ಸ್ಪೂರ್ತಿ

ಈಕೆಯ ಅತೀ ಉದ್ದವಾದ ಕೂದಲು ಗಿನ್ನಿಸ್ ದಾಖಲೆಗೆ ಸೇರಿದೆ..!ತಿಳಿಯಲು ಈ ಲೇಖನ ಓದಿ..

196

ಗಿನ್ನಿಸ್ ಬುಕ್ ಸೇರಲು ಜನರು ಏನೆಲ್ಲ ಕಸರತ್ತು ಮಾಡ್ತಾರೆ. ಒಬ್ಬೊಬ್ಬರು ಒಂದೊಂದು ಸಾಧನೆ ಮಾಡಿ ಗಿನ್ನಿಸ್ ಬುಕ್ ಸೇರ್ತಾರೆ. ಚೀನಾದ ಕ್ಸೀ ಕ್ಯುಪಿಂಗ್ ಜಗತ್ತಿನ ಅತೀ ಉದ್ದ ಕೂದಲು ಉಳ್ಳ ಮಹಿಳೆ ಎಂಬ ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಹೊಂದಿದ್ದಾಳೆ.

ಅಬ್ರಿಲ್ ಲೊರೆಂಜಟಿ ಕೂಡ ಸತತ 11 ವರ್ಷಗಳ ಪ್ರಯತ್ನದ ನಂತ್ರ ಈಗ ಗಿನ್ನಿಸ್ ದಾಖಲೆ ಮಾಡಿದ್ದಾಳೆ. ಅಬ್ರಿಲ್ ಅತಿ ಉದ್ದದ ಕೂದಲು ಬೆಳೆಸಿ ಗಿನ್ನಿಸ್ ಸೇರಿದ್ದಾಳೆ. ಅಬ್ರಿಲ್ ಇದಕ್ಕಾಗಿ ಸತತ 11 ವರ್ಷ ಪ್ರಯತ್ನಪಟ್ಟಿದ್ದಾಳಂತೆ. ಅಬ್ರಿಲ್ ತಲೆ ಕೂದಲು 4 ಅಡಿ 11 ಇಂಚಿದೆ. ಅತಿ ಉದ್ದ ಕೂದಲು ಬೆಳೆಸಿದ ಅಬ್ರಿಲ್ ಅರ್ಜೆಂಟೀನಾದವಳಾಗಿದ್ದು ಆಕೆ ವಯಸ್ಸು 17 ವರ್ಷ.

ಅಂಬ್ರಿಲ್ ಪ್ರತಿದಿನ ಶಾಂಪೂ ಬಳಸ್ತಾಳಂತೆ. ಮೆಟ್ಟಿಲು ಹತ್ತುವಾಗ ಕೂದಲನ್ನು ಕಟ್ಟಿಕೊಳ್ಳದೆ ಹೋದಲ್ಲಿ ತೊಂದರೆಯಾಗುತ್ತದೆ ಎನ್ನುತ್ತಾಳೆ ಅಂಬ್ರಿಲ್. ಗಿನ್ನಿಸ್ ಬುಕ್ ಸೇರುವ ಮಹಾನ್ ಕನಸು ಆಕೆಯದಾಗಿತ್ತಂತೆ. ಕನಸು ನನಸಾಗಿದೆ. ಇನ್ಮುಂದೆ ಕೂದಲನ್ನು ಕಾಪಾಡಿಕೊಳ್ಳುವುದು ದೊಡ್ಡ ಜವಾಬ್ದಾರಿ ಎಂದಿದ್ದಾಳೆ ಅಂಬ್ರಿಲ್.

ಈ ಮಹಿಳೆಯ ಕೂದಲನ್ನು 2004 ರಲ್ಲಿ ಅಳತೆ ಮಾಡಿದಾಗ ಅದು 18 ಅಡಿ 5.54 ಇಂಚು ಉದ್ದವಿತ್ತು.ಹಾಗಾಗಿ ಈಕೆಯನ್ನು ಜಗತ್ತಿನ ಅತೀ ಉದ್ದ ಕೂದಲುಳ್ಳ ಮಹಿಳೆ ಎಂದು ಗಿನ್ನೆಸ್ ವರ್ಲ್ಡ್ ಬುಕ್ ರೆಕಾರ್ಡ್ ಮಾಡಿತ್ತು.

ಯಾರೂ ಇದುವರೆಗೂ ಈ ರೆಕಾರ್ಡ್ ಮುರಿಯಲಾಗಿಲ್ಲ ಹಾಗಾಗಿ ಇಂದಿಗೂ ಅತೀ ಉದ್ದ ಕೂದಲಿನ ಗಿನ್ನಿಸ್ ರೆಕಾರ್ಡ್ ಕ್ಸೀ ಕ್ಯುಪಿಂಗ್ ಬಳಿಯೇ ಇದೆ.

 

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