ಅನೇಕ ಜನರು ಹೆಣ್ಣು ಹೆತ್ತವರಿಗೆ ತುಂಬಾ ಕಷ್ಟ ಅನ್ನೋದು ಎಷ್ಟು ಸತ್ಯ ಅಲ್ವಾ.ಪೋಷಕರಿಗೆ ಮಗಳು ಏನಾದ್ರು ಹುಡುಗರ ಬಗ್ಗೆ ಮಾತನಾಡಿದ್ರೆ ತುಂಬಾ ಆತಂಕ ಉಂಟಾಗುತ್ತದೆ. ಎಲ್ಲಿ ನಮ್ಮ ಮಗಳು ಪ್ರೀತಿಯ ಬಲೆಗೆ ಸಿಗಾಕಿಕೊಳ್ಳುತ್ತಾಳೋ ಎಂಬ ಆತಂಕ ಶುರುವಾಗುತ್ತದೆ. ಹುಡುಗಿಯರು ಪ್ರೀತಿಯಲ್ಲಿ ಬಿದ್ದರೆ ತಮ್ಮ ಜೀವನದಲ್ಲಿ ಕೆಲವೊಂದು ಬದಲಾವಣೆ ಮಾಡಿಕೊಳ್ಳುತ್ತಾರೆ.ಅದು ಏನು ಅಂತ ನಾವು ಹೇಳಿದ್ದೀವಿ ನೋಡಿ.
ಕನ್ನಡಿಯ ಮುಂದೆ ನಿಂತು ಒಬ್ಬೊಬ್ಬರೇ ನಗ್ತಿರ್ತಾರೆ:-
ಕನ್ನಡಿ ಹುಡುಗರಿಗಿಂತ ಹುಡುಗಿಯರಿಗೆ ತುಂಬಾ ನಂಟು ಹೆಚ್ಚು. ಆದರೆ ಕನ್ನಡಿ ನೋಡುವುದಷ್ಟಲ್ಲದೆ, ಬಾಯ್ ಫ್ರೆಂಡ್ ಹೊಂದಿರುವ ಹುಡುಗಿಯರು ಕನ್ನಡಿ ಮುಂದೆ ನಿಂತು ಒಬ್ಬೊಬ್ಬರೇ ನಗ್ತಿರ್ತಾರೆ . ಯಾವಾಗಲು ಗೆಳೆಯನ ಬಗ್ಗೆ ಯೋಚಿಸುವ ಅವರು ಆತನನ್ನು ನೆನಪಿಸಿಕೊಂಡು ನಗ್ತಾರೆ.
ನಿದ್ರೆ ಬರೋಲ್ವಂತೆ :-
ಪ್ರೀತಿ ಮಾಡುವವರಿಗೆ ರಾತ್ರಿ ಜಾಗರಣೆ ಮಾಡುವುದು ಕಷ್ಟ ಅಲ್ಲ. ಯಾವಾಗಲೂ ಗೆಳೆಯನ ನೆನಪಲ್ಲಿರುವ ಹುಡುಗಿಯರಿಗೆ ಯಾವುದೇ ಕಾರಣಕ್ಕೂ ನಿದ್ದೆ ಬರುವುದಿಲ್ಲ.ಗೆಳೆಯನ ನೆನಪು ನಿದ್ದೆಯನ್ನು ಓಡಿಸಿ ಬಿಡುತ್ತೆ.
ಕುಂತಲ್ಲೂ ನಿಂತಲ್ಲೂ ಚಾಟಿಂಗ್ ಚಾಟಿಂಗ್:-
ನಮ್ ಹುಡ್ಗಿರು ಸದಾ ಮೊಬೈಲ್ ನಲ್ಲಿ ಗುಸುಗುಸು ಅಂತಿರ್ತಾರೆ.ಯಾವಾಗಲೂ ಗೆಳೆಯನ ಜೊತೆ ಮಾತನಾಡುವುದು, ಮೆಸ್ಸೇಜ್ ಮಾಡೋದೇ ಅವರ ಪ್ರಪಂಚವಾಗಿರುತ್ತೆ.ಕುಂತಲ್ಲೂ ನಿಂತಲ್ಲೂ ಚಾಟಿಂಗ್ ಚಾಟಿಂಗ್.ಚಾಟಿಂಗ್ ನಲ್ಲಿಯೇ ತುಂಬಾ ಬ್ಯುಸಿಯಾಗಿ ಬಿಡ್ತಾರೆ ಹುಡುಗಿಯರು.
