ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ರಾತ್ರಿ ಹೊತ್ತು ಕಾಲುಸೆಳೆತವುಂಟಾಗಿ ನಿಮಗೆ ಮಧ್ಯೆ ಮಧ್ಯೆ ಎಚ್ಚರವಾಗುತ್ತಿದೆಯೇ..? ಹೀಗೆ ಸೆಳೆತ ಉಂಟಾಗಲು ಹಲವಾರು ಕಾರಣಗಳಿವೆ. ಮಧುಮೇಹ, ನರಗಳ ಬಲಹೀನತೆ, ಗರ್ಭಧಾರಣೆ ಹಾಗೂ ಡೀಹೈಡ್ರೇಶನ್(ನಿರ್ಜಲೀಕರಣ) ಮುಂತಾದ ಕಾರಣಗಳಿಂದ ಕಾಲುಗಳ ಸೆಳೆತ ಉಂಟಾಗಬಹುದು. ಇದರಿಂದ ನಿಮ್ಮ ರಾತ್ರಿಯ ನಿದ್ದೆ ಹಾಳಾಗುತ್ತಿದೆಯೇ…? ಹಾಗಾದರೆ, ಇಲ್ಲಿದೆ ನೋಡಿ ಸುಲಭ ಪರಿಹಾರ.

ವಿಂಟರ್ ಗ್ರೀನ್ ಆಯಿಲ್ :-
ಮೀಥೈಲ್ ಸಿಲಿಕೇಟ್ ಹೊಂದಿರುವ ವಿಂಟರ್ ಗ್ರೀನ್ ಆಯಿಲ್ ನೋವು ನಿವಾರಕವಾಗಿ ಕೆಲಸಮಾಡುತ್ತದೆ. ಮೀಥೈಲ್ ಸಿಲಿಕೇಟ್ ರಕ್ತ ಪ್ರಸರಣವನ್ನು ಉತ್ತೇಜಿಸುತ್ತದೆ.

ಈ ಎಣ್ಣೆಯೊಂದಿಗೆ ಸ್ವಲ್ಪ ಆಲೀವ್ ಅಯಿಲ್ ಅಥವಾ ಬಾದಾಮಿ ಎಣ್ಣೆ ಬೆರೆಸಿ ಕಾಲುಗಳನ್ನು ಮಸಾಜ್ ಮಾಡುವುದರಿಂದ ಸೆಳೆತ ಕಡಿಮೆಯಾಗುತ್ತದೆ.
ವಿಟಮಿನ್-ಇ :-
ಮುಚ್ಚಿಕೊಂಡಿರುವ ನರಗಳಲ್ಲಿ ರಕ್ತ ಪ್ರಸರಣ ಸರಿಯಾಗಿ ಆಗದೆ, ರಾತ್ರಿವೇಳೆ ಕಾಲುಗಳ ಸೆಳೆತ ಉಂಟಾಗುತ್ತದೆ. ವಿಟಮಿನ್ -ಇ ಅಧಿಕವಾಗಿರುವ ಬಾದಾಮಿ, ಸ್ಪಿನಾಚ್ ಹಾಗೂ ಅವಕಾಡೋ ಗಳನ್ನು ತಿನ್ನುವುದರಿಂದ , ನರಗಳಲ್ಲಿ ರಕ್ತ ಪ್ರಸಾರ ಸುಗಮವಾಗುತ್ತದೆ. ವಿಟಮಿನ್-ಇ ಸಪ್ಲಿಮೆಂಟ್ ಗಳನ್ನೂ ಉಪಯೋಗಿಸಬಹುದು.

