News

ನಿಮ್ಮ ಜ್ಞಾನಕ್ಕೆ ಮತ್ತಷ್ಟು ಬಲ KAS ಅಥವಾ ಕೋಟ್ಯಾದಿ ಪತಿಗೆ ಇದು ತುಂಬ ಸಹಾಯ ಮಾಡಲಿದೆ ಲೇಖನ ಓದಿ
ನೂತನ ಸಂಸತ್ ಭವನದ ಉದ್ಘಾಟನೆ ಸ್ಮರಣಾರ್ಥ 75 ರೂ. ಮುಖಬೆಲೆಯ ವಿಶೇಷ ನಾಣ್ಯ ಬಿಡುಗಡೆ..!!
2000 ರೂಪಾಯಿ ಮುಖಬೆಲೆ ನೋಟು ಚಲಾವಣೆಯನ್ನು ಹಿಂಪಡೆದ ಭಾರತೀಯ ರಿಸರ್ವ್ ಬ್ಯಾಂಕ್ !
ಬಿಜೆಪಿ 2023 ಚುನಾವಣಾ ಪ್ರಣಾಳಿಕೆಯಲ್ಲಿ ಏನಿದೆ?
ಬಂಗಾರಪೇಟೆ (ಮೀ) ವಿಧಾನಸಭಾ ಕ್ಷೇತ್ರದ ನಾಮನಿರ್ದೇಶಿತ ಅಭ್ಯರ್ಥಿಗಳ ಪಟ್ಟಿ
ಹಸುವಿನ ಹೊಟ್ಟೆಯಲ್ಲಿ ಇತ್ತು ಬರೋಬರಿ 15 ಕೆಜಿ !!!!!!!!!
ಬಿಜೆಪಿ ಪಕ್ಷ ದಿಂದ ಅಭ್ಯರ್ಥಿಗಳ 2ನೇ ಪಟ್ಟಿ ಬಿಡುಗಡೆ ಮಾಡಿದೆ
ಬಿಜೆಪಿ ಪಕ್ಷ ದಿಂದ ಅಭ್ಯರ್ಥಿಗಳ ಪಟ್ಟಿ ಪ್ರಕಟ
ಪೋಕ್ಸೊ ಕಾಯಿದೆ ಅಡಿ ಆರೋಪಿಗೆ 20 ವರ್ಷ ಸಜೆ-20 ಸಾವಿರ ದಂಡ
5 ಬಾರಿ ಶಾಸಕರಾಗಿ ಗೆದ್ದ ಇವರು ಈಗ ಏನು ಮಾಡುತ್ತಿದ್ದಾರೆ ಗೊತ್ತಾ? ಈ ವ್ಯಕ್ತಿಯಿಂದ ರಾಜಕೀಯ ನಾಯಕರು ಕಲಿಯಬೇಕು
ಉತ್ತಮ ಆರೋಗ್ಯ ಟಿಪ್ಸ್
govt, modi

ಗೋ ಮಾತೆ ರಕ್ಷಿಸಿವ ಪ್ರಯತ್ನ ಮಾಡಿದ ಭಾರತದ ಮೊದಲ ಧೈರ್ಯವಂತ ಪ್ರಧಾನಿ – ನಮೋ- ನಮೋ

943

ಇನ್ನು ಮುಂದೆ ಕಸಾಯಿಖಾನೆಗಳಿಗೆ ಗೋವುಗಳನ್ನು ಮಾರಾಟ ಮಾಡುವಂತಿಲ್ಲ

ದೇಶಾದ್ಯಂತ ಗೋ ಹತ್ಯೆ ನಿಷೇಧ, ಕೇಂದ್ರ ಸರ್ಕಾರದಿಂದ ಅಧಿಕೃತ ಆದೇಶ, ಬಲಿಕೊಡಲು ಅಥವಾ ಕೊಲ್ಲಲು ಕೊಡುವಂತಿಲ್ಲ, ಕೇವಲ ರೈತರಿಗಷ್ಟೇ ಮಾರಾಟ ಮಾಡಬಹುದು ಯಾರಿಗೆ ಮಾರಾಟ ಮಾಡಿದೆ ಅನ್ನೋ ದಾಖಲೆ ಹೊಂದಿರಬೇಕು, ಮಾರಾಟ ಮಾಡಿದ ಮತ್ತು ಖರೀದಿ ಮಾಡಿದ ವ್ಯಕ್ತಿಗಳು ರಸೀದಿ ಹೊಂದಿರಬೇಕು.

