ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಉತ್ತರ ಪ್ರದೇಶದ 13 ವರ್ಷದ ಬಾಲಕನೊಬ್ಬ ಧರ್ಮ ಹಾಗೂ ಗಣ್ಯರ ಜೀವನಚರಿತ್ರೆ ಕುರಿತು ಸುಮಾರು 135 ಪುಸ್ತಕಗಳನ್ನು ಬರೆದು, 4 ವಿಶ್ವದಾಖಲೆಗಳನ್ನು ಮಾಡಿ ಚಿಕ್ಕ ವಯಸ್ಸಿನಲ್ಲೇ ಅದ್ವಿತೀಯ ಸಾಧನೆಗೈದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾನೆ.

ಈ ಅಪರೂಪದ ಸಾಧನೆಗೈದ ಬಾಲಕನ ಹೆಸರು ಮೃಗೇಂದ್ರ ರಾಜ್. ಈತ ತನ್ನ 6ನೇ ವಯಸ್ಸಿನಲ್ಲೇ ಪುಸ್ತಕ ಬರೆಯುವ ಹವ್ಯಾಸ ಆರಂಭಿಸಿದ್ದ ಈತ ಮೊದಲು ಕವನ ಸಂಕಲನವನ್ನು ಬರೆದಿದ್ದನು. ಆ ನಂತರ ಕಾಲ ಕಳೆಯುತ್ತಿದ್ದಂತೆ ಬಾಲಕನ ಜೊತೆ ಆತನ ಪುಸ್ತಕ ಬರೆಯುವ ಆಸಕ್ತಿ ಕೂಡ ಹೆಚ್ಚಾಗುತ್ತಾ ಬಂತು. ಈವರೆಗೆ ಮೃಗೇಂದ್ರ ಬರೋಬ್ಬರಿ 135 ಪುಸ್ತಕಗಳನ್ನು ಬರೆದಿದ್ದಾನೆ. `ಆಜ್ ಕಾ ಅಭಿಮನ್ಯು’ ಎಂಬ ಕಾವ್ಯನಾಮದಲ್ಲಿ ಮೃಗೇಂದ್ರ ಪುಸ್ತಕಗಳನ್ನು ಬರೆಯುತ್ತಿದ್ದಾನೆ.

ಮೃಗೇಂದ್ರನ ತಾಯಿ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿದ್ದು, ತಮ್ಮ ಮಗ ಪುಸ್ತಕಗಳನ್ನು ಬರೆಯುವ ಬಗ್ಗೆ ತೋರಿಸುತ್ತಿದ್ದ ಆಸಕ್ತಿಯನ್ನು ಗುರುತಿಸಿ ಆತನನ್ನು ಬೆಂಬಲಿಸಿದ್ದಾರೆ. ಜೊತೆಗೆ ಆತನ ತಂದೆ ರಾಜ್ಯ ಸಕ್ಕರೆ ಕಾರ್ಖಾನೆ ಹಾಗೂ ಕಬ್ಬು ಅಭಿವೃದ್ಧಿ ಇಲಾಖೆಯಲ್ಲಿ ಉದ್ಯೋಗದಲ್ಲಿದ್ದಾರೆ.ಈ ಬಗ್ಗೆ ಮಾತನಾಡಿದ ಬಾಲಕ, ನಾನು ರಾಮಾಯಣದಲ್ಲಿರುವ 51 ಪಾತ್ರಗಳ ಬಗ್ಗೆ ವಿಶ್ಲೇಷಿಸಿ ಪುಸ್ತಕಗಳನ್ನು ಬರೆದಿದ್ದೇನೆ. ನಾನು ಬರೆದ ಎಲ್ಲಾ ಪುಸ್ತಕಗಳು 25 ರಿಂದ 100 ಪುಟಗಳನ್ನು ಹೊಂದಿದೆ. ನನ್ನ ಈ ಪ್ರತಿಭೆಯನ್ನು ಮೆಚ್ಚಿ ಡಾಕ್ಟರೇಟ್ ಪದವಿ ನೀಡುವುದಾಗಿ ಲಂಡನ್ ವರ್ಲ್ಡ್ ಯೂನಿವರ್ಸಿಟಿ ಆಫ್ ರೆಕಾರ್ಡ್ಸ್ ಆಫರ್ ನೀಡಿತ್ತು ಎಂದು ತಿಳಿಸಿದ್ದಾನೆ.