ನೀರು :- ಪ್ರತೀದಿನ 8 ಲೋಟ ಶುದ್ಧನೀರಿನೊಂದಿಗೆ ನಿಂಬೆ ರಸ ಬೆರೆಸಿ ಕುಡಿಯಬೇಕು. ಒಂದು ಲೋಟದಲ್ಲಿ ನಿಂಬೆ ರಸ ಬೆರೆಸಿರುವ ನೀರನ್ನು ನಿಮ್ಮ ಬಳಿ ಇಟ್ಟುಕೊಂಡು ಬಾಯರಿಕೆ ಆದಾಗಲೆಲ್ಲಾ ಸ್ವಲ್ಪ ಸ್ವಲ್ಪ ಕುಡಿಯಬೇಕು
ಶಾಖ : –ಕಾಲು ಸೆಳೆತದಿಂದ ನೋವು ಕಡಿಮೆಯಾಗಲು ವಿದ್ಯುತ್ ಪ್ಯಾಡ್ ಗಳನ್ನು ಉಪಯೋಗಿಸಿ. ಇದರಿಂದ ರಕ್ತ ಪ್ರಸಾರ ಹೆಚ್ಚಾಗುತ್ತದೆ.

15-20 ನಿಮಿಷಗಳ ಕಾಲ ಉಪಯೋಗಿಸಿದರೆ ಸಾಕು. ಬಿಸಿ ನೀರಿಗೆ ಸ್ವಲ್ಪ ಎಪ್ಸಮ್ ಸಾಲ್ಟ್ ಬೆರೆಸಿ ಶಾಖ ನೀಡುವುದರಿಂದಲೂ ನೋವು ಕಡಿಮೆಯಾಗುತ್ತದೆ.
ಎಲೆಕ್ಟ್ರೋಲೈಟ್ :-
ದೇಹಕ್ಕೆ ಎಲೆಕ್ಟ್ರೋಲೈಟ್ ಗಳು ಅತ್ಯವಶ್ಯಕ. ಸೋಡಿಯಮ್, ಪೊಟಾಶಿಯಮ್,ಕ್ಯಾಲ್ಶಿಯಮ್ ಹಾಗೂ ಮೆಗ್ನೀಶಿಯಮ್ ಮುಂತಾದ ಖನಿಜಗಳ ಕೊರತೆಯಿಂದಾಗಿ ಕಾಲುಗಳ ಸೆಳೆತ ಉಂಟಾಗುತ್ತದೆ. ಈ ಎಲ್ಲಾ ಎಲೆಕ್ಟ್ರೋಲೈಟ್ ಗಳನ್ನು ಒಳಗೊಂಡಿರುವ ಆಹಾರ ಸೇವಿಸುವುದು ಉತ್ತಮ.

ಸ್ಟ್ರೆಚಿಂಗ್ : –ಒಂದು ವೇಳೆ ನಿಮಗೆ ಕಾಲಿನ ಸೆಳೆತವುಂಟಾಗಿ ರಾತ್ರಿಯಲ್ಲಿ ಎಚ್ಚರವಾದರೆ, ಕಾಲುಗಳನ್ನು ಸ್ಟ್ರೆಚ್ ಮಾಡಬೇಕು. ಇದು ಸ್ವಲ್ಪ ನೋವನ್ನು ಉಂಟುಮಾಡುತ್ತದೆ. ಪಾದಗಳನ್ನು ಹಿಂದೆ,ಮುಂದೆ ಆಡಿಸಬೇಕು. ಹೀಗೆ ಮಾಡುವುದರಿಂದ ಕಾಲುಗಳ ಸೆಳೆತ ಕಡಿಮೆಯಾಗುತ್ತದೆ.

