ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಕಣ್ಣಿನ ಸುತ್ತ ಕಪ್ಪು ವರ್ತುಲ ನಿಜಕ್ಕೂ ಹಲವರ ಪಾಲಿಗೆ ತೀರಾ ಕಿರಿಕಿರಿಯ ಸಮಸ್ಯೆ. ಎಷ್ಟೇ ಮೇಕಪ್ ಮಾಡಿದ್ರೂ ಕಪ್ಪು ಕಲೆಯನ್ನು ಮಾತ್ರ ಹೋಗಲಾಡಿಸೋದು ಕಷ್ಟ. ಏಕೆಂದರೆ ಇದು ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆ ಎಂಬುದಕ್ಕಿಂತ ಹೆಚ್ಚಾಗಿ ದೇಹ ನಿಶ್ಶಕ್ತವಾದಾಗ ಮತ್ತು ರಕ್ತಹೀನತೆಯುಂಟಾದಾದಾಗ ಆರಂಭವಾಗುವ ಸಮಸ್ಯೆ.

ದೇಹಕ್ಕೆ ಪೌಷ್ಟಿಕಾಂಶಯುಕ್ತ ಆಹಾರದ ಕೊರತೆ ಉಂಟಾದಾಗ ದೇಹಕ್ಕೆ ಮತ್ತಷ್ಟು ಪೋಷಕಾಂಶ ಬೇಕು ಎಂಬ ಸಂದೇಶವನ್ನು ಕಪ್ಪು ವರ್ತುಲ ನೀಡುತ್ತದೆ. ನಿದ್ರಾಹೀನತೆಯಿಂದ ಬಳಲುವವರಲ್ಲೂ ಈ ಸಮಸ್ಯೆ ಕಾಣಬಹುದು. ಈ ಸಮಸ್ಯೆಯ ಪರಿಹಾರಕ್ಕೆ ಈಗಾಗಲೇ ಹಲವು ಕ್ರೀಮುಗಳು ಲಭ್ಯವಿವೆ. ಆದರೆ ಇವು ತಾತ್ಕಾಲಿಕವಾಗಿ ಕಪ್ಪು ವರ್ತುಲವನ್ನು ಹೋಗಲಾಡಿಸಿಯಾವೇ ಹೊರತು ಇದಕ್ಕೊಂದು ಶಾಶ್ವತ ಪರಿಹಾರಬೇಕೆಂದರೆ ನಮ್ಮ ಆಹಾರಕ್ರಮದಲ್ಲಿ ಬದಲಾವಣೆ ಮಾಡಿಕೊಳ್ಳುವುದು ಬಹಳ ಮುಖ್ಯ.
ಸರಿಯಾಗಿ ನಿದ್ದೆ ಮಾಡದಿದ್ದಲ್ಲಿ ಕಣ್ಣಿನ ಮೇಲೆ ಒತ್ತಡ ಉಂಟಾಗಿ ಕಪ್ಪು ವರ್ತುಲಗಳು ಕಾಣಿಸಿಕೊಳ್ಳುತ್ತವೆ. ಆದ್ದರಿಂದ ದಿನಕ್ಕೆ ಕನಿಷ್ಠ 6 ಗಂಟೆಯಾದರೂ ನಿದ್ದೆ ಮಾಡುವುದರಿಂದ ಕಪ್ಪು ವರ್ತುಲಗಳು ಬರದಂತೆ ತಡೆಯಬಹುದು.

ಕಂಪ್ಯೂಟರ್ ಮುಂದೆ ಕುಳಿತು, ಕಣ್ಣಿಗೆ ವಿಶ್ರಾಂತಿ ನೀಡದೆ ಹೆಚ್ಚು ಹೊತ್ತು ಕೆಲಸ ಮಾಡುವುದರಿಂದ ಕೂಡ ಕಣ್ಣಿನ ಕೆಳಗಡೆ ಕರ್ಪೂ ವರ್ತುಲಗಳು ಏರ್ಪಡುತ್ತವೆ.ಕಂಪ್ಯೂಟರ್ ಮುಂದೆ ಬಹಳ ಸಮಯ ಕುಳಿತು ಕೆಲಸ ಮಾಡುವವರು ಪ್ರತಿ 2–3 ಗಂಟೆಗೊಮ್ಮೆ ಕಣ್ಣನ್ನು ತಣ್ಣನೆಯ ನೀರಿನಿಂದ ತೊಳೆಯುವುದರಿಂದ ಕಣ್ಣಿಗೆ ವಿಶ್ರಾಂತಿ ನೀಡಿದಂತಾಗುತ್ತದೆ. ಇದರಿಂದ ಕಣ್ಣಿನ ಆರೋಗ್ಯ ಕಾಪಾಡುವ ಜೊತೆಗೆ ಕಪ್ಪು ವರ್ತುಲ ಬಾರದಂತೆ ತಡೆಯಬಹುದು.
