ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಇತ್ತೀಚೆಗಷ್ಟೇ ಮುಂಬೈನ ಕಮಲಾ ಮಿಲ್ಸ್’ನಲ್ಲಿ ಅಗ್ನಿ ದುರಂತ ನಡೆದಿದ್ದು, ಸರಿ ಸುಮಾರು 14 ಮಂದಿ ಪ್ರಾಣ ಕಳೆದುಕೊಂಡು, ತುಂಬಾ ಚರ್ಚೆಗೆ ಕಾರಣವಾಗಿದೆ.ಇದೇ ಸಮಯದಲ್ಲಿ ಒಬ್ಬ ಪೋಲೀಸ್ ಪೇದೆ ರಿಯಲ್ ಹಿರೋನಂತೆ ಮಾಡಿರುವ ಸಾಹಸ, ನಿಜಕ್ಕೂ ಮೈ ಜುಮ್ಮೆನಿಸುವನ್ತಾಗಿದ್ದು,ಅದರಲ್ಲಿನ ಒಂದು ಪೋಟೋ ಸಾಮಾಜಿಕ ಮಾಧ್ಯಮದಲ್ಲಿ ಇದೀಗ ವೈರಲ್ ಆಗಿದೆ.

ರಿಯಲ್ ಹಿರೋ ಈ ಪೋಲಿಸ್ ಪೇದೆ :-
ದುರಂತ ನಡೆದಾಗ ಸ್ಥಳದಲ್ಲಿದ್ದ, ಶಿವಾಜಿ ಪಾಂಡೆ ಎಂಬ ಪೊಲೀಸ್ ಪೇದೆ ತನ್ನ ಸಮಯಪ್ರಜ್ಞೆಯಿಂದ 8 ಮಂದಿ ಪ್ರಾಣವನ್ನು ಉಳಿಸಿದ್ದಾರೆ.ಹಾಗೂ ಮಹಿಳೆಯೊಬ್ಬರನ್ನು ತನ್ನ ಹೆಗಲ ಮೇಲೆ ಹೊತ್ತುಕೊಂಡು ಬರುತ್ತಿರುವ ಪೋಟೋ ಸಾಮಾಜಿಕ ಮಾಧ್ಯಮದಲ್ಲಿ ಇದೀಗ ವೈರಲ್ ಆಗಿದ್ದು,ಇವರು ರಿಯಲ್ ಹಿರೋ ಎನಿಸಿದ್ದಾರೆ.

ಅವರ ಸಮಯಪ್ರಜ್ಞೆ ಮತ್ತು ಕರ್ತವ್ಯ ನಿಷ್ಠೆಯನ್ನು ಮೆಚ್ಚಿ ಮುಂಬೈ ಪೊಲೀಸ್ ಕಮೀಷನರ್ ಸನ್ಮಾನಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಹಾಜರಿದ್ದ ಕಮೀಷನರ್ ದತ್ತಾತ್ರೇಯ ಪಡ್ಸಲ್ಗಿಕರ್, ಮೇಯರ್ ವಿಶ್ವನಾಥ್ ಮಹದೇಶ್ವರ ಹಾಜರಾಗಿ ಶಿವಾಜಿಯನ್ನು ಸನ್ಮಾನಿಸಿ ಅವರ ಧೈರ್ಯ, ಸಾಹಸವನ್ನು ಕೊಂಡಾಡಿದ್ದಾರೆ.
ರಿಯಲ್ ಸಿಂಗಂ ಶಿವಾಜಿ ಹೇಳಿದ್ದೇನು..?
ಮಧ್ಯರಾತ್ರಿ ಸುಮಾರು 12.30ರ ಸಮಯದಲ್ಲಿ ವೈರ್‌ಲೆಸ್ ಮೂಲಕ ನಮಗೆ ಮಾಹಿತಿ ಬಂತು. ತಕ್ಷಣ ನಮ್ಮ ಟೀಮ್’ನ ಜೊತೆ ನಾವು ದುರಂತ ನಡೆದ ಸ್ಥಳಕ್ಕೆ ಹೋದೆವು. ಆಗಾಗಲೇ ಅಲ್ಲಿ ತುಂಬಾ ಹೊಗೆ, ಬೆಂಕಿ ಹಬ್ಬಿತ್ತು.

