ಮನರಂಜನೆ

ಕಿರಿಕ್ ರಾಣಿ ತಾವೇನು ಜಾಕಿಚಾನ್ ತಂಗಿನೋ, ಬ್ರೂಸ್ಲಿ ಬಾಮೈದ ಅಂತಾ ತಿಳಿದುಕೊಂಡು ಕಿಕ್ ಕೊಟ್ರಾ..!

356

ಜನಪ್ರಿಯ ರಿಯಾಲಿಟಿ ಶೋ ಕನ್ನಡದ ಬಿಗ್ ಬಾಸ್ ರಿಯಾಲಿಟಿ ಶೋ ಮತ್ತೊಮ್ಮೆ ಕೆಟ್ಟ ಕಾರಣಕ್ಕೆ ಸುದ್ದಿಯಾಗಿದ್ದು, ಶೋಗೆ ಅತಿಥಿಯಾಗಿ ಬಿಗ್ ಬಾಸ್ ಮನೆಗೆ ಬಂದಿದ್ದ ಕಿರಿಕ್ ಹುಡುಗಿ ಸಂಯುಕ್ತ ಹೆಗ್ಡೆ ಬಿಗ್ ಬಾಸ್ ಮನೆಯಲ್ಲೂ ಕಿರಿಕ್ ಮಾಡಿಕೊಂಡು ಹೊರ  ಬಂದಿದ್ದಾರೆ.

 

ಅತಿಥಿಯಾಗಿ ಬಿಗ್ ಬಾಸ್ ಮನೆಗೆ ಬಂದಿದ್ದ, ನಟಿ ಸಂಯುಕ್ತ ಹೆಗಡೆ ಮನೆಗೆ ಬಂದು ಇನ್ನೂ 15 ದಿನಗಳೂ ಕಳೆದಿಲ್ಲ ಆಗಲೇ ಸಹಸ್ಪರ್ಧಿ ಮೇಲೆ ಹಲ್ಲೆ ಮಾಡಿ ಶೋನಿಂದ ಕಿಕ್ ಔಟ್ ಆಗಿದ್ದಾರೆ. ಪ್ರತಿ ದಿನದ ಟಾಸ್ಕ್ ನಂತೆ ಬುಧವಾರ  ಸ್ಪರ್ಧಿಗಳಿಗೆ ಟಾಸ್ಕ್ ವೊಂದನ್ನು ನೀಡಲಾಗಿತ್ತು.

 

ಅದರಂತೆ ಮಹಿಳಾ ತಂಡ ಹಾಗೂ ಪುರುಷ ತಂಡದ ಸ್ಪರ್ಧಿಗಳಿಗೆ ದಾರ ಕಟ್ಟಿದ ಗೋಪುರವನ್ನು ನೀಡಲಾಗಿತ್ತು. ಪುರುಷ ಸ್ಪರ್ಧಿಗಳು ಮಹಿಳಾ ಸ್ಪರ್ಧಿಗಳ ಬಳಿ ಇರುವ ಗೋಪುರದ  ದಾರವನ್ನು ಕತ್ತರಿಯಿಂದ ಕತ್ತರಿಸಬೇಕಿತ್ತು. ಈ ವೇಳೆ ತನ್ನನ್ನು ಸಮೀರ್ ಆಚಾರ್ಯ ಮುಟ್ಟಿದ್ರು ಅಂತ ಸಂಯುಕ್ತ ಅವರ ಮೇಲೆ ಕೈ ಮಾಡಿದ್ದಾರೆ. ಅಲ್ಲದೆ ಎರಡುಬಾರಿ ಅವರಿಗೆ ಹೊಡೆದಿದ್ದಾರೆ. ಈ ಕಾರಣದಿಂದ ಟಾಸ್ಕ್ ಅರ್ಧಕ್ಕೆ  ನಿಂತಿತು.

ಈ ವೇಳೆ ಇಬ್ಬರನ್ನು ಕನ್ಫೆಶನ್ ರೂಮ್ ಗೆ ಕರೆದ ಬಿಗ್‍ಬಾಸ್ ಸಮೀರ್ ಮತ್ತು ಸಂಯುಕ್ತಾ ಹೇಳಿಕೆಯನ್ನು ಪಡೆದರು. ಕಡೆಗೆ ಸಂಯುಕ್ತಾ ಭಾವಾವೇಷದಿಂದ ಸಮೀರ್ ಮೇಲೆ ಕೈ ಮಾಡಿದ್ದಾರೆಂದು ಹೊರ ಹೋಗುವಂತೆ ಆದೇಶಿದರು.

