ನಮಗೆ ಅತ್ಯಂತ ಹತ್ತಿರದವರನ್ನು ಕಣ್ಣುಗಳಿಗೆ ಹೋಲಿಸಿ ಅವರು ನಮಗೆಷ್ಟು ಅಮೂಲ್ಯ ಎಂದು ಬಣ್ಣಿಸುವುದು ಸಾಮಾನ್ಯ. ಏಕೆಂದರೆ ನಮ್ಮ ಶರೀರದಲ್ಲಿ ಅತಿ ಸೂಕ್ಷ್ಮವಾದ ಮತ್ತು ಅಮೂಲ್ಯವಾದ ಅಂಗಗಳೆಂದರೆ ಕಣ್ಣುಗಳು. ದೇಹದ ಯಾವುದೇ ಭಾಗಕ್ಕೆ ಪೆಟ್ಟಾದರೂ ಸಹಿಸುವ ನಾವು ಕಣ್ಣುಗಳಿಗೆ ಯಾವುದೇ ತೊಂದರೆ ಸಹಿಸುವುದಿಲ್ಲ. ಹಾಗಾಗಿ ಈ ಅಂಗಗಳನ್ನು ಅತ್ಯಂತ ಜಾಣತನದಿಂದ ಕಾಪಾಡಿಕೊಳ್ಳಬೇಕು.

ಹಾಗಾದ್ರೆ ನಮ್ಮ ದೇಹದ ಸೂಕ್ಷ್ಮ ಭಾಗವಾಗಿರುವ ಕಣ್ಣಿನ ಬಗೆಗಿನ ಈ 10 ವಿಷಯಗಳು ನಮ್ಮ ಕಣ್ಣನ್ನ ನಾವೇ ನಂಬದ ಹಾಗೆ ಮಾಡ್ತವೆ…
- ಸರಾಸರಿ ಒಬ್ಬ ವ್ಯಕ್ತಿ ತನ್ನ ಕಣ್ಣುಗಳನ್ನು ನಿಮಿಷವೊಂದಕ್ಕೆ 12 ಸಲ ಕಣ್ಣು ಮಿಟುಕಿಸುತ್ತಾನೆ.
- ಮಾನವನ ಕಣ್ಣು 576 ಮೆಗಾಪಿಕ್ಸೆಲ್ ಆಗಿವೆ.

- ಮಾನವನ ಕಣ್ಣುಗುಡ್ಡೆಗಳು ಅಂದಾಜು 28 ಗ್ರಾಂ,ನಷ್ಟು ತೂಕ ಹೊಂದಿವೆ.
- ಕಣ್ಣು ತೆರೆದು ಸೀನುವುದು ಸಾಧ್ಯವಿಲ್ಲ.
- ನವೊಂದಕ್ಕೆ 10,000 ಕ್ಕಿಂತ ಹೆಚ್ಚುಸಲ ಕಣ್ಣು ಮಿಟುಕುತ್ತದೆ.
- ಕಣ್ಣಿನ ಹಿಂಭಾಗದ ಒಳ ಗೋಡೆಯಲ್ಲಿ ರೆಟಿನಾ ಎಂಬ ಭಾಗವಿದೆ. ಇದುವೇ ತನ್ನ ಮೇಲೆ ಬಿದ್ದ ಬಿಂಬವನ್ನು ಕರಾರುವಕ್ಕಾಗಿ ಗುರ್ತಿಸಿ ಅದರ ಸಂದೇಶವನ್ನು ಮೆದುಳಿಗೆ ಕಳಿಸುವ ಭಾಗ.

- ಕೆಲವು ವ್ಯಕ್ತಿಗಳ ಎರಡು ಕಣ್ಣುಗಳ ಬಣ್ಣವು ಬೇರೆ ಬೇರೆಯಾಗಿರುತ್ತವೆ ಈ ಸ್ಥಿತಿಯನ್ನು (Heterochromia iridum) ಎನ್ನುತ್ತಾರೆ.
- ಕಣ್ಣಿನ ‘ಕಾರ್ನಿಯಾ’ ಎಂಬ ಭಾಗವನ್ನು ಮಾತ್ರ ದಾನ ಮಾಡಲಾಗುತ್ತದೆ.

- ಅಕ್ಟೋಬರ್ 10 ರಂದು ವಿಶ್ವ ದೃಷ್ಟಿ ದಿನ ಆಚರಿಸಲಾಗುತ್ತದೆ.
- ಮಾನವನ ಕಣ್ಣು ಸುಮಾರು 10 ದಶಲಕ್ಷದಷ್ಟು ವಿವಿಧ ಬಣ್ಣಗಳ ನಡುವೆ ವ್ಯತ್ಯಾಸ ಗುರುತಿಸಬಲ್ಲದು.