ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಒಬ್ಬೊಬ್ಬರಿಗೆ ಒಂದೊಂದು ರೀತಿಯ ದುಶ್ಚಟವಿರುವುದು ಸಾಮಾನ್ಯ. ಕೆಲವರು ತೀವ್ರ ಒತ್ತಡವಿರುವಾಗ ಉಗುರು ಕಚ್ಚುವ ಕೆಟ್ಟ ಅಭ್ಯಾಸ ಬೆಳೆಸಿಕೊಂಡಿರುತ್ತಾರೆ. ಇದನ್ನು ಬಿಡಬೇಕೆಂದರೂ ಸಾಧ್ಯವಾಗುವುದಿಲ್ಲ.
ಸಣ್ಣವರಿದ್ದಾಗ, ಅಷ್ಟೇ ಏಕೆ ದೊಡ್ಡವರೂ ಕೂಡ ಆಗಾಗ ಉಗುರು ಕಚ್ಚುವುದನ್ನು ನೋಡಿರುತ್ತೇವೆ. ಒತ್ತಡದಲ್ಲಿ ಅಥವಾ ಕೆಲವೊಮ್ಮೆ ಅದನ್ನೇ ರೂಢಿ ಮಾಡಿಕೊಂಡವರು ಉಗುರು ಕಚ್ಚುತ್ತಾರೆ. ಹೀಗೆ ಉಗುರು ಕಚ್ಚುವವರು ಪರ್ಫೆಕ್ಷನಿಸ್ಟ್ ಆಗಿರುತ್ತಾರೆ ಎಂದು ವರದಿಯೊಂದು ಹೇಳಿದೆ.
ಉಗುರು ಕಚ್ಚುವುದು, ತಲೆ ಕೆರೆದುಕೊಳ್ಳುವುದು, ಬೆರಳ ತುದಿಯ ಚರ್ಮ ಕಡಿಯುವುದು ಮೊದಲಾದ ಸ್ವಭಾವ ಹೊಂದಿದ್ದ ಹಾಗೂ ಹೊಂದಿರದವರನ್ನು ಅಧ್ಯಯನಕ್ಕೆ ಒಳಪಡಿಸಲಾಗಿದ್ದು, ಸರಳ, ಕ್ಲಿಷ್ಟ, ಮೊದಲಾದ ರೀತಿಯ ಕೆಲಸವನ್ನು ಅವರಿಗೆ ವಹಿಸಲಾಗಿತ್ತು ಅದರಲ್ಲಿ ಉಗುರು ಕಚ್ಚುವವರು ತಮಗೆ ನೀಡಲಾಗಿದ್ದ ಪರೀಕ್ಷೆಗಳನ್ನು ಯಶಸ್ವಿಯಾಗಿ ಮುಗಿಸಿದ್ದಾರೆ.
ಈ ಸ್ವಭಾವ ಹೊಂದಿರದವರು ಒತ್ತಡ ತಡೆದುಕೊಳ್ಳಲಿಕ್ಕೆ ಸಾಧ್ಯವಾಗದೇ ಉಗುರು ಕಚ್ಚಿಕೊಳ್ಳುವ ಪರಿಸ್ಥಿತಿ ಎದುರಾಗಿತ್ತು ಎಂದು ಹೇಳಲಾಗಿದೆ. ಉಗುರು ಕಚ್ಚುವವರು ಪರ್ಫೆಕ್ಷನಿಸ್ಟ್ ಆಗಿದ್ದಾರೆಂಬುದು ಅಧ್ಯಯನದಲ್ಲಿ ತಿಳಿದುಬಂದಿದ್ದು, ಇಂತವರಿನ್ನು ಖುಷಿಪಡಬಹುದು. ಕೆಲವರು ತಮಗೆ ವಹಿಸಿದ ಕೆಲಸ ಪೂರ್ಣಗೊಳಿಸದಿದ್ದಾಗ ಒತ್ತಡಕ್ಕೆ ಒಳಗಾಗುತ್ತಾರೆ ಎನ್ನಲಾಗಿದೆ.
