ವಿಶೇಷ ಲೇಖನ

ಒಂದು ನಿಮಿಷ ಸಮಯ ಮಾಡಿಕೊಂಡು ಓದಿ, ಅಮ್ಮನ ಬಗ್ಗೆ 2 ಸಾಲುಗಳು…

1460

ಒಂದು ನಿಮಿಷ ಸಮಯ ಮಾಡಿಕೊಂಡು ಓದಿ, ಅಮ್ಮನ ಬಗ್ಗೆ 2 ಸಾಲುಗಳು ಪ್ರತಿ ತಾಯಿಯೂ ತನ್ನ ಹೆಣ್ಣುಮಗುವಿನಲ್ಲಿ ತನ್ನ ಬಾಲ್ಯವನ್ನು ಕಂಡು ಸಂತಸಪಡುವವಳು.

ಹಾಗೆಯೇ ತನಗೆ ಸಿಗದೆ ಇದ್ದ ಸುಖ, ಸೌಲಭ್ಯಗಳು ತನ್ನ ಮಗಳಿಗೆ ಸಿಗಬೇಕು, ಮುಂದೆ ಜೀವನದಲ್ಲಿ ಅವಳಿಗೆ ಯಾವ ರೀತಿಯಲ್ಲೂ
ಕಷ್ಟಗಳೂ ಬರಬಾರದು ಎಂದು ಹೃದಯಪೂರ್ವಕವಾಗಿ ಆಸೆ ಪಡುವ ಒಂದು ಜೀವ ಇದೆ ಈ ಭೂಮಿಯ ಮೇಲೆ ಎಂದರೆ
ಅದು ನಮ್ಮ ನಿಮ್ಮನ್ನೆಲ್ಲಾ ಹೆತ್ತ ತಾಯಿಮಾತ್ರ.

ಅವಳ ಪ್ರೀತಿ, ವಾತ್ಸಲ್ಯಕ್ಕೆ ಸರಿಸಾಟಿ ಯಾರೂಇಲ್ಲ…..ತಾಯಿಯೇ ಮಕ್ಕಳಿಗೆ ಎಲ್ಲಾ…ಇದನ್ನು ನಂಬಿದವರಿಗೆ ಯಾವತ್ತೂ
ಕೆಟ್ಟದಾಗಿಲ್ಲ…ನಾವು ಕಾಣದೆ ಇರೋ ಸ್ವರ್ಗ ಹೇಗಿದೆಯೋ ಗೊತ್ತಿಲ್ಲ ಆದರೆ ನಾವು ಕಾಣುವ  ಅಮ್ಮನ ಮಡಿಲೇ ಸ್ವರ್ಗಕ್ಕಿಂತ ಮಿಗಿಲು,ಅನ್ನುವುದು ಮಾತ್ರ ಸಾರ್ವಕಾಲಿಕ ಸತ್ಯ….ಇದನ್ನು ಯಾರೂ ಅಲ್ಲಗೆಳೆಯುವಂತಿಲ್ಲ..

ಅಮ್ಮ

ನಾ ಹುಟ್ಟಿದ ಮೇಲೆ ತಾನೆ ನೀ ನಿನಗಾಗಿ ಬದುಕೋದ ಮರೆತದ್ದು.. ನನ್ನಲ್ಲೆ ನಿನ್ನ ಬದುಕ ಕಾಣತೊಡಗಿದ್ದು ಎಂತಹ ಅನುಬಂದವಿದು ಸೃಷ್ಟಿಕರ್ತನ ನಿಷ್ಕಲ್ಮಶ ಸಂಬಂದವಿದು..

ನಾ ಗರ್ಭದಲ್ಲಿರುವಾಗಲೇ ನನ್ನ ಮೇಲೆ ಕಟ್ಟತೊಡಗಿದ ಕನಸುಗಳನೆಲ್ಲ ಎಲ್ಲರೊಡನೆ ವಿವರಿಸುತ್ತಿದ್ದೆ.. ಅಂದೆ ನಿನ್ನೆಲ್ಲಾ ಕನಸು ನಾನಗತೊಡಗಿದೆ..

ಅತ್ತರೆ ಹಸಿವೆಂದು ಮೊದಲು ಎದೆಹಾಲ ಉಣಿಸಿ.. ನನ್ನ ಖುಶಿಗೆಂದು ಅಪ್ಪನಿಂದ ಏನೆಲ್ಲಾ ಆಟಾಸಾಮಾನ ತರಸಿ.. ನನ್ನ ನಗುವ ನೀ ನೋಡುತ್ತಿದ್ದೆ..

ತುತ್ತು ತಿನ್ನಲು ಹಟತೊಟ್ಟರೆ ಮುತ್ತು ನೀಡುತ, ಅಪ್ಪನನ್ನೇ ಆನೆ ಮಾಡಿ ನನ್ನ ಅಂಬಾರಿಯಂತೆ ಕೂರಿಸಿ ಏನೆಲ್ಲಾ ಆಟ ಆಡಿಸಿ ಚಂದಮಾಮನ ಕೊಡಿಸೋ ಆಸೆ ತೋರಿಸಿ ನನ್ನ ಕಿಲ ಕಿಲ ನಗುವಲಿ ಆ ನಗುವ ನಡುವಲಿ ತುತ್ತು ತಿನ್ನಿಸಿ ಏನೆಲ್ಲಾ ಸಂತಸವ ಕಾಣುತ್ತಿದ್ದೆ..

ನೀನು ನಿನಗೋಸ್ಕರ ಅಂದಿನಿಂದ ಖುಷಿಪಟ್ಟ ದಿನ ನಾ ನೋಡಲೇ ಇಲ್ಲವಲ್ಲ ಕಾರಣ ನಿನಗೆ ನಾನೇ ಎಲ್ಲ ಅಲ್ಲ.. ನನ್ನ ಕಣ್ಣಲೊಂದು ಹನಿ ಬಿದ್ದರೆ ಅಂದು ಮರುಗಿದವಳು ನೀನೆ ಇಂದಿಗೂ ಎಲ್ಲಿದ್ದರು ಕನಳುವಳು ನೀನೆ.. ನಿನ್ನ ಋಣ ಹೇಗೆ ತೀರಿಸಲಿ ಮರು ಜನ್ಮದಲ್ಲಾದರೂ ನನಗೆ ಕರುಣಿಸು ನಿನ್ನ ಸ್ಥಾನವ…

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ರಾಜಕೀಯ

    2014ರ ಏಪ್ರಿಲ್‌‌ನಿಂದ 2017ರವರೆಗೆ ಮೋದಿ ಸರ್ಕಾರ ವ್ಯಯಿಸಿದ್ದು ಎಷ್ಟು ಸಾವಿರ ಕೋಟಿ ಹಣ ಗೊತ್ತಾ..?ತಿಳಿಯಲು ಈ ಲೇಖನ ಓದಿ ..

    ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಮೂರೂವರೆ ವರ್ಷದಲ್ಲಿ ಪ್ರಚಾರಕ್ಕಾಗಿ 3,755 ಕೋಟಿ ರೂಪಾಯಿ ವ್ಯಯಿಸಿದೆ ಎಂಬ ವಿಚಾರ ಮಾಹಿತಿ ಹಕ್ಕು ಕಾಯ್ದೆ ಅಡಿ ಸಲ್ಲಿಸಿದ್ದ ಅರ್ಜಿಯಿಂದ ಬಯಲಿಗೆ ಬಂದಿದೆ.

  • ಜ್ಯೋತಿಷ್ಯ

    ಮಂಗಳವಾರದ ನಿಮ್ಮ ದಿನ ಭವಿಷ್ಯ ಮಂಗಳವೋ ಅಮಂಗಳವೋ ನೋಡಿ ತಿಳಿಯಿರಿ…

    ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕಚಿಂತಕರು 9663218892 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು  ಹಾಗೂನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವುನಿಮ್ಮ ಅನುಮಾನ ಹಾಗೂ ಆತಂಕಗಳನ್ನುಅಳಿಸಬಹುದು ಮತ್ತು ಪ್ರಶ್ನೆಗಳಿಗೆಉತ್ತರಿಸಬಹುದುಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 11 ದಿನದಲ್ಲಿ ಶಾಶ್ವತ ಪರಿಹಾರ9663218892 ಮೇಷ(20 ನವೆಂಬರ್, 2018) ಹಣಕಾಸಿನಲ್ಲಿ ಸುಧಾರಣೆ ನೀವು ಪ್ರಮುಖ ಖರೀದಿಗಳನ್ನುಮಾಡುವುದನ್ನು ಅನುಕೂಲಕರವಾಗಿಸುತ್ತದೆ. ಮನೆಯಲ್ಲಿನ ಕೆಲವು ಬದಲಾವಣೆಗಳು ನಿಮ್ಮನ್ನು ಭಾವುಕರನ್ನಾಗಿಸಬಹುದು- ಆದರೆ ನಿಮಗೆ ಮುಖ್ಯವಾದವರಿಗೆನೀವು…

  • Sports

    ಬಿಡಬ್ಲ್ಯುಎಫ್‌ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ ಗೆದ್ದು ನೂತನ ಇತಿಹಾಸ ಸೃಷ್ಟಿಸಿದ ಪಿವಿ ಸಿಂಧೂ…!

    ಭಾರತದ ಹೆಮ್ಮೆಯ ಪಿವಿ ಸಿಂಧೂ, ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್‌ಶಿಪ್ ಗೆದ್ದು ನೂತನ ಇತಿಹಾಸ ಬರೆದಿದ್ದಾರೆ. ಮಹಿಳಾ ಸಿಂಗಲ್ಸ್ ಫೈನಲ್ ಮುಖಾಮುಖಿಯಲ್ಲಿ ಜಪಾನ್‌ನ ನಜೊಮಿ ಮಣಿಸಿ ವಿಶ್ವ ಚಾಂಪಿಯನ್‌ಶಿಪ್‌ಗೆ ಮುತ್ತಿಕ್ಕಿದರು, ಭಾರತದ ಅಗ್ರಮಾನ್ಯ ಬ್ಯಾಡ್ಮಿಂಟನ್‌ ತಾರೆ ಪಿವಿ ಸಿಂಧೂ, ಬಿಡಬ್ಲ್ಯುಎಫ್ ವಿಶ್ವ ಚಾಂಪಿಯನ್‌ಶಿಪ್ ಗೆದ್ದು ಇತಿಹಾಸ ರಚಿಸಿದ್ದಾರೆ. ಅಲ್ಲದೆ ಬ್ಯಾಡ್ಮಿಂಟನ್‌ ವಿಶ್ವ ಸಾಮ್ರಾಜ್ಞಿಯಾದ ಭಾರತದ ಮೊದಲ ಆಟಗಾರ್ತಿಯೆನ್ನುವ ಚಾರಿತ್ರಿಕ ದಾಖಲೆಯನ್ನು ಬರೆದಿದ್ದಾರೆ. ಭಾನುವಾರ ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ನಡೆದ ಫೈನಲ್ ಮುಖಾಮುಖಿಯಲ್ಲಿ ತಮ್ಮ ಬದ್ದ ವೈರಿ ಜಪಾನ್‌ನ ಜಪಾನ್‌ನ ನಜೊಮಿ ಒಕುಹರಾ ವಿರುದ್ಧ21-7, 21-7ರ…

  • ಸುದ್ದಿ

    62 ಅಡಿ ಆಂಜನೇಯನ ವಿಗ್ರಹವನ್ನು, ದೇವಸ್ಥಾನದ ಆವರಣದೊಳಗೆ ಪ್ರವೇಶಿಸದಂತೆ ತಡೆ.!ಏಕೆ ಗೊತ್ತಾ.?ತಿಳಿಯಲು ಈ ಲೇಖನ ಓದಿ ಶೇರ್ ಮಾಡಿ…

    ಬೆಂಗಳೂರಿನ ಹೆಚ್’ಬಿಆರ್ ಬಡಾವಣೆಯ ಕಾಚರಕನಹಳ್ಳಿಯ ಶ್ರೀ ಕೋದಂಡರಾಮಸ್ವಾಮಿ ದೇವಾಲಯದ ಆವರಣದಲ್ಲಿ ಪ್ರತಿಷ್ಠಾಪನೆಗಾಗಿ ಸಿದ್ದವಾಗಿದ್ದ 62 ಅಡಿ ಎತ್ತರದ, 750 ಟನ್ ತೂಕದ ವೀರಾಂಜನೇಯ ಸ್ವಾಮಿಯ ವಿಗ್ರಹವನ್ನು, 300 ಚಕ್ರಗಳ ಬೃಹತ್ ವಾಹನದಲ್ಲಿ ಸ್ಥಳಕ್ಕೆ ಈಗಾಗಲೇ ಸಾಗಿಸಲಾಗಿದೆ. ಆದರೆ ವಿಪರ್ಯಾಸ ಎಂದರೆ, ಅಂದು ಪರ್ವತವನ್ನೇ ಹೊತ್ತು ತಂದು  ಲಕ್ಷ್ಮಣನನ ಜೀವ ಉಳಿಸಿದ, ರಾಮ ಭಕ್ತ ಹನುಮಂತನ ಪ್ರತಿಷ್ಟಾಪನೆಗೆ ವಿಘ್ನದ ಮೇಲೆ ವಿಘ್ನ ಶುರುವಾಗಿದೆ. ಕೋಲಾರದಿಂದ ಬೆಂಗಳೂರಿನ ಹೆಚ್’ಬಿಆರ್ ಬಡಾವಣೆಯ ಕಾಚರಕನಹಳ್ಳಿಗೆ ಹೊರಟಿದ್ದ ಬೃಹತ್ ಆಂಜನೇಯನ ವಿಗ್ರಹಕ್ಕೆ ಮಾರ್ಗ ಮಧ್ಯದಲ್ಲೇ ತೊಂದರೆ ಎದುರಾಗಿತ್ತು….