ಲವ್ ಸಿನೆಮಾ ನೋಡೋದು :-
ಮೊದಲೆಲ್ಲ ಆಕ್ಷನ್ ಸಿನೆಮಾ ನೋಡ್ತಾ ಇದ್ದ ನಮ್ ಹುಡುಗಿಯರೂ ಪ್ರೀತಿ ಶುರುವಾಗಿದೆ ಕೂಡಲೇ ರೋಮ್ಯಾಂಟಿಕ್ ಸಿನೆಮಾ ನೋಡಲು ಶುರುಮಾಡ್ತಾರೆ. ರೋಮ್ಯಾಂಟಿಕ್ ಹಾಡು, ಸಿನೆಮಾ ನೋಡಲು ಇಷ್ಟಪಡ್ತಾರೆ.
ಬಟ್ಟೆಗಳನ್ನು ಚೇಂಜ್ ಮಾಡೋದಂತೂ ಕೇಳನ್ಗೆ ಇಲ್ಲ :-
ಸಾಮಾನ್ಯವಾಗಿ ತುಂಬಾ ಚೆನ್ನಾಗಿ ಕಾಣೋದಿಕ್ಕೆ ಯಾರಿಗೆ ಇಷ್ಟ ಇಲ್ಲ ಹೇಳಿ. ಅದರಲ್ಲೂ ತನ್ನನ್ನು ನೋಡುವ, ಮೆಚ್ಚುಗೆ ವ್ಯಕ್ತಪಡಿಸುವ ಕಣ್ಣಿದೆ ಅಂದಾಗ ಡ್ರೆಸ್ ಮೇಲೆ ವಿಶೇಷ ಪ್ರೀತಿ ಬರೋದು ಸಹಜ. ಗೆಳೆಯನ ಕಣ್ಣಿಗೆ ಅಂದವಾಗಿ ಕಾಣಲು ಹುಡುಗಿಯರು ವಿಧವಿಧವಾದ ಬಟ್ಟೆ ಧರಿಸಲು ಇಷ್ಟಪಡುತ್ತಾರೆ.
ಸ್ನೇಹಿತರಿಂದ ದೂರ ಆಗಿಬಿಡ್ತಾರೆ :-
ಪ್ರೀತಿಯಲ್ಲಿ ಬಿದ್ದವರು ಗೆಳೆಯರ ಗುಂಪಿಂದ ದೂರ ಇರ್ತಾರೆ. ಗೆಳೆಯನ ಜೊತೆ ಮಾತು, ಆತನ ಜೊತೆ ಸುತ್ತಾಡಲು ಬಯಸುವ ಅವರು ಗೆಳೆಯರ ಗುಂಪಿನಿಂದ ಬೇರೆಯಾಗ್ತಾರೆ.
ಹೊಟ್ಟೆ ಹುರಿ ಬಗ್ಗೆ ಕೇಳದೇ ಬೇಡ:-
ಮೊದಲೆಲ್ಲ ನಮಗ್ಯಾಕೆ ಎನ್ನುವಂತೆ ಇದ್ದವರು ತಾನು ಪ್ರೀತಿಸುವ ಗೆಳೆಯನಿಗೆ ಬೇರೆ ಹುಡುಗಿ ಮಾತನಾಡಿದ್ರೆ ಅಸೂಯೆ ಪಟ್ಟುಕೊಳ್ಳುತ್ತಾರೆ, ಮತ್ತು ತುಂಬಾ ತಲೆ ಕೆಡಿಸಿಕೊಳ್ತಾರೆ.
