ಈ ಹಿಂದೆ ದೇಶ ವಿರೋಧಿ ಚಟುವಟಿಕೆ ಹಿನ್ನೆಲೆ ಮಿಲಿಟರಿ ಮುಖ್ಯಸ್ಥನನ್ನೇ ಗಲ್ಲಿಗೇರಿಸಿ ಭಾರೀ ಸುದ್ಧಿಯಾಗಿದ್ದು ಕಿಮ್ ಜಂಗ್, ಇದೀಗ ಹೊಸ ಕಾಯ್ದೆ ಜಾರಿ ಮಾಡುವ ಮತ್ತೊಮ್ಮೆ ತನ್ನ ಸರ್ವಾಧಿಕಾರವನ್ನು ಪ್ರದರ್ಶಿಸಿದ್ದಾನೆ.

ಭೂಮಿಯ ಮೇಲೆ ನರಕ ಇದೆ ಅಂದ್ರೆ ನೀವು ನಂಬುತ್ತಿರಾ.ಪ್ರಜೆಗಳನ್ನ ವಿವಿಧ ರೀತಿ ಹಿಂಸೆ ಕೊಡುವ ದೇಶಗಳು ಈ ಪ್ರಪಂಚದಲ್ಲಿ ಇದೆ.. ಏಷ್ಯಾದಲ್ಲಿ ಉತ್ತರ ಕೊರಿಯಾ ವಿಚಿತ್ರ ರೂಲ್ಸ್ ಮೂಲಕ ಜನರಿಗೆ ಇಲ್ಲೇ ನರಕ ತೋರಿಸುತ್ತಿದೆ.

ಈ ದೇಶದಲ್ಲಿ ಸರ್ಕಾರ ಅನುಮೋದಿಸಿರುವ ೨೮ ರೀತಿಯ ಹೇರ್ ಕಟ್ ಇದ್ದು ಅದರಲ್ಲೇ ಹೇರ್ ಕಟ್ ಮಾಡಿಸಬೇಕು. ಉತ್ತರ ಕೊರಿಯಾದಲ್ಲಿ ವ್ಯವಸಾಯಕ್ಕೆ ರಾಸಾಯನಿಕವನ್ನ ಬಳಸುದಿಲ್ಲ ಅದರ ಬದಲು ಮಲ ಮೂತ್ರದಿಂದ ತಯಾರಿಸಿದ ಗೊಬ್ಬರವನ್ನ ಬಳಸುತ್ತಾರೆ, ಪ್ರತಿಯೊಬ್ಬರ ಮಲ ಮೂತ್ರವನ್ನ ಸರ್ಕಾರಕ್ಕೆ ಕೊಡಬೇಕು ಇಲ್ಲ ಅಂದ್ರೆ ಶಿಕ್ಷೆ.

ಉತ್ತರ ಕೊರಿಯಾದಲ್ಲಿ ೨೦೦ ಹುಡುಗಿಯರ ಒಂದು ಟೀಮ್ ರಚಿಸಲಾಗಿದ್ದು ಇವರ ಕೆಲಸ ಏನು ಅಂದ್ರೆ ಸರಕಾರಿ ಅಧಿಕಾರಿಗಳಿಗೆ ಮನರಂಜನೆ ಮತ್ತು ಮಂಚದ ಸುಖ ಕೊಡೋದು.

ಈ ದೇಶದಲ್ಲಿ ಜೀನ್ಸ್ ದರಿಸುದು ದೊಡ್ಡ ಅಪರಾಧ, ಜೀನ್ಸ್ ಪ್ಯಾಂಟ್ ಅಮೆರಿಕಾದವರದು ಎಂದು ಭಾವಿಸುವ ಇಲ್ಲಿನ ಸರಕಾರ ಅದನ್ನ ನಿಷೇಧಿಸಿದೆ, ಇಲ್ಲಿ ಬೈಬಲ್ ಓದಿದರೂ, ಸಿನಿಮಾ ನೋಡಿದರು ದೇಶ ದ್ರೋಹದ ಅಡಿಯಲ್ಲಿ ಮರಣ ದಂಡನೆ ಶಿಕ್ಷೆ ವಿಧಿಸಲಾಗುತ್ತೆ. ಕೆಲವು ಅಪರಾಧಗಳಿಗೆ ಇಲ್ಲಿ ಜೀವಿತಾವಧಿ ಶಿಕ್ಷೆ ವಿಧಿಸುತ್ತಾರೆ ಅಂದರೆ ಈ ಶಿಕ್ಷೆಗೆ ಗುರಿಯಾದ ವ್ಯಕ್ತಿಯು ಮೂರೂ ತಲೆಮಾರಿನ ವರೆಗೂ ಶಿಕ್ಷೆ ಅನುಭವಿಸಬೇಕು.

