ಸರ್ಕಾರಿ ಯೋಜನೆಗಳು

ಇನ್ನು ಮುಂದೆ ಬಿಎಂಟಿಸಿ ಬಸ್ಸಿನಲ್ಲಿ ಉಚಿತವಾಗಿ ಇಂಟರ್ನೆಟ್ ಉಪಯೋಗಿಸಬಹುದು ಹೇಗೆ ಗೊತ್ತಾ..?ತಿಳಿಯಲು ಈ ಲೇಖನ ಓದಿ..

112

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು (ಬಿಎಂಟಿಸಿ) ಪ್ರಮುಖ ಬಸ್‌ ನಿಲ್ದಾಣಗಳು ಮತ್ತು 350 ಹವಾನಿಯಂತ್ರಿತ ವೋಲ್ವೊ ಬಸ್‌ಗಳಲ್ಲಿ ಉಚಿತವಾಗಿ ವೈಫೈ ಸೌಲಭ್ಯ ಕಲ್ಪಿಸಲು ಮುಂದಾಗಿದೆ. ಆ ಮೂಲಕ ಪ್ರಯಾಣಿಕರನ್ನು ತನ್ನತ್ತ ಆಕರ್ಷಿಸಲು ಕಸರತ್ತು ನಡೆಸುತ್ತಿದೆ.

 

ಡಿಜಿಟಲ್‌ ಯುಗಕ್ಕೆ ತೆರೆದುಕೊಂಡಿರುವ ರಾಜಧಾನಿಯಲ್ಲಿ ಓಡಾಡುವ ಬಸ್‌ಗಳಲ್ಲಿ ಈವರೆಗೆ ವೈಫೈ ಸೇವೆ ಲಭ್ಯವಿರಲಿಲ್ಲ. ಕೆಲ ವರ್ಷಗಳಿಂದೀಚೆಗೆ ಲಗ್ಗೆ ಇಟ್ಟ ಟ್ಯಾಕ್ಸಿಗಳು ಗ್ರಾಹಕರಿಗೆ ಉಚಿತ ವೈಫೈ ಸೇವೆ ಒದಗಿಸಿ, ವೋಲ್ವೊ ಬಸ್‌ಗಳಿಗೆ ತೀವ್ರ ಪೈಪೋಟಿಯೊಡ್ಡಿವೆ. ಹೀಗಾಗಿ, ಬಿಎಂಟಿಸಿಯು ಪ್ರಯಾಣಿಕರಿಗೆ ಬೆರಳ ತುದಿಯಲ್ಲೇ ಮಾಹಿತಿ ದೊರಕಿಸುವ ನಿಟ್ಟಿನಲ್ಲಿ ಹೆಜ್ಜೆಗಳನ್ನಿಡುತ್ತಿದೆ.

 

ಉಚಿತ ಅಂತರ್ಜಾಲ ಸೇವೆ ಮತ್ತು ಆಕರ್ಷಕ ಪ್ರಯಾಣ ದರಕ್ಕೆ ಮಾರು ಹೋಗಿರುವ ಐಟಿ-ಬಿಟಿ ಉದ್ಯೋಗಿಗಳು ವೋಲ್ವೊ ಬಸ್‌ಗಳನ್ನು ಬಿಟ್ಟು, ಟ್ಯಾಕ್ಸಿ ಏರುತ್ತಿದ್ದಾರೆ. ಪರಿಣಾಮ, ವೋಲ್ವೊ ಬಸ್‌ಗಳಲ್ಲಿ ಸಂಚರಿಸುವ ಪ್ರಯಾಣಿಕರ ಸಂಖ್ಯೆಯಲ್ಲಿ ಇಳಿಮುಖವಾಗುತ್ತಿದ್ದು, ಸಂಸ್ಥೆಯು ನಷ್ಟ ಅನುಭವಿಸುವಂತಾಗಿದೆ.

 

350 ಬಸ್‌ಗಳಲ್ಲಿ ವೈಫೈ ಸೇವೆ:-

ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಚರಿಸುತ್ತಿರುವ 75 ವಾಯುವಜ್ರ ಬಸ್‌ಗಳೂ ಸೇರಿದಂತೆ ಐಟಿ ಕಾರಿಡಾರ್‌ಗಳಿಗೆ ಸಂಚರಿಸುವ 350 ವೋಲ್ವೊ ಬಸ್‌ಗಳಲ್ಲಿ ವೈಫೈ ಸೇವೆ ಒದಗಿಸಲು ತೀರ್ಮಾನಿಸಲಾಗಿದೆ. ಮೊದಲ ಹಂತದಲ್ಲಿ 200 ಬಸ್‌ಗಳಲ್ಲಿ ವೈಫೈ ಸೌಲಭ್ಯ ಅಳವಡಿಸಲು ಅನುಮತಿ ನೀಡಲಾಗಿದೆ.

 

12 ನಿಲ್ದಾಣಗಳಲ್ಲಿ ವೈಫೈ ಜಾಲ:-

ನಗರದ ಕೆಂಪೇಗೌಡ ಬಸ್‌ ನಿಲ್ದಾಣ, ಶಿವಾಜಿನಗರ, ಶಾಂತಿನಗರ, ಕೆಂಗೇರಿ, ವೈಟ್‌ಫೀಲ್ಡ್‌, ಬನಶಂಕರಿ, ಜಯನಗರ, ಬನ್ನೇರುಘಟ್ಟ, ವಿಜಯನಗರ, ದೊಮ್ಮಲೂರು, ಯಲಹಂಕ, ಯಶವಂತಪುರ ನಿಲ್ದಾಣಗಳು ವೈಫೈ ಸೇವಾ ಜಾಲವನ್ನು ಹೊಂದಿರಲಿವೆ. ವೈಫೈ ಅಳವಡಿಕೆಗೆ ಖಾಸಗಿ ಸಂಸ್ಥೆಯೊಂದಕ್ಕೆ ಐದು ವರ್ಷಗಳ ಅವಧಿಗೆ ಗುತ್ತಿಗೆ ನೀಡಲಾಗಿದೆ. ಮುಂದಿನ 15-20 ದಿನಗಳಲ್ಲಿ ಪ್ರಯಾಣಿಕರಿಗೆ ವೈಫೈ ಸೌಲಭ್ಯ ಸಿಗಲಿದೆ.

30 ಎಂಬಿ ಬಳಕೆಗೆ ಅವಕಾಶ:-

ವೋಲ್ವೊ ಬಸ್‌ಗಳು ಮತ್ತು ನಿಲ್ದಾಣಗಳಲ್ಲಿ ಲಭಿಸುವ ವೈಫೈ ಮೂಲಕ ಅಂತರ್ಜಾಲದ ಸಂಪರ್ಕ ಪಡೆದು, 30 ಎಂಬಿ ಯಷ್ಟು ಡಾಟಾ ಬಳಕೆ ಮಾಡಲು ಅವಕಾಶ ನೀಡಲಾಗುತ್ತಿದೆ. ಇದಕ್ಕೆ ಸಮಯದ ಮಿತಿ ಇರುವುದಿಲ್ಲ. 30 ಎಂಬಿ ಮಿತಿ ದಾಟಿದಾಕ್ಷಣ ಸಂಪರ್ಕ ಕಡಿತಗೊಳ್ಳುತ್ತದೆ.

 

About the author / 

Nimma Sulochana

Categories

Date wise

  • ಹಲಸಿನ ಹಣ್ಣು ತಿನ್ನುವುದರಿಂದ ಆಗುವ ಆರೋಗ್ಯಕರ ಲಾಭಗಳು!!

    ಹಣ್ಣುಗಳನ್ನು ನಾವು ತಿಂದಷ್ಟು ನಮಗೆ ಆರೋಗ್ಯ ನಿರಂತರವಾಗಿರುತ್ತದೆ. ಅದರಲ್ಲಿಯೂ ಕೆಲವೊಂದು ನಿರ್ದಿಷ್ಟ ಹಣ್ಣುಗಳು ಆರೋಗ್ಯಕ್ಕೆ ಹಿತಕಾರಿಯಾಗಿದೆ. ಸಿಹಿಯಾದ ರುಚಿಯಿಂದ ಕೂಡಿದ ಹಲಸು ಆರೋಗ್ಯಕ್ಕೆ ನೀಡುವ ಕೊಡುಗೆ ಅಪಾರವಾದುದು.ಹಲಸಿನ ಹಣ್ಣು ತಿನ್ನುವುದರಿಂದ ಆಗುವ ಆರೋಗ್ಯಕರ ಲಾಭಗಳು ರಕ್ತದ ಒತ್ತಡವನ್ನು ಸಮತೋಲನವಾಗಿಸುತ್ತದೆಹಲಸಿನ ಹಣ್ಣಿನ ತೊಳೆಗಳಲ್ಲಿ ಪೊಟ್ಯಾಶಿಯಂ ಅಂಶ ಹೆಚ್ಚಾಗಿದ್ದು, ಅಧಿಕ ರಕ್ತದ ಒತ್ತಡ ಸಮಸ್ಯೆಯಿಂದ ಬಳಲುತ್ತಿರುವ ಮಂದಿಗೆ ಇದು ಬಹಳ ಸಹಕಾರಿ ಎಂದು ಹೇಳುತ್ತಾರೆ. ಏಕೆಂದರೆ ಪೊಟ್ಯಾಶಿಯಂ ಅಂಶ ಹೊಂದಿರುವ ಯಾವುದೇ ಆಹಾರ ಸೇವನೆ ಮಾಡುವುದರಿಂದ ದೇಹದಲ್ಲಿ ಸೋಡಿಯಂ ಅಂಶ…

ಏನ್ ಸಮಾಚಾರ