ವಿಚಿತ್ರ ಆದರೂ ಸತ್ಯ

ಈ 2 ವರ್ಷದ ಪುಟ್ಟ ಬಾಲಕಿಗೆ ಹಾವೇ ಫ್ರೆಂಡ್ಸ್..!ತಿಳಿಯಲು ಈ ಲೇಖನ ಓದಿ..

196

ಹಾವು ಎಂದರೆ ಎಂಥವರಿಗೂ ಭಯ ಆಗುತ್ತೆ. ಅಂತಹದರಲ್ಲಿ ಹಾವಿನೊಂದಿಗೆ ಆಟವಾಡುತ್ತಾ ಅದರೊಂದಿಗೆ ಸ್ನೇಹ ಬೆಳಸಿಕೊಂಡು ಅವುಗಳೊಂದಿಗೆ ಬೆರೆಯುತ್ತಾಳೆ ಈ ಪುಟ್ಟ ಬಾಲಕಿ.

ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಚಿಪಗಿ ಗ್ರಾಮದ ಪ್ರಶಾಂತ್ ಹುಲೇಕಲ್ ಹಾಗೂ ಸ್ವಾತಿ ಎಂಬವರ ಮಗಳಾದ ಆಕರ್ಷ ಹಾವಿಗಳೊಂದಿಗೆ ಸರಸವಾಡುವ ಬಾಲಕಿ. 2 ವರ್ಷ ಏಳು ತಿಂಗಳು ವಯಸ್ಸಿನ ಈ ಪುಟ್ಟ ಪೋರಿಗೆ ಸರಿಯಾಗಿ ನಡೆದಾಡಲೂ ಬರುವುದಿಲ್ಲ.

ಹಾಲುಗೆನ್ನೆಯ ತೊದಲು ನುಡಿ ಮಾತನಾಡುವ ಈ ಪೋರಿ ಅತ್ಯಂತ ವಿಷಕಾರಿಯಾದ ಕಾಳಿಂಗ ಸರ್ಪ ಸೇರಿದಂತೆ 60 ಕ್ಕೂ ಹೆಚ್ಚು ಹಾವುಗಳನ್ನ ಹಿಡಿದಿರುವುದಲ್ಲದೇ ಅದರೊಂದಿಗೆ ಆಟವಾಡುತ್ತಾ ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದಾಳೆ. ತಂದೆ ಸ್ವತಃ ಉರುಗ ತಜ್ಞರಾಗಿದ್ದು, 20 ವರ್ಷಗಳಿಂದ 12 ಸಾವಿರಕ್ಕೂ ಹೆಚ್ಚು ಹಾವುಗಳನ್ನ ರಕ್ಷಿಸಿ ಕಾಡಿಗೆ ಬಿಟ್ಟಿದ್ದಾರೆ.

ಈಕೆ ಚಿಕ್ಕ ಮಗುವಾಗಿದ್ದಾಗಿನಿಂದ ತಂದೆ ಹಾವುಗಳನ್ನ ಹಿಡಿಯುವುದನ್ನು ನೋಡುತ್ತಿದ್ದ ಈಕೆಗೆ ತಂದೆಯೇ ಮೊದಲ ಗುರು.   2 ವರ್ಷ ಏಳು ತಿಂಗಳು ವಯಸ್ಸಿನ ಈ ಪುಟ್ಟ ಪೋರಿಗೆ ಅತ್ಯಂತ ವಿಷಕಾರಿಯಾದ ಕಾಳಿಂಗ ಸರ್ಪ ಸೇರಿದಂತೆ 60 ಕ್ಕೂ ಹೆಚ್ಚು ಹಾವುಗಳನ್ನ ಹಿಡಿದಿರುವುದಲ್ಲದೇ ಅದರೊಂದಿಗೆ ಆಟವಾಡುತ್ತಾ ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದಾಳೆ.

ಮನೆಯಲ್ಲಿ ಪ್ರತಿ ವರ್ಷ ನಾಗರಪಂಚಮಿಯಂದು ನಿಜ ನಾಗರಹಾವಿಗೆ ತಪ್ಪದೇ ಪೂಜೆ ಮಾಡುತ್ತಾರೆ. ಹೀಗಾಗಿ ಇವೆಲ್ಲವೂ ಈ ಪುಟ್ಟ ಬಾಲಕಿಗೆ ಪ್ರಭಾವ ಬೀರಿದ್ದು ಹಾವುಗಳೊಂದಿಗೆ ಸ್ನೇಹ ಬೆಳಸಿಕೊಳ್ಳುವಂತೆ ಮಾಡಿದೆ. ಚಿಕ್ಕ ಪೋರಿಯ ಈ ಸಲುಗೆ ಎಲ್ಲರನ್ನು ಮೂಕವಿಸ್ಮಿತರನ್ನಾಗಿಸಿದೆ.

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