ಕಾಲವೊಂದಿತ್ತು…ನಾವು 1 ಜಿ.ಬಿ. ಡೇಟಾವನ್ನು ತಿಂಗಳಾನು ಗಟ್ಟಲೆ ಎಲ್ಲಿ ಮುಗಿದು ಹೋಗುತ್ತೋ ಅಂತ ಬಳಸ್ತಾ ಇದ್ವಿ. ಅದಕ್ಕೆ ಅಷ್ಟೇ ಹಣವನ್ನು ಕೊಡಬೇಕಾಗಿತ್ತು ಕೂಡ. ಆದ್ರೆ ಜಿಯೋ ಬಂದಮೇಲೆ ಎಲ್ಲಾ ಚೇಂಜ್ ಆಗಿದೆ.ಎಲ್ಲಾ ನೆಟ್ವರ್ಕ್ ಕಂಪನಿಗಳು ಜನಗಳ ಹತ್ತಿರ ಹಣವನ್ನು ಲೂಟಿ ಮಾಡುತ್ತಿದ್ದವು.ಆದ್ರೆ ಜಿಯೋ ಬಂದ ಮೇಲೆ ಅದಕ್ಕೆಲ್ಲಾ ಬ್ರೇಕ್ ಬಿದ್ದಿದೆ.ಇದಕ್ಕಾಗಿಯೇ ನಾವು ಜಿಯೋಗೆ ಕೋಟಿ ಕೋಟಿ ನಮಸ್ಕಾರ ಹೇಳಲೇಬೇಕು.

ಬಿಗ್ ಆಫರ್…
ಹೌದು,ಜಿಯೋ ಬಂದಮೇಲೆ ಮೊಬೈಲ್ ಕಂಪನಿಗಳ ನಡುವಿನ ಪೈಪೋಟಿ ಶುರುವಾಗಿದ್ದು,ಇದರಿಂದ ಗ್ರಾಹಕರಿಗೆ ಅನುಕೂಲವಾಗಿದೆ. ಜಿಯೋ ಗ್ರಾಹಕರಿಗೆ ಬಂಪರ್ ಆಫರ್ ನೀಡಲು ಮುಂದಾಗಿದ್ದು, 98 ರೂಪಾಯಿಗೆ ದಿನಕ್ಕೆ 1.5 ಜಿ.ಬಿ. ಡೇಟಾವನ್ನು 28 ದಿನಗಳ ಕಾಲ ನೀಡಲಿದೆ.

ದಿನಕ್ಕೆ 1.5 ಜಿ.ಬಿ. ಡೇಟಾ…
ಈಗಾಗಲೇ 399 ರೂ. ಪ್ರೈಮ್ ಯೋಜನೆಯಲ್ಲಿ ಪ್ರತಿ ದಿನ 1 ಜಿ.ಬಿ. ಡೇಟಾವನ್ನು ಜಿಯೋ ತನ್ನ ಗ್ರಾಹಕರಿಗೆ ನೀಡುತ್ತಿದೆ.ಆದ್ರೆ ಗ್ರಾಹಕರಿಗೆ ಆಫರ್ ಕೊಡುವಲ್ಲಿ ಮೊಬೈಲ್ ಕಂಪನಿಗಳ ನಡುವಿನ ಪೈಪೋಟಿ ಸ್ಪರ್ಧೆ ಹೆಚ್ಚಾಗಿದ್ದು, ತನ್ನ ಗ್ರಾಹಕರನ್ನು ಉಳಿಸಿಕೊಳ್ಳಲು ಜಿಯೋ ದಿನಕ್ಕೆ 1.5 ಜಿ.ಬಿ. ಡೇಟಾ ನೀಡಲು ಮುಂದಾಗಿದೆ.

ಗಣರಾಜ್ಯೋತ್ಸವ ಆಫರ್…
ಗಣರಾಜ್ಯೋತ್ಸವ ಪ್ರಯುಕ್ತ ಪ್ರಸ್ತುತ ಟ್ಯಾರಿಫ್ ಗಳ ಮೇಲೆ 50 ರೂ. ತಗ್ಗಿಸಿದ್ದು,ಈಗಿರುವ , ಯೋಜನೆಗಳ ಮೇಲೆ ಶೇ. 50 ರಷ್ಟು ಡೇಟಾ ಹೆಚ್ಚುವರಿಯಾಗಿ ನೀಡಲಾಗುವುದು ಎಂದು ರಿಲಿಯನ್ಸ್ ಜಿಯೋ ತಿಳಿಸಿದೆ.

98 ರೂ. ಯೋಜನೆ:-
98 ರೂ. ಯೋಜನೆಯಲ್ಲಿ ದಿನ 1 ಜಿ.ಬಿ. ದೊಂದಿಗೆ ಫ್ರೀ ವಾಯ್ಸ್ ಕಾಲ್ ಮತ್ತು ಮೆಸೇಜ್ ಸೌಲಭ್ಯ ಇರುತ್ತದೆ. ಹೊಸ ಗ್ರಾಹಕರನ್ನು ಸೆಳೆಯಲು ಶೇ. 50 ರಷ್ಟು ಹೆಚ್ಚುವರಿ ಡೇಟಾ ನೀಡಲಾಗುವುದು.