ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಸಾಮಾನ್ಯವಾಗಿ ಎಲ್ಲರ ಸೌಂದರ್ಯ ಹಾಳಾಗುವುದು ಮೊಡವೆಗಳಿಂದಲೇ. ಹದಿಹರೆಯದಲ್ಲಿ ಸಾಮಾನ್ಯವಾದ ಮೊಡವೆ ಅಳಿದರೂ ಕಲೆಗಳನ್ನು ಉಳಿಸುತ್ತದೆ. ಕೆಲವರಿಗಂತೂ ಎಷ್ಟೇ ವಯಸ್ಸಾದರೂ ಇವು ಬಿಟ್ಟು ಹೋಗುವ ಮಾತನ್ನೇ ಆಡುವುದಿಲ್ಲ.ಈ ಮೊಡವೆಗಳಿಗೆ ಹುಡುಗ ಹುಡುಗಿ ಚಿಕ್ಕವರು ದೊಡ್ಡವರು ಎಂಬ ಭೇದವಿಲ್ಲ ಎಲ್ಲರಿಗು ಇವು ಕಾಟ ಕೊಡುತ್ತಲೇ ಇರುತ್ತವೆ.
ಇವುಗಳಲ್ಲ ಹೇಳ ಹೆಸರಿಲ್ಲದಂತೆ ಹೋಗಲಾಡಿಸಲು ನಾವು ಹಲವು ಪ್ರಯತ್ನಗಳನ್ನ ಮಾಡಿ ಸೋತಿರುತ್ತೇವೆ. ಆದರೆ ಇನ್ನು ಮುಂದೆ ಸೋಲುವ ಮಾತಿಲ್ಲ, ಏಕೆಂದರೆ ಈ ಮೊಡವೆಗಳನ್ನ ಹೋಗಲಾಡಿಸಲು ಸುಲಭವಾದ ಉಪಾಯ ಇಲ್ಲಿದೆ ನೋಡಿ.

ಸೌತೆಕಾಯಿಯ ತಾಜಾ ಬಿಲ್ಲೆಗಳನ್ನು ಮುಖಕ್ಕೆ ಮಾಲೀಶು ಮಾಡಿದರೆ ಮೊಡವೆಯ ಕಲೆಗಳು ನಿವಾರಣೆಯಾಗುತ್ತವೆ.

ಬೆಳ್ಳುಳ್ಳಿ ಜಜ್ಜಿ ರಸ ತೆಗೆದು ಅದನ್ನು ಮೊಡವೆಯ ಜಾಗಕ್ಕೆ ಹಚ್ಚಿ ಸ್ವಲ್ಪ ಹೊತ್ತು ಹಾಗೆಯೇ ಬಿಡಿ. ನಂತರ ನೀರಿನಿಂದ ಸ್ವಚ್ಛಗೊಳಿಸಿ. ಇದು ಮೊಡವೆಗಳನ್ನು ನಿವಾರಿಸಲು ಪರಿಣಾಮಕಾರಿ ವಿಧಾನ.ಮೊಡವೆ ನಿವಾರಿಸಲು ಮತ್ತೊಂದು ವಿಧಾನವೆಂದರೆ ಬೆಳ್ಳುಳ್ಳಿಯ ಎಸಳನ್ನು ಅರ್ಧ ಕತ್ತರಿಸಿ ಮೊಡವೆ ಇರುವ ಭಾಗಕ್ಕೆ ಲೇಪಿಸಿದರೆ ಮೊಡವೆ ಮಾಯುತ್ತದೆ.

ಶುದ್ಧ ಜೇನುತುಪ್ಪಕ್ಕೆ ಅರಸಿನ ಬೆರೆಸಿ ಲೇಪಿಸಿದರೆ ಮೊಡವೆ ಶೀಘ್ರ ಮಾಯುತ್ತದೆ.

ಗ್ರೀನ್ ಟೀ ತಯಾರಿಸಿ ಫ್ರಿಡ್ಜ್‌ನಲ್ಲಿರಿಸಿ ಐಸ್ ಕ್ಯೂಬ್ ತಯಾರಿಸಿ. ಇದನ್ನು ನಿಧಾನವಾಗಿ ಮುಖದ ಮೇಲೆ ಮೊಡವೆ ಇರುವ ಜಾಗದ ಮೇಲೆ ತಿಕ್ಕಿ. ಹೀಗೆ ಮಾಡುವುದರಿಂದ ನಿಮ್ಮ ಚರ್ಮದ ಜಿಡ್ಡು ನಿವಾರಣೆಯಾಗುತ್ತದೆ.

ನಿಂಬೆರಸದಲ್ಲಿ ಸಿಟ್ರಿಕ್ ಆಮ್ಲದ ಜೊತೆ ಆ್ಯಸ್ಕೂರ್‌ಬಿಕ್ ಆಮ್ಲದ ಅಂಶವಿರುವುದರಿಂದ ಒಂದು ಹತ್ತಿ ಉಂಡೆಯಲ್ಲಿ ತಾಜಾ ನಿಂಬೆರಸವನ್ನು ಅದ್ದಿ ರಾತ್ರಿ, ಅದನ್ನು ಮೊಡವೆಯ ಭಾಗಕ್ಕೆ ಲೇಪಿಸಿ ಮರುದಿನ ತೊಳೆಯಬೇಕು.
ಚಂದನವನ್ನು ಹಾಲಿನಲ್ಲಿ ಬೆರೆಸಿ ಮೊಡವೆಯಾದ ಜಾಗಕ್ಕೆ ಹಚ್ಚಿ ಹಾಗೇ ಬಿಡಿ. ಒಣಗಿದ ನಂತರ ತಂಪಾದ ನೀರಿನಲ್ಲಿ ತೊಳೆಯಿರಿ.

ಟೊಮೆಟೊ ಹಣ್ಣಿನ ರಸವನ್ನು ಮುಖಕ್ಕೆ ಹಚ್ಚುವುದರಿಂದ ಮುಖ ಮೃದುವಾಗುತ್ತದೆ ಎಂಬ ವಿಷಯ ನಿಮಗೆ ಗೊತ್ತೇ ಇದೆ. ಅದೇ ರೀತಿ ದಿನಕ್ಕೆ ಎರಡು ಬಾರಿ ಟೊಮೆಟೊ ರಸವನ್ನು ಮೊಡವೆಗಳ ಮೇಲೆ ಹಚ್ಚಿ ನಿಧಾನವಾಗಿ ಮಸಾಜ್ ಮಾಡಿದರೆ ಕಲೆಗಳು ವಾಸಿಯಾಗುತ್ತದೆ.

ಟೂತ್‌ಪೇಸ್ಟ್‌ನ ಬಿಳಿಭಾಗದಲ್ಲಿ ಬೇಕಿಂಗ್ ಸೋಡಾ ಹಾಗೂ ಹೈಡ್ರೋಜನ್ ಪೆರಾಕ್ಸೆ„ಡ್‌ಗಳು ಇರುವುದರಿಂದ ಮೊಡವೆ ಇರುವ ಭಾಗಕ್ಕೆ ಟೂತ್‌ಪೇಸ್ಟ್ ಲೇಪಿಸಿ 10 ನಿಮಿಷಗಳ ಬಳಿಕ ತೊಳೆದರೆ ಮೊಡವೆ ಶಮನವಾಗುತ್ತದೆ.

