ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಎಚ್.ಡಿ. ದೇವೇಗೌಡ (ಹರದನಹಳ್ಳಿ ದೊಡ್ಡೇಗೌಡ ದೇವೇಗೌಡ) ಅವರು ಭಾರತದ 12 ನೆಯ ಪ್ರಧಾನ ಮಂತ್ರಿಗಳು ಮತ್ತು ಕರ್ನಾಟಕ ರಾಜ್ಯದ ಮಾಜಿ ಮುಖ್ಯಮಂತ್ರಿಗಳು. ‘ಮಣ್ಣಿನ ಮಗ’ ಎಂದೇ ಖ್ಯಾತರಾಗಿರುವ ದೇವೇಗೌಡರು ರೈತಪರ ಕಾಳಜಿ ಉಳ್ಳವರು.
ಜೆಡಿಎಸ್ ಅಧ್ಯಕ್ಷ ಮಣ್ಣಿನ ಮಗ ಹೆಚ್.ಡಿ.ದೇವೇಗೌಡರು 11-12-1994ರಂದು ಕರ್ನಾಟಕದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು. ಅವರು ಮುಖ್ಯಮಂತ್ರಿಯಾಗಿ ಇಂದಿಗೆ 23 ವರ್ಷಗಳಾಗಿವೆ. ರಾಜಕೀಯದಲ್ಲಿ ದೇವೇಗೌಡರ ಬಗ್ಗೆ ತಿಳಿಯಬೇಕಾದ್ದು ತುಂಬಾ ಇದೆ.
“ಮಣ್ಣಿನ ಮಗ ಹೆಚ್.ಡಿ.ದೇವೇಗೌಡರ” ಬಗ್ಗೆ ಮೊಗೆದಷ್ಟು ಮುಗಿಯದ ಇತಿಹಾಸದ ಪುಟ..!
1.ಎಂದಿಗೂ ಸಹ ದುಷ್ಚಟಗಳ ದಾಸರಾಗಲಿಲ್ಲ………ವೈಯಕ್ತಿಕವಾಗಿಯೂ ಜೀವನದಲ್ಲಿ ಎಲ್ಲೂ ಸಹ ಒಂದೇ ಒಂದು ಕಪ್ಪುಚುಕ್ಕೆ ಮೂಡಿಸಿಕೊಂಡವರಲ್ಲ………ವೈಯಕ್ತಿಕ ಜೀವನ ಎಂದು ಒಂದು ಕ್ಷಣವೂ ಬಿಡುವು ಮಾಡಿಕೊಂಡು ಜೀವನದಲ್ಲಿ ಮನೆಯಲ್ಲಿ ಸುಮ್ಮನೆ ಕುಳಿತವರಲ್ಲ “ಅಪ್ಪಟ ರೈತರ ಮಗ ದೇವೇಗೌಡರು”…………
2. 24/7 ರಾಜಕಾರಣಿ ಯಾರಾದರೂ ಈ ಭೂಮಿ ಮೇಲಿದ್ದರೆ ನಾಯಕರ ತಯಾರು ಮಾಡುವ ಕಾರ್ಖಾನೆಯಾಗಿ ಎಲ್ಲ ಜನಾಂಗದವರನ್ನು ಮೇಲೆ ತಂದು ಅಧಿಕಾರ ನೀಡಿ ಆದರ್ಶ ಮೆರೆದ ಮಾಜಿ ಪ್ರಧಾನಿಯೊಬ್ಬರು ಸಕ್ರಿಯವಾಗಿ ಕಾರ್ಯಚಟುವಟಿಕೆಯಲ್ಲಿ ನಿರತರಾಗಿದ್ದರೆ ಅದು “ಮಣ್ಣಿನ ಮಗ ದೇವೇಗೌಡರು”……………..