ಈ 5 ಲಕ್ಷಣಗಳು ಏನಾದ್ರೂ, ನಿಮ್ಮಲ್ಲಿದ್ರೆ ನಿಮ್ಗೆ ಬಂಪರ್ ಆಫರ್..!ಗೊತ್ತಾಗ್ಬೆಕಾದ್ರೆ ಈ ವಿಡಿಯೋ ನೋಡಿ…
ಕೋಲಾರ ನಗರದ ಪ್ರಧಾನ ಅಂಚೆ ಕಚೇರಿಯಲಿ ಶನಿವಾರ ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಯಡಿ ಕೋಲಾರ ಜಿಲ್ಲೆಯ ಟೊಮೇಟೋ ಕುರಿತು ವಿಶೇಷ ಅಂಚೆ ಲಕೋಟೆಯನ್ನು ಬಿಡುಗಡೆ ಮಾಡಲಾಯಿತು. ಇತ್ತೀಚಿನ ದಿನಗಳಲ್ಲಿ ಟೊಮೇಟೋ ಕೋಲಾರ ಜಿಲ್ಲೆಯ ಪ್ರಧಾನ ತೋಟಗಾರಿಕೆ ಬೆಳೆಯಾಗಿ ಹೊರ ಹೊಮ್ಮಿದೆ. ರೈತರು ವರ್ಷದ ೩೬೫ ದಿನವೂ ಟೊಮೇಟೋವನ್ನು ಬೆಳೆಯುತ್ತಿದ್ದಾರೆ. ಕೋಲಾರದ ಎಪಿಎಂಸಿ ಮಾರುಕಟ್ಟೆಯೂ ಏಷ್ಯಾದ ಎರಡನೇ ಅತಿ ದೊಡ್ಡ ಟೊಮೇಟೋ ಮಾರುಕಟ್ಟೆಯಾಗಿ ಪ್ರಸಿದ್ಧಿ ಪಡೆದಿದೆ. ಈ ಹಿನ್ನೆಲೆಯಲ್ಲಿ ಟೊಮೇಟೋ ಬೆಳೆಯನ್ನು ಕೋಲಾರದ ಒಂದು ಜಿಲ್ಲೆ ಒಂದು…
ನವದೆಹಲಿ: ಸುದೀರ್ಘವಾಗಿ ನಡೆದ ಲೋಕಸಭೆ ಚುನಾವಣೆ ಫಲಿತಾಂಶ ಮೇ 23 ರಂದು ಪ್ರಕಟವಾಗಲಿದೆ. ಕೊನೆ ಹಂತದ ಮತದಾನ ಮುಗಿದ ಬೆನ್ನಲ್ಲೇ ಮತಗಟ್ಟೆ ಸಮೀಕ್ಷೆಗಳು ಪ್ರಕಟವಾಗಿದ್ದು, ಎನ್.ಡಿ.ಎ. ಬಹುಮತ ಗಳಿಸಲಿದೆ ಎಂದು ಬಹುತೇಕ ಸಮೀಕ್ಷೆಗಳಲ್ಲಿ ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ಮೇ 24 ರಂದು ಹೊಸ ಸರ್ಕಾರ ರಚನೆಗೆ ನಾಯಕರು ತಯಾರಿ ನಡೆಸಿದ್ದಾರೆ. ಬಿಜೆಪಿ ನೇತೃತ್ವದ ಎನ್.ಡಿ.ಎ. ಪಕ್ಷಗಳ ನಾಯಕರು ನಾಳೆ ದೆಹಲಿಗೆ ತೆರಳಿ ಸಭೆ ನಡೆಸಲಿದ್ದಾರೆ.ಪ್ರ ಧಾನಿ ಮೋದಿ, ಬಿಜೆಪಿ ಅಧ್ಯಕ್ಷ ಅಮಿತ್ ಶಾ ಹಾಗೂ ಬಿಜೆಪಿಯ ಹಿರಿಯ…
ಡ್ರೈವಿಂಗ್ ಲೈಸೆನ್ಸ್ ನವೀಕರಣ ಅಥವಾ ಅದರಲ್ಲಿನ ವಿಳಾಸ ಬದಲಾವಣೆಗೆ ಸಾರಿಗೆ ಇಲಾಖೆ ಕಚೇರಿಗಳಿಗೆ ಇನ್ನು ಮುಂದೆ ಪದೇ ಪದೇ ಅಲೆಯಬೇಕಿಲ್ಲ. ಅಲ್ಲದೇ, ಈ ಪ್ರಕ್ರಿಯೆಗೆ ಯಾವುದೇ ನಿರಾಕ್ಷೇಪಣಾ ಪತ್ರ ಅವಶ್ಯಕತೆ ಇಲ್ಲ ಎಂದು ಕೇಂದ್ರ ಹೆದ್ದಾರಿ ಮತ್ತು ರಸ್ತೆ ಸಾರಿಗೆ ಸಚಿವಾಲಯ ಹೇಳಿದೆ. ಬಹುತೇಕ ಜನ ಸ್ವಂತ ಊರಿನ ವ್ಯಾಪ್ತಿಯ ಆರ್.ಟಿ.ಓ. ಕಚೇರಿಯಲ್ಲಿ ಡಿಎಲ್ ಮಾಡಿಸಿಕೊಂಡಿರುತ್ತಾರೆ ಕಾರಣಾಂತರದಿಂದ ಅವರು ಬೇರೆ ನಗರ ಅಥವಾ ರಾಜ್ಯದಲ್ಲಿ ಕೆಲಸಕ್ಕೆ ಹೋಗಿದ್ದ ಸಂದರ್ಭದಲ್ಲಿ ಡಿಎಲ್ ನವೀಕರಣ ಮತ್ತು ವಿಳಾಸ ಬದಲಾವಣೆಗೆ ಆರ್.ಟಿ.ಓ….
