ಉಪಯುಕ್ತ ಮಾಹಿತಿ

ಈ ಭಯಾನಕ ಕೋಳಿ ಜ್ವರದ ಬಗ್ಗೆ ನಿಮಗೆಷ್ಟು ಗೊತ್ತು?ಈ ರೋಗದ ಲಕ್ಷಣಗಳು ಮತ್ತು ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಗೊತ್ತಾ..?ಉಪಯುಕ್ತ ಮಾಹಿತಿ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ…

1087

ಹಕ್ಕಿ ಜ್ವರದ ಸೋಂಕು ಗಾಳಿಯ ಮೂಲಕ ಮನುಷ್ಯರಿಗೆ ಹರಡುತ್ತದೆ. ಆದರೆ ಇದು ಮನುಷ್ಯರಿಂದ ಮನುಷ್ಯರಿಗೆ ಹರಡುವ ಸೋಂಕಲ್ಲ.ಹಕ್ಕಿ ಜ್ವರ ಅಥವಾ ಕೋಳಿ ಶೀತ ಜ್ವರ ಹೆಚ್5ಏನ್1 ವೈರಸ್ನಿಂದ ಹರಡುವ ರೋಗವಾಗಿದೆ.ವೈಜ್ಞಾನಿಕವಾಗಿ ಹಕ್ಕಿ ಜ್ವರವನ್ನು ಹಕ್ಕಿ ಇನ್‌ಫ್ಲೂಯೆನ್‌ಜ ಅಥವಾ ಬರ್ಡ್ ಫ್ಲೂ ಎನ್ನುತ್ತಾರೆ.ಇದು ಟರ್ಕಿ ಕೋಳಿ,ಗಿಣಿ ಕೋಳಿ,ಬಾತು ಕೋಳಿ,ಗೀಜಗ ಮುಂತಾದ ಹಕ್ಕಿಗಳಲ್ಲಿ ಕಾಣಿಸಿಕೊಳ್ಳುವ ಖಾಯಿಲೆ.ಇದೊಂದು ಸಾಂಕ್ರಾಮಿಕ ಖಾಯಿಲೆಯಾಗಿದ್ದು,ಸಾಮಾನ್ಯವಾಗಿ ಹಕ್ಕಿಗಳಿಂದ ಹಕ್ಕಿಗಳಿಗೆ ಹರಡುತ್ತದೆ.ಕೆಲವೊಮ್ಮೆ ರೋಗ ಪೀಡಿತ ಹಕ್ಕಿಗಳ ಸಂಪರ್ಕದಿಂದ ಮನುಷ್ಯರಲ್ಲೂ ಈ ಜ್ವರದ ಲಕ್ಷಣಗಳು ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚು.