ಮೋದಿ ಸರ್ಕಾರ ಕಸಾಯಿಖಾನೆಗಳಿಗೆ ಜಾನುವಾರುಗಳ ಮಾರಾಟವನ್ನು ಮಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಿದೆ. ಮೂರನೇ ವರ್ಷದ ಸಂಭ್ರಮದ ಹೊತ್ತಲ್ಲೇ ಕೇಂದ್ರ ಸರ್ಕಾರ ಈ ಕ್ರಮವನ್ನು ಕೈಗೊಂಡಿದೆ.

ಪರಿಸರ ಖಾತೆ ಸಚಿವಾಲಯ, ಅರಣ್ಯ ಮತ್ತು ಹವಾಮಾನ ಬದಲಾವಣೆ, ಭಾರತ ಸರ್ಕಾರ ಒಮ್ಮತದಿಂದ ಈ ಹೊಸ ನಿಯಮವನ್ನು ಜಾರಿಗೆ ತರಲು ನಿರ್ಧರಿಸಿದ್ದು ಈ ವಾರವೇ ಅಧಿಸೂಚನೆ ಜಾರಿಯಗುವ ಸಾಧ್ಯತೆಯಿದೆ. ಜಾನುವಾರುಗಳನ್ನು ಕೃಷಿ ಉಪಯೋಗಕ್ಕೆ ಮಾತ್ರ ಮಾರಾಟ ಮಾಡಬೇಕು, ಕಸಾಯಿಖಾನೆಗೆ ಮಾರುವಂತಿಲ್ಲ ಎಂದು ಪ್ರಾಣಿ ಹಿಂಸೆ ತಡೆ (ಪಿಸಿಎ) ಕಾಯ್ದೆಯ 1960ರ ಸೆಕ್ಷನ್ ಅಡಿಯಲ್ಲಿ ಈ ನಿರ್ಬಂಧ ಹೇರಲಾಗಿದೆ.

ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ತೆಗೆದುಕೊಂಡು ಹೋಗುವಾಗ ಆ ರಾಜ್ಯ ಸರ್ಕಾರದ ವಿಶೇಷ ಅನುಮತಿಯನ್ನು ಪಡೆಯಬೇಕು. ಧಾರ್ಮಿಕ ಕಾರ್ಯಕ್ರಮದಲ್ಲೂ ಈ ಮೇಲೆ ತಿಳಿಸಿದ ಜಾನುವಾರುಗಳ ಹತ್ಯೆಯನ್ನು ನಿಷೇಧಿಸಲಾಗಿದೆ.

ಹೊಸ ನಿಯಮದಲ್ಲಿರುವ ಪ್ರಮುಖ ಅಂಶಗಳು
ಇನ್ನು ಮುಂದೆ ಜಾನುವಾರುಗಳನ್ನು ವ್ಯಾಪಾರ ಮಾಡುವ ಮಾರಾಟಗಾರರು ಮತ್ತು ಖರೀದಿ ಮಾಡುವವರು ಗುರುತಿನ ಚೀಟಿ ಮತ್ತು ಮಾಲೀಕತ್ವದ ದಾಖಲೆಗಳನ್ನು ತೋರಿಸಬೇಕಾಗುತ್ತದೆ.

ಖರೀದಿಸಿದ ಜಾನುವಾರನ್ನು 6 ತಿಂಗಳೊಳಗೆ ಮತ್ತೊಮ್ಮೆ ಮಾರಾಟ ಮಾಡುವಂತಿಲ್ಲ. ರೈತರಿಗೆ ಮಾತ್ರ ಜಾನುವರನ್ನು ಮಾರಾಟ ಮಾಡಬೇಕು. ಖರೀದಿಸುವಾಗ ಕಡ್ಡಾಯವಾಗಿ ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ. ಎಳೆ ಕರುಗಳನ್ನು ಅಥವಾ ಅನಾರೋಗ್ಯ ಪೀಡಿತ ಹಸುಗಳನ್ನು ಮಾರಾಟ ಮಾಡುವಂತಿಲ್ಲ.

5 ಪ್ರತಿಗಳನ್ನು ಇಟ್ಟುಕೊಳ್ಳಬೇಕು:
ಒಂದು ಹಸುವನ್ನು ಕೊಂಡುಕೊಂಡರೆ, ಜಾನುವಾರು ವ್ಯಾಪಾರಿಯು ಮಾರಾಟ ಮಾಡಿದ ದಾಖಲೆಗಳ 5 ಪ್ರತಿಗಳನ್ನು ಇಟ್ಟುಕೊಳ್ಳಬೇಕಾಗುತ್ತದೆ. ಒಂದು ಪ್ರತಿಯನ್ನು ಸ್ಥಳೀಯ ಕಂದಾಯ ಅಧಿಕಾರಿಗೆ, ಎರಡನೇ ಪ್ರತಿಯನ್ನು ಹಸು ಖರೀದಿ ಮಾಡಿದ ವ್ಯಕ್ತಿಯ ಜಿಲ್ಲೆಯ ಸ್ಥಳೀಯ ಪಶು ವೈದ್ಯರಿಗೆ, ಮೂರನೇ ಪ್ರತಿಯನ್ನು ಜಾನುವಾರು ಮಾರುಕಟ್ಟೆ ಸಮಿತಿಗೆ ನೀಡಬೇಕಾಗುತ್ತದೆ. ಮಾರಾಟಗಾರ ಮತ್ತು ಖರೀದಿಸಿದ ವ್ಯಕ್ತಿಯೂ ಒಂದೊಂದು ಪ್ರತಿಗಳನ್ನು ಇಟ್ಟುಕೊಳ್ಳಬೇಕಾಗುತ್ತದೆ.