1/4 ಚಮಚ ಸಾಸಿವೆಯೊಂದಿಗೆ 1 ಚಮಚ ಜೇನುತುಪ್ಪವನ್ನು ಚೆನ್ನಾಗಿ ಮಿಶ್ರಣಮಾಡಿ ಮುಖದ ಎಲ್ಲಾ ಭಾಗಕ್ಕೆ ಹಚ್ಚಿಕೊಳ್ಳಿ. 15 ನಿಮಿಷದ ನಂತರ ಶುದ್ಧ ನೀರಿನಿಂದ ಮುಖವನ್ನು ನಯವಾಗಿ ತೊಳೆಯಿರಿ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಮುಖ್ಯಮಂತ್ರಿ ಸಿದ್ದರಾಮಯ್ಯನವರಿಂದ ಈ ಹೇಳಿಕೆ ಬರಬಾರದಿತ್ತು. ಅವರು ಚಾಮರಾಜನಗರದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡುತ್ತ, ಬಿಜೆಪಿಯವರನ್ನು ಟೀಕಿಸುವ ಭರದಲ್ಲಿ ಬಿಜೆಪಿ ಪಕ್ಷ ಹಾಗೂ ಆರ್.ಎಸ್.ಎಸ್ ಮತ್ತು ಭಜರಂಗದಳ ಸಂಘಟನೆಗಳು “ಉಗ್ರಗಾಮಿಗಳು” ಎಂಬ ಹೇಳಿಕೆಯನ್ನು ಕೊಟ್ಟಿದ್ದಾರೆ. ಜೊತೆಗೆ ತಾವು ಏನು ಕಡಿಮೆ ಇಲ್ಲ ಎನ್ನುವಂತೆ ದಿನೇಶ್ ಗುಂಡೂರಾವ್ ಅವರು ಬಿಜೆಪಿ ನಾಯಕರನ್ನು ‘ಜಿಹಾದಿಗಳು’ ಎಂದು ಕರೆದಿದ್ದಾರೆ.
ಜಾತಿ ಆಧಾರಿತ ತಾರತಮ್ಯ ತೊಡೆದುಹಾಕುವ ಪ್ರಯತ್ನವಾಗಿ ಕೇಂದ್ರ ಸರಕಾರವು, ಅಂತರ್ಜಾತಿ ವಿವಾಹಗಳನ್ನು ಪ್ರೋತ್ಸಾಹಿಸುವಂತೆ ಎಲ್ಲಾ ರಾಜ್ಯಗಳಿಗೆ ಸೂಚಿಸಿದೆ. ದಲಿತ ಅಂತರ್ಜಾತಿ ವಿವಾಹಗಳಿಗೆ ಪ್ರೋತ್ಸಾಹ ನೀಡುವ ಹಿನ್ನೆಲೆಯಲ್ಲಿ 2.5 ಲಕ್ಷ ರೂ. ಪ್ರೋತ್ಸಾಹ ಧನ ನೀಡುವುದಾಗಿ ಕೇಂದ್ರ ಸರ್ಕಾರ ತಿಳಿಸಿದೆ.
ಈ ಭೂಮಿಗೆ ಕಾಲಿಟ್ಟ ಪ್ರತಿಯೊಬ್ಬರೂ ತಾಯಿಯ ಹಾಲನ್ನ ಕುಡಿದಿರುತ್ತಾರೆ ಮತ್ತು ಬಹಳಷ್ಟು ದಿನಗಳ ತನಕ ಬೇರೆ ಯಾವ ಆಹಾರವನ್ನ ಕೂಡ ಸೇವನೆ ಮಾಡದೆ ಕೇವಲ ತಾಯಿಯ ಎದೆ ಹಾಲನ್ನ ಕುಡಿದು ನಾವು ಬದುಕಿದ್ದೇವೆ, ತಾಯಿಯ ಎದೆ ಹಾಲು ಭೂಲೋಕದಲ್ಲಿ ಸಿಗುವ ಒಂದು ಅಮೃತ ಎಂದು ಹೇಳಿದರೆ ತಪ್ಪಾಗಲ್ಲ. ಮಮತೆ, ಪ್ರೀತಿ ಮತ್ತು ಪೋಷಣೆಯ ಅದ್ಬುತ ಶಕ್ತಿ ಈ ಹಾಲಿನಲ್ಲಿ ಇದೆ. ತಾಯಿಯ ಎದೆ ಹಾಲಿನ ಋಣವನ್ನ ತೀರಿಸಲು ಯಾರಿಂದಲೂ ಕೂಡ ಸಾಧ್ಯವಿಲ್ಲ, ಇನ್ನು ಕೆಲವರಿಗೆ ಈ ಮಮತೆಯ…
