ಆರೋಗ್ಯ

ಎಳನೀರಿನ ವಿಶಿಷ್ಟತೆ ಬಗ್ಗೆ ನಿಮ್ಗೆ ಗೊತ್ತಾ ..?ತಿಳಿಯಲು ಈ ಲೇಖನ ಓದಿ….

361

ಎಳನೀರು ಹಾಲಿಗಿಂತ ಕಡಿಮೆ ಕೊಬ್ಬಿನಾಂಶ ಹೊಂದಿದೆ, ಕೊಲೆಸ್ಟ್ರಾಲ್ ಅಂಶದಿಂದ ಸಂಪೂರ್ಣ ಮುಕ್ತವಾಗಿದ್ದು, ಶರೀರಕ್ಕೆ ಅಗತ್ಯವಿರುವ  ಎಂಬ ಒಳ್ಳೆಯ ಕೊಲೆಸ್ಟ್ರಾಲ್ ಪ್ರಮಾಣ ಹೆಚ್ಚಿಸಲು ಸಹಾಯಕವಾಗಿದೆ. ಎಳನೀರಿನಲ್ಲಿ ಯಾವುದೇ ಹೊರಗಿನ ಅಂಶಗಳು ಸೇರ್ಪಡೆಯಾಗಲು ಅವಕಾಶವಿಲ್ಲದ ಕಾರಣ ನಿಸರ್ಗದತ್ತವಾಗಿ ಶೇಖರವಾಗಿದ್ದುದರಿಂದ ಇದು ನಿಶ್ಕಲ್ಮಷ. ನಮ್ಮ ದೇಹಕ್ಕೆ ಅತ್ಯಗತ್ಯವಾದ ವಿಟಾಮಿನ್, ಇತರೆ ಖನಿಜಾಂಶಗಳನ್ನು ಹೊಂದಿರುವುದರಿಂದ ಆರೋಗ್ಯದಾಯಕ ಟಾನಿಕ್ ಇದಾಗಿದೆ.

 

ಬೇಸಿಗೆಯ ಬಿಸಿಲಿನ ಝಳದಿಂದ ತತ್ತರಿಸಿ ಹೋದವರ ಶರೀರಕ್ಕೆ ತಂಪು ನೀಡಿ ದೇಹದ ಸಮತೋಲನವನ್ನು ಕಾಪಾಡುತ್ತದೆ.ಯಾರೇ ಕುಡಿದರೂ ಯಾವುದೇ ಅಡ್ಡಪರಿಣಾಮಗಳಿಲ್ಲ. ದ್ವಿತೀಯ ಮಹಾಯುದ್ಧದ ಸಮಯದಲ್ಲಿ ಪೆಸಿಫಿಕ್ ಸಾಗರ ಪ್ರದೇಶಗಳಲ್ಲಿ, ಗಾಯಗೊಂಡ ಯೋಧರಿಗೆ     ತುರ್ತು ಪ್ಲಾಸ್ಮಾ ನೀಡಿಕೆಗಾಗಿ ನೇರವಾಗಿ ಎಳನೀರನ್ನು ಸೇರಿಸುತ್ತಿದ್ದರೆಂಬುದು ಆಶ್ಚರ್ಯಕರವಾದರೂ  ಸತ್ಯವಾಗಿದೆ.