ಉಗುರು ಕಚ್ಚುವುದು ಕ್ಯಾಲ್ಶಿಯಂ ಕೊರತೆಯ ಲಕ್ಷಣ ಎನ್ನುವವರೂ ಇದ್ದಾರೆ. ಅದೇನೇ ಇದ್ದರೂ ಈ ದುಶ್ಚಟ ಬಿಡುವ ಸರಳ ಉಪಾಯ ಏನಿದೆ ನೋಡೋಣ.ನಮಗೆ ನೆನಪಿರಬಹುದು. ಚಿಕ್ಕ ಮಗುವಾಗಿದ್ದಾಗ ತಾಯಿ ಎದೆ ಹಾಲು ಬಿಡಿಸಲು ಕಹಿ ಸವರುವ ಉಪಾಯ. ಅದನ್ನೇ ಇಲ್ಲೂ ಅಳವಡಿಸಿಕೊಳ್ಳಬಹುದು. ಕೈಗೆ ನೈಲ್ ಪಾಲಿಶ್ ಅಥವಾ ಕಹಿಯಾದ ವಸ್ತುವನ್ನೇನಾದರೂ ಸವರಿಕೊಳ್ಳುವುದು ಉತ್ತಮ ಉಪಾಯ.
ಉಗುರು ಕಚ್ಚುವುದರಿಂದ ದೇಹದ ಮೇಲಾಗುವ ಪರಿಣಾಮಗಳೂ ಅಷ್ಟೇ ಗಂಭೀರ. ಉಗುರಿನಲ್ಲಿರುವ ಕಶ್ಮಲ ಹೊಟ್ಟೆ ಸೇರುವುದರಿಂದ ಜಂತು ಹುಳದ ತೊಂದರೆ ಅನುಭವಿಸಬೇಕಾದೀತು. ಉಗುರಿನ ಸುತ್ತಲಿನ ಚರ್ಮ ಅಂದಗೆಡುವುದು ಮಾತ್ರವಲ್ಲ, ಊದಿಕೊಂಡಂತೆ ಆಗಬಹುದು.
ಅಲ್ಲದೆ ಉಗುರು ಕಚ್ಚುವುದರಿಂದ ಹಲ್ಲು ಬಲಹೀನವಾಗಬಹುದು ಮತ್ತು ಅಂದಗೆಡಬಹುದು. ಎಲ್ಲಕ್ಕಿಂತ ಹೆಚ್ಚಾಗಿ ಕೈ ಬೆರಳುಗಳು ಅಂದಗೆಡುವುದು ಮಾತ್ರವಲ್ಲ, ನೋಡುಗರಿಗೆ ಅಸಹ್ಯವಾಗಿ ಕಾಣಬಹುದು. ಹಾಗಾಗಿ ಉಗುರು ಕಚ್ಚುವ ಅಭ್ಯಾಸವಿದ್ದರೆ ಆದಷ್ಟು ಬೇಗ ಬಿಡುವುದು ಒಳ್ಳೆಯದು.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ವಾಷಿಂಗ್ಟನ್: ಸಾಮಾನ್ಯವಾಗಿ ಸೆಲಬ್ರೆಟಿಗಳು ತಮ್ಮ ಹುಟ್ಟುಹಬ್ಬವನ್ನು ವಿಭಿನ್ನವಾಗಿ ಆಚರಿಸಿಕೊಳ್ಳುತ್ತಾರೆ. ಆದರೆ ಹಾಲಿವುಡ್ನ ಖ್ಯಾತ ನಟಿ, ಗಾಯಕಿ ತನ್ನ ಬೆತ್ತಲೆ ಫೋಟೋವನ್ನು ಪೋಸ್ಟ್ ಮಾಡುವ ಮೂಲಕ ಜನ್ಮದಿನವನ್ನು ಸಂಭ್ರಮಿಸಿದ್ದಾರೆ. ಹಾಲಿವುಡ್ನ ಮೀನ್ ಗಲ್ರ್ಸ್, ಫ್ರೀಕಿ ಫ್ರೈಡೇ ಸಿನಿಮಾದ ನಟಿ ಲಿಂಡ್ಸೆ ಲೋಹನ್ ಜುಲೈ 2ರಂದು 33ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಲಿಂಡ್ಸೆ ಕನ್ನಡಿಯ ಮುಂದೆ ಬೆತ್ತಲಾಗಿ ಕುಳಿತು ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಈ ಫೋಟೋದಲ್ಲಿ ಲಿಂಡ್ಸೆ ಆಭರಣಗಳನ್ನು ಹೊರತಾಗಿ ಏನನ್ನೂ ಧರಿಸಿಲ್ಲ. ಹುಟ್ಟುಹಬ್ಬ ಆಚರಣೆಗೂ 2 ನಿಮಿಷ ಮುನ್ನ…