ಕೂಡಲೆ ರಕ್ಷಣೆಗೆ ಮುಂದಾದ ನಾವು, ಒಳಗೆ ಸಿಕ್ಕಿಬಿದ್ದಿದ್ದವರನ್ನು ಸಾಧ್ಯವಾದಷ್ಟು ಹೊರಗೆ ತಂದೆವು. ಒಂದೇ ಒಂದು ದಾರಿ ಇದ್ದ ಕಾರಣ ಬಹಳಷ್ಟು ಮಂದಿ ರೆಸ್ಟ್ ರೂಮ್‌ನಲ್ಲಿ ಹೋಗಿ ರಕ್ಷಣೆ ಪಡೆದಿದ್ದರು. ಹಾಗಾಗಿ ಹೆಚ್ಚಿನ ಮಂದಿಯನ್ನು ಕಾಪಾಡಲು ಸಾಧ್ಯವಾಗಲಿಲ್ಲ. ಉಸಿರಾಡಲು ಆಗದೆ ಉಳಿದವರೆಲ್ಲಾ ಅಲ್ಲೇ ಮೃತಪಟ್ಟಿದ್ದರು. ಆ 14 ಮಂದಿಯನ್ನೂ ರಕ್ಷಿಸಬೇಕಾಗಿತ್ತು’ ಎಂದು ತೀವ್ರ ಭಾವೋದ್ರೇಕದಿಂದ ಹೇಳಿದ್ದಾರೆ ಶಿವಾಜಿ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಬೆಂಗಳೂರು, ಟಿಪ್ಪು ಜಯಂತಿ ಪ್ರತಿ ವರ್ಷವೂ ಒಂದಲ್ಲಾ ಒಂದು ವಿವಾದದಿಂದ್ಲೇ ಸುದ್ದಿಯಾಗೋ ವಿಷ್ಯವಿದು. ಇದನ್ನೇ ಮುಂದಿಟ್ಕೊಂಡು ಹಲವರು ವೋಟ್ ಬ್ಯಾಂಕ್ ರಾಜಕೀಯ ಮಾಡಿದ್ದೂ ಇದೆ. ಮೂರು ವರ್ಷದ ಹಿಂದೆ ಆಚರಣೆಗೆ ಬಂದಿದ್ದ ಟಿಪ್ಪು ಜಯಂತಿಗೀಗ ಬ್ರೇಕ್ ಬಿದ್ದಿದೆ. ಬಿಎಸ್ ಯಡಿಯೂರಪ್ಪ ನೇತೃತ್ವದ ಸರ್ಕಾರ ಅಧಿಕಾರಕ್ಕೇರ್ತಿದ್ದಂತೆ ವಿವಾದಿತ ಟಿಪ್ಪು ಜಯಂತಿಗೆ ಬ್ರೇಕ್ಹಾಕಿದ್ದಾರೆ. ಇನ್ಮುಂದೆ ಸರ್ಕಾರದ ವತಿಯಿಂದ ಟಿಪ್ಪು ಜಯಂತಿ ಆಚರಿಸುವಂತಿಲ್ಲ ಅಂತಾ ಹುಕುಂ ಹೊರಡಿಸಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಟಿಪ್ಪು ಜಯಂತಿಗೆ ಮುನ್ನುಡಿ ಇಟ್ಟಿತ್ತು. ಇದ್ರಂತೆಯೇ…
ಸ್ವಂತ ಮನೆ ಹೊಂದಬೇಕೆನ್ನುವುದು ಪ್ರತಿಯೊಬ್ಬರ ಜೀವನದ ಕನಸಾಗಿರುತ್ತದೆ.ಆದರೆ ಆರ್ಥಿಕವಾಗಿ ಸಬಲರಲ್ಲದ ಅನೇಕ ಜನರ ಸ್ವಂತ ಮನೆ ಕನಸು, ಕನಸಾಗೆ ಉಳಿದುಬಿಡುತ್ತದೆ. ಹಾಗಾಗಿ ನಮ್ಮ ದೇಶದಲ್ಲಿ ಇಲ್ಲಿಯವರೆಗೂ ಸಾವಿರಾರು ಕುಟುಂಬಗಳು ಸ್ವಂತ ಮನೆಯಿಲ್ಲದೆ ಬೀದಿಯಲ್ಲಿವೆ. ಹೀಗಾಗಿ ಪ್ರತಿಯೊಬ್ಬರೂ ಮನೆಗಳನ್ನು ಹೊಂದಿರಬೇಕು ಎನ್ನುವುದು ಸರ್ಕಾರದ ಆಶಯವಾಗಿದ್ದು, 2022ರ ವೇಳೆಗೆ ಪ್ರತಿಯೊಬ್ಬರಿಗೂ ಮನೆ ಸಿಗುವಂತಾಗಬೇಕು ಎನ್ನುವುದು ಕೇಂದ್ರ ಸರ್ಕಾರದ ಉದ್ದೇಶವಾಗಿದೆ.