ಸಂಕ್ಷಿಪ್ತ ವಾಗಿ ಏನಿದು ಇಲ್ಲಿ ನೋಡಿ.

  • ಗೋವುಗಳನ್ನು ಅಕ್ರಮವಾಗಿ ಮಾರಾಟ ಮಾಡಿದರೆ 7 ವರ್ಷ ಶಿಕ್ಷೆ ಹಾಗೂ 3 ಲಕ್ಷ ರೂ. ದಂಡ ವಿಧಿಸಬಹುದಾಗಿದೆ.
  • ಗೋವು ಮಾಲೀಕ ಮಾರಾಟ ಮಾಡಿದ್ದು ಹಾಗೂ ಖರೀದಿದಾರ ರಸೀದಿ ಹೊಂದಿರಬೇಕು.
  • ಗೋವು ಮಾರಾಟಕ್ಕೆ ಯೋಗ್ಯವೇ ಎಂಬುದನ್ನು ಮೆಟರ್ನಿಟಿ ವೈದ್ಯರು ನಿರ್ಧರಿಸಬೇಕು. ಅವರ ಅನುಮತಿ ಇಲ್ಲದೇ ಮಾರುವಂತಿಲ್ಲ.
  • ಜಾನುವಾರು ಸಾಗಿಸಲು ಸೂಕ್ತ ದಾಖಲೆ ಹೊಂದಿರುವ ವಾಹನಗಳಲ್ಲೇ ಸಾಗಿಸಬೇಕು.
  • ಹಸು, ದನ ಅಥವಾ ಕರುಗಳ ಕೊಂಬುಗಳಿಗೆ, ಕಾಲುಗಳಿಗೆ ಅಥವಾ ದೇಹದ ಯಾವುದೇ ಭಾಗಗಳಿಗೆ ಯಾವುದೇ ರೀತಿಯ ಬಣ್ಣಗಳನ್ನು ಹಚ್ಚುವಂತಿಲ್ಲ.
  • ಅವುಗಳನ್ನು ಅನವಶ್ಯಕವಾಗಿ ಕೊರಳಿಗೆ ಹಗ್ಗ ಬಿಗಿದು ಕಟ್ಟುವಂತಿಲ್ಲ.
  • ಗೋವು ವಾಸಿಸುವ ಸ್ಥಳಗಳಲ್ಲಿ ಉತ್ತಮ ಗಾಳಿ, ಬೆಳಕಿನ ವ್ಯವಸ್ಥೆ, ಉತ್ತಮ ಆಹಾರ, ಶುದ್ಧ ನೀರು ಕೊಡತಕ್ಕದ್ದು.
  • ಪ್ರಾಣಿಗಳಿಗೆ ಯಾವುದೇ ರೀತಿಯ ಅಲಂಕಾರ ಮಾಡುವಂತಿಲ್ಲ. ಒಡವೆ, ಹಾರ ಮುಂತಾದ ಯಾವುದೇ ಅಲಂಕಾರಿಕ ವಸ್ತುಗಳನ್ನು ಹಾಕುವಂತಿಲ್ಲ.
  • ಹಸುವಿನ ಹಾಲು ಕುಡಿಯದಂತೆ ಕರುಗಳ ಬಾಯನ್ನು ಯಾವುದೇ ರೀತಿಯಲ್ಲಿ ಬಂದ್ ಮಾಡುವ ಹಾಗಿಲ್ಲ.
  • ಆ ನಿರ್ದಿಷ್ಟ ಪ್ರಾಣಿಯ ಉಸ್ತುವಾರಿ ಹೊತ್ತಿರುವ ಮನುಷ್ಯ, ಪ್ರಾಣಿಗೆ ಈ ಮೇಲ್ಕಂಡ ಯಾವುದೇ ತೊಂದರೆ ನೀಡಲಾಗಿಲ್ಲ ಎಂಬುದನ್ನು ಖಾತ್ರಿ ಪಡಿಸಿಕೊಂಡಿರಬೇಕು. ಉತ್ತಮ ಆಹಾರ, ನೀರು, ಬೆಳಕು ಸಿಗುತ್ತಿರುವ ಬಗ್ಗೆ ಅರಿವು ಹೊಂದಿರಬೇಕು.
  • ಪ್ರಾಣಿಗಳು ಯಾವುದೇ ರೀತಿಯ ದುರವಸ್ಥೆಯಲ್ಲಿದ್ದರೆ, ಆ ಪ್ರಾಣಿಗಳ ಉಸ್ತುವಾರಿ ಹೊತ್ತಿರುವ ವ್ಯಕ್ತಿಗಳೇ ಆ ತಪ್ಪುಗಳಿಗೆ ಹೊಣೆಗಾರರಾಗುತ್ತಾರೆ.

