ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು (ಬಿಎಂಟಿಸಿ) ಪ್ರಮುಖ ಬಸ್ ನಿಲ್ದಾಣಗಳು ಮತ್ತು 350 ಹವಾನಿಯಂತ್ರಿತ ವೋಲ್ವೊ ಬಸ್ಗಳಲ್ಲಿ ಉಚಿತವಾಗಿ ವೈಫೈ ಸೌಲಭ್ಯ ಕಲ್ಪಿಸಲು ಮುಂದಾಗಿದೆ. ಆ ಮೂಲಕ ಪ್ರಯಾಣಿಕರನ್ನು ತನ್ನತ್ತ ಆಕರ್ಷಿಸಲು ಕಸರತ್ತು ನಡೆಸುತ್ತಿದೆ.
ಡಿಜಿಟಲ್ ಯುಗಕ್ಕೆ ತೆರೆದುಕೊಂಡಿರುವ ರಾಜಧಾನಿಯಲ್ಲಿ ಓಡಾಡುವ ಬಸ್ಗಳಲ್ಲಿ ಈವರೆಗೆ ವೈಫೈ ಸೇವೆ ಲಭ್ಯವಿರಲಿಲ್ಲ. ಕೆಲ ವರ್ಷಗಳಿಂದೀಚೆಗೆ ಲಗ್ಗೆ ಇಟ್ಟ ಟ್ಯಾಕ್ಸಿಗಳು ಗ್ರಾಹಕರಿಗೆ ಉಚಿತ ವೈಫೈ ಸೇವೆ ಒದಗಿಸಿ, ವೋಲ್ವೊ ಬಸ್ಗಳಿಗೆ ತೀವ್ರ ಪೈಪೋಟಿಯೊಡ್ಡಿವೆ. ಹೀಗಾಗಿ, ಬಿಎಂಟಿಸಿಯು ಪ್ರಯಾಣಿಕರಿಗೆ ಬೆರಳ ತುದಿಯಲ್ಲೇ ಮಾಹಿತಿ ದೊರಕಿಸುವ ನಿಟ್ಟಿನಲ್ಲಿ ಹೆಜ್ಜೆಗಳನ್ನಿಡುತ್ತಿದೆ.
ಉಚಿತ ಅಂತರ್ಜಾಲ ಸೇವೆ ಮತ್ತು ಆಕರ್ಷಕ ಪ್ರಯಾಣ ದರಕ್ಕೆ ಮಾರು ಹೋಗಿರುವ ಐಟಿ-ಬಿಟಿ ಉದ್ಯೋಗಿಗಳು ವೋಲ್ವೊ ಬಸ್ಗಳನ್ನು ಬಿಟ್ಟು, ಟ್ಯಾಕ್ಸಿ ಏರುತ್ತಿದ್ದಾರೆ. ಪರಿಣಾಮ, ವೋಲ್ವೊ ಬಸ್ಗಳಲ್ಲಿ ಸಂಚರಿಸುವ ಪ್ರಯಾಣಿಕರ ಸಂಖ್ಯೆಯಲ್ಲಿ ಇಳಿಮುಖವಾಗುತ್ತಿದ್ದು, ಸಂಸ್ಥೆಯು ನಷ್ಟ ಅನುಭವಿಸುವಂತಾಗಿದೆ.
350 ಬಸ್ಗಳಲ್ಲಿ ವೈಫೈ ಸೇವೆ:-
ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಚರಿಸುತ್ತಿರುವ 75 ವಾಯುವಜ್ರ ಬಸ್ಗಳೂ ಸೇರಿದಂತೆ ಐಟಿ ಕಾರಿಡಾರ್ಗಳಿಗೆ ಸಂಚರಿಸುವ 350 ವೋಲ್ವೊ ಬಸ್ಗಳಲ್ಲಿ ವೈಫೈ ಸೇವೆ ಒದಗಿಸಲು ತೀರ್ಮಾನಿಸಲಾಗಿದೆ. ಮೊದಲ ಹಂತದಲ್ಲಿ 200 ಬಸ್ಗಳಲ್ಲಿ ವೈಫೈ ಸೌಲಭ್ಯ ಅಳವಡಿಸಲು ಅನುಮತಿ ನೀಡಲಾಗಿದೆ.