ಜೀವನದಲ್ಲಿ ಮುಂದೆ ಏಳಿಗೆ ಹೊಂದಬೇಕಾದರೆ ಪಾಲಿಸ ಬೇಕಾದ ನಿಯಮಗಳು,ಇತರರೊಡನೆ ವ್ಯವಹರಿಸ ಬೇಕಾದ ರೀತಿ,ಸಮಾಜದಲ್ಲಿ ನಮ್ಮ ನಡೆ ಹೇಗಿರಬೇಕು.ಮುಂತಾದ ಅನೇಕ ಅಂಶಗಳ ಬಗ್ಗೆ ಚಾಣಕ್ಯನು ನಮಗೆ ಅನೇಕ ನೀತಿಗಳನ್ನು ಬೋಧಿಸಿದ್ದಾನೆ. ನಮ್ಮ ಪ್ರಗತಿಗೆ ಅನೇಕ ಸಂದರ್ಭಗಳಲ್ಲಿ ಇವೆಲ್ಲವೂ ಉಪಯೋಗಕ್ಕೆ ಬರುತ್ತವೆ. ಚಾಣಕ್ಯ ಇವಷ್ಟನ್ನೇ ಅಲ್ಲದೆ,ಸ್ತ್ರೀಯರ ಬಗ್ಗೆಯೂ ಹಲವು ವಿಷಯಗಳನ್ನು ತಿಳಿಸಿದ್ದಾನೆ. 1.ಯಾವುದೇ ವಿಷಯವಾಗಲೀ,ಸ್ತ್ರೀಯು ತನ್ನ ಗಂಡನ ಅನುಮತಿ ಪಡೆದುಕೊಳ್ಳ ಬೇಕಂತೆ.ಇಲ್ಲವಾದಲ್ಲಿ ಗಂಡನ ಆಯುಷ್ಯ ಕಡಿಮೆಯಾಗುತ್ತದಂತೆ. 2.ಸುಳ್ಳುಹೇಳುವುದು, ಸ್ವಾರ್ಥ,ಅಸೂಯೆ,ಕಠಿಣವಾಗಿ ವರ್ತಿಸುವುದು,ಮೂರ್ಖತ್ವ,ಪರಿಶುಭ್ರತೆಯನ್ನು ಪಾಲಿಸದಿರುವುದು,ಕ್ರೂರತ್ವ ಮುಂತಾದ ಆಂಶಗಳು ಸ್ತ್ರೀಯರಲ್ಲಿ ಪ್ರಧಾನವಾಗಿರುತ್ತವೆ. ಇವುಗಳಿಂದಾಗಿ ಅನೇಕ…
ನೆಲ್ಲಿಕಾಯಿ ಹೆಸರು ಕೇಳಿದ ಕೂಡಲೆ ನಿಮ್ಮ ಬಾಯಲ್ಲಿ ನೀರೂರಲು ಆರಂಭವಾಗದಿದ್ದರೆ ನಿಮ್ಮ ನಾಲಿಗೆಯಲ್ಲಿರುವ ಸ್ವಾದ ಗ್ರಂಥಿಗಳು ಸತ್ತಿವೆ ಎಂದೇ ಅರ್ಥ. ಉಪ್ಪು ಖಾರ ಮಿಶ್ರಣವನ್ನು ಹಚ್ಚಿ ಚುರಕ್ ಅಂತ ಕಚ್ಚಿದಾಗ ಲಾವಾರಸದ ಬುಗ್ಗೆಯುಕ್ಕಿಸುವ ಮತ್ತು ಹಲ್ಲನ್ನು ಚುಳ್ ಎನ್ನಿಸುವ ನಾಡಿನ ನೆಲ್ಲಿಕಾಯಿ ಒಂದು ಬಗೆಯದಾದರೆ. ಔಷಧೀಯ ಗುಣಗಳನ್ನು ತನ್ನ ಒಡಲಲ್ಲಿ ತುಂಬಿಕೊಂಡಿರುವ ಒಗರು ಒಗರು