ಜ್ಯೋತಿಷ್ಯ

ಗುರುವಾರದ ನಿಮ್ಮ ರಾಶಿ ಭವಿಷ್ಯ ಹೇಗಿದೆ..?ಶುಭವೋ ಅಶುಭವೋ ನೋಡಿ ತಿಳಿಯಿರಿ…

352

ಗುರುವಾರ, 22/03/2018, ಇಂದಿನ ನಿಮ್ಮ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ…

ಮೇಷ:

ವಿದ್ಯಾರ್ಥಿಗಳಿಗೆ ನಿರೀಕ್ಷಿತ ಪ್ರಗತಿ. ಭೂಮಿ ಖರೀದಿ, ಮನೆ ನಿರ್ಮಾಣ ಕಾರ್ಯಗಳಿಗೆ ಒಳ್ಳೆಯ ಕಾಲ. ವಿನಾಕಾರಣ ಮನಸ್ತಾಪ ಬೇಡ. ದೂರ ಪ್ರಯಾಣದ ಸಾಧ್ಯತೆ. ಹಣಕಾಸಿನ ವಿಚಾರದಲ್ಲಿ ನೀವು ಉತ್ತಮ.

ವೃಷಭ:-

ತೊಂದರೆಗಳು ಹಂತಹಂತವಾಗಿ ಪರಿಹಾರವಾಗಲಿವೆ.ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸುವ ಸಾಧ್ಯತೆ. ಆರೋಗ್ಯಭಾಗ್ಯ ಉತ್ತಮವಾಗಿದೆ. ಮಕ್ಕಳು ಹೆಚ್ಚು ಶ್ರಮವಹಿಸಬೇಕು. ವಿನಾಕಾರಣ ಮನೆಯಲ್ಲಿ ಮನಸ್ತಾಪ.

ಮಿಥುನ:

ಉದ್ಯೋಗಿಗಳಿಗೆ ಭಡ್ತಿ.ವ್ಯಾಪಾರಸ್ಥರಿಗೆ ಉತ್ತಮ ವ್ಯವಹಾರದಿಂದ ಅಧಿಕ ಲಾಭ. ವಾದ-ವಿವಾದಗಳ ಬಗ್ಗೆ ಹೆಚ್ಚಿನ ಜಾಗ್ರತೆ. ವಿದ್ಯಾರ್ಥಿಗಳಿಗೆ ಶ್ರಮಕ್ಕೆ ತಕ್ಕ ಪ್ರತಿಫಲ. ಆರ್ಥಿಕ ಸ್ಥಿತಿ ಉತ್ತಮ. ಸಂಚಾರದಲ್ಲಿ ಜಾಗ್ರತೆ ಇರಲಿ.

ಕಟಕ :-

ಅನಾರೋಗ್ಯದಿಂದ ಅಧಿಕ ಖರ್ಚುವೆಚ್ಚ.ವ್ಯಾಪಾರಿಗಳಿಗೆ ಉತ್ತಮ ಧನಲಾಭ. ಹಣಕಾಸಿನ ಸ್ಥಿತಿ ಉತ್ತಮ. ಸಂಚಾರದಲ್ಲಿ ಜಾಗ್ರತೆ ಇರುವುದು ಅತೀ ಅವಶ್ಯಕ.

 

 ಸಿಂಹ:

ದೂರದ ಪ್ರಯಾಣ ಇರಲಿದೆ. ನ್ಯಾಯಾಲಯದ ಕೆಲಸ ಕಾರ್ಯಗಳಲ್ಲಿ ಆತಂಕ. ಸಂಗಾತಿಯ ಆಸೆಗಳನ್ನು ನೆರವೆರಿಸಲಿದ್ದೀರಿ. ಮನೆಯಲ್ಲಿ ನೆಮ್ಮದಿ ಇರಲಿದೆ. ಪ್ರೀತಿಪಾತ್ರರ ಜತೆ ಉತ್ತಮ ಸಮಯ ಕಳೆಯುತ್ತೀರಿ. ಹಣಕಾಸಿನ ಬಗೆಗಿನ ಕಾಳಜಿ ಜೊತೆಗೆ ಖರ್ಚುವೆಚ್ಚಗಳ ಬಗ್ಗೆ ಜಾಗ್ರತೆ ಇರಲಿ.

ಕನ್ಯಾ :-

ರಿಯಲ್’ಎಸ್ಟೇಟ್ ವ್ಯವಹಾರದಲ್ಲಿ ಅಧಿಕ ಲಾಭ. ಆದಾಯ ಹೆಚ್ಚಾಗಲಿದೆ. ಹಣಕಾಸಿನ ಸ್ಥಿತಿ ಉತ್ತಮ. ಹಿರಿಯರ ಆರೋಗ್ಯದ ಬಗ್ಗೆ ಜಾಗ್ರತೆ ಇರಲಿ. ಆಸ್ತಿಗೆ ಸಂಬಂಧಿಸಿದ ಕಾಗದ ಪತ್ರಗಳು ನಿಮ್ಮ ಕೈಸೇರುವ ಸಾಧ್ಯತೆ.

