ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ದರ್ಶನ್ ಅಭಿಮಾನಿಗಳ ಬಳಗ ಇದನ್ನು ಅಧಿಕೃವಾಗಿ ಘೋಷಿಸಿಕೊಂಡಿದೆ. ‘ಕುರುಕ್ಷೇತ್ರ’ ಚಿತ್ರ ಬರೊಬ್ಬರಿ . 100 ಕೋಟಿ ಕಲೆಕ್ಷನ್ ಮಾಡಿದೆ ಎಂದು ಕೇಕ್ ಕತ್ತರಿಸಿ ಸಂಭ್ರಮ ಆಚರಿಸಿದೆ. ಆ ಸಂಭ್ರಮಾಚರಣೆಯಲ್ಲಿ ಚಿತ್ರದ ಪ್ರಮುಖ ಪಾತ್ರಧಾರಿ ದರ್ಶನ್ ಕೂಡ ಭಾಗಿಯಾಗಿದ್ದಾರೆ.
ಇದೊಂದು ಖುಷಿ ವಿಚಾರ. ಅಧಿಕೃತವಾಗಿ ಇದರ ಗಳಿಕೆ ಎಷ್ಟು, ಏನು ಎನ್ನುವುದು ಗೊತ್ತಿಲ್ಲ. ಆದರೆ ಆರಂಭದಿಂದಲೇ ದಾಖಲೆ ಕಲೆಕ್ಷನ್ ಆಗುತ್ತಿರುವ ಬಗ್ಗೆ ಮಾಹಿತಿ ಇತ್ತು. ಆಗಾಗ ನಿರ್ಮಾಪಕರು ಸಿಕ್ಕಾಗಲೂ ಹೇಳುತ್ತಿದ್ದರು. ಈಗ ನಮ್ಮ ಚಿತ್ರ 100 ಕೋಟಿ ರೂ. ಗಳಿಕೆ ಕಂಡು ದಾಖಲೆ ಸೃಷ್ಟಿಸಿದೆ ಎನ್ನುವುದು ನಮಗೆ ಹೆಮ್ಮೆಯ ಸಂಗತಿ. ಅದರ ಜತೆಗೆ ಕನ್ನಡ ಚಿತ್ರರಂಗಕ್ಕೂ ಖುಷಿ ಕೊಡುವಂತಹ ಸಂಗತಿ.– ನಾಗಣ್ಣ, ನಿರ್ದೇಶಕ
ದರ್ಶನ್ ಪಾಲಿಗೆ ಇದೊಂದು ವಿಶೇಷವಾದ ಸಿನಿಮಾ. ಅವರ ಸಿನಿ ಕರಿಯರ್ನಲ್ಲಿ ಇದು ನಾಯಕನಟರಾಗಿ 50ನೇ ಚಿತ್ರ. ಅದ್ಧೂರಿ ವೆಚ್ಚದ ಪೌರಾಣಿಕ ಚಿತ್ರವೆಂದೇ ಕರೆಸಿಕೊಂಡಿದ್ದ ಈ ಚಿತ್ರ ಬಿಡುಗಡೆ ಆಗಿ 3ನೇ ವಾರ ಪೂರೈಸುತ್ತಿದೆ. ಆರಂಭದಿಂದಲೂ ಈ ಚಿತ್ರಕ್ಕೆ ಎಲ್ಲಾ ಕಡೆಗಳಲ್ಲೂ ಅದ್ಭುತ ಪ್ರತಿಕ್ರಿಯೆ ಸಿಕ್ಕಿದೆ. ಮೊದಲ ದಿನದ ಗಳಿಕೆಯೇ 13 ಕೋಟಿ ರೂ. ಎನ್ನುವ ಸುದ್ದಿ ಇತ್ತು.