ಕಾಲುಗಳ ಸೆಳೆತ ನಿಮ್ಮ ರಾತ್ರಿ ನಿದ್ದೆಯನ್ನು ಹಾಳುಗೆಡವುತ್ತದೆ. ಸಾಕಷ್ಟು ಶುದ್ದನೀರು, ಸತ್ವಯುತ ಆಹಾರ ಸೇವನೆ, ಸ್ಟ್ರೆಚ್ಚಿಂಗ್, ಮಸಾಜು ಮಾಡುವುದು ಮುಂತಾದುವುಗಳಿಂದ ಸೆಳೆತವನ್ನು ಕಡಿಮೆ ಮಾಡಿಕೊಂಡು ಆರಾಮವಾಗಿರಬಹುದು.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಮುಸ್ಲಿಂ ಬಾಂಧವರ ಪವಿತ್ರ ಹಬ್ಬವಾದ ಈದ್ ಮಿಲಾದ್ ಪ್ರಯುಕ್ತ ನವಂಬರ್ 10 ರಂದು ಬೆಂಗಳೂರಿನಾದ್ಯಂತ ಮದ್ಯಬಂದ್ ಮಾಡಿ ಪೊಲೀಸ್ ಆಯುಕ್ತ ಆದೇಶ ಹೊರಡಿಸಿದ್ದಾರೆ. ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಮದ್ಯಮಾರಟ ನಿಷೇಧ ಮಾಡಿ ಆದೇಶ ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ರಾವ್ ಇಂದು ಮಂಗಳವಾರ ಆದೇಶ ಹೊರಡಿಸಿದ್ದಾರೆ. ಇದರಿಂದ ಎಲ್ಲರು ಸಂತೋಷದಿಂದ ಹಬ್ಬವನ್ನು ಆಚರಿಸಲಿ ಎಂಬ ಉದ್ದೇಶವಷ್ಟೇ. ಇದೇ ನವೆಂಬರ್ 10 ರಂದು ಭಾನುವಾರ ಬೆಳಗ್ಗೆ 6 ರಿಂದ ಅದೇ ದಿನ ಮಧ್ಯರಾತ್ರಿ 12 ಗಂಟೆವರೆಗೂ ಮದ್ಯ…
ಬೆಂಗಳೂರು : ಸ್ಪೀಕರ್ ನಿರ್ಧಾರ ಅನುಮಾನಾಸ್ಪದ, ಪೂರ್ವಾಗ್ರಹ ಪೀಡಿತ ಯಾವುದೋ ಒತ್ತಡಕ್ಕೆ ಮಣಿದು ಸ್ಪೀಕರ್ ತೀರ್ಪು ಕೊಟ್ಟಿದ್ದಾರೆ ಎಂದು ಬಿಜೆಪಿ ಶಾಸಕ ಸಿ.ಟಿ ರವಿ ಅವರು ಹೇಳಿದರು. ನಗರದ ಚಾನ್ಸರಿ ಪೆವಿಲಿಯನ್ ಹೊಟೇಲ್ ಬಳಿ ಮಾಧ್ಯಮದ ಜೊತೆ ಮಾತನಾಡಿದ ಅವರು, ಹಳೇ ಋಣ ತೀರಿಸಲೇನೋ ಈ ತೀರ್ಪನ್ನು ರಮೇಶ್ ಕುಮಾರ್ ಅವರು ಕೊಟ್ಟಿದ್ದಾರೆ. ಸುಪ್ರೀಂಕೋರ್ಟ್ಗೆ ಈ ಪ್ರಕರಣ ಹೋಗಬಹುದು ಕೋರ್ಟ್ನಲ್ಲಿ ಅಂತಿಮ ತೀರ್ಮಾನ ಬರಲಿದೆ ಎಂದು ಅವರು ತಿಳಿಸಿದರು. ಇನ್ನು ಇಂದಿರಾ ಕ್ಯಾಂಟೀನ್ ಹೆಸರು ಬದಲಾವಣೆ ವಿಚಾರವಾಗಿ ಪ್ರತಿಕ್ರಿಯೆ…
ರಕ್ತಸಂಬಂಧಿಗಳೊಳಗಿನ ವಿವಾಹದ ಕುರಿತು ಅಧ್ಯಯನ ನಡೆಸಿರುವ ಅಂತಾರಾಷ್ಟ್ರೀಯ ತಂಡ ಒಂದು, ಇಂತಹ ದಂಪತಿಗಳಿಗೆ ಜನಿಸುವ ಮಕ್ಕಳಲ್ಲಿ ನ್ಯೂನ್ಯತೆಯ ಅಪಾಯವು
ಇವಾಗ ಸೆಲ್ಫಿ ಯುಗ.ನಮ್ಮ ಕೈನಲ್ಲಿ ಮೊಬೈಲ್ ಇದ್ದರೆ ಸಾಕು ಸೆಲ್ಫಿ ಪೋಟೋಗಳದ್ದೆ ಕಾರು ಬಾರು.ಈಗಂತೂ ಸೆಲ್ಫಿಗೆ ಇಂತದ್ದೇ ಸ್ಥಳ,ಜಾಗ,ಸಮಯ ಅಂತೇನೂ ಇಲ್ಲ. ಎಲ್ಲೆಂದರೆ ಅಲ್ಲೇ,ಹೇಗೆಂದರೆ ಹಾಗೆ ಸೆಲ್ಫಿ ಪೋಟೋ ತೆಗೆದುಕೊಳ್ಳುತ್ತಾರೆ.
ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಕಡುದರಹಳ್ಳಿಯಲ್ಲಿನ ವಿಶೇಷಚೇತನ ಮಗನ ವಿದ್ಯಾಭ್ಯಾಸಕ್ಕಾಗಿ ತಾಯಿಯ ಹೆಗಲೇ ಆಸರೆಯಾಗಿರುವ ದೃಶ್ಯ ಒಂದು ಕಂಡುಬಂದಿದೆ. ತಂತ್ರಜ್ಞಾನದ ಯುಗದಲ್ಲೂ ಈ ಗ್ರಾಮಕ್ಕೆ ಸಾರಿಗೆ ವ್ಯವಸ್ಥೆಯಿಲ್ಲ. ಹೀಗಾಗಿ ಆಟೋ, ಬಸ್ ಇಲ್ಲವೆಂಬ ನೆಪ ಹೇಳಿ ತನ್ನ ಮಗನ ವಿದ್ಯಾಭ್ಯಾಸ ಮೊಟಕುಗೊಳಿಸದ ವಾತ್ಸಲ್ಯಮಯಿ ತಾಯಿ ಜಯಲಕ್ಷ್ಮಿ ತಮ್ಮ ವಿಶೇಷ ಚೇತನನಾಗಿರುವ ಮಗನಾದ ರಾಜೇಶ್ ಬಾಬುನನ್ನು ನಿತ್ಯ ತನ್ನ ಹೆಗಲ ಮೇಲೆ ನಾಲ್ಕು ಕಿ.ಮೀ ಹೊತ್ತುಕೊಂಡು ಓದಿಸುತ್ತಿದ್ದಾರೆ. ಐಎಎಸ್ ಓದಬೇಕೆಂಬ ಕನಸು ಹೊತ್ತಿರುವ ರಾಜೇಶನ ಕನಸು ಈಡೇರಿಸಲು ಜಯಲಕ್ಷ್ಮಿ ತನ್ನ…
ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿಗೆ ಸೇರಿದ ಒಂದು ಪುಣ್ಯ ಕ್ಷೇತ್ರ ರಾಮನಾಥಪುರ . ಹಾಸನದಿಂದ ದಕ್ಕಿಣಕ್ಕೆ 49ಕಿ.ಮೀ ಹಾಗೂ ತಾಲೂಕು ಕೇಂದ್ರ ಅರಕಲಗೂಡಿನಿಂದ 19ಕಿ.ಮೀ ಅಂತರದಲ್ಲಿ ಕಾವೇರಿ ನದಿ ದಡದಲ್ಲಿದೆ. ಈ ಕ್ಷೇತ್ರವು ದಕ್ಷಿಣಕಾಶಿ ಎಂದು ಪ್ರಖ್ಯಾತಿಗೊಂಡ್ಡು ರಾರಾಜಿಸುತ್ತದೆ.