ಹೈನುಗಾರಿಕೆಯ ಭಾಗವಾಗಿ, ಹಸುಗಳ ಹೊಟ್ಟೆಯಲ್ಲಿ ದೊಡ್ಡ ಹೋಲ್ಗಳನ್ನು ಮಾಡಿದ್ದಾರೆ.ಸ್ವಿಟ್ಜರ್ಲೆಂಡ್ನಲ್ಲಿರುವ ಕೆಲವು ರೈತರು ಹೀಗೆ ಮಾಡುತ್ತಿರುವುದು ಏಕೆ ಎಂದು ಹಲವು ಜನರಲ್ಲಿ ಚರ್ಚೆಯನ್ನು ಹುಟ್ಟು ಹಾಕಿದೆ.
ಇಂದು ಬುಧವಾರ, 28/02/2018, ಇಂದಿನ ನಿಮ್ಮ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ…
ಬಾಲಿವುಡ್ ಬೆಡಗಿ ಸನ್ನಿ ಲಿಯೋನ್ ಅವರು ತಮ್ಮ ಪತಿ ಡೇನಿಯಲ್ ವೆಬರ್ ಜೊತೆ ಸೇರಿ ಚಿಕ್ಕ ಮಕ್ಕಳಿಗಾಗಿ ಶಾಲೆಯನ್ನು ಆರಂಭಿಸಿದ್ದಾರೆ. ಮಕ್ಕಳಿಗೆ ದೈಹಿಕ ಹಾಗೂ ಬೌದ್ಧಿಕ ವಿಕಾಸಕ್ಕೆ ಕಲ್ಪಿಸುವುದು ನಮ್ಮ ಉದ್ದೇಶ. ಮಕ್ಕಳು ಕೇವಲ ಪಠ್ಯಪುಸ್ತಕಕ್ಕೆ ಮಾತ್ರ ಸೀಮಿತವಾಗಿರಬಾರದು. ಅವರು ಪ್ರಪಂಚದಲ್ಲಿ ನಡೆಯುತ್ತಿರುವ ಪ್ರತಿಯೊಂದು ವಿಷಯದ ಬಗ್ಗೆ ತಿಳಿದುಕೊಂಡಿರಬೇಕು. ಮಕ್ಕಳು ಮಜಾ ಮಾಡಬೇಕು ಎಂಬುದು ನನ್ನ ಉದ್ದೇಶ ಎಂದು ಸನ್ನಿ ಲಿಯೋನ್ ಹೇಳಿದ್ದಾರೆ. ಸನ್ನಿ ಲಿಯೋನ್ ಅವರಿಗೆ ಮಕ್ಕಳೆಂದರೆ ತುಂಬಾನೇ ಇಷ್ಟ. ಅವರು ಮೂರು ಮಕ್ಕಳ ತಾಯಿ…
ಮಧ್ಯಪ್ರದೇಶದ ಛತ್ತಾರ್ ಪುರ ನೌಗಾಂವ್ ಬ್ಲಾಕ್ ನ ಗರೋಲಿ ಚೌಕಿಯ ಬಾಲಕೃಷ್ಣ ಚೌಬೆ (55) ಎಂಬಾತ ಕಳೆದ ಮೂರು ವರ್ಷಗಳಿಂದ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದ್ದನು. ಈತ ಕೊಲೆ ಮತ್ತು ದರೋಡೆ ಕೇಸಿನಲ್ಲಿ ಗುರುತಿಸಿಕೊಂಡ ಬಳಿಕ ತನ್ನ ಗ್ರಾಮದಿಂದ ತಲೆಮರೆಸಿಕೊಂಡಿದ್ದನು. ಅದರಲ್ಲೂ ಕೊಲೆ ಪ್ರಕರಣದ ಬಳಿಕ ಬಾಲಕೃಷ್ಣ ಉತ್ತರಪ್ರದೇಶಕ್ಕೆ ಹಾರಿದ್ದನು. ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಮಾಧವಿ ಅಗ್ನಿಹೋತ್ರಿ ಅವರು ಮದುವೆ ಮಾತುಕತೆಗೆಂದು ಕರೆದು ಆರೋಪಿಯನ್ನು ಬಂಧಿಸಿದ್ದು, ಎಲ್ಲರ ಪ್ರಶಂಸೆಗೆ ಕಾರಣರಾಗಿದ್ದಾರೆ. ಆರೋಪಿಯನ್ನು ಹಿಡಿಯಲು ಪೊಲೀಸರು ಹಲವು ಬಾರಿ ಪ್ರಯತ್ನಿಸಿದರೂ…