ಕನ್ನಡ ಚಿತ್ರರಂಗದ ಮಟ್ಟಿಗೆ ಇದೊಂದು ದಾಖಲೆ ಗಳಿಕೆಯೂ ಹೌದು. ಎರಡನೇ ದಿನ 10 ಕೋಟಿ ರೂ. ಕಲೆಕ್ಷನ್ ಮಾಡಿತ್ತು. ಅಲ್ಲಿಂದ ಸದ್ದಿಲ್ಲದೆ ನೂರಾರು ಚಿತ್ರಮಂದಿರಗಳಲ್ಲಿ ಯಶಸ್ವಿ 3 ವಾರದ ಪ್ರದರ್ಶನ ಕಾಣುತ್ತಿರುವ ಕುರುಕ್ಷೇತ್ರದ ಇದುವರೆಗಿನ ಒಟ್ಟು ಕಲೆಕ್ಷನ್ 100 ಕೋಟಿ ರೂ. ಎನ್ನುವುದು ದರ್ಶನ್ ಅಭಿಮಾನಿ ಬಳಗದ ಘೋಷಣೆ. ಅದಕ್ಕೆ ಸಾಕ್ಷಿ ಸಾಮಾಜಿಕ ಜಾಲದಲ್ಲಿ ವೈರಲ್ ಆದ ‘ಕುರುಕ್ಷೇತ್ರ’ದ 100 ಕೋಟಿ ಗಳಿಕೆಯ ಸಂಭ್ರಮಾಚರಣೆಯ ಫೋಟೋಗಳು.
ನಿಜ ನಾನು ಈ ಸಿನಿಮಾದ ವಿತರಕ. ಆದರೆ ನಾನು ಯಾವುದೇ ಸಿನಿಮಾ ಬಜೆಟ್ ಆಗಲಿ, ಇಲ್ಲವೇ ಅದರ ಕಲೆಕ್ಷನ್ ವಿಚಾರದಲ್ಲಾಗಲಿ ಮಾತನಾಡಿಲ್ಲ. ಅದು ನನ್ನ ಅಭ್ಯಾಸ. ಈಗಲೂ ಅಷ್ಟೇ. ಅಧಿಕೃತವಾಗಿ ಎಲ್ಲವನ್ನು ನೋಡಿ, ಪರಿಶೀಲಿಸಿದ ನಂತರ ಎಷ್ಟು, ಏನು ಅನ್ನೋದು ಗೊತ್ತಾಗುತ್ತೆ. ಅದು ಬಿಟ್ಟರೆ, ಈಗಿನ ಯಾವುದೇ ಸುದ್ದಿ ಬಗ್ಗೆ ನಾನು ಕಮೆಂಟ್ ಮಾಡುವುದಿಲ್ಲ.- ರಾಕ್ಲೈನ್ ವೆಂಕಟೇಶ್, ಕುರುಕ್ಷೇತ್ರ ಚಿತ್ರದ ವಿತರಕ, ಕುರುಕ್ಷೇತ್ರ ದ 100 ಕೋಟಿ ರೂ. ಗಳಿಕೆಯ ಸಂಭ್ರಮಾಚರಣೆ ಮಾಡಿದ್ದು ದರ್ಶನ್ ಅಭಿಮಾನಿ ಬಳಗ. ಅಲ್ಲಿ ದರ್ಶನ್ ಮಾತ್ರವೇ ಇದ್ದು ವಿಶೇಷ ಕೇಕ್ ಕತ್ತರಿಸಿ, ಸಿಹಿ ಹಂಚಿ ಸಂಭ್ರಮಿಸಿದ್ದಾರೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಮಿಳುನಾಡಿನಲ್ಲಿ ನಡೆದ ಘಟನೆ ಬಗ್ಗೆ ಕೇಳಿದರೆ ಎಂಥವರೂ ಶಾಕ್ ಆಗುತ್ತಾರೆ. ಭಿಕ್ಷೆ ಬೇಡುವವರನ್ನು ಕಂಡರೆ ಸಾಮಾನ್ಯವಾಗಿ ಜನರು ಮುಖ ಕಿವುಚುತ್ತಾರೆ. ಕೈಯಲ್ಲಿರುವ ಎರಡು ಮೂರು ರೂಪಾಯಿ ಕೊಟ್ಟು ಮುಂದೆ ಹೋಗುತ್ತಾರೆ. ಹೀಗೆ ಪಡೆದ ಭಿಕ್ಷೆಯ ಹಣವೇ ಇಲ್ಲೊಬ್ಬಮಹಿಳೆಯನ್ನು ಲಕ್ಷಾಧೀಶೆಯನ್ನಾಗಿ ಮಾಡಿದೆ. ಪಾಂಡಿಚೇರಿಯ ದೇವಾಲಯವೊಂದರ ಹೊರಗಡೆ ಭಿಕ್ಷೆ ಬೇಡುತ್ತಿರುವ ವೃದ್ಧೆಯ ಕೈಯಲ್ಲಿ 12 ಸಾವಿರ ರೂ. ಹಾಗೂ ಆಕೆಯ ಬ್ಯಾಂಕ್ ಅಕೌಂಟಿನಲ್ಲಿ ಸುಮಾರು 2 ಲಕ್ಷ ಹಣ ಇರುವುದು ಗುರುವಾರ ಬೆಳಕಿಗೆ ಬಂದಿದೆ. ವೃದ್ಧೆಯನ್ನು ಪಾರ್ವತಮ್ಮ(70)ಎಂದು ಗುರುತಿಸಲಾಗಿದೆ. ಪ್ರತಿ…
ಲೋಳೆಸರ, ಇದು ಅಲೋವೇರ ಎಂದು ಕರೆಯುವ ಈ ಗಿಡದ ಮೂಲ ಸ್ಥಳ ಆಫ಼್ರಿಕಾ ಖಂಡ. ಅಲೋ ವೆರಾ ಎಂಬುದು ಅನ್ನಿಯ ಕುಲದ ಸಸ್ಯ ಜಾತಿಯಾಗಿದೆ.ಇದು ಪ್ರಪಂಚದಾದ್ಯಂತ ಉಷ್ಣವಲಯದ ಹವಾಮಾನಗಳಲ್ಲಿ ಕಾಡು ಬೆಳೆಯುತ್ತದೆ
ಮೆಟ್ರೋದಲ್ಲಿ ಪ್ರಯಾಣಿಸುವ ಜನರ ಸಂಖ್ಯೆ ಹೆಚ್ಚಾದಷ್ಟು ಬಾಗಿಲಲ್ಲಿ ಸಿಲುಕಿ ಪರದಾಡುವವರ ಸಂಖ್ಯೆಯೂ ಸಹ ಹೆಚ್ಚಾಗುತ್ತಿದೆ . ಹಸಿರು ಮಾರ್ಗದ ರೈಲಿನಲ್ಲಿ ಬಾಗಿಲ ಬಳಿ ಕಾಲು ಸಿಕ್ಕಿಕೊಂಡು ಒದ್ದಾಡುತ್ತಿರುವ ಎರಡು ದೃಶ್ಯ ಇತ್ತೀಚೆಗೆ ನಡೆದಿವೆ. ಅ.14ರಂದು ಸಂಜೆ 6.20 ರ ಸುಮಾರಿಗೆ ಮೆಜೆಸ್ಟಿಕ್ ನಿಲ್ದಾಣದಲ್ಲಿ ಹೆಣ್ಣು ಮಗುವಿನ ಕಾಲು ಬಾಗಿಲಿನಲ್ಲಿ ಸಿಕ್ಕಿ ಹಾಕಿಕೊಂಡ ಘಟನೆ ನಡೆದಿದೆ. ನಿಲ್ದಾಣದಲ್ಲಿ ದಂಪತಿ ಮಗುವಿನೊಂದಿಗೆ ರೈಲಿನ ಒಳಗೆ ಪ್ರವೇಶಿಸುತ್ತಿದ್ದರು, ದಟ್ಟಣೆ ಹೆಚ್ಚಿದ್ದರಿಂದ ದಂಪತಿ ಹಾಗೂ ಮಗು ಬಾಗಿಲಿನ ಬಳಿಯಲ್ಲೇ ನಿಲ್ಲಬೇಕಾಯಿತು. ಈ ವೇಳೆ…
