ಸುದ್ದಿ

ಗೂಗಲ್ ಕಂಪನಿ 200 ಮೇಕೆಗಳನ್ನು ನೇಮಿಸಿಕೊಂಡು,ಸಂಬಳ ಸಮೇತ ಹೊಟ್ಟೆ ತುಂಬಾ ಆಹಾರ ಕೊಡ್ತಾ ಇದೆ..!ಏಕೆ ಗೊತ್ತಾ.?ತಿಳಿಯಲು ಈ ಲೇಖನ ಓದಿ…

764

‘ಆಡು ಮುಟ್ಟದ ಸೊಪ್ಪಿಲ್ಲ’ ಎಂಬ ಗಾದೆ ಮಾತಿದೆ.ಈಗ ಗಾದೆ ಏತಕ್ಕೆ ಬಂತು ಅಂತೀರಾ…ವಿಷಯ ಇದೆ.ಅದೆಂದರೆ ನಮಗೆಲ್ಲಾ ಗೊತ್ತಿರುವ ಹಾಗೆ , ಸರ್ಚ್ ಎಂಜಿನ್ ಗೂಗಲ್ ನಲ್ಲಿ ಸಿಗದೇ ಇರೋ ವಿಷಯವೇ ಇಲ್ಲ.

ಇಂತಹ ಗೂಗಲ್ ಕಂಪನಿಯಲ್ಲಿ ಕೆಲಸ ಸಾಕು ಎನ್ನುವುದು ಎಷ್ಟೋ ಜನರ ಕನಸಾಗಿದೆ.ಇದು ಇಂಟರ್ನೆಟ್ ಸಂಬಂಧಿತ ಸೇವೆಗಳನ್ನು ಮತ್ತು ಉತ್ಪನ್ನಗಳನ್ನು ಒದಗಿಸುವ ವಿಶೇಷ ಅಮೆರಿಕನ್ ಬಹುರಾಷ್ಟ್ರೀಯ ನಿಗಮದ ಸಂಸ್ಥೆಯಾಗಿದೆ. ಇದರ ಪ್ರಧಾನ ಕಚೇರಿ ಕ್ಯಾಲಿಫೋರ್ನಿಯಾದ ಮೌಂಟನ್ ವ್ಯೂ ನಲ್ಲಿ ಇದೆ.ಈ ಕಂಪನಿ 88000ಕ್ಕಿಂತ ಹೆಚ್ಚು ಉದ್ಯೋಗಿಗಳು ಇದ್ದಾರೆ.

ಉದೊಗಿಗಳನ್ನಾಗಿ 200 ಮೇಕೆಗಳು…

ಜಗತ್ತಿನಾದ್ಯಂತ ಇರುವ ಈ ಬೃಹತ್ ಕಂಪನಿಯು ಮೇಕೆಗಳನ್ನು ತನ್ನ ಉದೊಗಿಗಳನ್ನಾಗಿ ನೇಮಿಸಿಕೊಂಡಿದೆ.ಇದು ನಿಮಗೆ ಕಾಮಿಡಿ ಅಂತ ಅನ್ನಿಸುತ್ತಿರಬಹುದು.ಆದ್ರೆ ಇದು ನಿಜ. ಗೂಗಲ್ ಕಂಪನಿ ಸುಮಾರು 200 ಮೇಕೆಗಳನ್ನು ತನ್ನ ಕೆಲಸಗಾರರನ್ನಾಗಿ ನೇಮಿಸಿಕೊಂಡಿದೆ, ಸಾಲದೆಂಬಂತೆ ಅವುಗಳಿಗೆ ಸಂಬಳ ಸಮೇತ ಅವುಗಳಿಗೆ ಹೊಟ್ಟೆ ತುಂಬ ಆಹಾರ ನೀಡ್ತಾ ಇದೆ.

 

ಮೇಕೆಗಳನ್ನು ನೆಮಿಸಿಕೊಂಡಿದ್ದೇಕೆ ಗೊತ್ತಾ..?

ಗೂಗಲ್ ಕಂಪನಿ ಮುಖ್ಯ ಕಚೇರಿಯಲ್ಲಿ ಆಡುಗಳಿವೆ. ಅವುಗಳಿಗೆ ಕಂಪನಿ ಸಂಬಳ ಕೂಡ ನೀಡ್ತಾ ಇದೆ. ಕಚೇರಿ ಮುಂದಿರುವ ಹುಲ್ಲುಗಳನ್ನು ತಿನ್ನುವುದು ಈ ಆಡುಗಳ ಕೆಲಸವಾಗಿದೆ. ವಾರಕ್ಕೊಮ್ಮೆ ಆಡುಗಳನ್ನು ಹುಲ್ಲಿರುವ ಜಾಗಕ್ಕೆ ಬಿಡಲಾಗುತ್ತದೆ. ಕೆಲವೇ ಕ್ಷಣಗಳಲ್ಲಿ ಆಡುಗಳು ಅವುಗಳನ್ನು ತಿಂದು ಮುಗಿಸುತ್ತವೆ.

ಕಾರಣ…

ಗೂಗಲ್ ಕಂಪನಿ ಮುಖ್ಯ ಕಚೇರಿಯ ಮುಂದಿರುವ ಹುಲ್ಲು ಕೀಳಲುಗೂಗಲ್ ಯಂತ್ರಗಳನ್ನು ಬಳಸುವುದಿಲ್ಲ. ಇದ್ರಿಂದ ಬರುವ ಧೂಳು ಹಾಗೂ ಶಬ್ದ ಕಚೇರಿಯ ಸಿಬ್ಬಂದಿಗೆ ತೊಂದರೆಯನ್ನುಂಟು ಮಾಡುತ್ತದೆ ಎಂಬ ಕಾರಣಕ್ಕೆ ಗೂಗಲ್ ಯಂತ್ರವನ್ನು ಬಳಸುವುದಿಲ್ಲವಂತೆ. ಇನ್ನೂ ವಿಶೇಷ ಏನಂದ್ರೆ ಹುಲ್ಲು ತಿನ್ನುವ ಕುರಿತು ಆಡುಗಳಿಗೆ ತರಬೇತಿ ಕೂಡ ನೀಡಲಾಗುತ್ತದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