ತುಲಾ:

ಸಂತಾನ ಭಾಗ್ಯದಿಂದ ಹೆಚ್ಚಿನ ಸಂತೋಷ ಸಿಗಲಿದೆ. ವಿವಾಹದ ಮಾತುಕತೆಗಳಲ್ಲಿ ಭಾಗಿಯಾಗುವ ಸಾಧ್ಯತೆ. ಮಕ್ಕಳ ಆರೋಗ್ಯದಲ್ಲಿ ಸಮಸ್ಯೆ. ವಿವಾಹಕ್ಕೆ ಅಡ್ಡಿ ಆತಂಕಗಳು ಕಾಡಲಿವೆ.

ವೃಶ್ಚಿಕ :-

ಶುಭ ಕಾರ್ಯಗಳಿಗಾಗಿ ಓಡಾಟ. ಅಧಿಕ ಖರ್ಚು ಇರಲಿದೆ ಹಾಗಾಗಿ ಹಣಕಾಸಿನ ಬಗ್ಗೆ ಜಾಗ್ರತೆ ಇರಲಿ. ಕಚೇರಿಯಲ್ಲಿ ನಿಮ್ಮ ಕೈಕೆಳಗೆ ಕೆಲಸ ಮಾಡುವವರ ಕಡೆಯಿಂದ ನಿಮಗೆ ತೊಂದರೆ ಕೊಡುವ ಸಾಧ್ಯತೆ ಇರುತ್ತದೆ. ನಿಮ್ಮ ಪ್ರಯತ್ನಗಳು ಯಶಸ್ಸು ಸಾಧಿಸುತ್ತವೆ.

 

ಧನಸ್ಸು:

ಆರ್ಥಿಕವಾಗಿ ನಾನಾ ರೀತಿಯಲ್ಲಿ ಧನಸಂಗ್ರಹ.ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ಇರಲಿ. ಹಿರಿಯರೊಬ್ಬರ ಮಧ್ಯಪ್ರವೇಶದಿಂದ ಪತಿ, ಪತ್ನಿಯರ ನಡುವಿನ ಭಿನ್ನಾಭಿಪ್ರಾಯಕ್ಕೆ ಅಂತ್ಯ. ಸಹಕಾರದಿಂದ ಕಾರ್ಯಸಿದ್ಧಿ. ಕಚೇರಿಯ ಕೆಲಸಗಳು ಸರಾಗವಾಗಿ ನಡೆಯಲಿವೆ.ಸಂಗಾತಿಯ ಆರೋಗ್ಯದ ಬಗ್ಗೆ ಗಮನವಿರಲಿ.

ಮಕರ :-

ಸಂತಾನ ಭಾಗ್ಯದಿಂದ ಸಂತಸ. ಬದುಕಿನಲ್ಲಿ ನಿರಾಸಕ್ತಿ ಬುದ್ಧಿಯ ಅಸ್ಥಿರತೆ ಇರಲಿದೆ. ಪ್ರಯಾಣದಲ್ಲಿ ಎಚ್ಚರ ಇರಲಿ. ಕೆಲಸದ ಕಾರಣಗಳಿಂದ ನೀವು ಕುಟುಂಬದಿಂದ ದೂರಹೋಗಬೇಕಾದೀತು.ಕೆಲವು ಬೆಲೆಬಾಳುವ ವಸ್ತುಗಳ ಬಗ್ಗೆ ಎಚ್ಚರ ಇರಲಿ.

ಕುಂಭ:-

ಉದ್ಯೋಗಸ್ಥರಲ್ಲಿ ಸ್ಥಾನ ಬದಲಾವಣೆ. ನೂತನ ವ್ಯಾಪಾರ ಮಾಡಲು ಇದು ಸಕಾಲ. ವ್ಯಾಪಾರ ವ್ಯವಹಾರಗಳಲ್ಲಿ ಅಭಿವೃದ್ಧಿ. ಗೃಹೋಪಕರಣಗಳನ್ನು ಖರೀದಿ ಮಾಡಲಿದ್ದೀರಿ.ಶುಭ ವಾರ್ತೆ ಬರಲಿದೆ. ಆತ್ಮೀಯ ಗೆಳೆಯರಿಂದ ಬೆಂಬಲ.

ಮೀನ:-

ಆರೋಗ್ಯದಲ್ಲಿ ಸುಧಾರಣೆ. ಪ್ರಯಾಣ ಮಾಡುವ ಸಾಧ್ಯತೆ. ಆರೋಗ್ಯದ ಬಗ್ಗೆ ಜಾಗ್ರತೆ. ಕೌಟುಂಬಿಕ ಜೀವನದಲ್ಲಿ ಶಾಂತಿ ಕಾಪಾಡಿಕೊಂಡು ವಾಗ್ವಾದಗಳಿಂದ ದೂರವಿರಿ. ಯೋಗ್ಯ ವಯಸ್ಕರಿಗೆ ಕಂಕಣ ಬಲ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