ದೊಡ್ಡವನಾದ ಮೇಲೆ ನಾನು ಬರಹಗಾರನಾಗಲು ಇಷ್ಟಪಡುತ್ತೇನೆ. ವಿವಿಧ ವಿಷಯಗಳ ಬಗ್ಗೆ, ಬೇರೆ ಬೇರೆ ಆಯಾಮದಲ್ಲಿ ಇನ್ನೂ ಹಲವಾರು ಪುಸ್ತಕಗಳನ್ನು ಬರೆಯಲು ಬಯಸುತ್ತೇನೆ ಎಂದಿದ್ದಾನೆ.ಉತ್ತರ ಪ್ರದೇಶ ಸಿಎಂ ಯೋಗಿ ಆಧಿತ್ಯನಾಥ್ ಸೇರಿದಂತೆ ಹಲವು ಗಣ್ಯರ ಬಗ್ಗೆ ಈ ಪೋರ ಪುಸ್ತಕ ಬರೆದಿದ್ದು, ಚಿಕ್ಕವಯಸ್ಸಿನಲ್ಲೇ ಈ ಮಟ್ಟಿಗೆ ಸಾಧನೆ ಮಾಡಿರುವುದಕ್ಕೆ ಎಲ್ಲೆಡೆಯಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಕಳೆದ ತಿಂಗಳು ಮಂಡ್ಯ ಜಿಲ್ಲೆಯ ಡಣ್ಣಾಯಕನಪುರ ಎಂಬ ಗ್ರಾಮ ಈ ಒಂದು ದೃಶ್ಯಕ್ಕೆ ಸಾಕ್ಷಿಯಾಗಿತ್ತು. ಮಗು ತೊಟ್ಟಿಲಿನಲ್ಲಿ ಅಳುತ್ತಿದ್ದ ಸಮಯದಲ್ಲಿ ಮನೆಯೊಳಗೆ ಬರುವ ಈ ಬಸಪ್ಪ ಎಂಬ ಎತ್ತು ತೊಟ್ಟಿಲನ್ನು ತೂಗಿ ಮಗುವನ್ನು ಮಲಗಿಸಿದೆ. ಜೊತೆಗೆ ತನ್ನ ಕೊಂಬಿನಲ್ಲಿ ಕಟ್ಟಿದ್ದ ನೋಟಿನ ಕಂತೆಯನ್ನು ತೊಟ್ಟಿಲಿಗೆ ಬೀಳಿಸಿದೆ. ಇದನ್ನು ನೋಡಿದ ಜನತೆ ಇದು ದೈವ ಸ್ವರೂಪಿ ಬಸವಣ್ಣನ ಪವಾಡ ಎಂದರು. ಈ ದೃಶ್ಯದ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ರಾಮನಗರದ ಕವಾಣಪುರ ಗ್ರಾಮದಲ್ಲಿ ನೂರಾರು ವರ್ಷಗಳ…
ಗ್ರೀನ್ ಟೀ ಅನ್ನು ಆರೋಗ್ಯಕ್ಕೆ ಹೆಚ್ಚು ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಕಳೆದ ಕೆಲವು ವರ್ಷಗಳಲ್ಲಿ, ಬದಲಾಗುತ್ತಿರುವ ಜೀವನಶೈಲಿಯ ಪರಿಣಾಮದಿಂದಾಗಿ ಒತ್ತಡ ಹೆಚ್ಚಾಗುತ್ತಿದ್ದು, ಗ್ರೀನ್ ಟೀ ಕುಡಿಯುವ ಪ್ರವೃತ್ತಿ ವೇಗವಾಗಿ ಹೆಚ್ಚಾಗಿದೆ. ಪ್ರತಿದಿನ ನಿಗದಿತ ಪ್ರಮಾಣದ ಗ್ರೀನ್ ಟೀ ಸೇವಿಸುವುದರಿಂದ ನಿಮ್ಮ ಆರೋಗ್ಯಕ್ಕೆ ಹಲವು ಪ್ರಯೋಜನಗಳಿವೆ. ಗ್ರೀನ್ ಟೀ ಆರೋಗ್ಯಕ್ಕೆ ಪ್ರಯೋಜನಕಾರಿ ಎಂಬುದನ್ನು ಹಲವು ಸಂಶೋಧನೆಗಳು ಪತ್ತೆ ಹಚ್ಚಿವೆ. ಆದರೆ ಎಚ್ಚರ! ಅತಿಯಾದ ಗ್ರೀನ್ ಟೀ ಸೇವನೆ ನಿಮ್ಮ ದೇಹಕ್ಕೆ ಹಾನಿ ಉಂಟುಮಾಡಬಹುದು. ಆದ್ದರಿಂದ ನೀವು ಹೆಚ್ಚು ಟೀ…
ಜನಪ್ರಿಯ ಆನ್‌ಲೈನ್ ಆಟಗಳಲ್ಲಿ ಒಂದಾದ ಪಬ್‌ಜಿ ಇತ್ತೀಚಿಗೆ ಯಾವಾಗಲೂಕೆಟ್ಟ ಕಾರಣಗಳಿಗಾಗಿಯೇ ಸುದ್ದಿಯಾಗುತ್ತಿದೆ. ಪಬ್‌ಜಿ ಆಟಗಾರರು ಆತ್ಮಹತ್ಯೆ ಮಾಡಿಕೊಂಡಿದ್ದಾರೆಮತ್ತು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಮತ್ತು ಇತರೆ ವ್ಯಸನಗಳಿಗೆತುತ್ತಾಗಿದ್ದಾರೆ ಎಂಬ ಅನೇಕ ಪ್ರಕರಣಗಳು ದಾಖಲಾಗಿವೆ. ಇಂತಹುದೇ ಮತ್ತೊಂದು ಪ್ರಕರಣ ಹೈದರಾಬಾದ್‌ನಲ್ಲಿವರದಿಯಾಗಿದೆ. ಹೌದು, ಪಬ್‌ಜಿ ಆಟದ ಕಾರಣದಿಂದಾಗಿ ಹೈದರಾಬಾದ್‌ನ 19 ವರ್ಷದ ಯುವಕನೋರ್ವಪಾರ್ಶ್ವವಾಯುವಿಗೆ ಒಳಗಾಗಿದ್ದಾನೆ ಎಂದು ತಿಳಿದುಬಂದಿದೆ. ಹೌದು, ಕಳೆದ ಆಗಸ್ಟ್ 26 ರಂದು ಈ ಘಟನೆ ನಡೆದಿದ್ದು, ಪಬ್‌ಜಿಗೆವ್ಯಸನಿಯಾಗಿದ್ದ ಹೈದರಾಬಾದ್‌ನ ಯುವಕನಿಗೆ ಪಾರ್ಶ್ವವಾಯು ಅಪ್ಪಳಿಸಿದೆ. ಐಸಿಯುಗೆ ಕರೆದೊಯ್ಯಲಾಗಿರುವಆತ ತನ್ನ ಬಲಗೈ…
ಚಾಮರಾಜನಗರ ತಾಲೂಕಿನ ಚಂದಕವಾಡಿ ನಿವಾಸಿ ಟೈಲರ್ ಎಸಾಬುಲ್ಲಾ ಖಾನ್ ಕಳೆದ 12 ವರ್ಷಗಳಿಂದ ಟೈಲರ್ ವೃತ್ತಿ ಮಾಡಿಕೊಂಡಿದ್ದಾರೆ. ಹುಡುಗರಿಗೆ ಅಂಗಿ, ನಿಕ್ಕರ್ ಮತ್ತು ಬಾಲಕಿಯರಿಗೂ ಡ್ರೆಸ್ ಹೊಲಿದು ಕೊಡುತ್ತಿದ್ದಾರೆ. ಪ್ರತಿ ಸರ್ಕಾರಿ ಶಾಲೆಗೆ ಕೂಡ ತಾವೇ ಖುದ್ದಾಗಿ ಭೇಟಿ ನೀಡಿ ಮಕ್ಕಳಿಂದ ಬಟ್ಟೆಯ ಅಳತೆ ಪಡೆದುಕೊಳ್ಳುತ್ತಾರೆ. 