ಮನೆಯಿಂದ ಹೊರ ಹೋಗುವ ಮುನ್ನ ಸಂಯುಕ್ತಾ ಸಮೀರ್ ಬಳಿ ಕ್ಷಮೆ ಕೇಳಿದರು. ಸಮೀರ್ ಕೂಡಾ ಸಂಯುಕ್ತಾರನ್ನು ಉದ್ದೇಶಿಸಿ ಇನ್ನೊಮ್ಮೆ ಯಾರ ಬಳಿಯೂ ಹೀಗೆ ಕೋಪ ಮಾಡಿಕೊಳ್ಳಬೇಡಿ ಎಂದು ಹೇಳಿ ಸಂಯುಕ್ತಾರನ್ನು  ಮನೆಯಿಂದ ಬೀಳ್ಕೊಟ್ಟರು.

ಬಿಗ್ ಬಾಸ್ ಸೀಸನ್ 4ರ ವಿನ್ನರ್ ಪ್ರಥಮ್ ಪ್ರತಿಕ್ರಿಯೆ:-

ಸಂಯುಕ್ತಾ ಬಿಗ್ ಬಾಸ್ ಮನೆಯಲ್ಲಿ ಸಮೀರ್ ಆಚಾರ್ಯರಿಗೆ ಕಪಾಳಕ್ಕೆ ಹೊಡೆದಿರುವ ವಿಚಾರ ನನ್ನ ಗಮನಕ್ಕೆ ಬಂತು. ಬಿಗ್ ಬಾಸ್ ಜೀವನದ ಪಾಠವನ್ನು ಕಲಿಸುತ್ತದೆ. ಹೇಗಂದ್ರೆ ನಾವು ಅಲ್ಲಿದ್ದಾಗ ನಮ್ಮ ತಂಡದ ಮೇಲೆ ಅಭಿಮಾನ ಪ್ರೀತಿ ಹುಟ್ಟಿಕೊಳ್ಳುತ್ತದೆ. ಸಂಯುಕ್ತಾ ಹೆಗಡೆ ತಾವು ಥ್ರಿಲ್ಲರ್ ಮಂಜು ತಂಗಿ ತರನೋ, ಬ್ರೂಸ್ಲಿ ಬಾಮೈದ ಅಂತಾ ತಿಳಿದುಕೊಂಡು ಸಮೀರ್ ಅವರ ಮೇಲೆ ಕೈ ಮಾಡಿದ್ದು ನನಗ್ಯಾಕೋ ಅದು ಸರಿ ಅನ್ನಿಸುತ್ತಿಲ್ಲ ಅಂತಾ ಪ್ರಥಮ್ ತಿಳಿಸಿದ್ದಾರೆ.

ಸಮೀರ್ ಆಚಾರ್ಯ ಹೊರಗಡೆ ಅಡುಗೆ ಮಾಡಿಕೊಂಡು ತುಂಬಾ ಶಿಸ್ತಿನಿಂದ ಆ ಮನೆಯಲ್ಲಿದ್ದಾರೆ. ಸಮೀರ್ ಅವ್ರಿಗೆ ಮದುವೆಯಾಗಿದ್ದು, ಅಂತಹ ದೊಡ್ಡ ವ್ಯಕ್ತಿಯ ಮೇಲೆ ಚಿಕ್ಕ ಹುಡುಗಿ ಸಂಯುಕ್ತಾ ತುಂಬಾ ಆತುರ ಮಾಡಿಕೊಂಡರೇನೋ ಅಂತಾ ಅನ್ನಿಸಿತು. ಜನರು ಸಂಯುಕ್ತಾರನ್ನು ಕ್ಷಮಿಸುವ ದೊಡ್ಡ ಮನಸ್ಸು ಮಾಡಬೇಕು ಎಂದು ನಾನು ಕೇಳಿಕೊಳ್ಳುತ್ತೇನೆ ಅಂತಾ ಪ್ರಥಮ್ ಮನವಿ ಮಾಡಿಕೊಂಡರು.