* ಆದಷ್ಟು ಹೆಚ್ಚು ಹಸಿ ತರಕಾರಿಗಳನ್ನು ಸೇವಿಸಿ.
* ಸೌತೆಕಾಯಿ ರಸವನ್ನು ಪ್ರತಿದಿನ ಕಣ್ಣಿನ ಸುತ್ತ ಹಚ್ಚಿ 25 ನಿಮಿಷ ಬಿಟ್ಟು ಸ್ವಚ್ಛ ನೀರಿನಿಂದ ತೊಳೆಯಿರಿ.

* ಸೊಪ್ಪಿನಿಂದ ತಯಾರಿಸಲಾದ ಪದಾರ್ಥಗಳನ್ನು ಸೇವಿಸುವುದು ಸಹ ಒಳ್ಳೆಯದು.
* ನಿಂಬೆ ರಸವನ್ನು ಕಣ್ಣಿನ ಸುತ್ತ ಹಚ್ಚಿ 15 ನಿಮಿಷ ಬಿಟ್ಟು ಸ್ವಚ್ಛ ನೀರಿನಿಂದ ತೊಳೆದುಕೊಳ್ಳಿ.
* ಪ್ರತಿದಿನವೂ ರಾತ್ರಿ ಮಲಗುವ ಮೊದಲು 2-4 ಬಾದಾಮಿ ಬೀಜವನ್ನು ನೀರಿನಲ್ಲಿ ನೆನೆಸಿಟ್ಟು, ಬೆಳಗ್ಗೆ ಸೇವಿಸಿ. ಬಾದಾಮಿಯಲ್ಲಿ ಹೆಚ್ಚು ಪೋಷಕಾಶವಿರುವುದರಿಂದ ಇದು ಕಪ್ಪು ವರ್ತುಲವನ್ನು ಕಡಿಮೆ ಮಾಡುವುದಷ್ಟೇ ಅಲ್ಲದೆ, ಚರ್ಮಕ್ಕೂ ಹೊಳಪು ನೀಡುತ್ತದೆ.
* ದೇಹದಲ್ಲಿ ಬಿಳಿ ರಕ್ತಕಣವನ್ನು ಹೆಚ್ಚಿಸುವಂಥ ಆಹಾರ ಸೇವಿಸಿ. ರಕ್ತದಲ್ಲಿ ಹಿಮೋಗ್ಲೋಬಿನ್ ಪ್ರಮಾಣವೂ ಕಡಿಮೆಯಿದ್ದರೆ ಕಪ್ಪುವರ್ತುಲ ಕಾಣಿಸಿಕೊಳ್ಳುತ್ತದೆ ಇದಕ್ಕಾಗಿ ಯಾವುದೇ ರೀತಿಯ ವೈದ್ಯಕೀಯ ಉಪಚಾರಗಳ ಅಗತ್ಯವಿಲ್ಲ. ಪ್ರತಿದಿನವೂ ತಿನ್ನುವ ಆಹಾರದ ಪ್ರಮಾಣವನ್ನೇ ಹೆಚ್ಚಿಸಿ.
* ನಾಲಿಗೆಗೆ ರುಚಿ ಅನ್ನಿಸುವ ಆರೋಗ್ಯಕ್ಕಿಂತ ಯಾವುದು ದೇಹಕ್ಕೆ ಹಿತವೋ ಅದನ್ನೇ ಸೇವಿಸಿ.

* ಪಪ್ಪಾಯ ಹಣ್ಣಿನ ರಸವನ್ನು ಕಣ್ಣಿನ ಸುತ್ತ ಹಚ್ಚಿಕೊಂಡರೂ ಒಳ್ಳೆಯದು.
* ನಿಮಗೆ ಚರ್ಮದ ಸಮಸ್ಯೆಯಿಂದಲೇ ಕಪ್ಪು ವರ್ತುಲ ಆರಂಭವಾಗಿದೆ ಅನ್ನಿಸಿದರೆ ಹಸಿ ಸೌತೆ ಕಾಯಿ ಅಥವಾ ಆಲೂಗಡ್ಡೆಯನ್ನು ವೃತ್ತಾಕಾರದಲ್ಲಿ ಹೆಚ್ಚಿಕೊಂಡು ಹದಿನೈದು ನಿಮಿಷ ಕಣ್ಣಿನ ಮೇಲೆ ಇಟ್ಟುಕೊಳ್ಳಿ.