ಕೇರಳದಲ್ಲಿ ಬಾರಿ ವಿರೋಧ 

ಹಸುವಿನ ವಧೆ ನಿಷೇಧದ ಬಗ್ಗೆ ಕೇರಳ ಸರ್ಕಾರ ಕೋಪ ವ್ಯಕ್ತಪಡಿಸಿದೆ. ಸುದ್ದಿಗೆ ಪ್ರತಿಕ್ರಿಯಿಸಿದ ಕೇರಳದ ಎಡಪಕ್ಷ ಸರ್ಕಾರವು ಅದು ಫ್ಯಾಸಿಸ್ಟ್ ಚಳುವಳಿ ಎಂದು ಹೇಳಿದೆ.
ವಾಸ್ತವವಾಗಿ, ಕೇರಳದ ಮುಖ್ಯಮಂತ್ರಿ ಪಿನಾರೈ ವಿಜಯನ್ ಅವರು ಟ್ವೀಟ್ ಮಾಡಿದರು: “ಆರ್ಎಸ್ಎಸ್ ಮತ್ತು ಇತರ ಅಂಚುಗಳ ಫ್ಯಾಸಿಸ್ಟ್ ನೀತಿಗಳನ್ನು ಜಾರಿಗೆ ತರಲು ನಾವು (ಕೇಂದ್ರ) ಸರ್ಕಾರವನ್ನು ಅನುಮತಿಸುವುದಿಲ್ಲ. ಇಂತಹ ಹಲವು ಅಧಿಸೂಚನೆಗಳನ್ನು ನಾವು ಬಿಡುಗಡೆ ಮಾಡೋಣ, ನಾವು ಅವರನ್ನು ಅನುಸರಿಸುವುದಿಲ್ಲ “ಎಂದು ಕೇರಳ ಕೃಷಿ ಸಚಿವ ವಿ.ಎಸ್.ಸುನಿಲ್ ಕುಮಾರ್ ಹೇಳಿದ್ದಾರೆ.

About the author / 

admin

Categories

Date wise

  • ಟೊಮೇಟೋ ಅಂಚೆ ಲಕೋಟೆ ಬಿಡುಗಡೆ

    ಕೋಲಾರ ನಗರದ ಪ್ರಧಾನ ಅಂಚೆ ಕಚೇರಿಯಲಿ ಶನಿವಾರ ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಯಡಿ ಕೋಲಾರ ಜಿಲ್ಲೆಯ ಟೊಮೇಟೋ ಕುರಿತು ವಿಶೇಷ ಅಂಚೆ ಲಕೋಟೆಯನ್ನು ಬಿಡುಗಡೆ ಮಾಡಲಾಯಿತು. ಇತ್ತೀಚಿನ ದಿನಗಳಲ್ಲಿ ಟೊಮೇಟೋ ಕೋಲಾರ ಜಿಲ್ಲೆಯ ಪ್ರಧಾನ ತೋಟಗಾರಿಕೆ ಬೆಳೆಯಾಗಿ ಹೊರ ಹೊಮ್ಮಿದೆ. ರೈತರು ವರ್ಷದ ೩೬೫ ದಿನವೂ ಟೊಮೇಟೋವನ್ನು ಬೆಳೆಯುತ್ತಿದ್ದಾರೆ. ಕೋಲಾರದ ಎಪಿಎಂಸಿ ಮಾರುಕಟ್ಟೆಯೂ ಏಷ್ಯಾದ ಎರಡನೇ ಅತಿ ದೊಡ್ಡ ಟೊಮೇಟೋ ಮಾರುಕಟ್ಟೆಯಾಗಿ ಪ್ರಸಿದ್ಧಿ ಪಡೆದಿದೆ. ಈ ಹಿನ್ನೆಲೆಯಲ್ಲಿ ಟೊಮೇಟೋ ಬೆಳೆಯನ್ನು ಕೋಲಾರದ ಒಂದು ಜಿಲ್ಲೆ ಒಂದು…

ಏನ್ ಸಮಾಚಾರ