ಕಿರಿಕ್ ರಾಣಿಯ ಕಿರಿಕ್ ಇದೇ ಮೊದಲಲ್ಲ…

 ಬಿಗ್ ಬಾಸ್ ಮನೆ ಪ್ರವೇಶಕ್ಕೂ ಮುನ್ನ ತಮ್ಮ ಅಭಿನಯದ ಕಾಲೇಜ್ ಕುಮಾರ್ ಚಿತ್ರಕ್ಕೆ ಸಂಬಂಧಿಸಿದಂತೆಯೂ ನಿರ್ಮಾಪಕರೊಂದಿಗೆ ಕಿರಿಕ್ ಮಾಡಿಕೊಂಡಿದ್ದ ಸಂಯುಕ್ತ ಚಿತ್ರದ ಪ್ರಚಾರ ಕಾರ್ಯಕ್ರಮಕ್ಕೆ ಆಗಮಿಸಲಿಲ್ಲ ಎಂದು  ನಿರ್ಮಾಪಕರು ದೂರಿದ್ದರು. ಇದೀಗ ಮತ್ತೊಮ್ಮೆ ಬಿಗ್ ಬಾಸ್ ಮನೆಯಲ್ಲೂ ಕಿರಿಕ್ ಮಾಡಿಕೊಂಡು ಶೋಯಿಂದ ಹೊರ ನಡೆದಿದ್ದಾರೆ.

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಮನಮಿಡಿಯುವ ಕಥೆ

    ಹೆಣ್ಣು ಮಗಳು ಹುಟ್ಟಿದ್ರೆ ಅವಳಿಗೆ ನಾನ್ಯಾಕೆ ಕಲಿಸಬೇಕು.?ಎಂದ ಗಂಡ ನಂತರ ಹೇಳಿದ್ದು ಏನು.?ತಿಳಿಯಲು ಈ ಲೇಖನ ಓದಿ ಮರೆಯದೇ ಶೇರ್ ಮಾಡಿ…

    *ನಮ್ಮ ಪೇಜ್ ಲೈಕ್ ಮಾಡಿ ಶೇರ್ ಮಾಡಿ* ಗಂಡ_ಹೆಂಡತಿಯರ ಮುದ್ದಾದ ಸಂಸಾರ. ಹೆಂಡತಿ ಗರ್ಭವತಿಯಾಗಿದ್ದಳು ಹುಟ್ಟುವ ಮಗು ಗಂಡೋ ಅಥವ ಹೆಣ್ಣೋ ಎನ್ನುವ ಕುತೂಹಲ ಆಕೆಗೆ. ಗಂಡನನ್ನು ಕೇಳಿದಾಗ ಯಾವುದಾದರೂ ಹುಟ್ಟಲಿ ಬಿಡು. ನಮಗೆ ಗಂಡು ಮಗು-ಹೆಣ್ಣು ಮಗು ಎರಡೂ ಒಂದೇ ಅಲ್ಲವೆ ಎಂದನು. ಅದಕ್ಕೆ ಹೆಂಡತಿಯು ಹೌದು, ಆದರೆ ನಮಗೆ ಗಂಡು ಮಗು ಹುಟ್ಟಿದರೆ ನೀವು ಹೇಗೆ ಬೆಳೆಸುತ್ತೀರಿ ಅವನನ್ನು? ಎಂದು ಕೇಳಿದಳು. ಗಂಡು ಮಗು ಹುಟ್ಟಿದರೆ ನೀವು ಹೇಗೆ ಬೆಳೆಸುತ್ತೀರಿ..? ಗಂಡ ಕಿಟಕಿಯಿಂದ ಹೊರಗೆ…

  • ಆಧ್ಯಾತ್ಮ

    ‘ಬಟಾಣಿ’ಯಲ್ಲಿರುವ 09 ಆರೋಗ್ಯಕಾರಿ ಉಪಯೋಗಗಳ ಬಗ್ಗೆ ನಿಮಗೆ ಗೊತ್ತಾ..?ತಿಳಿಯಲು ಈ ಲೇಖನ ಓದಿ ..