3.ಶುದ್ದಹಸ್ತರಾಗಿ ಭ್ರಷ್ಟಾಚಾರದ ಲವಲೇಶವನ್ನೂ ತಮಗೆ ತಾಗಿಸಿಕೊಳ್ಳದೆ ರಾಜಕೀಯಕ್ಕೆ ಕಾಲಿಟ್ಟ ದಿನದಿಂದಲೂ ಸ್ವಚ್ಛವಾಗಿ ಜನಸೇವೆ ಮಾಡಿ ಜಾತಿ ಧರ್ಮ ಸೀಮೆ ಕುಲ ಭಾಷೆ ಪ್ರಾಂತ್ಯ ಎಂದು ಭೇಧ ಭಾವ ಮಾಡದೆ ಪ್ರಪಂಚಕ್ಕೆ ಮಾದರಿಯಾದ “ಶ್ರಮಜೀವಿ ದೇವೇಗೌಡರು”………….
4.ವಿಧಾನಸೌಧದ ದಾಖಲೆಗಳು ಹೇಳುವಂತೆ ಜನರಿಂದ ನೇರವಾಗಿ ಆರಿಸಿ ಬಂದು ಮುಖ್ಯಮಂತ್ರಿಯಾಗಿ ಪ್ರಮಾಣಿಕವಾಗಿ ಪಾರದರ್ಶಕ ಆಡಳಿತ ನೀಡಿ ಎಲ್ಲ ಜನಾಂಗಗಳನ್ನು ಸಮನಾಗಿ ಕಂಡು ಸಮಾಜ ಕಲ್ಯಾಣಕ್ಕಾಗಿ ಅತ್ಯವಶ್ಯಕವಾದ ಮೀಸಲಾತಿಗಳ ತಂದು ಜನಸೇವೆ ಮಾಡಿದ ಏಕೈಕ “ಮುಖ್ಯಮಂತ್ರಿ ದೇವೇಗೌಡರು”……………
5.ಸೋತಾಗಲೆಲ್ಲ ಧೃತಿಗೆಡದೆ ಮತ್ತೆ ಮತ್ತೆ ಕಳೆದುಕೊಂಡಲ್ಲೆ ಹುಡುಕಬೇಕು ಎನ್ನುವ ಹಾಗೆ ಮತ್ತೆ ಮತ್ತೆ ಮೇಲೆದ್ದು ಬಂದು ಪಾರುಪತ್ಯ ಸಾಧಿಸಿದ ಸಾಮಾನ್ಯರಲ್ಲಿ ಅಸಾಮಾನ್ಯ ಜನನಾಯಕರಿದ್ದರೆ ಪ್ರಧಾನಿಯಾಗಿ ಕನ್ನಡಮ್ಮನ ಬಾವುಟ ಕೆಂಪುಕೋಟೆಯ ಮೇಲೆ ಹಾರಿಸಿದ ಏಕೈಕ “ಕನ್ನಡಿಗ ದೇವೇಗೌಡರು”………………….
6.ತಮ್ಮ ಇಳಿವಯಸ್ಸಿನಲ್ಲಿ ಆರೋಗ್ಯದ ಬಗ್ಗೆ ಎಚ್ಚರವಹಿಸಿ ತಪಸ್ಸಿನಂತೆ ಯೋಗಾಭ್ಯಾಸ ಕಲಿತು ಪ್ರವೀಣ ಪರಿಣಿತರಾಗಿದ್ದರೆ ಯುವಕರು ನಾಚುವಂತೆ ಕಾಲಿಗೆ ಚಕ್ರ ಕಟ್ಟಿಕೊಂಡು ಓಡಾಡುವ ಜನಸಾಮಾನ್ಯರ ವಿಚಾರದಲ್ಲಿ ರೈತರ ವಿಷಯದಲ್ಲಿ ಅನ್ಯಾಯವಾದಾಗ ಮನೆಯಲ್ಲಿ ಕೂರದೆ ಬೀದಿಗಿಳಿದು ಹೋರಾಟ ಮಾಡಿ ನ್ಯಾಯ ಕೊಡಿಸುವ “ದಣಿವರೆಯದ ಧಣಿ ದೇವೇಗೌಡರು”……………..
