ಆರೋಗ್ಯ

ಇಲ್ಲಿವೆ ಮೊಡವೆಯ ಸಮಸ್ಯೆಯನ್ನು ಮಾಯ ಮಾಡೋ ಮನೆಮದ್ದುಗಳು..!ತಿಳಿಯಲು ಈ ಲೇಖನ ಓದಿ…

569

ಸಾಮಾನ್ಯವಾಗಿ ಎಲ್ಲರ ಸೌಂದರ್ಯ ಹಾಳಾಗುವುದು ಮೊಡವೆಗಳಿಂದಲೇ. ಹದಿಹರೆಯದಲ್ಲಿ ಸಾಮಾನ್ಯವಾದ ಮೊಡವೆ ಅಳಿದರೂ ಕಲೆಗಳನ್ನು ಉಳಿಸುತ್ತದೆ. ಕೆಲವರಿಗಂತೂ ಎಷ್ಟೇ ವಯಸ್ಸಾದರೂ ಇವು ಬಿಟ್ಟು ಹೋಗುವ ಮಾತನ್ನೇ ಆಡುವುದಿಲ್ಲ.ಈ ಮೊಡವೆಗಳಿಗೆ ಹುಡುಗ ಹುಡುಗಿ ಚಿಕ್ಕವರು ದೊಡ್ಡವರು ಎಂಬ ಭೇದವಿಲ್ಲ ಎಲ್ಲರಿಗು ಇವು ಕಾಟ ಕೊಡುತ್ತಲೇ ಇರುತ್ತವೆ.

ಇವುಗಳಲ್ಲ ಹೇಳ ಹೆಸರಿಲ್ಲದಂತೆ ಹೋಗಲಾಡಿಸಲು ನಾವು ಹಲವು ಪ್ರಯತ್ನಗಳನ್ನ ಮಾಡಿ ಸೋತಿರುತ್ತೇವೆ. ಆದರೆ ಇನ್ನು ಮುಂದೆ ಸೋಲುವ ಮಾತಿಲ್ಲ, ಏಕೆಂದರೆ ಈ ಮೊಡವೆಗಳನ್ನ ಹೋಗಲಾಡಿಸಲು ಸುಲಭವಾದ ಉಪಾಯ ಇಲ್ಲಿದೆ ನೋಡಿ.

ಸೌತೆಕಾಯಿ

 

ಸೌತೆಕಾಯಿಯ ತಾಜಾ ಬಿಲ್ಲೆಗಳನ್ನು ಮುಖಕ್ಕೆ ಮಾಲೀಶು ಮಾಡಿದರೆ ಮೊಡವೆಯ ಕಲೆಗಳು ನಿವಾರಣೆಯಾಗುತ್ತವೆ.

 

ಬೆಳ್ಳುಳ್ಳಿ ರಸ

ಬೆಳ್ಳುಳ್ಳಿ ಜಜ್ಜಿ ರಸ ತೆಗೆದು ಅದನ್ನು ಮೊಡವೆಯ ಜಾಗಕ್ಕೆ ಹಚ್ಚಿ ಸ್ವಲ್ಪ ಹೊತ್ತು ಹಾಗೆಯೇ ಬಿಡಿ. ನಂತರ ನೀರಿನಿಂದ ಸ್ವಚ್ಛಗೊಳಿಸಿ. ಇದು ಮೊಡವೆಗಳನ್ನು ನಿವಾರಿಸಲು ಪರಿಣಾಮಕಾರಿ ವಿಧಾನ.ಮೊಡವೆ ನಿವಾರಿಸಲು ಮತ್ತೊಂದು ವಿಧಾನವೆಂದರೆ ಬೆಳ್ಳುಳ್ಳಿಯ ಎಸಳನ್ನು ಅರ್ಧ ಕತ್ತರಿಸಿ ಮೊಡವೆ ಇರುವ ಭಾಗಕ್ಕೆ ಲೇಪಿಸಿದರೆ ಮೊಡವೆ ಮಾಯುತ್ತದೆ.

ಜೇನುತುಪ್ಪ

ಶುದ್ಧ ಜೇನುತುಪ್ಪಕ್ಕೆ ಅರಸಿನ ಬೆರೆಸಿ ಲೇಪಿಸಿದರೆ ಮೊಡವೆ ಶೀಘ್ರ ಮಾಯುತ್ತದೆ.