    ಬಟಾಣಿ ತಿಂದ್ರೆ ವಾಯು ಬರತ್ತೆ ಅನ್ನೋರೆಲ್ಲಾ ಇಲ್ಕೇಳಿ. ಬಟಾಣಿ ಗಿಡ ನಮ್ ದೇಶದಲ್ಲಿ ಹುಟ್ಟಿದಲ್ಲ. ಇದು ವಿಚಿತ್ರವಾಗಿರೋ ಗಿಡಗಳ ಸಾಲ್ನಲ್ಲಿ ಸೇರತ್ತೆ. ಆದ್ರೂ ಕೂಡಾ ಇದ್ರ ಉಪಯೋಗ ಇದ್ಯಲ್ಲಾ ಅದು ಒಂದೆರಡಲ್ಲ. ಇದ್ರಲ್ಲಿರೋ ಪಿಷ್ಟ ಇದ್ನ ಸಿಹಿಯಾಗಿರೋವಾಗೆ ಮಾಡ್ಸತ್ತೆ. ಇದ್ರಲ್ಲಿರೋ ಫೈಟೋ ನ್ಯುಟ್ರಿಯಂಟ್ಸ್ ಹೊಟ್ಟೆಗೆ ಸಂಬಂಧಿಸಿದ ಕ್ಯಾನ್ಸರನ್ನ ಗುಣಪಡ್ಸತ್ತೆ.

  • ಸುದ್ದಿ

    ಮಹಾಭಾರತ ನಡೆದೇ ಇಲ್ಲ ಎನ್ನುವ ಬುದ್ಧಿ ಜೀವಿಗಳಿಗೆ ಕಾದಿದೆ ಅಚ್ಚರಿ!! ಉತ್ತರಖಂಡದಲ್ಲಿದೆ ಮಹಾಭಾರತ ಕಾಲದ ವಿಸ್ಮಯಕಾರಿ ಕೋಟೆ…..

    ಭಾರತ ಎಂದರೆ ಪುಣ್ಯಭೂಮಿಯೇ ಸರಿ!! ಇಲ್ಲಿರುವ ಕೆಲವೊಂದು ನಿಗೂಢ ಸ್ಥಳಗಳು ಹಾಗೂ ಕೆಲವೊಂದು ವಿಚಾರಗಳು ಅಚ್ಚರಿಯನ್ನು ಮೂಡಿಸುತ್ತದೆ!! ಅದರ ಬಗ್ಗೆ ಎಷ್ಟೂ ಪರಿಶೀಲನೆ ನಡೆಸಿದರೂ ಏನೋ ದೈವೀ ಶಕ್ತಿ ಎಂಬುವುದನ್ನು ನಂಬಲೇ ಬೇಕಾಗುತ್ತದೆ!! ಇಂತಹ ಕೆಲವೊಂದು ಸಂಗತಿಗಳಿಗೂ ವಿಜ್ಞಾನಿಗಳಿಗೂ ಸವಾಲಾಗಿರುವುದಲ್ಲದೆ ಅಚ್ಚರಿಯನ್ನುಂಟು ಮಾಡಿಸುತ್ತದೆ.. ಈಗಾಗಲೇ ಭಾರತದಲ್ಲಿ ಹಲವಾರು ಕೋಟೆಗಳನ್ನು ನಾವು ಕಂಡಿದ್ದೇವೆ.. ಆದರೆ ಯಾವತ್ತಾದರೂ ತಲೆಕೆಳಗಾದ ರಹಸ್ಯ ಕೋಟೆಯ ಬಗ್ಗೆ ಯಾರಾದರೂ ಕೇಳಿದ್ದೀರಾ?! ತಲೆಕೆಳಗಾದ ಕೋಟೆ ಅಂದಾಗಲೇ ಅಚ್ಚರಿಯನ್ನುಂಟು ಮಾಡುತ್ತೆ ಅಲ್ವಾ?! ಹೌದು ಇಂತಹ ಕೋಟೆ ಉತ್ತರಖಂಡದ…

  • ಸುದ್ದಿ

    ರೆಫ್ರಿಜರೇಟರ್ ಸ್ಫೋಟಗೊಂಡು ಮೂವರ ದುರ್ಮರಣ…..!