ನವದೆಹಲಿ: ಪ್ರತಿ ದಿನ ಬೈಯುತ್ತಿದ್ದಾರೆ ಎಂದು ಕೋಪದಲ್ಲಿ ಮಗನೊಬ್ಬ ತನ್ನ ತಂದೆಯನ್ನು ಕೊಲೆಗೈದು ದೇಹವನ್ನು 25 ಪೀಸ್ ಮಾಡಿ ಬ್ಯಾಗಿನಲ್ಲಿ ತುಂಬಿಸಿದ ಘಟನೆ ನವದೆಹಲಿಯಲ್ಲಿ ನಡೆದಿದೆ. ಅಮನ್(22) ತಂದೆಯನ್ನೇ ಕೊಲೆ ಮಾಡಿದ ಮಗ. ಕೆಫೆ ಮಾಲೀಕನಾಗಿರುವ ಅಮನ್ ತಂದೆ ಸಂದೇಶ್ ಅಗರ್ ವಾಲ್(48) ದಿನ ಬೈಯುತ್ತಿದ್ದರು ಎಂದು ಕೊಲೆ ಮಾಡಿದ್ದಾನೆ. ಅಮನ್ ತನ್ನ ತಂದೆ ಸಂದೇಶ್ರನ್ನು ಕೊಲೆ ಮಾಡಿದ ನಂತರ ಅವರ ದೇಹವನ್ನು 25 ಪೀಸ್ ಮಾಡಿ ನಾಲ್ಕು ಬ್ಯಾಗ್ನಲ್ಲಿ ತುಂಬಿಸಿದ್ದಾನೆ. ಈ ವಿಷಯ ತಿಳಿದ ಪೊಲೀಸರು…
ಒಂದೆಕರೆ ಕ್ಷಣದಲ್ಲೇ ಪರಿಹಾರ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ಜ್ಯೋತಿಷ್ಯ ಭವನ ನಿಮ್ಮ ಸಮಸ್ಯೆಯನ್ನು ಇರಲಿ ಎಷ್ಟೇ ಕಠಿಣವಾಗಿರಲಿ ಉಚಿತ ಭವಿಷ್ಯ ಖಚಿತ ಪರಿಹಾರ ತುಳು ನಾಡಿನ ಹಿರಿಯ ಬ್ರಾಹ್ಮಣರಾದ ಗುರುಗಳಾದ ಶ್ರೀ ವಿಶ್ವರೂಪ ಆಚಾರ್ಯರು ಯರು 9739124121ಶ್ರೀ ಕ್ಷೇತ್ರ ಧರ್ಮಸ್ಥಳ ನುಡಿದಂತೆ ನಡೆಯುವುದು ಮೇಷ ನಿಮ್ಮ ಮಾತಿನ ಜಾಣ್ಮೆ ಸರಳವಾದ ನಡೆ ನುಡಿಗಳಿಂದ ಜನರ ಪ್ರಶಂಸೆಯನ್ನು ಪಡೆಯಲು ಹೇರಳ ಅವಕಾಶಗಳು ಒದಗಿ ಬರುವುದು. ಸಂಗಾತಿಯ ಸಹಕಾರ ದೊರೆಯುವುದು. ಆರ್ಥಿಕ ಸಮಸ್ಯೆ ಕಡಿಮೆ ಆಗುವುದು. .ನಿಮ್ಮ…
ಪ್ರಧಾನಿ ನರೇಂದ್ರ ಮೋದಿಅವರನ್ನು ಮದುವೆಯಾಗಬೇಕು ಅಂತ 40 ವರ್ಷದ ಮಹಿಳೆಯೊಬ್ಬರು,ಸೆಪ್ಟೆಂಬರ್ 8ರಿಂದ ದೆಹಲಿಯ ಜಂತರ್ ಮಂತರ್ ಬಳಿ ಧರಣಿ ಕುಳಿತಿದ್ದಾರೆ.