ಗ್ರೀನ್ ಟೀ

ಗ್ರೀನ್ ಟೀ ತಯಾರಿಸಿ ಫ್ರಿಡ್ಜ್‌ನಲ್ಲಿರಿಸಿ ಐಸ್‌ ಕ್ಯೂಬ್‌ ತಯಾರಿಸಿ. ಇದನ್ನು ನಿಧಾನವಾಗಿ ಮುಖದ ಮೇಲೆ ಮೊಡವೆ ಇರುವ ಜಾಗದ ಮೇಲೆ ತಿಕ್ಕಿ. ಹೀಗೆ ಮಾಡುವುದರಿಂದ ನಿಮ್ಮ ಚರ್ಮದ ಜಿಡ್ಡು ನಿವಾರಣೆಯಾಗುತ್ತದೆ.

ನಿಂಬೆಹಣ್ಣು

ನಿಂಬೆರಸದಲ್ಲಿ ಸಿಟ್ರಿಕ್‌ ಆಮ್ಲದ ಜೊತೆ ಆ್ಯಸ್ಕೂರ್‌ಬಿಕ್‌ ಆಮ್ಲದ ಅಂಶವಿರುವುದರಿಂದ ಒಂದು ಹತ್ತಿ ಉಂಡೆಯಲ್ಲಿ ತಾಜಾ ನಿಂಬೆರಸವನ್ನು ಅದ್ದಿ ರಾತ್ರಿ, ಅದನ್ನು ಮೊಡವೆಯ ಭಾಗಕ್ಕೆ ಲೇಪಿಸಿ ಮರುದಿನ ತೊಳೆಯಬೇಕು.

 ಚಂದನ

ಚಂದನವನ್ನು ಹಾಲಿನಲ್ಲಿ ಬೆರೆಸಿ ಮೊಡವೆಯಾದ ಜಾಗಕ್ಕೆ ಹಚ್ಚಿ ಹಾಗೇ ಬಿಡಿ. ಒಣಗಿದ ನಂತರ ತಂಪಾದ ನೀರಿನಲ್ಲಿ ತೊಳೆಯಿರಿ.

ಟೊಮೆಟೊ

ಟೊಮೆಟೊ ಹಣ್ಣಿನ ರಸವನ್ನು ಮುಖಕ್ಕೆ ಹಚ್ಚುವುದರಿಂದ ಮುಖ ಮೃದುವಾಗುತ್ತದೆ ಎಂಬ ವಿಷಯ ನಿಮಗೆ ಗೊತ್ತೇ ಇದೆ. ಅದೇ ರೀತಿ ದಿನಕ್ಕೆ ಎರಡು ಬಾರಿ ಟೊಮೆಟೊ ರಸವನ್ನು ಮೊಡವೆಗಳ ಮೇಲೆ ಹಚ್ಚಿ ನಿಧಾನವಾಗಿ ಮಸಾಜ್‌ ಮಾಡಿದರೆ ಕಲೆಗಳು ವಾಸಿಯಾಗುತ್ತದೆ.

ಟೂತ್‌ಪೇಸ್ಟ್‌

ಟೂತ್‌ಪೇಸ್ಟ್‌ನ ಬಿಳಿಭಾಗದಲ್ಲಿ ಬೇಕಿಂಗ್‌ ಸೋಡಾ ಹಾಗೂ ಹೈಡ್ರೋಜನ್‌ ಪೆರಾಕ್ಸೆ„ಡ್‌ಗಳು ಇರುವುದರಿಂದ ಮೊಡವೆ ಇರುವ ಭಾಗಕ್ಕೆ ಟೂತ್‌ಪೇಸ್ಟ್‌ ಲೇಪಿಸಿ 10 ನಿಮಿಷಗಳ ಬಳಿಕ ತೊಳೆದರೆ ಮೊಡವೆ ಶಮನವಾಗುತ್ತದೆ.

ಸಾಸಿವೆ

1/4 ಚಮಚ ಸಾಸಿವೆಯೊಂದಿಗೆ 1 ಚಮಚ ಜೇನುತುಪ್ಪವನ್ನು ಚೆನ್ನಾಗಿ ಮಿಶ್ರಣಮಾಡಿ ಮುಖದ ಎಲ್ಲಾ ಭಾಗಕ್ಕೆ ಹಚ್ಚಿಕೊಳ್ಳಿ. 15 ನಿಮಿಷದ ನಂತರ ಶುದ್ಧ ನೀರಿನಿಂದ ಮುಖವನ್ನು ನಯವಾಗಿ ತೊಳೆಯಿರಿ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