ಗುಜರಾತ್ನ ಬನಸ್ಕಾಂತ ಜಿಲ್ಲೆಯ ಠಾಕೂರ್ ಸಮುದಾಯದಲ್ಲಿ ಯುವತಿಯರು ಮೊಬೈಲ್ ಪೋನ್ ಬಳಕೆ ಮಾಡದಂತೆ ನಿಷೇಧವೇರಿದೆ. ಇನ್ನು ಬೇರೆ ಜಾತಿ ಯುವಕರನ್ನು ಮದುವೆಯಾದರೇ ಭಾರಿ ಮೊತ್ತದ ದಂಡವನ್ನು ಪಾಲಕರಿಗೆ ವಿಧಿಸಲಾಗುವುದು ಜಿಲ್ಲೆಯ 12 ಗ್ರಾಮಗಳಲ್ಲಿ ಈ ಕಾನೂನು ಜಾರಿಗೆ ಬರಲಿದೆ ಎಂದು ಸಮುದಾಯದ ನಾಯಕರು ಹಾಗೂ ಸ್ಥಳೀಯ ಶಾಸಕರು ತಿಳಿಸಿದ್ದಾರೆ. ಮದುವೆಗೂ ಮುನ್ನ ಯುವತಿಯರು ಮೊಬೈಲ್ ಬಳಸಬಾರದು. ಒಂದೆ ವೇಳೆ ಬಳಸಿದರೆ, ಅದಕ್ಕೆ ಹೆತ್ತವರೇ ಜವಾಬ್ದಾರಿಯಾಗಲಿದ್ದಾರೆ. ಇನ್ನು ಸಮುದಾಯದ ಯುವತಿ ಹಾಗೂ ಯುವಕರು ಬೇರೆ ಜಾತಿಯವರನ್ನು ಪ್ರೀತಿಸಿ ಮದುವೆಯಾದರೆ,…
ಕನ್ನಡ ಚಿತ್ರಗಳನ್ನು ದೇಶಾದ್ಯಂತ ಎಲ್ಲಭಾಷೆಗಳ ಪ್ರೇಕ್ಷಕರು ನೋಡಿ ಮೆಚ್ಚಿಕೊಳ್ಳುತ್ತಿದ್ದಾರೆ. ಇದೇ ಕಾರಣಕ್ಕೆ ಭಜರಂಗಿ-2 ಸಿನಿಮಾವನ್ನು ಪಂಚಭಾಷೆಗಳಲ್ಲಿ ತಯಾರಿಸುವ ಪ್ಲಾನ್ ಮಾಡಿದ್ದೇವೆ. ಸೆಪ್ಟೆಂಬರ್ 9ರಿಂದ ಶೂಟಿಂಗ್ ಆರಂಭವಾಗಲಿದೆ ಎಂದಿದ್ದಾರೆ ನಿರ್ದೇಶಕ ಎ ಹರ್ಷ.ಕೆಜಿಎಫ್ ಸಿನಿಮಾದ ಬಂದ ನಂತರ ಪ್ಯಾನ್ ಇಂಡಿಯಾ ಸಿನಿಮಾಗಳನ್ನು ಮಾಡುವ ಟ್ರೆಂಡ್ ಸ್ಯಾಂಡಲ್ವುಡ್ನಲ್ಲಿ ಹೆಚ್ಚುತ್ತಿದ್ದು, ಹಿರಿಯ ನಟ ಶಿವರಾಜ್ ಕುಮಾರ್ ಇದೀಗ ಅಂತಹ ಚಿತ್ರ ಒಂದರಲ್ಲಿ ನಟಿಸುತ್ತಿದ್ದಾರೆ. ಹರ್ಷ ನಿರ್ದೇಶನದ ‘ಭಜರಂಗಿ-2’ ಚಿತ್ರವನ್ನು ಕನ್ನಡ, ತೆಲುಗು, ತಮಿಳು, ಮಲೆಯಾಳಂ ಹಾಗೂ ಹಿಂದಿಯಲ್ಲಿ ಏಕಕಾಲಕ್ಕೆ ತಯಾರಿಸಲಾಗುತ್ತಿದ್ದು, ಈ…