ಆದ್ದರಿಂದ ಶಿಶುಗಳಲ್ಲಿ ಪಚನಕ್ರಿಯೆಗೆ ಯಾ ಕರುಳಿನ ಸಮಸ್ಯೆಗೆ ತುಂಬಾ ಪರಿಣಾಮಕಾರಿಯಾಗಿದೆ. ಎಳನೀರು ದಿಢೀರ್ ಚೇತೋಹಾರಿ ಮತ್ತು ಅತ್ಯಂತ ಶಕ್ತಿದಾಯಕವಾದ್ದರಿಂದ ಅಶಕ್ತರಿಗೆ ಹೊಸ ಚೈತನ್ಯವನ್ನು ತುಂಬುತ್ತದೆ ಮತ್ತು ಹಣ್ಣಿನ ರಸಗಳಿಗಿಂತಲೂ ಹೆಚ್ಚು ಆರೋಗ್ಯಕರವಾಗಿದೆ.ದಿನಪೂರ್ತಿ ಲವಲವಿಕೆಯಿಂದ ಕಾರ್ಯಮಗ್ನವಾಗಿರಲು ಉಪಯುಕ್ತ.ಸಂಪೂರ್ಣವಾಗಿ ಔಷಧೀಯ ಗುಣಧರ್ಮಗಳನ್ನು ಒಳಗೊಂಡಿರುವುದರಿಂದ ಎಳನೀರನ್ನು ನಿಯಮಿತವಾಗಿ ಬಳಸಬಹುದು.

ದೂರಪ್ರಯಾಣಿಸುವಾಗ ಎಳನೀರು ಕೆಡುವ  ಭಯವಿಲ್ಲ, ಆದರೂ ಗೊಂಚಲಿನಿಂದ ಬೇರ್ಪಡಿಸಿದ 24 ರಿಂದ 48 ಗಂಟೆಗಳವರೆಗೆ ಮಾತ್ರ
ಅದರ ತಾಜಾತನವಿರುತ್ತದೆ. ನಂತರ ಫ್ರಿಜ್‌ನಲ್ಲಿ ಇರಿಸಿದರೂ ತಾಜಾತನ ನಾಶವಾಗುತ್ತದೆ. ಎಳನೀರು ಆಹ್ಲಾದಕರ ಪಾನೀಯ ಮತ್ತು ಒಂದು ಬಾಳೆ ಹಣ್ಣಿನಲ್ಲಿರುವುದಕ್ಕಿಂತ ಹೆಚ್ಚಿನ ಪ್ರಮಾಣದ ಪೊಟಾಷಿಯಂ ಒಳಗೊಂಡಿದೆ. ಎಳನೀರು ಕರುಳಿನ ಕಾರ್ಯವನ್ನು ಮತ್ತು ಪಚನಶಕ್ತಿಯನ್ನು
ಹೆಚ್ಚಿಸುತ್ತದೆ.

ಹೊಟ್ಟೆಯಲ್ಲಿರುವ ಕ್ರಿಮಿಗಳನ್ನು ನಾಶಮಾಡುತ್ತದೆ.ಎಳನೀರಿನಲ್ಲಿರುವ ಸಲೈನ್ ಮತ್ತು ಅಲ್ಬುಮಿನ್ ಕಾಲರಾ ರೋಗಕ್ಕೆ ಅತ್ಯುಪಯುಕ್ತ ಔಷಧಿ.ಖನಿಜ ವಿಷವನ್ನು ದೇಹದಿಂದ ಹೊರದಬ್ಬುತ್ತದೆ. ಎಳನೀರಿನ ಔಷಧೀಯ ಗುಣಗಳು-ಮೂತ್ರಮಲ ಮತ್ತು ಮೂತ್ರದಸೋಂಕನ್ನು ತಡೆಗಟ್ಟುವ ಗುಣ ಹೊಂದಿರುವ ಕಾರಣ ಕಿಡ್ನಿಕಲ್ಲುಗಳ ಸಂಭವವನ್ನು ಕಡಿಮೆ ಮಾಡುತ್ತದೆ. ಆಹ್ಲಾದ, ಶಕ್ತಿನೀಡವ ಪಾನೀಯಗಳಿಗಿಂತ ಕಡಿಮೆ ಸೋಡಿಯಂ ಹೊಂದಿದೆ. ಹೃದಯಕ್ಕೆ ಸಂಬಂಧಿಸಿದ ತೊಂದರೆಗಳು ಮತ್ತು ದೇಹದ ಜಲಾಂಶ ನಷ್ಟವಾಗುವಿಕೆಯನ್ನು ಕಡಿಮೆ ಮಾಡುತ್ತದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ಆಗಸ್ಟ್.1 ರಿಂದ 3500 ವೈನ್‍ಶಾಪ್‍ಗಳಿಗೆ ಬೀಗ – ಜಗನ್‍ಮೋಹನ್‍ರೆಡ್ಡಿ ಹೇಳಿಕೆ,.!