5 ವರ್ಷದಿಂದ 30 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಬಟ್ಟೆ ಹೊಲಿದು ಕೊಟ್ಟಿದ್ದಾರೆ. ಪ್ರತಿ ವರ್ಷ 5 ರಿಂದ6 ಸಾವಿರ ವಿದ್ಯಾರ್ಥಿಗಳಿಗೆ ಬಟ್ಟೆ ಹೊಲಿಯುತ್ತಿದ್ದಾರೆ. ಬೇರೆಯವರ ಬಳಿ ಒಂದು ಜೊತೆ ಬಟ್ಟೆ…
ಮೊಟ್ಟಮೊದಲನೆಯದಾಗಿ ಕಿಟ್ಟೆಲ್ಲರು ಇಂದಿಗೂ ‘ಅವಿಸ್ಮರಣೀಯರಾಗಿರುವುದು’ ಅವರ ಕಿಟ್ಟೆಲ್ ಶಬ್ದಕೋಶದಿಂದ. ಸುಮಾರು ೨೦ ವರ್ಷಗಳಕಾಲ ಸತತವಾಗಿ ದುಡಿದಿದ್ದರ ಪರಿಣಾಮ – ಈ ಅಮರ ಕೃತಿಯ ನಿರ್ಮಾಣ. ಅವರು ೧೮೫೭ ರಲ್ಲಿ ಮೊದಲುಮಾಡಿ, ೧೮೯೩ ರಲ್ಲಿ ಹಸ್ತಪ್ರತಿ ತಯಾರಿಸಿದರು. ಅದನ್ನು ‘ಬಾಸೆಲ್ ಮಿಶನ್’ ನವರು ಪ್ರಕಟಿಸಿದರು.
ಈಗ ಬರಲಿರುವ 2020ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಭಾರತೀಯ ಮೂಲದ ಮಹಿಳೆಯೊಬ್ಬರು ಸ್ಪರ್ಧಿಸುತ್ತಿದ್ದಾರೆ. ಈ ಕುರಿತು ಅವರು ಅಮೆರಿಕದ ಮಾಧ್ಯಮವೊಂದಕ್ಕೆ ಅಧಿಕೃತವಾಗಿ ಹೇಳಿದ್ದಾರೆ. ಇವರು ಅಮೇರಿಕದ ಕಾಂಗ್ರೆಸ್ ನಮಹ ಮೊದಲ ಮಹಿಳಾ ಹಿಂದೂ ಕಾರ್ಯಕರ್ತೆ ಯಾಗಿದ್ದಾರೆ. ಹೆಸರು ತುಳಸಿ ಗಬ್ಬಾರ್ಡ್. ಈಗ ಇವರು ಅಮೆರಿಕದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಬೇಕೆಂಬ ನಿರ್ಧಾರ ಮಾಡಿದ್ದಾರೆ. ತುಳಸಿ ಅವರು ಸದ್ಯ ಅಮೆರಿಕ ವಿದೇಶಾಂಗ ಇಲಾಖೆಯ ಸಮಿತಿಯ ಸದಸ್ಯರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈಗ ಇವರ ನಿರ್ಧಾರವು ಎಲ್ಲರೂ ಆಶ್ಚರ್ಯಪಡುವಂತೆ ಮಾಡಿದೆ. ಗಬ್ಬಾರ್ಡ್ ಇರಾಕ್…