ಈ ರೋಗ ಹೇಗೆ ಹರಡುತ್ತದೆ…

ರೋಗ ಪೀಡಿತ ಕೋಳಿ ಅಥವಾ ಹಕ್ಕಿಗಳ ಮಾಂಸವನ್ನು ಸರಿಯಾಗಿ ಬೇಯಿಸದೇ ತಿನ್ನುವುದರಿಂದ ಸೋನ್ಕಿರುವ ಹಸಿ ಮೊಟ್ಟೆಗಳನ್ನು ಸೇವಿಸುವುದರಿಂದ ಹಾಗೂ ಕೋಳಿಗಳ ಹಿಕ್ಕೆಗಳು, ಮನುಷ್ಯರು ಕುಡಿಯುವ ನೀರಿನೊಂದಿಗೆ ಬೆರೆತು ಕಲುಶಿತಗೊಂಡಾಗ ಈ ಖಾಯಿಲೆ ಹರಡುತ್ತದೆ ಮತ್ತು ಕೆಲವು ಸಂದರ್ಭಗಳಲ್ಲಿ ಗಾಳಿಯ ಮೂಲಕವೂ ಮನುಷ್ಯರಿಗೆ ಹರಡುತ್ತದೆ. ಸೋಂಕಿಗೆ ಒಳಗಾದ ಹಕ್ಕಿಯ ಮಲ, ಮೂತ್ರ, ಸಿಂಬಳ ಮತ್ತು ಉಸಿರು ರೋಗಾಣುಗಳಿಂದ ತುಂಬಿರುತ್ತದೆ. ಹಕ್ಕಿ ವಾಸಿಸುವ ಸ್ಥಳ, ಅಲ್ಲಿನ ಗಾಳಿ, ಸಾಕಣೆಗೆ ಬಳಸುವ ಉಪಕರಣ ಎಲ್ಲವೂ ವೈರಸ್‌ಮಯವಾಗಿರುತ್ತವೆ. ಇವುಗಳ ಸಂಪರ್ಕಕ್ಕೆ ಬರುವ ಎಲ್ಲ ಪಕ್ಷಿಗಳಿಗೂ ಸೋಂಕು ತಗುಲುತ್ತದೆ. ಕೋಳಿ ಫಾರಂನಲ್ಲಿ ಒಂದು ಕೋಳಿಗೆ ಸೋಂಕು ಉಂಟಾದರೆ ಕೆಲವೇ ಗಂಟೆಗಳಲ್ಲಿ ಎಲ್ಲ ಕೋಳಿಗಳಿಗೂ ಕಾಯಿಲೆ ಅಂಟಿಕೊಳ್ಳುತ್ತದೆ. ಪಕ್ಷಿಗಳಿಗೆ ಹಂದಿಯಿಂದ, ಹಂದಿಗಳಿಗೆ ಪಕ್ಷಿಗಳಿಂದ ಸೋಂಕು ಅಂಟುವುದೂ ಉಂಟು. ಅತಿ ಅಪರೂಪವಾಗಿ ಪಕ್ಷಿಗಳ ಕಾಯಿಲೆ ಮಾನವನಿಗೆ ಅಂಟುವುದೂ ಇದೆ. ಹೀಗಾಗಿ ಕೋಳಿ ಫಾರಂನಲ್ಲಿ ಕೆಲಸ ಮಾಡುವವರು, ಕೋಳಿ ಸಾಕಿರುವ ಮನೆಯವರು ಹಕ್ಕಿ ಜ್ವರಕ್ಕೆ ಸೆರೆಯಾಗುತ್ತಾರೆ. ಪಕ್ಷಿಗಳನ್ನು, ಮೊಟ್ಟೆಯನ್ನು ಮಾರುವವರಿಗೂ, ಕತ್ತರಿಸುವವರಿಗೂ, ಕೋಳಿ ಮಾಂಸದ ಅಡುಗೆ ಮಾಡುವವರಿಗೂ ಹಕ್ಕಿ ಜ್ವರ ಅಂಟುವ ಸಂಭವ ಇರುತ್ತದೆ. ರೋಗಾಣುಗಳು ಮುಖ್ಯವಾಗಿ ಉಸಿರಾಡುವ ಗಾಳಿಯೊಂದಿಗೆ ಮಾನವನ ದೇಹ ಸೇರುತ್ತವೆ. ಮನುಷ್ಯನಿಗೆ ಅಂಟಿದ ಸೋಂಕು ಮತ್ತೊಬ್ಬರಿಗೆ ಅಂಟುವುದಿಲ್ಲ. ಹಾಗೇನಾದರೂ ಆಗಿದ್ದರೆ ಸೋಂಕು ಅತ್ಯಂತ ತೀವ್ರಗತಿಯಲ್ಲಿ ಹರಡಿ ಮನುಷ್ಯರ ಮಾರಣಹೋಮವೇ ನಡೆದುಹೋಗುತ್ತಿತ್ತು.

ಈ ರೋಗದ ಲಕ್ಷಣಗಳು:-

ಹಕ್ಕಿ ಜ್ವರದ ಲಕ್ಷಣಗಳು ಸಾಮಾನ್ಯವಾಗಿ ಹೆಚ್1ಏನ್1 ಜ್ವರದ ಲಕ್ಷಣಗಳನ್ತಯೇ ಇರುತ್ತವೆ.

 • ಈ ರೋಗದ ಸೋಂಕಿಗೆ ಒಳಗಾದ ವ್ಯಕ್ತಿಗಳಲ್ಲಿ 2-3 ದಿನದಲ್ಲಿ ರೋಗ ಲಕ್ಷಣಗಳು ಪ್ರಕಟವಾಗುತ್ತವೆ.
 • ಜ್ವರ,ಕೆಮ್ಮು,ಶೀತ,ತಲೆನೋವು,ಗಂಟಲು ಕೆರೆತ,ನೆಗಡಿ,ಸ್ನಾಯುಗಳಲ್ಲಿ ನೋವು,ಮತ್ತು ಆಯಾಸ ಕಾಣಿಸಿಕೊಳ್ಳುತ್ತದೆ.
 • ಕೆಲವೊಮ್ಮೆ ವಾಂತಿ ಮತ್ತು ಭೇದಿ ಆಗಬಹುದು.ಉಸಿರಾಟದಲ್ಲಿ ತೊಂದರೆ ಕಾಣಿಸಬಹುದು.
 • ಹಕ್ಕಿ ಜ್ವರದಿಂದ ಉಸಿರಾಟ ಸಮಸ್ಯೆ ಎದುರಾಗಿ ಸಾವು ಸಂಭವಿಸಬಹುದು.
 • ಕಾಯಿಲೆ ಆರಂಭದ 48 ಗಂಟೆಗಳಲ್ಲಿ ಔಷಧ ತೆಗೆದುಕೊಂಡರೆ ಪರಿಣಾಮ ಹೆಚ್ಚು.