ಬೆಟ್ಟದ ನೆಲ್ಲಿಕಾಯಿ ಮಹಿಮೆ ಹೇಳಬೇಕೆಂದರೆ ಒಂದು ಥೀಸಸ್ ಬರೆಯಬೇಕಾಗುತ್ತದೆ. ಶತಮಾನಗಳಿಂದ ಬಳಸಿಕೊಂಡು ಬರಲಾಗುತ್ತಿರುವ, ಆಯುರ್ವೇದದಲ್ಲಿ ಪ್ರಧಾನ ಗಿಡ ಮೂಲಿಕೆಯಾಗಿರುವ ಬೆಟ್ಟದ ನೆಲ್ಲಿಕಾಯಿ ಅಥವಾ…
ಬೆಳ್ಳುಳ್ಳಿ ಕರೋನಾ ಕಿಲ್ಲರ್ ಹೌದೇ..? ಬೆಳ್ಳುಳ್ಳಿ ಎದುರು ಕರೋನಾ ಆಟ ನಡೆಯೋದಿಲ್ಲ ಅನ್ನೋದು ಸೋಶಿಯಲ್ ಮೀಡಿಯಾಗಳಲ್ಲಿ ಪ್ರಚಾರವಾಗುತ್ತಿರುವ ಲೇಟೆಸ್ಟ್ ಮನೆಮದ್ದು. ಈ ಮಾತಿನಲ್ಲಿ ಸತ್ಯ ಎಷ್ಟಿದೆ ಅನ್ನೋದನ್ನು ನಾವು ತಿಳಿದುಕೊಳ್ಳಲೇ ಬೇಕು. ಬೆಳ್ಳುಳ್ಳಿ ತಿಂದರೆ ಈ ಮಾರಕ ವೈರಸ್ ನಿಂದ ನಾವು ಬಚಾವ್ ಆಗ ಬಹುದೇ..? ಅದಕ್ಕೆ ಉತ್ತರ ಹುಡುಕೋಣ. WHO ಸ್ಪಷ್ಟವಾಗಿ ಹೇಳಿದೆ.. ಬೆಳ್ಳುಳ್ಳಿ ಒಂದು ಹೆಲ್ತಿ ಹರ್ಬ್. ಅದರಲ್ಲಿ ಎರಡು ಮಾತಿಲ್ಲ. ಇದನ್ನು ತಿಂದರೆ ಹೊಟ್ಟೆ ಸಮಸ್ಯೆ ಪರಿಹಾರವಾಗುತ್ತದೆ. ಇದರಿಂದ ಕರೋನಾ ವೈರಸ್…
ಕೆಲವೊಂದು ಸಂಗತಿಗಳು ವಿಚಿತ್ರ ಅನಿಸಿದರೂ ಸತ್ಯಕ್ಕೆ ಹತ್ತಿರವಾಗಿರುತ್ತವೆ. ಆದರೆ ಅದೆಲ್ಲದಕ್ಕೂ ಸರಿಯಾದ ಮಾಹಿತಿ ಸಿಕ್ಕ ಮೇಲೆನೇ ಸತ್ಯ ಏನು ಅನ್ನೋದು ಗೊತ್ತಾಗೋದು. ಈ ಸುದ್ದಿಯು ಸಾಮಾಜಿಕ ಜಾಲ ತಾಣಗಳಲ್ಲಿ ಎಲ್ಲೆಡೆ ವೈರಲ್ ಆಗುತ್ತಿದೆ. ನೈಜೀರಿಯಾದ ಈ ವ್ಯಕ್ತಿಗೆ 13 ಜನ ಹೆಂಡತಿಯರಂತೆ ಹಾಗು ಅವರೆಲ್ಲರೂ ಒಮ್ಮೆಲೇ ಗರ್ಭಿಣಿಯರಾಗಿದ್ದರೆ ಅನ್ನೋ ಸುದ್ದಿ ಎಲ್ಲೆಡೆ ಹರಡುತ್ತಿದೆ