    ಅಮರಾವತಿ, ಸೆ.29-ಚುನಾವಣೆಗೂ ಮುನ್ನವೇ ರಾಜ್ಯಾದಾದ್ಯಂತ ಮದ್ಯ ನಿಷೇಧ ಮಾಡಲಾಗುವುದು ಎಂದು ಭರವಸೆ ನೀಡಿದ್ದ ಆಂಧ್ರಪ್ರದೇಶದ ಮುಖ್ಯಮಂತ್ರಿ ಜಗನ್‍ಮೋಹನ್‍ರೆಡ್ಡಿ ಹಂತ ಹಂತವಾಗಿ ಜಾರಿಗೆ ತರಲು ಕ್ರಮಗಳನ್ನು ಕೈಗೊಂಡಿದ್ದಾರೆ. ಈ ನಿಟ್ಟಿನಲ್ಲಿ ಅಕ್ಟೋಬರ್ 1 ರಿಂದಲೇ ಕಾರ್ಯಪ್ರವೃತ್ತವಾಗುವ ಜಗನ್ ಸರ್ಕಾರವು 3500 ಖಾಸಗಿ ಮದ್ಯದ ಅಂಗಡಿಗಳನ್ನು ಸರ್ಕಾರದ ಅಧೀನಕ್ಕೆ ಪಡೆದುಕೊಳ್ಳಲು ಕ್ರಮಕೈಗೊಂಡಿದೆ. ಆಂಧ್ರದಾದ್ಯಂತ ಕಾರ್ಯಾಚರಣೆ ನಡೆಸಿದ್ದ ರಾಜ್ಯ ಪಾನೀಯ ನಿಗಮವು ಸೆಪ್ಟೆಂಬರ್ 1 ರಂದೇ 475 ವೈನ್‍ಶಾಪ್‍ಗಳನ್ನು ಒಳಪಡಿಸಿಕೊಂಡಿತ್ತು, ಈಗ ರಾಜ್ಯಾದಾದ್ಯಂತ 4380 ಮದ್ಯದಂಗಡಿಗಳಿದ್ದು ಅ.1 ರಿಂದ ಅದರ ಸಂಖ್ಯೆಯನ್ನು…

  • ಸುದ್ದಿ

    ದೇವಸ್ಥಾನದ ಬಳಿ ಭಿಕ್ಷೆ ಬೇಡಿದರೆ ಇಷ್ಟೊಂದು ಹಣ ಇರುತ್ತಾ.?ಬಿಕ್ಷುಕಿ ಬಳಿ ಬ್ಯಾಂಕ್ ಅಕೌಂಟ್, ಕ್ರೆಡಿಟ್ ಕಾರ್ಡ್…!