ಮುನ್ನೆಚ್ಚರಿಕೆ ಕ್ರಮಗಳು:-

ಹಕ್ಕಿ ಜ್ವರ ಪೀಡಿತ ಪ್ರದೇಶಗಳಲ್ಲಿ ವಾಸಿಸುವ ಜನರು ಕೆಲವು ಮುನ್ನೆಚ್ಚರಿಕ ಕ್ರಮಗಳನ್ನು ಕೈ ಗೊಂಡರೆ ಹಕ್ಕಿ ಜ್ವರದ ಸೋಂಕು ಹರಡದಂತೆ ತಡೆಯಬಹುದು…

 • ಶಂಕಿತ ಹಕ್ಕಿ ಜ್ವರ ಪೀಡಿತ ಕೋಳಿಗಳು,ಹಕ್ಕಿಗಳು ಹಾಗೂ ಬಾತು ಕೋಳಿಗಳ ಸಂಪರ್ಕಕ್ಕೆ ಬರದಂತೆ ಎಚ್ಚರವಹಿಸಬೇಕು.
 • ಬೇರೆಯವರ ಮನೆಗೆ ಭೇಟಿ ನೀಡಿದಾಗ ಅಲ್ಲಿರುವ ಶಂಕಿತ ಹಕ್ಕಿ ಜ್ವರ ಪೀಡಿತ ಕೋಳಿ ಅಥವಾ ಹಕ್ಕಿಗಳನ್ನು ಮುಟ್ಟಬಾರದು.
 • ಕೋಳಿ ಮತ್ತು ಹಕ್ಕಿಗಳ ಮಾಂಸವನ್ನು ಹಾಗೂ ಮೊಟ್ಟೆಗಳನ್ನು ಸೂಕ್ತ ರೀತಿಯಲ್ಲಿ ಬೇಯಿಸಿ ತಿನ್ನುವುದು ಸುರಕ್ಷಿತ.
 • ಕೋಳಿ ಮತ್ತು ಹಕ್ಕಿಗಳನ್ನು ಮನೆಯಲ್ಲಿಯೇ ಕತ್ತರಿಸಬೇಡಿ. ಇವುಗಳನ್ನು ಮನೆಯಲ್ಲಿಯೇ ಕತ್ತರಿಸಿ ಕೊಲ್ಲುವುದರಿಂದ ಸೋಂಕು ಉಂಟಾಗುವ ಸಾಧ್ಯತೆ ಹೆಚ್ಚಿರುತ್ತದೆ.
 • ಹಕ್ಕಿಜ್ವರದ ಚಿಕಿತ್ಸೆಯಲ್ಲಿ “ಟ್ಯಾಮಿಫ್ಲೂ’ ಮಾತ್ರೆ ಬಳಸಲಾಗುತ್ತದೆ. ಮಾತ್ರೆಗಳ ಸ೦ಗ್ರಹ ಸಾಕಷ್ಟು ಇರುವುದರಿ೦ದ ಚಿಕಿತ್ಸೆಗೂ ಯಾವುದೇ ತೊ೦ದರೆಯಾಗುವುದಿಲ್ಲ ಎ೦ದು ಆರೋಗ್ಯ ಇಲಾಖೆ ಸಹ ಮಾಹಿತಿ ನೀಡಿದೆ.

 

About the author / 

Basavaraj Gowda

Categories

Date wise

 • ಹಲಸಿನ ಹಣ್ಣು ತಿನ್ನುವುದರಿಂದ ಆಗುವ ಆರೋಗ್ಯಕರ ಲಾಭಗಳು!!

  ಹಣ್ಣುಗಳನ್ನು ನಾವು ತಿಂದಷ್ಟು ನಮಗೆ ಆರೋಗ್ಯ ನಿರಂತರವಾಗಿರುತ್ತದೆ. ಅದರಲ್ಲಿಯೂ ಕೆಲವೊಂದು ನಿರ್ದಿಷ್ಟ ಹಣ್ಣುಗಳು ಆರೋಗ್ಯಕ್ಕೆ ಹಿತಕಾರಿಯಾಗಿದೆ. ಸಿಹಿಯಾದ ರುಚಿಯಿಂದ ಕೂಡಿದ ಹಲಸು ಆರೋಗ್ಯಕ್ಕೆ ನೀಡುವ ಕೊಡುಗೆ ಅಪಾರವಾದುದು.ಹಲಸಿನ ಹಣ್ಣು ತಿನ್ನುವುದರಿಂದ ಆಗುವ ಆರೋಗ್ಯಕರ ಲಾಭಗಳು ರಕ್ತದ ಒತ್ತಡವನ್ನು ಸಮತೋಲನವಾಗಿಸುತ್ತದೆಹಲಸಿನ ಹಣ್ಣಿನ ತೊಳೆಗಳಲ್ಲಿ ಪೊಟ್ಯಾಶಿಯಂ ಅಂಶ ಹೆಚ್ಚಾಗಿದ್ದು, ಅಧಿಕ ರಕ್ತದ ಒತ್ತಡ ಸಮಸ್ಯೆಯಿಂದ ಬಳಲುತ್ತಿರುವ ಮಂದಿಗೆ ಇದು ಬಹಳ ಸಹಕಾರಿ ಎಂದು ಹೇಳುತ್ತಾರೆ. ಏಕೆಂದರೆ ಪೊಟ್ಯಾಶಿಯಂ ಅಂಶ ಹೊಂದಿರುವ ಯಾವುದೇ ಆಹಾರ ಸೇವನೆ ಮಾಡುವುದರಿಂದ ದೇಹದಲ್ಲಿ ಸೋಡಿಯಂ ಅಂಶ…

ಏನ್ ಸಮಾಚಾರ