ಇಲ್ಲಿ ಗಾಂಜಾ ಬೆಳೆಯಲು ಮತ್ತು ಮಾರಲು ಅವಕಾಶ ಇದೆ, ಗಾಂಜಾ ಬೆಳೆಸಲು ಸರ್ಕಾರ ಪ್ರೋತ್ಸಾಹ ನೀಡುತ್ತದೆ, ಇದಕ್ಕಾಗೋ ಲೋನ್ ಕೊಡುತ್ತದೆ ಬೆಳೆದ ಗಾಂಜಾವಾನ್ನ ಸರ್ಕಾರಕ್ಕೆ ಮಾರಬೇಕು ವಿದೇಶಗಳಿಗೆ ಇದನ್ನ ಮಾರಿ ಹಣ ಗಳಿಸುತ್ತದೆ ಈ ದೇಶ.

ಇಲ್ಲಿ ಪ್ರತಿಯೊಬ್ಬರೂ ಓದಬೇಕು ಹಾಗೆ ಓದುವಾಗ ಪ್ರತಿದಿನ ಕೆಲವು ಗಂಟೆಗಳ ಕಾಲ ಸರ್ಕಾರೀ ಕಚೇರಿಗಳಲ್ಲಿ ಉಚಿತವಾಗಿ ಕೆಲಸ ಮಾಡಬೇಕು, ಇದನ್ನ ದುರ್ಬಳಕೆ ಮಾಡಿಕೊಂಡ ಅಧಿಕಾರಿಗಳು ತಮ್ಮ ಸ್ವಂತ ಕೆಲಸವನ್ನ ಮಾಡಿಸುತಿದ್ದು ೯೦% ಮಕ್ಕಳ ಮೇಲೆ ಲೈಂಗಿಕ ದಾಳಿ ಮಾಡುತ್ತಾರೆ.
ಮತ್ತೊಂದು ಕಠಿಣ ಕಾಯ್ದೆ ಜಾರಿ :-
ಕಿಮ್ ಜಂಗ್ ಉನ್ ಹೊರಡಿಸಿರುವ ಹೊಸ ಕಾಯ್ದೆ ಪ್ರಕಾರ ಪ್ರಮುಖ ರಸ್ತೆಗಳಲ್ಲಿ ನಿಲ್ಲಿಸಲಾಗಿರುವ ಕಿಮ್ ಜಂಗ್ ಹಿರಿಯರ ಪ್ರತಿಮೆಗಳ ಬಳಿ ವಾಹನ ಸವಾರರು ನಿಧಾನವಾಗಿ ವಾಹನ ಚಾಲನೆ ಮಾಡಬೇಕಂತೆ.

ತಪ್ಪಿದ್ರೆ ಜೈಲು ವಾಸ ಗ್ಯಾರಂಟಿ:-
ಹೊಸ ಕಾಯ್ದೆ ಜಾರಿ ಮಾಡಿರುವ ಕಿಮ್ ಜಂಗ್, ಪುತ್ಥಳಿಗಳ ಬಳಿ ವಾಹನಗಳನ್ನು ನಿಧಾನವಾಗಿ ಚಾಲನೆ ಮಾಡದೇ ಇದ್ದಲ್ಲಿ ಜೈಲು ಶಿಕ್ಷೆಗೆ ಗುರಿಯಾಗಲಿದ್ದಿರಿ ಎಂದು ಎಚ್ಚರಿಕೆ ನೀಡಿದ್ದಾನೆ.

ಹೀಗೆ ವಿಚಿತ್ರ ಆಜ್ಞೆಗಳನ್ನು ಹೊರಡಿಸುವ ಈ ಮೂಲಕ ವಿಶ್ವ ಸಮುದಾಯದ ಕೆಂಗಣ್ಣಿಗೆ ಗುರಿಯಾಗುವ ಕಿಮ್ ಜಂಗ್, ದೇಶದಲ್ಲಿ ಬಡತನವಿದ್ದರು ಇಂತಹ ಕಾಯ್ದೆಗಳಿಗೆ ಯಾವುದೇ ಬರವಿಲ್ಲ.