* ಕಪ್ಪು ವರ್ತಲ ಹೋಗಲಾಡಿಸುವುದಕ್ಕಾಗಿ ದುಬಾರಿ ಕ್ರೀಮುಗಳನ್ನು ಬಳಸುವುದರಿಂದ ಯಾವುದೇ ಪ್ರಯೋಜನವಿಲ್ಲ. ಅದೂ ಅಲ್ಲದೆ, ಇದರಿಂದ ಅಡ್ಡಪರಿಣಾಮ ಉಂಟಾಗಬಹುದು. ಒಣಹಣ್ಣುಗಳಾದ ದ್ರಾಕ್ಷಿ, ಗೋಡಂಬಿ, ಬಾದಾಮಿ, ಪಿಸ್ತಾ ಮುಂತಾದವುಗಳ ಸೇವನೆಯಿಂದ ದೇಹ ಶಕ್ತಿಯುತವಾಗುತ್ತದೆ. ಇವು ದೇಹದಲ್ಲಿ ರಕ್ತದ ಪ್ರಮಾಣ ಹೆಚ್ಚುವುದಕ್ಕೆ ಸಹಕಾರಿಯಾಗಿವೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಕಾವೇರಿ ನದಿ ನೀರು ಹಂಚಿಕೆ ಕುರಿತಂತೆ ಕೇಂದ್ರ ಜಲ ಆಯೋಗದ ಕಚೇರಿಯಲ್ಲಿಂದು ನಡೆದ ಈ ಜಲ ವರ್ಷದ ಅಂತಿಮ ಸಭೆಯಲ್ಲಿ ಕರ್ನಾಟಕಕ್ಕೆ ಆಘಾತಕಾರಿ ಸುದ್ದಿ ಬಂದಿದೆ. ತಮಿಳುನಾಡಿಗೆ ನಿಗದಿಯಂತೆ ಕಾವೇರಿ ನದಿ ನೀರು ಬಿಡುವಂತೆ ಕೇಂದ್ರ ಜಲ ಆಯೋಗದ ಮುಖ್ಯಸ್ಥ ಮಸೂದ್ ಹುಸೇನ್ ಆದೇಶಿಸಿದ್ದಾರೆ. ಈ ಮೂಲಕದ ತಮಿಳುನಾಡಿನ ಬೇಡಿಕೆಗೆ ಕಾವೇರಿ ನದಿ ಪ್ರಾಧಿಕಾರ ಮಣಿದಿದೆ. ತಮಿಳುನಾಡಿಗೆ 9.19 ಟಿಎಂಸಿ ನೀರು ಬಿಡಲು ಆದೇಶಿಸಲಾಗಿದೆ.ಜೂನ್ ತಿಂಗಳ ಕೋಟಾ 9.25 ಟಿಎಂಸಿ ನೀರು ಬಿಡಬೇಕಾಗಿತ್ತು. ಆದರೆ, ಬಹುತೇಕ ಎಲ್ಲಾ…
ಪಾಲಕರಾದ ಬಳಿಕ ಮಗುವಿನ ಲಾಲನೆ ಪಾಲನೆಯ ಕರ್ತವ್ಯಗಳಲ್ಲಿ ಮಗುವನ್ನು ಮಲಗಿಸುವುದೇ ಬಹಳ ಕಷ್ಟಕರವಾದ ಕೆಲಸವಾಗಿದೆ. ಈ ಬಗ್ಗೆ ನಡೆಸಿದ ಹಲವಾರು ಅಧ್ಯಯನಗಳ ಪ್ರಕಾರ ಇನ್ನೂ ಶಾಲೆಗೆ ಹೋಗಲು ಪ್ರಾರಂಭಿಸಿಲ್ಲದ ಮಕ್ಕಳಿಗೆ ದಿನಕ್ಕೆ ಹತ್ತರಿಂದ ಹದಿಮೂರು ಘಂಟೆ ನಿದ್ದೆಯ ಅಗತ್ಯವಿದೆ. ಮಕ್ಕಳು ಬೆಳೆಯುತ್ತಾ ಹೋದಂತೆಯೇ ಈ ಅವಧಿಯೂ ಕಡಿಮೆಯಾಗುತ್ತಾ ಬರುತ್ತದೆ. 6 ರಿಂದ 13 ವರ್ಷ ವಯಸ್ಸಿನ ಮಕ್ಕಳಿಗೆ ಸುಮಾರು ಒಂಭತ್ತು ಘಂಟೆ ನಿದ್ದೆ ಅವಶ್ಯವಾಗಿದೆ. ನೈಸರ್ಗಿಕ ಬೆಳಕಿಗೆ ಒಡ್ಡುವಂತೆ ಮಾಡುವುದು ನಿಮ್ಮ ಮಕ್ಕಳನ್ನು ಆದಷ್ಟೂ ಹಗಲಿನ ವೇಳೆಯಲ್ಲಿ…