ಕೋಲಾರ:- ರಾಮನ ಪೂಜೆ ಎಲ್ಲಾ ಕಡೆ ನಡೆಯುತ್ತದೆ ಅದರಲ್ಲಿ ವಿಶಿಷ್ಟತೆ ಏನೂ ಇಲ್ಲ ಆದರೆ, ತಾಲ್ಲೂಕಿನ ಸುಗಟೂರು ಮತ್ತು ವಕ್ಕಲೇರಿ ಗ್ರಾಮಗಳಲ್ಲಿ ನಂತರ ಶಿವ ಭಕ್ತನಾದ ರಾವಣನಿಗೂ ಪ್ರಾಧಾನ್ಯತೆ ನೀಡಿ ಪೂಜಿಸುವ ವಿಶಿಷ್ಟ ಪದ್ದತಿ ರೂಢಿಯಲ್ಲಿದೆ. ವಕ್ಕಲೇರಿ ಗ್ರಾಮದಲ್ಲಿ ಮಾರ್ಕಂಡೇಶ್ವರ ಸ್ವಾಮಿ ರಥೋತ್ಸವ ಮುಗಿದಿದ್ದು, ಫೆ.7ರ ಮಂಗಳವಾರ ರಾತ್ರಿ 10 ತಲೆಗಳನ್ನೊತ್ತ ರಾವಣನ ಮೂರ್ತಿ ಮತ್ತು ಮೇಲೆ ಮಾರ್ಕಂಡೇಶ್ವರ ಸ್ವಾಮಿಯ ಮೂರ್ತಿಗಳನ್ನಿಟ್ಟು ವೈಭವದಿಂದ ರಾವಣೋತ್ಸವ ನಡೆಸಲಾಯಿತು. ಅದೇ ರೀತಿ ತಾಲ್ಲೂಕಿನ ಸುಗಟೂರು ಗ್ರಾಮದಲ್ಲೂ ಕೋದಂಡರಾಮಸ್ವಾಮಿ ಬ್ರಹ್ಮರಥೋತ್ಸವ ನಡೆದ…
ಈಗಿನ ಕಾಲದಲ್ಲಿ ಗೂಗಲ್ ಬಳಸದೆ ಇರುವ ವ್ಯಕ್ತಿಯನ್ನು ಕಂಡುಹಿಡಿಯಲು ಸಾಧ್ಯವಾಗದು ಏಕೆಂದರೆ ಪ್ರತಿಯೊಬ್ಬರೂ ತಮ್ಮದೇ ಆದ ಕೆಲಸ ಕಾರ್ಯಗಳನ್ನು ಮಾಡುವುದಕ್ಕೆ ಗೂಗಲ್ ಸಹಾಯ ಪಡೆಯುತ್ತಾರೆ.ಆಗೆಯೇ ಗೂಗಲ್ ನಮ್ಮ ನಿಮ್ಮೆಲ್ಲರ ಸಮಸ್ಯೆಗೆ ಪರಿಹಾರ ನೀಡುವುದು ಮಾತ್ರವಲ್ಲದೆ ಹಣವನ್ನು ಸಂಪಾದಿಸುವ ದಾರಿಯು ತೋರಿಸುತ್ತದೆ. ಐಟಿ ತಂತ್ರಜ್ಞಾನ ಕ್ಷೇತ್ರದಲ್ಲಿ ಪರಿಣತರಾಗಿದ್ದರೆ ಸರ್ಚ್ ಎಂಜಿನ್ ದೈತ್ಯ ಗೂಗಲ್ ನಿಮಗೊಂದು ಬಿಗ್ ಆಫರ್ ನೀಡಿದೆ. ಗೂಗಲ್ ನೀಡಿರುವ ಚಾಲೆಂಜ್ ಒಂದರಲ್ಲಿ ನೀವು ಗೆದ್ದರೆ ಬರೋಬ್ಬರಿ 10.76 ಕೋಟಿ ಬಹುಮಾನವನ್ನು ನಿಮ್ಮ ತೆಕ್ಕೆಗೆ ಹಾಕಿಕೊಳ್ಳಬಹುದಾಗಿದೆ.!ಹೌದು, ತನ್ನ…
ಓದಿದ್ದು ಎಸ್ಸೆಸ್ಸೆಲ್ಸಿವರೆಗೆ. ಆದರೂ ಒಂದೇ ವರ್ಷದಲ್ಲಿ 7 ನೌಕರಿಗೆ ಅರ್ಹತೆ ಲಭಿಸಿತು. ಆಯ್ಕೆ ಮಾಡಿಕೊಂಡಿದ್ದು ಮಾತ್ರ ಪಿಎಸ್ಐ ಹುದ್ದೆ! ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕು ಮುದೂರ ಗ್ರಾಮದ ಕಾನ ಗೌಡ ಪಾಟೀಲ ಎಂಬುವರ ಪುತ್ರ ಪ್ರಶಾಂತ ಪಾಟೀಲ (38) ಎಂಬುವರು 15 ದಿನಗಳ ಹಿಂದಷ್ಟೇ ಪ್ರೊಬೇಷನರಿ ಅವಧಿ ಪೂರೈಸಿ ಬೆಂಗಳೂರಿನ ನಂದಿನಿ ಲೇಔಟ್ನಲ್ಲಿ ಎಸ್ಐ ಆಗಿ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದಾರೆ.