ಆರೋಗ್ಯ

ಕ್ಯಾನ್ಸರ್ ರೋಗ ನಿಯಂತ್ರಿಸುವ ಪವರ್ ಈ ತರಕಾರಿಗಳಿಗಿವೆ..!ತಿಳಿಯಲು ಈ ಲೇಖನ ಓದಿ…

334

ವ್ಯಕ್ತಿಯೋರ್ವನ ತಪಾಸಣೆಯ ಸಮಯದಲ್ಲಿ, ಒಂದು ವೇಳೆ ಆತನಿಗೆ ಅಥವಾ ಆಕೆಗೆ ಕ್ಯಾನ್ಸರ್ ಇದೆ ಎಂದು ದೃಢಪಟ್ಟರೆ, ಅವರು ತಮ್ಮ ಭವಿಷ್ಯ ಜೀವನದ ಕುರಿತು ವೈರಾಗ್ಯ ಭಾವವನ್ನು ಹೊಂದುವಂತಾಗುತ್ತದೆ. ಅಂತಹ ಭೀಷಣ ರೋಗ ಈ ಕ್ಯಾನ್ಸರ್. ಆದಾಗ್ಯೂ, ಆಧುನಿಕ ವೈದ್ಯಕೀಯ ಕ್ಷೇತ್ರವು ಎಷ್ಟೊoದು ಮುಂದುವರೆದಿದೆ ಎಂದರೆ, ಒಂದು ವೇಳೆ ಕ್ಯಾನ್ಸರ್ ಅನ್ನು ಆರಂಭಿಕ ಹಂತದಲ್ಲಿಯೇ ಗುರುತಿಸಿದರೆ ಅದನ್ನು ಸಂಪೂರ್ಣವಾಗಿ ಗುಣಪಡಿಸಬಹುದಾಗಿದೆ.

ಧೂಮಪಾನ, ಮದ್ಯಪಾನಗಳಂತಹ ದುಶ್ಚಟಗಳೊoದಿಗೆ, ನಮ್ಮ ಆಹಾರಕ್ರಮವೂ ಕೂಡ ಅನೇಕ ಬಾರಿ ಕ್ಯಾನ್ಸರ್‌ಗೆ ಕಾರಣವಾಗಬಹುದು. ಆದ್ದರಿಂದ ಕ್ಯಾನ್ಸರ್ ಅನ್ನು ದೂರವಿರಿಸಲು ನೆರವಾಗುವ ಆಹಾರಕ್ರಮವು ಯಾವುದೆಂದು ತಿಳಿಯರಿ.

ಈರುಳ್ಳಿ ಮತ್ತು ಬೆಳ್ಳುಳ್ಳಿ:-

ಭಾರತೀಯ ಅಡುಗೆಗಳಲ್ಲಿ ಪ್ರಮುಖ ಪಾತ್ರವನ್ನು ಪಡೆದಿರುವಂತಹ ಈರುಳ್ಳಿ ಮತ್ತು ಬೆಳ್ಳುಳ್ಳಿಯಲ್ಲಿ ಔಷಧೀಯ ಗುಣಗಳು ಇದೆ ಎನ್ನುವುದು ಪ್ರತಿಯೊಬ್ಬರಿಗೂ ತಿಳಿದಿರುವ ವಿಚಾರವಾಗಿದೆ. ಹಲವಾರು ಶತಮಾನಗಳಿಂದಲೂ ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ಮನೆಮದ್ದಾಗಿ ಬಳಸಿಕೊಳ್ಳುತ್ತಾ ಇದ್ದಾರೆ. ಈರುಳ್ಳಿ ಮತ್ತು ಬೆಳ್ಳುಳ್ಳಿ ಕೆಲವರಿಗೆ ಇಷ್ಟವಾಗಲ್ಲ.

ಯಾಕೆಂದರೆ ಇದರ ಘಾಟು ವಾಸನೆ. ಅಲ್ಲಿಯುಮ್ಸ್ ಪ್ರಭೇದಕ್ಕೆ ಸೇರಿರುವಂತಹ ಈರುಳ್ಳಿ ಮತ್ತು ಬೆಳ್ಳುಳ್ಳಿಯಲ್ಲಿ ಕ್ಯಾನ್ಸರ್ ಅನ್ನು ತಡೆಯುವ ಗುಣಗಳು ಇವೆಯಂತೆ. ಇದರಲ್ಲಿ ಇರುವಂತಹ ಕೆಲವೊಂದು ನೈಸರ್ಗಿಕ ರಾಸಾಯನಿಕಗಳು ಕೆಲವು ಬಗೆಯ ಕ್ಯಾನ್ಸರ್‌ನ್ನು ತಡೆಯುತ್ತದೆ. ಈರುಳ್ಳಿ ಮತ್ತು ಬೆಳ್ಳುಳ್ಳಿಯಲ್ಲಿ ಇರುವಂತಹ ಆ್ಯಂಟಿಆಕ್ಸಿಡೆಂಟ್‌ಗಳು ಡಿಎನ್ ಎ ಕೋಶಗಳಿಗೆ ಹಾನಿಯುಂಟು ಮಾಡುವ ಫ್ರೀ ರ್ಯಾಡಿಕಲ್ ಅನ್ನು ತಡೆಯುತ್ತದೆ.

ಎಲೆಕೋಸು:-

ಪ್ರತಿದಿನ ಎಲೆಕೋಸನ್ನು ಆಹಾರ ಕ್ರಮದಲ್ಲಿ ಸೇರಿಸಿಕೊಂಡರೆ ಅದರಿಂದ ನಮ್ಮ ದೇಹವು ಹೆಚ್ಚಿನ ಪೋಷಕಾಂಶಗಳನ್ನು ಪಡೆದುಕೊಂಡು ಕ್ಯಾನ್ಸರ್ ಕಾಯಿಲೆಯಿಂದ ನಮ್ಮನ್ನು ಕಾಪಾಡುತ್ತದೆ. ಇದಕ್ಕೆಲ್ಲಾ ಕಾರಣ ಎಲೆಕೋಸಿನಲ್ಲಿ ಸಲ್ಫೋರಫನೆ ಎನ್ನುವ ಅಂಶವಿದ್ದು, ಇದು ಕ್ಯಾನ್ಸರ್‌ನಿಂದ ರಕ್ಷಿಸುತ್ತದೆ.

ಎಲೆಕೋಸಿನಲ್ಲಿ ಇರುವಂತಹ ಅತ್ಯಂತ ಶಕ್ತಿಶಾಲಿ ಆ್ಯಂಟಿಆಕ್ಸಿಡೆಂಟ್ ಗಳು ಕ್ಯಾನ್ಸರ್ ಕೋಶಗಳ ಬೆಳವಣಿಗೆಗೆ ಕಾರಣವಾಗುವಂತಹ ಫ್ರೀ ರ್ಯಾಡಿಕಲ್ ಗಳನ್ನು ನಿವಾರಣೆ ಮಾಡುತ್ತದೆ.

ಹಸಿರು ಬಟಾಣಿ:-

ಹಸಿರು ಬಟಾಣಿಗಳು ಕ್ಯಾನ್ಸರನ್ನು ನಿಯಂತ್ರಿಸಲು ಇರುವ ಅತ್ಯಂತ ಶಕ್ತಿಶಾಲಿ ತರಕಾರಿಗಳಾಗಿವೆ. ಅದರಲ್ಲೂ ಮುಖ್ಯವಾಗಿ ಜಠರದ ಕ್ಯಾನ್ಸರ್ ನಿವಾರಿಸಲು ಇವು ಸಹಾಯ ಮಾಡುತ್ತವೆ.

ಇದರಲ್ಲಿ ಪೊಟಾಶಿಯಂ, ಕಬ್ಬಿಣಾಂಶ ಮತ್ತು ವಿಟಮಿನ್‍ಗಳು ಯಥೇಚ್ಛವಾಗಿದ್ದು, ಜೀರ್ಣಾಂಗ ವ್ಯವಸ್ಥೆಯನ್ನು ಶುದ್ಧಗೊಳಿಸಲು ಇವು ನೆರವು ನೀಡುತ್ತವೆ.

ಬೀನ್ಸ್:-

ಬೀನ್ಸ್‌ಗಳಲ್ಲಿ ವಿಟಮಿನ್ ಬಿಗಳು ಅಧಿಕ ಪ್ರಮಾಣದಲ್ಲಿರುತ್ತವೆ. ಇದು ಕ್ಯಾನ್ಸರ್ ನಿಯಂತ್ರಿಸಲು ಗಣನೀಯವಾದ ಕೊಡುಗೆಯನ್ನು ನೀಡುತ್ತದೆ.

ಇವುಗಳು ಕಾರ್ಸಿನೊಜೆನ್‍ಗಳನ್ನು ನಿವಾರಿಸುವ ಲುಲುಟೇನ್ ಮತ್ತು ವೈಯೊಲಕ್ಸಂಥಿನ್ ಮತ್ತು ಬೀಟಾ-ಕೆರೊಟಿನ್‍ಗಳು ಅಧಿಕ ಪ್ರಮಾಣದಲ್ಲಿರುತ್ತವೆ.

ಪಾಲಕ್ ಸೊಪ್ಪು:-

ಪಾಲಕ್ ಸೊಪ್ಪು ಸಹ ಪ್ರಪಂಚದಲ್ಲಿರುವ ಅತ್ಯಂತ ಆರೋಗ್ಯಕಾರಿ ಆಹಾರ ಪದಾರ್ಥಗಳಲ್ಲಿ ಒಂದಾಗಿದೆ. ಅದರಲ್ಲೂ ಇದು ಕ್ಯಾನ್ಸರನ್ನು ನಿಯಂತ್ರಿಸುವ ಆಹಾರ ಪದಾರ್ಥವಾಗಿರುವುದು ಸಹ ಇದರ ಹೆಚ್ಚುಗಾರಿಕೆ.

ಸ್ಪೈನಚ್‍ನಲ್ಲಿ ಪೊಟಾಶಿಯಂ, ಸತು, ವಿಟಮಿನ್ ಕೆ, ಇ, ಮತ್ತು ಎ ಗಳು ಅಧಿಕ ಪ್ರಮಾಣದಲ್ಲಿರುತ್ತವೆ.

ಬೀಟ್‍ರೂಟ್‍ಗಳು:-

ಬೀಟ್‍ರೂಟ್‍ಗಳು ರಕ್ತ ಪರಿಚಲನೆಯನ್ನು ಮತ್ತು ರಕ್ತದಲ್ಲಿ ಸಕ್ಕರೆಯ ಪ್ರಮಾಣವನ್ನು ಸುಸ್ಥಿತಿಯಲ್ಲಿಡಲು ನೆರವಾಗುತ್ತವೆ. ಇವುಗಳು ರಕ್ತದೊತ್ತಡವನ್ನು ನಿವಾರಿಸುವ ಅಂಶಗಳನ್ನು ಸಹ ಹೊಂದಿರುತ್ತವೆ.

ತರಕಾರಿ ಮತ್ತು ಹಣ್ಣನ್ನು ಹೆಚ್ಚು ಹೆಚ್ಚು ಸೇವಿಸಿರಿ:-

ತಾಜಾ ತರಕಾರಿ ಮತ್ತು ಹಣ್ಣುಗಳನ್ನು ನಿಮ್ಮ ದಿನನಿತ್ಯದ ಆಹಾರದ ಕ್ರಮದಲ್ಲಿ ಸೇರಿಸಿಕೊಳ್ಳುವುದರ ಮೂಲಕ ನಿಮ್ಮ ಶರೀರಕ್ಕೆ ಅವಶ್ಯಕವಾಗಿರುವ ಪೋಷಕಾಂಶಗಳು ಮತ್ತು ವಿಟಮಿನ್ ಗಳನ್ನು ಒದಗಿಸಬಹುದು. ಈ ಪೋಷಕಾಂಶಗಳು ಮತ್ತು ವಿಟಮಿನ್‌ಗಳು , ನಿಮ್ಮ ರೋಗನಿರೋಧಕ ಮಟ್ಟವನ್ನು ಹೆಚ್ಚಿಸುವುದು ಮಾತ್ರವಲ್ಲದೇ, ಸೋಂಕುಗಳು ಮತ್ತು ಕ್ಯಾನ್ಸರ್ ನ ವಿರುದ್ಧ ಕಾದಾಡಲೂ ಕೂಡ ಸಹಕಾರಿಯಾಗಿವೆ. ಅಲ್ಲದೇ, ಇವು ಜಂಕ್ ಮತ್ತು ಕೊಬ್ಬುಯುಕ್ತ ಆಹಾರಗಳ ಬಗೆಗಿನ ನಿಮಗಿರುವ ಹಸಿವನ್ನು ತನ್ನಿಂತಾನಾಗಿಯೇ ಕಡಿಮೆ ಮಾಡುತ್ತವೆ

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸ್ಪೂರ್ತಿ

    ಡೆಲಿವರಿ ಬಾಯ್ ಆಗಿ ಕೆಲಸ ಮಾಡ್ತಿರೋ 7 ವರ್ಷದ ಪುಟ್ಟ ಬಾಲಕನೊಬ್ಬನ ಕಥೆ ಏನು ಗೊತ್ತಾ..?ತಿಳಿಯಲು ಈ ಲೇಖನ ಓದಿ..