7.ಕರ್ನಾಟಕದ ಪ್ರತಿ ಹಳ್ಳಿಹಳ್ಳಿಯ ಹೋಬಳಿಗಳ ತಾಲ್ಲೂಕು ಜಿಲ್ಲೆ ಪ್ರಾಂತ್ಯ ಸಹಿತ ರಾಜಕೀಯ ಅಂಕಿಅಂಶಗಳ ಜನಸಂಖ್ಯೆ ತಿಳಿದುಕೊಂಡು ಅದಕ್ಕೆ ಅನುಗುಣವಾಗಿ ರಾಜಕೀಯ ಚಿಂತನೆಗಳನ್ನು ಮಾಡುವ ಕಾರ್ಯಕ್ರಮ ರೂಪಿಸಿ ಏಳಿಗೆಗೆ ಕಾರಣವಾಗುವ ಮಾನವ “ಗಣಕಯಂತ್ರ ದೇವೇಗೌಡರು”………………..
8.ಸುದೀರ್ಘ 55 ವರ್ಷಗಳು ನಿರಂತರವಾಗಿ ಜನರೊಂದಿಗೆ ಒಡನಾಟ ಇಟ್ಟುಕೊಂಡು ಅಧಿಕಾರ ಇರಲಿ ಇಲ್ಲದಿರಲಿ ಸುಮ್ಮನಿರದೆ ಕಷ್ಟಗಳ ಕೇಳಿಸಿಕೊಳ್ಳುವ ಪ್ರಯತ್ನ ಪಟ್ಟು ಬಿಡದೆ ಕೈಲಾಗುವಷ್ಟು ಕಷ್ಟ ಪರಿಹರಿಸಿ ಪರಿಹಾರ ಕೊಡಿಸಿ ಕಣ್ಣೀರು ಒರೆಸಿಯೆ ತೀರುವ “ಜನಸಾಮಾನ್ಯರ ಒಡನಾಡಿ ದೇವೇಗೌಡರು”…………..
9.ಈ ಕ್ಷಣಕ್ಕೂ ಸಹ ಯಾರೇ ಭೇಟಿ ಮಾಡಲು ಬಂದರೂ ತುಂಬಾ ಸುಲಭವಾಗಿ ಲಭ್ಯರಾಗಿ ಬರಮಾಡಿಕೊಂಡು ತದೇಕಚಿತ್ತದಿಂದ ಗಮನಿಸಿ ಸೌಜನ್ಯದಿಂದ ಮಾತನಾಡಿಸಿ ತಾಳ್ಮೆಯಿಂದ ಎಲ್ಲವನ್ನೂ ಆಲಿಸುವ ತಮ್ಮ ಅತ್ಯಮೂಲ್ಯವಾದ ಸಮಯವನ್ನು ಜನರಿಗಾಗಿ ಮಾತ್ರ ಮೀಸಲಿಡುವ “ಮುತ್ಸದಿ ದೇವೇಗೌಡರು”…………….
10.ಎದುರಾಳಿಗಳು ವಿಪಕ್ಷಗಳ ಟೀಕೆಗೆ ಪ್ರತ್ಯುತ್ತರ ಕೊಡದೆ ಕೆಸರೆರಚಾಟಕ್ಕಿಳಿಯದೆ ಛಲದಿಂದ ಹಠ ಬಿಡದೆ ಹಿಡಿದ ಕೆಲಸ ಸಾಧಿಸಿ ತೋರಿಸಿ ತಮ್ಮ ಶ್ರಮದಿಂದ ಕೆಲಸ ಯಶಸ್ವಿಗೊಳಿಸಿ ಟೀಕಾಕಾರರ ಬಾಯಿ ಮುಚ್ಚಿಸುವ “ಅಭಿವೃದ್ಧಿ ಹರಿಕಾರ ದೇವೇಗೌಡರು”………………
ಇಷ್ಟೆಲ್ಲಾ ಸಾಧನೆಗಳು ಕೇವಲ ತೃಣಮಾತ್ರವಷ್ಟೆ……. “ದೇವೇಗೌಡರು ಒಂದು ಅಪೂರ್ವ ಗ್ರಂಥ”………..”ಮೊಗೆಯುತ್ತ ಹೋದಷ್ಟು ಮತ್ತೆ ಮತ್ತೆ ಉಕ್ಕುವ ಕುತೂಹಲಕ್ಕೆ ಕಾರಣವಾಗುವ ಮುಗಿಯದ ನೀರಿನ ಸೆಲೆಯಂತೆ”………….
“ಇಂದಿಗೆ ಸರಿಯಾಗಿ ದೇವೇಗೌಡರು ಕರ್ನಾಟಕದ ಮುಖ್ಯಮಂತ್ರಿಯಾಗಿ 23 ವರ್ಷಗಳು 11/12/1994″…………….ಈ ಶುಭ ಸಂದರ್ಭದಲ್ಲಿ “ಹಳ್ಳಿ ಹುಡುಗರು”ಕಡೆಯಿಂದ ಕಿರುಪರಿಚಯ ನೀಡುವ ಒಂದು ಸಣ್ಣ ಪ್ರಯತ್ನ…
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಕೆಲವು ಹಣ್ಣುಗಳು ಕಂಡ್ ಕಂಡಲ್ಲಿ ಸಿಗೋಲ್ಲ. ವಿಪರೀತ ದುಬಾರಿ ಬೇರೆ. ಹಾಗಂತ ತಿನ್ನದೇ ಇರಬಹುದು. ಅದರಿಂದ ಆರೋಗ್ಯಕ್ಕೆ ಬಹಳಷ್ಟು ಲಾಭವಿರುತ್ತದೆ. ಅಂಥ ಹಣ್ಣುಗಳಲ್ಲಿ ಡ್ರಾಗನ್ ಫ್ರೂಟ್ ಒಂದು. ದುಬಾರಿಯಾದರೂ ಆರೋಗ್ಯವಾಗಿರಲು ಇದೊಂದು ಹಣ್ಣು ತಿಂದರೆ ಸಾಕು. ಕೊಲೆಸ್ಟ್ರಾಲ್, ಹೃದಯ ತೊಂದರೆ, ಡಯಾಬಿಟೀಸ್ನಂಥ ತೊಂದರೆಗಳನ್ನು ನಿವಾರಿಸಲು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬಹುದು ಡ್ರಾಗನ್ ಫ್ರೂಟ್. ಭಾರತೀಯರಿಗೆ ಹೆಚ್ಚು ಪರಿಚಯವಿಲ್ಲದ ಹಣ್ಣಾದರೂ, ಮಾರುಕಟ್ಟೆಯಲ್ಲಿ ಅದರ ದುಬಾರಿ ಬೆಲೆಯಿಂದ ಎಲ್ಲರ ಗಮನ ಸೆಳೆದಿದೆ ಡ್ರ್ಯಾಗನ್ ಫ್ರೂಟ್. ಡ್ರಾಗನ್ ಫ್ರೂಟ್ ಹೆಚ್ಚಾಗಿ ಮರುಭೂಮಿಯಂಥ ಪ್ರದೇಶದಲ್ಲಿ ಬೆಳೆಯುತ್ತದೆ….
ಕನ್ನಡ ಚಿತ್ರ ರಂಗದ ನಟ ಉಪೇಂದ್ರರವರ ರಾಜಕೀಯ ಸುದ್ದಿಗಳು ದಿನಕ್ಕೊಂದಂತೆ ತಿರುವು ಪಡೆದುಕೊಳ್ಳುತ್ತಿವೆ.ಈಗ ಬಂದಿರುವ ಹೊಸ ಸುದ್ದಿ ಏನಪ್ಪಾ ಅಂದ್ರೆ, ನಿಮಗೆಲ್ಲ ಗೊತ್ತಿರುವಂತೆ ಅವರು ಸ್ಥಾಪಸಲು ಹೊರಟಿರುವ ಪಕ್ಷದ ಹೆಸರು ಪ್ರಜಾಕೀಯ ಎಂದು. ಆದ್ರೆ ಮೂಲಗಳ ಪ್ರಕಾರ ಅವರ ಪಕ್ಷದ ಹೆಸರು ಪ್ರಜಾಕೀಯ ಅಲ್ಲ..!