    ರೆಫ್ರಿಜರೇಟರ್ ಗ್ಯಾಸ್ ಸೋರಿಕೆಯಿಂದ ಸ್ಫೋಟ ಸಂಭವಿಸಿ ದಂಪತಿ ಹಾಗೂ ತಾಯಿ ಒಟ್ಟು ಮೂವರು ಮೃತಪಟ್ಟಿರುವ ಘಟನೆ ಚೆನ್ನೈ ಬಳಿಯ ತಂಬರಂ ಪೂರ್ವದ ಸೆಲಾಯುರ್‍ನಲ್ಲಿ ನಡೆದಿದೆ. ಖಾಸಗಿ ಸುದ್ದಿ ವಾಹಿನಿ ವರದಿಗಾರ ಪ್ರಸನ್ನ(35) ಎಂಬುವರ ಮನೆಯಲ್ಲಿ ಈ ಸ್ಫೋಟ ಸಂಭವಿಸಿದ್ದು, ರೆಫ್ರಿಜಿರೇಟರ್ ಗ್ಯಾಸ್ ಸ್ಫೋಟಗೊಂಡು ದಂಪತಿ ಹಾಗೂ ವ್ಯಕ್ತಿಯ ತಾಯಿ ಮೃತಪಟ್ಟಿದ್ದಾರೆ. ಸ್ಫೋಟದ ತೀವ್ರತೆಗೆ ಮನೆಯಲ್ಲಿನ ವಸ್ತುಗಳು ಚೂರು ಚೂರಾಗಿದ್ದು, ಗೋಡೆ ಕಪ್ಪಾಗಿದ್ದರಿಂದ ರೆಫ್ರಿಜರೇಟರ್ ಗ್ಯಾಸ್ ಸೋರಿಕೆಯಿಂದ ಸ್ಫೋಟ ಸಂಭವಿಸಿರಬಹುದು ಎಂದು ಪೊಲೀಸರು ಊಹಿಸಿದ್ದಾರೆ. ಗುರುವಾರ ಬೆಳಗ್ಗೆ ಪಕ್ಕದ…

  • ಆರೋಗ್ಯ

    ಕಿತ್ತಳೆ ಹಣ್ಣಿನ ಉಪಯೋಗಗಳನ್ನು ತಿಳಿಯ ಬೇಕಾ..? ಹಾಗದ್ರೆ ಈ ಲೇಖನವನ್ನು ಓದಿ…

    ಕಿತ್ತಳೆ ಹಣ್ಣು ನೋಡಿದ್ರೆ ಬಾಯಲ್ಲಿ ನೀರು ಬರುತ್ತೆ. ಇಂಥ ಸಿಹಿ ಕಿತ್ತಳೆ ಹಣ್ಣಿನಿಂದ ದೇಹಕ್ಕೆ ಹಲವು ಉಪಯೋಗಗಳಿವೆ. ಕಿತ್ತಳೆ ಹಣ್ಣಿನಲ್ಲಿ ಸಿಟ್ರಸ್ ಅಂಶ ಹೆಚ್ಚು ಇರುತ್ತೆ. ಇದನ್ನು ಪ್ರತಿದಿನ ಮಕ್ಕಳು ಹಾಗೂ ವಯಸ್ಸಾದವರು ಸೇವಿಸಿದ್ರೆ ಹೆಚ್ಚು ಉಪಯುಕ್ತ.

  • ದೇಶ-ವಿದೇಶ

    ಭೂಮಿಯಿಂದ ಸ್ವರ್ಗಕ್ಕೆ ಹೋಗಲು ಈ 999 ಮೆಟ್ಟಿಲೇರಿದರೆ ಸಾಕು..!ತಿಳಿಯಲು ಈ ಲೇಖನ ಓದಿ…

    ಭೂಮಿಯಿಂದ ಸ್ವರ್ಗಕ್ಕೆ ಹೋಗಲು ಬೇರೆ ದಾರಿ ಇದೆ ಎಂದು ನಮ್ಮ ಪುರಾಣದಲ್ಲಿ ತಿಳಿಸಲಾಗಿದೆ. ಆದರೆ ಅದು ಎಲ್ಲಿದೆ? ಹೇಗಿದೆ ಅನ್ನೋದು ನಮ್ಮ ಕಲ್ಪನೆಗೂ ನಿಲುಕದ್ದಾಗಿದೆ. ಇಂದು ನಾವು ನಿಮಗೊಂದು ರಸ್ತೆಯ ಬಗ್ಗೆ ಹೇಳುತ್ತೇವೆ. ಅದರ ವಿಶೇಷತೆ ಬಗ್ಗೆ ನೀವು ತಿಳಿದುಕೊಂಡರೆ ಇದೇ ಸ್ವರ್ಗಕ್ಕೆ ಹೋಗುವ ರಸ್ತೆ ಎನ್ನುವಿರಿ…!