    7 ವರ್ಷದ ಕ್ಸಿಯೋ ಚಾಂಗ್ ಜಿಯಾಂಗ್ ಚೀನಾದ ಕಿಂಗ್‍ಡಾವೋ ನಗರದಲ್ಲಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡ್ತಿದ್ದಾನೆ. ಈತನ ವಿಡಿಯೋವನ್ನ ಮೊದಲು ಚೀನಾದ ವಿಡಿಯೋ ಹಂಚಿಕೆ ಜಾಲತಾಣ ಪೀರ್‍ವಿಡಿಯೋದಲ್ಲಿ ಹಂಚಿಕೊಳ್ಳಲಾಗಿದ್ದು, ಅನಂತರ ವೈರಲ್ ಆಗಿದೆ.

  • ದೇಶ-ವಿದೇಶ

    ಉಚಿತವಾಗಿ ಪ್ರಧಾನ ಮಂತ್ರಿ ಉಜ್ವಲ ಯೋಜನೆ ಪಡೆದುಕೊಳ್ಳುವುದು ಹೇಗೆ ಗೊತ್ತಾ..?ತಿಳಿಯಲು ಈ ಲೇಖನಿ ಓದಿ…

    ಪ್ರಧಾನಿ ನರೇಂದ್ರ ಮೋದಿಯವರು 2016ರಲ್ಲಿ ಪ್ರಧಾನಮಂತ್ರಿ ಉಜ್ವಲ ಯೋಜನೆ ಕ್ಷೇಮಾಭಿವೃದ್ಧಿ ಕಾರ್ಯಕ್ರಮವನ್ನು ಲಾಂಚ್ ಮಾಡಿದ್ದಾರೆ. ಈ ಯೋಜನೆ ಮೂಲಕ ಐದು ಕೋಟಿ ಎಲ್ಪಿಜಿ ಸೌಲಭ್ಯ ಒದಗಿಸುವ ಗುರಿಯನ್ನು ಹೊಂದಲಾಗಿದೆ.

  • ವಿಸ್ಮಯ ಜಗತ್ತು

    ಕೋತಿಯಿಂದ ನಾಯಿಗೆ ಸಿಕ್ಕ ಮಾತೃ ವಾತ್ಸಲ್ಯ..!ಇದು ಹೇಗೆ ಸಾಧ್ಯ ಅಂತೀರಾ…

    ಇತ್ತೀಚಿನ ದಿನಮಾನಗಳಲ್ಲಿ ಮನುಷ್ಯನನ್ನ ಕಂಡರೆ ಮನುಷ್ಯನಿಗೆ ಆಗುವುದಿಲ್ಲ. ಒಬ್ಬರನ್ನ ಕಂಡು ಇನ್ನೊಬ್ಬರು ಹೊಟ್ಟೆ ಕಿಚ್ಚು ಪಡುವುದೇ ಹೆಚ್ಚು.

  • ಇತಿಹಾಸ

    ʼಮೈಸೂರು ದಸರಾʼ ಶುರುವಾಗಿದ್ದೇಗೆ ಗೊತ್ತಾ?,ಅದರ ಹಿನ್ನೆಲೆ ಏನೆಂದು ತಿಳಿಹಿರಿ…!

    ಮೈಸೂರಿನ ಅಧಿದೇವತೆ ಶ್ರೀ ಚಾಮುಂಡೇಶ್ವರಿಯ ಆರಾಧನೆಯೊಡನೆ ಆರಂಭವಾಗುವ ನವರಾತ್ರಿ ವೈಭವದ ವಿಜಯ ದಶಮಿಯ ಮೈಸೂರು ದಸರಾ ಮಹೋತ್ಸವಕ್ಕೆ ಅದರದೇ ಆದ ಐತಿಹಾಸಿಕ ಪರಂಪರೆ ಹಾಗೂ ಸಾಂಸ್ಕೃತಿಕ ಹಿರಿಮೆ ಇದೆ. ವಿಜಯನಗರ ಸಾಮ್ರಾಜ್ಯದ ಅರಸರ ಕಾಲದಲ್ಲಿ ಆರಂಭಗೊಂಡು ಆಚರಿಸಲ್ಪಡುತ್ತಿದ್ದ ನವರಾತ್ರಿ ಉತ್ಸವದ ವಿಜಯ ದಶಮಿಯ ದಸರಾ ಹಬ್ಬಕ್ಕೆ ಇನ್ನೂ ಹೆಚ್ಚಿನ ವೈಭವದ ವರ್ಣಮಯ ಕಳೆ ತಂದುಕೊಟ್ಟವರು ವಿಜಯನಗರ ಅರಸರಲ್ಲೇ ಅತ್ಯಂತ ಪ್ರಖ್ಯಾತರಾಗಿದ್ದ ಶ್ರೀ ಕೃಷ್ಣದೇವರಾಯರು. ಆಗ ಹಂಪೆಯಲ್ಲಿರುವ ಮಹಾನವಮಿ ದಿಬ್ಬ ಮತ್ತು ವಿಜಯ ವಿಠಲ ದೇವಾಲಯಗಳು ಈ ಮಹೋತ್ಸವದ…

  • ಸುದ್ದಿ

    Month End Mobiles Fest: ಫ್ಲಿಪ್‌ಕಾರ್ಟ್ ಆಫರ್ ಸೇಲ್…!

    ಜನಪ್ರಿಯ ಇ ಕಾಮರ್ಸ್ ತಾಣ ಫ್ಲಿಪ್‌ಕಾರ್ಟ್‌ನಲ್ಲಿ ತಿಂಗಳ ಕೊನೆಯ ಮೊಬೈಲ್ ಫೆಸ್ಟ್ ಸೇಲ್ ನಡೆಯುತ್ತಿದೆ. ಬುಧವಾರ ಜುಲೈ 31ರವರೆಗೆ ನಡೆಯುವ ವಿಶೇಷ ಸೇಲ್‌ನಲ್ಲಿ ಗೂಗಲ್ ಪಿಕ್ಸೆಲ್ 3, ಮೋಟೋರೋಲ ಒನ್ ಪವರ್, ಹೊನೊರ್ 9N, ಪೋಕೋ F1 ಮತ್ತು ನೋಕಿಯಾ 6.1 ಮೇಲೆ ವಿಶೇಷ ಆಫರ್ ಸೇಲ್ ಘೋಷಿಸಲಾಗಿದೆ.  ಅಲ್ಲದೆ ಹೊನೊರ್ ಸರಣಿಯ ಫೋನ್‌ ಮೇಲೂ ಆಕರ್ಷಕ ಡಿಸ್ಕೌಂಟ್ ಪ್ರಕಟಿಸಲಾಗಿದೆ.  ಹೊನೊರ್ 10 Lite, ಹೊನೊರ್ 7s, ಹೊನೊರ್ 9i ಮತ್ತು ಹೊನೊರ್ 9 Lite ಮಾದರಿ ಡಿಸ್ಕೌಂಟ್‌ನಲ್ಲಿ ದೊರೆಯುತ್ತದೆ. ಉಳಿದಂತೆ ಸ್ಯಾಮ್‌ಸಂಗ್ ಗ್ಯಾಲಕ್ಸಿ…

  • Motivation

    ಓಂ “ॐ ” ಮಂತ್ರ ಪಠಿಸಿ, ಸರ್ವ ರೋಗ ನಿವಾರಿಸಿ !

    ॐ ‘ಗೆ ಕೇವಲ ಧಾರ್ಮಿಕ ಮಹತ್ವ ಅಲ್ಲದೇ ಶಾರೀರಿಕ ಮಹತ್ವ ಕೂಡಾ ಇದೆ ಎಂಬುದು ನಿಮಗೆ ತಿಳಿದಿದೆಯೇ.? ॐ  ಓಂ ವಿಶ್ವದಲ್ಲಿನ ಪ್ರಮುಖ ಶಬ್ದಗಳಲ್ಲಿ ಒಂದಾಗಿದೆ ಎಂದು ನಂಬಲಾಗಿದೆ. ಪ್ರತಿದಿನ ಓಂ ಅನ್ನು ಪಠಿಸುವುದರಿಂದ ನಿಮ್ಮ ಜೀವನಕ್ಕೆ ಧನಾತ್ಮಕತೆಯನ್ನು ತರಲು ಸಹಾಯ ಮಾಡುತ್ತದೆ. ಇದು ನಿಮ್ಮ ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕೆ ಇನ್ನೂ ಅನೇಕ ಪ್ರಯೋಜನಗಳನ್ನು ಹೊಂದಿದೆ. ॐ  ಓಂ ವಿಶ್ವದಲ್ಲಿನ ಪ್ರಮುಖ ಶಬ್ದಗಳಲ್ಲಿ ಒಂದಾಗಿದೆ ಎಂದು ನಂಬಲಾಗಿದೆ. ಈ ಸಂಪೂರ್ಣ ಬ್ರಹ್ಮಾಂಡವನ್ನು ಸೃಷ್ಟಿಸುವ ಹಿಂದೆ ಇದ್ದ…