  • ಆರೋಗ್ಯ, ಉಪಯುಕ್ತ ಮಾಹಿತಿ

    ಬಾಳೆ ಎಲೆಯಲ್ಲಿದೆ ಅನೇಕ ಸಮಸ್ಯೆಗಳಿಗೆ ಅದ್ಭುತವಾದ ಔಷದಿ ಗುಣ.!ತಿಳಿಯಲು ಈ ಲೇಖನ ಓದಿ..

    ಹಿಂದೂ ಧರ್ಮ ಹಾಗೂ ಹಿಂದೂ ಪೂಜಾ ವಿಧಾನದ ಪ್ರಕಾರ ಬಾಳೆ ಎಲೆಗೆ ಮಹತ್ವದ ಸ್ಥಾನವಿದೆ. ಬಾಳೆ ಎಲೆ ಇಲ್ಲದೆ ಸತ್ಯನಾರಾಯಣನ ಪೂಜೆ ನಡೆಯೋದಿಲ್ಲ. ಹಾಗೂ ಹಲವು ಪೂಜೆ ವಿಧಾನಗಳಲ್ಲಿ ಬಾಳೆ ಎಳೆಯನ್ನೇ ಬಳಸುತ್ತಾರೆ. ಬಾಳೆ ಎಲೆಗೆ ಎಷ್ಟು ಧಾರ್ಮಿಕ ಮಹತ್ವವಿದೆಯೋ ಅಷ್ಟೇ ಆಯುರ್ವೇದದಲ್ಲಿಯೂ ಮಹತ್ವ ಪಡೆದಿದೆ. ಸರ್ವ ರೋಗಗಳನ್ನ ಗುಣಪಡಿಸುವ ಶಕ್ತಿ ಬಾಳೆ ಎಲೆಗಿದೆ.

  • inspirational

    ನಟ ನಾಗಾರ್ಜುನ ಫಾರ್ಮ್ ಹೌಸ್‍ನಲ್ಲಿ ಪತ್ತೆಯಾದ ಅಸ್ಥಿಪಂಜರ….!

    ಟಾಲಿವುಡ್ ನಟ ನಾಗಾರ್ಜುನ ಅಕ್ಕಿನೇನಿ ಅವರ ಫಾರ್ಮ್ ಹೌಸ್‍ನಲ್ಲಿ ವ್ಯಕ್ತಿಯ ಅಸ್ಥಿಪಂಜರ ಪತ್ತೆಯಾಗಿದೆ.ಪಾಪಿರೆಡ್ಡಿಗುಡ್ಡ ಗ್ರಾಮದಲ್ಲಿ ನಾಗಾರ್ಜುನ ಅವರ 40 ಎಕರೆ ಜಮೀನಿದೆ. ಸುಮಾರು ದಿನಗಳಿಂದ ಈ ಜಮೀನ್ ಅನ್ನು ಉಪಯೋಗಿಸುತ್ತಿರಲಿಲ್ಲ. ಆದರೆ ಈಗ ಇದೇ ಜಮೀನಿನಲ್ಲಿ ಸಿಕ್ಕ ಅಜ್ಞಾತ ಶವವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಪೊಲೀಸರ ಪ್ರಕಾರ 40 ಎಕರೆ ಜಮೀನಿನಲ್ಲಿ ನಾಗಾರ್ಜುನ ಪತ್ನಿ ಅಮಲಾ ಅವರು ಕೃಷಿ ಮಾಡುವ ಆಸಕ್ತಿ ವಹಿಸಿದ್ದರು. ಹೀಗಾಗಿ ಅವರು ಕೆಲಸಗಾರರನ್ನು ಜಮೀನಿಗೆ ಕಳುಹಿಸಿ ಭೂಮಿ ಸಿದ್ಧಪಡಿಸಲು ಹೇಳಿದ್ದರು. ಕೆಲಸಗಾರರು ಜಮೀನು ಸಿದ್ಧಪಡಿಸಲು…