ಕರ್ನಾಟಕ ಸರ್ಕಾರದ ಹೊಸ ಯೋಜನೆಯಾದ ಇಂದಿರಾ ಕ್ಯಾಂಟೀನ್ ಯೋಜನೆ ಆರಂಭವಾಗಿದ್ದು, ಮೊದಲ ದಿನವೇ ಭರ್ಜರಿ ಪ್ರತಿಕ್ರಿಯೆ ದೊರೆತಿದೆ. ಇದು ರ್ರಾಜ್ಯ ಸರ್ಕಾರದ ನೂತನ ಯೋಜನೆಯಾಗಿದ್ದು, ಬೆಂಗಳೂರು ನಗರದಲ್ಲಿ ಬಡ ಹಾಗೂ ಕೆಳ ಮಧ್ಯಮ ವರ್ಗ ದವರಿಗೆ ರಿಯಾಯಿತಿ ದರದಲ್ಲಿ ಆಹಾರ ಪೂರೈಕೆ ಮಾಡುವ ಉದ್ದೇಶದಿಂದ ರಾಜ್ಯ ಸರ್ಕಾರ ‘ಇಂದಿರಾ ಕ್ಯಾಂಟೀನ್’ ಎಂಬ ಹೆಸರಿನಲ್ಲಿ ಆರಂಭಿಸಿದೆ.
ನೂಡಲ್ಸ್ ಎಲ್ಲರಿಗೂ ಇಷ್ಟ. ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರೂ ನೂಡಲ್ಸ್ ತಿನ್ನಲು ಇಷ್ಟಪಡ್ತಾರೆ. ತಿನ್ನುವ ಈ ನೂಡಲ್ಸನ್ನು ವ್ಯಕ್ತಿಯೊಬ್ಬ ಮನೆ ಕಟ್ಟಲು ಬಳಸಿದ್ದಾನೆ. ಯಸ್, ಇದು ಸತ್ಯ. ಚೀನಾದ ಜಾಂಗ್ ಎಂಬ ವ್ಯಕ್ತಿ ನೂಡಲ್ಸ್ ನಿಂದ ಮನೆ ನಿರ್ಮಾಣ ಮಾಡಿದ್ದಾನೆ. ಶೀಘ್ರವೇ ತಂದೆಯಾಗಲಿರುವ ಜಾಂಗ್, ಹುಟ್ಟುವ ಮಗುವಿಗಾಗಿ ಈ ಮನೆ ನಿರ್ಮಾಣ ಮಾಡಿದ್ದಾನೆ. ಅವಧಿ ಮೀರಿದ 2000 ನೂಡಲ್ಸ್ ಪ್ಯಾಕ್ ನಿಂದ ಈ ಮನೆ ನಿರ್ಮಾಣವಾಗಿದೆಯಂತೆ. ಜಾಂಗ್, ಮನೆಯ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾನೆ. ಆತನ ಕೆಲಸಕ್ಕೆ…
Sakleshpur or Sakleshapura is a hill station town and headquarters of Sakleshapura Taluk in Hassan district in the Indian state of Karnataka.
ಚಂದ್ರಗುಪ್ತನು ಅಧಿಕಾರವನ್ನು ಬಲಪಡಿಸುವ ಮೊದಲು ಉಪಖಂಡದ ವಾಯುವ್ಯ ಭಾಗದಲ್ಲಿ ಸಣ್ಣ ಸಣ್ಣ ರಾಜ್ಯಗಳೇ ಇದ್ದವು . ಗಂಗಾ ನದಿಯ ಬಯಲಿನಲ್ಲಿ ನಂದರ ಸಾಮ್ರಾಜ್ಯವು ಪ್ರಮುಖವಾಗಿತ್ತು.