ಸೋಮಾಲಿಲ್ಯಾಂಡ್ ಒಂದು ಸ್ವಯಂ ಅಂಗೀಕೃತ ರಾಜ್ಯವಾಗಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಸೋಮಾಲಿಯಾ ಗುರುತಿಸಲ್ಪಟ್ಟಿದೆ. ಆದರೆ ಸೋಮಾಲಿಲ್ಯಾಂಡ್’ಗೆ ದೇಶದ ಅನುಕೂಲ ಇನ್ನು ಸಿಕ್ಕಿಲ್ಲ. ಈ ರಾಜ್ಯದಲ್ಲಿ ಅತ್ಯಾಚಾರ ಒಂದು ಕಾನೂನುಭಂಗ ವಾಗಿರಲಿಲ್ಲ.
ಈಗಾಗಲೇ ಕನ್ನಡದ ಜೀ ವಾಹಿನಿಯ ಸರಿಗಮಪ ಶೋನಲ್ಲಿ ಹಾಡುತ್ತಿರುವ ಕೊಪ್ಪಳದ ಗಂಗಮ್ಮ ಕರ್ನಾಟಕದ ಮನೆ ಮಾತಾಗಿದ್ದಾರೆ.ಈಗ ಇವರು ಮ್ಯೂಸಿಕ್ ಮಾಂತ್ರಿಕ ಆಸ್ಕರ್ ಪ್ರಶಸ್ತಿ ವಿಜೇತ್ ಎರ್.ಆರ್ ರೆಹಮಾನ್ ಅವರನ್ನು ಗಂಗಮ್ಮ ಭೇಟಿ ಮಾಡಿದ್ದಾರೆ. ಸರಿಗಮಪ ಕಾರ್ಯಕ್ರಮದಲ್ಲಿ ಗಂಗಮ್ಮ ಹಾಡಿ ಎಲ್ಲರನ್ನು ಗಮನ ಸೆಳೆದಿರುವುದರ ಬಗ್ಗೆ ಎ.ಆರ್ ರೆಹಮಾನ್ ತಿಳಿದುಕೊಂಡಿದ್ದು, 500 ರೂಪಾಯಿಗೆ ಆರ್ಕೆಸ್ಟ್ರಾದಲ್ಲಿ ಹಾಡುತ್ತಿದ್ದ ಗಾಯಕಿ ಈಗ ರಾಜ್ಯಮಟ್ಟದಲ್ಲಿ ಹೆಸರು ಮಾಡುತ್ತಿರುವ ವಿಷಯ ಕೇಳಿ ಎ.ಆರ್ ರೆಹಮಾನ್ ಸಂತಸ ವ್ಯಕ್ತಪಡಿಸಿದ್ದಾರೆ. ಗಂಗಮ್ಮರನ್ನು ಎ.ಆರ್ ರೆಹಮಾನ್ ಭೇಟಿ ಮಾಡಿ…
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ನಟಿಸಿದ ಸ್ಯಾಂಡಲ್ವುಡ್ ಬಹುನಿರೀಕ್ಷಿತ ‘ಪೈಲ್ವಾನ್’ ಚಿತ್ರ ಇಂದು ಅದ್ಧೂರಿಯಾಗಿ ತೆರೆಗೆ ಅಪ್ಪಳಿಸಿದೆ. ಬೆಂಗಳೂರಿನ ಸಿದ್ದೇಶ್ವರ ಚಿತ್ರಮಂದಿರದಲ್ಲಿ ಮುಂಜಾನೆ 5.30ರಿಂದ ಪ್ರದರ್ಶನ ಶುರುವಾಗಿದೆ. ಇತ್ತ ಮೆಜೆಸ್ಟಿಕ್ನ ಸಂತೋಷ್ ಚಿತ್ರಮಂದಿರದಲ್ಲಿ ಇದೇ ಮೊದಲ ಬಾರಿಗೆ ಬೆಳಗ್ಗೆ 7 ಗಂಟೆಗೆ ಶೋ ಆರಂಭವಾಗಿದೆ. ಸ್ವತಃ ಕಿಚ್ಚ ಸುದೀಪ್ ಅವರೇ ಚಿತ್ರಮಂದಿರಕ್ಕೆ ಆಗಮಿಸಿ ಚಿತ್ರ ವೀಕ್ಷಿಸುತ್ತಿದ್ದಾರೆ. ಇದೇ ವೇಳೆ ಅಭಿಮಾನಿಯೊಬ್ಬರು ಚಿತ್ರಮಂದಿರದ ಎದುರು 101 ತೆಂಗಿನ ಕಾಯಿಯನ್ನು ಒಡೆದಿದ್ದಾರೆ. ಸುದೀಪ್ ಅವರ ಸಿನಿಮಾ ಇದೇ ಮೊದಲ…