    ಮಿಳುನಾಡಿನಲ್ಲಿ ನಡೆದ ಘಟನೆ ಬಗ್ಗೆ ಕೇಳಿದರೆ ಎಂಥವರೂ ಶಾಕ್ ಆಗುತ್ತಾರೆ. ಭಿಕ್ಷೆ ಬೇಡುವವರನ್ನು ಕಂಡರೆ ಸಾಮಾನ್ಯವಾಗಿ ಜನರು ಮುಖ ಕಿವುಚುತ್ತಾರೆ. ಕೈಯಲ್ಲಿರುವ ಎರಡು ಮೂರು ರೂಪಾಯಿ ಕೊಟ್ಟು ಮುಂದೆ ಹೋಗುತ್ತಾರೆ. ಹೀಗೆ ಪಡೆದ ಭಿಕ್ಷೆಯ ಹಣವೇ ಇಲ್ಲೊಬ್ಬಮಹಿಳೆಯನ್ನು ಲಕ್ಷಾಧೀಶೆಯನ್ನಾಗಿ ಮಾಡಿದೆ. ಪಾಂಡಿಚೇರಿಯ ದೇವಾಲಯವೊಂದರ ಹೊರಗಡೆ ಭಿಕ್ಷೆ ಬೇಡುತ್ತಿರುವ ವೃದ್ಧೆಯ ಕೈಯಲ್ಲಿ 12 ಸಾವಿರ ರೂ. ಹಾಗೂ ಆಕೆಯ ಬ್ಯಾಂಕ್ ಅಕೌಂಟಿನಲ್ಲಿ ಸುಮಾರು 2 ಲಕ್ಷ ಹಣ ಇರುವುದು ಗುರುವಾರ ಬೆಳಕಿಗೆ ಬಂದಿದೆ. ವೃದ್ಧೆಯನ್ನು ಪಾರ್ವತಮ್ಮ(70)ಎಂದು ಗುರುತಿಸಲಾಗಿದೆ. ಪ್ರತಿ…

  • ತಂತ್ರಜ್ಞಾನ

    ನೆಲದ ಮೇಲೆ ಹಾಗೊ ಆಕಾಶದಲ್ಲಿ ಹಾರುವ ಕಾರು..!ನಿಮ್ಗೆ ಗೊತ್ತಾ ..?ತಿಳಿಯಲು ಈ ಲೇಖನ ಓದಿ …

    ಒಂದೆಡೆ ಹಲವಾರು ರೋಗಗಳಿಗೆ ಹೊಸ ಹೊಸ ಮದ್ದುಗಳನ್ನು ಕಂಡುಹಿಡಿಯಲಾಗುತ್ತಿದ್ದರೆ ಮತ್ತೊಂದೆಡೆ ನೆಲದಲ್ಲಿ ಎದುರಾಗಲಿರುವ ಜಾಗದ ಕೊರತೆಯನ್ನು ನೀಗಿಸಲು ಬಾನಂಚಿನಲ್ಲಿ ಬೇರೆ ನೆಲೆಗಳನ್ನು ಹುಡುಕುವಂತ ಕೆಲಸಗಳು ನಡೆಯುತ್ತಿವೆ.

  • ಜ್ಯೋತಿಷ್ಯ

    ಯಾವ ದಿನ ಹುಟ್ಟಿದವರು, ಏನೆಲ್ಲಾ ಗುಣ ನಡೆತೆ ಹೊಂದಿರುತ್ತಾರೆ ಗೊತ್ತಾ..?ತಿಳಿಯಲು ಈ ಲೇಖನ ಓದಿ…

    ಜ್ಯೋತಿಷ್ಯಾಸ್ತ್ರ ಬಹು ಪುರಾತನವಾಗಿದ್ದರೂ ಕೆಲವರು ಇಂದಿಗೂ ನಂಬುವುದಿಲ್ಲ. ಆದರೆ ನಮ್ಮ ಹುಟ್ಟಿನ ಕೆಲವು ಅಂಶಗಳು ನಮ್ಮ ಜೀವನದ ಮೇಲೆ ಪ್ರಭಾವ ಬೀರುತ್ತವೆ ಎಂಬುದು ಜ್ಯೋತಿಷ್ಯಾಸ್ತ್ರದಲ್ಲಿ ಹೇಳದೇ ಇದ್ದರೂ ವಾಸ್ತವಾಂಶಗಳನ್ನು ಗಮನಿಸಿ ನಿಜ ಎಂದು ಒಪ್ಪಿಕೊಳ್ಳಲೇಬೇಕಾಗುತ್ತದೆ.