ನಟ ಪುನೀತ್ ರಾಜ್ ಕುಮಾರ್ ಅಭಿನಯದ ಬಹು ನಿರೀಕ್ಷಿತ ಚಿತ್ರ ನಟ ಸಾರ್ವಭೌಮ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಚಿತ್ರ ಅಪ್ಪು ಅಭಿಮಾನಿಗಳ ನಿರೀಕ್ಷೆಯನ್ನು ದ್ವಿಗುಣಗೊಳಿಸಿದೆ. ಚಿತ್ರದಲ್ಲಿ ನಟ ಪುನೀತ್ ರಾಜ್ ಕುಮಾರ್ ಮತ್ತು ನಟಿ ರಚಿತಾ ರಾಮ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದು, ಹಿರಿಯ ನಟಿ ಬಿ ಸರೋಜಾದೇವಿ, ಅಚ್ಯುತ್, ರವಿಶಂಕರ್ ಅವರು ಪೋಷಕ ಪಾತ್ರದಲ್ಲಿ ವಿಶೇಷವಾಗಿ ಕಾಣಿಸಿಕೊಂಡಿದ್ದಾರೆ. ಇನ್ನು ಚಿತ್ರದಲ್ಲಿ ಹಾಸ್ಯ ನಟ ಚಿಕ್ಕಣ್ಣ ಅವರ ಪಾತ್ರವೂ ವಿಶೇಷವಾಗಿದೆ. ಇಂದು ಬೆಳಗ್ಗೆ 10 ಗಂಟೆಗೆ ಚಿತ್ರದ ಟ್ರೈಲರ್…
ವೈವಾಹಿಕ ಹಿಂಸೆ, ಕೌಟುಂಬಿಕ ಕಲಹ ಪ್ರಕರಣಗಳಲ್ಲಿ ಮಹಿಳೆಯರಿಂದ ಹೆಚ್ಚಿನ ದೂರು ದಾಖಲಾಗುವುದು ಸಾಮಾನ್ಯ ಸಂಗತಿ. ಆದರೆ, ಉತ್ತರ ಪ್ರದೇಶದಲ್ಲಿ 6500 ಕ್ಕೂ ಅಧಿಕ ಮಂದಿ ತಮ್ಮ ಪತ್ನಿ ಹೊಡಿತಾಳೆ ಎಂದು ಯು.ಪಿ. -100 ಗೆ ಕರೆ ಮಾಡಿದ್ದಾರೆ.
ಹಾವುಗಳನ್ನು ಕಂಡ್ರೆ ಎಂತಹವರಿಗೂ ಎದೆ ಜಲ್ ಅನ್ನುವ ಅನುಭವ ಆಗ್ತದೆ. ಆಗಂತ ಹಾವಿಗೆ ಭಯ ಇಲ್ದೆ ಇರಲ್ಲ. ಆದ್ರೆ ಹಾವನ್ನು ಸಾಯಿಸಬೇಕಾದ್ರೆ ಅರ್ಧ ಪ್ರಾಣ ಹೋಗಿ ಅರ್ಧ ಪ್ರಾಣ ಉಳಿಯುವಂತೆ ಸಾಯಿಸಬೇಡಿ ಅಂತ ಹೇಳುವುದು ವಾಡಿಕೆ. ಯಾಕಂದ್ರೆ ಅಂತಹವರನ್ನು ಏಟು ತಿಂದ ಹಾವುಗಳು ಸುಮ್ಮನ್ನೇ ಬಿಡೋದಿಲ್ಲ ಅಂತ ಹೇಳ್ತಾರೆ.
ಭಾರತವು ಚೀನಾದ ಒಪ್ಪೋ, ಷಿಯಾಮಿ, ಜಿಯೋನಿ, ಕಂಪನಿಗಳಿಗೆ ನೋಟಿಸ್ ನೀಡಿದೆ. ಮತ್ತು ಕೇಂದ್ರ ಸರ್ಕಾರವು , ಹ್ಯಾಕಿಂಗ್ ಭದ್ರತಾ ಫೀಚರ್`ಗಳ ಬಗ್ಗೆ ಕಂಪನಿಗಳಲ್ಲಿ ವಿವರಣೆ ಕೇಳಿದೆ.