವನ್ನು ದಿನಾಂಕ 7ರಿಂದ ಶುಕ್ರವಾರ ರಾತ್ರಿ 10 ಗಂಟೆಯಿಂದ 10 ರ ಸೋಮವಾರ ಬೆಳಿಗ್ಗೆ 5 ರವರೆಗೆ ಜಾರಿ ಮಾಡಲಾಗಿದೆ   ಸರ್ಕಾರಿ ಕಚೇರಿಗಳು ಮಾಲ್​ಗಳಿಗೆ ಭಾರತ ಸರ್ಕಾರದ ಮಾರ್ಗಸೂಚಿ ಅನುಸರಿಸಲಾಗುವುದು. * ಚಿತ್ರಮಂದಿರ, ಮಾಲ್,…

     728,121 total views,  818 views today

ಏನ್ ಸಮಾಚಾರ