  • ಸುದ್ದಿ

    ಬ್ಯಾಟರಿ ಚಾಲಿತ ಹೃದಯ ಇದೆ ಅಂದ್ರೆ ನೀವು ನಂಬತೀರಾ..? ಈ ಪುಟ್ಟ ಬಾಲಕನ ಹೃದಯ ಈಗ ಆ ಮೊಬೈಲ್‌ನಲ್ಲಿದೆ..?

    ನಾವೆಲ್ಲಾ ಬ್ಯಾಟರಿ ಚಾಲಿತ ಬೈಕ್​ಗಳನ್ನು ಹಾಗೂ ಕಾರುಗಳನ್ನು ನೋಡಿದ್ದೇವೆ. ಆದ್ರೆ, ಬ್ಯಾಟರಿ ಚಾಲಿತ ಹೃದಯ ಇದೆ ಅಂದ್ರೆ ನೀವು ನಂಬತೀರಾ..? ಹೌದು ಇದು ನಿಜಕ್ಕೂ ಹೌಹಾರುವಂತಹ ವಿಷಯ. 4 ವರ್ಷದ ಬಾಲಕನಿಗೆ ಬ್ಯಾಟರಿ ಮೂಲಕ ಹೃದಯದ ಬಡಿತ ನಡೆಯುತ್ತಿರುವ ಇಂಟರೆಸ್ಟಿಂಗ್ ಸ್ಟೋರಿ ಇಲ್ಲಿದೆ. ನಿಜಕ್ಕೂ ಇದೊಂದು ರೀತಿಯಲ್ಲಿ ವಿಚಿತ್ರ ಅನಿಸಿದ್ರೂ ಸತ್ಯ. ದಾಂಡೇಲಿ ಮೂಲದ ಪ್ರಕಾಶ ಹಾಗೂ ಅಶ್ವಿನಿ ದಂಪತಿಯ 4 ವರ್ಷದ ಬಾಲಕನಿಗೆ ಇಂತಹದೊಂದು ಆಪರೇಷನ್ ಮಾಡಲಾಗಿದೆ. ನಾಲ್ಕು ವರ್ಷದ ಈ ಬಾಲಕ ಹೃದಯ ಸಂಬಂದಿ…

  • ಜೀವನಶೈಲಿ

    ಖಾಲಿ ಹೊಟ್ಟೆಯಲ್ಲಿ ಚಹಾ(ಟೀ) ಕುಡಿದರೆ ಏನಾಗುತ್ತೆ ಗೊತ್ತಾ?

    ನಾವು ದಿನಾಲು ಬೆಳಿಗ್ಗೆ ಎದ್ದ ತಕ್ಷಣ ನಮಗೆ ಏನಿಲ್ಲಾ ಅಂದ್ರು ಬಿಸಿ ಬಿಸಿ ಚಹಾ(ಟೀ) ಬೇಕೇ ಬೇಕು. ಒಂದು ಸಮೀಕ್ಷೆಯ ಪ್ರಕಾರ ಶೇ. ತೊಂಬತ್ತಕ್ಕೂ ಹೆಚ್ಚು ಭಾರತೀಯರು ನಿತ್ಯವೂ ಕನಿಷ್ಠ ಮೂರು ಕಪ್ ಚಹಾ ಕುಡಿಯುತ್ತಾರೆ. ಆದರೆ ಚಹಾ ಕುಡಿಯುವವರಲ್ಲಿ ಹೆಚ್ಚಿನವರು ದಿನದ ಪ್ರಥಮ ಆಹಾರವಾಗಿ ಒಂದು ಟೀ ಸೇವಿಸುತ್ತಾರೆ. ಕೆಲವರಂತೂ ಹಾಸಿಗೆಯಿಂದ ಏಳುವ ಮುನ್ನವೇ ಬೆಡ್ ಟೀ ಎಂದು ಕುಡಿಯುತ್ತಾರೆ.