12 ನಿಲ್ದಾಣಗಳಲ್ಲಿ ವೈಫೈ ಜಾಲ:-
ನಗರದ ಕೆಂಪೇಗೌಡ ಬಸ್ ನಿಲ್ದಾಣ, ಶಿವಾಜಿನಗರ, ಶಾಂತಿನಗರ, ಕೆಂಗೇರಿ, ವೈಟ್ಫೀಲ್ಡ್, ಬನಶಂಕರಿ, ಜಯನಗರ, ಬನ್ನೇರುಘಟ್ಟ, ವಿಜಯನಗರ, ದೊಮ್ಮಲೂರು, ಯಲಹಂಕ, ಯಶವಂತಪುರ ನಿಲ್ದಾಣಗಳು ವೈಫೈ ಸೇವಾ ಜಾಲವನ್ನು ಹೊಂದಿರಲಿವೆ. ವೈಫೈ ಅಳವಡಿಕೆಗೆ ಖಾಸಗಿ ಸಂಸ್ಥೆಯೊಂದಕ್ಕೆ ಐದು ವರ್ಷಗಳ ಅವಧಿಗೆ ಗುತ್ತಿಗೆ ನೀಡಲಾಗಿದೆ. ಮುಂದಿನ 15-20 ದಿನಗಳಲ್ಲಿ ಪ್ರಯಾಣಿಕರಿಗೆ ವೈಫೈ ಸೌಲಭ್ಯ ಸಿಗಲಿದೆ.
30 ಎಂಬಿ ಬಳಕೆಗೆ ಅವಕಾಶ:-
ವೋಲ್ವೊ ಬಸ್ಗಳು ಮತ್ತು ನಿಲ್ದಾಣಗಳಲ್ಲಿ ಲಭಿಸುವ ವೈಫೈ ಮೂಲಕ ಅಂತರ್ಜಾಲದ ಸಂಪರ್ಕ ಪಡೆದು, 30 ಎಂಬಿ ಯಷ್ಟು ಡಾಟಾ ಬಳಕೆ ಮಾಡಲು ಅವಕಾಶ ನೀಡಲಾಗುತ್ತಿದೆ. ಇದಕ್ಕೆ ಸಮಯದ ಮಿತಿ ಇರುವುದಿಲ್ಲ. 30 ಎಂಬಿ ಮಿತಿ ದಾಟಿದಾಕ್ಷಣ ಸಂಪರ್ಕ ಕಡಿತಗೊಳ್ಳುತ್ತದೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ನಟ, ರೆಬೆಲ್ ಸ್ಟಾರ್ ಸಾವಿನ ಸುದ್ದಿ ನನಗೆ ಅಘಾತ ತಂದಿತ್ತು. ಕೂಡಲೇ ನಾನು ಆಸ್ಪತ್ರೆ ಬಳಿ ತೆರಳಿದೆ. ಆಗ ಅಭಿಷೇಕ್ ಅವರ ಕಣ್ಣಲ್ಲಿ ಒಂದು ತೊಟ್ಟು ನೀರು ಇರಲಿಲ್ಲ ಎಂದು ಅಂದಿನ ದಿನವನ್ನು ಸಿಎಂ ಕುಮಾರಸ್ವಾಮಿ ನೆನಪು ಮಾಡಿಕೊಂಡು ಭಾವುಕರಾದರು. ಸ್ನೇಹಿತನಂತಿದ್ದ ತಂದೆ ತೀರಿಕೊಂಡಾಗ ಸರ್ವಸ್ವವೇ ಕಳೆದುಕೊಂಡಂತ ಬಾವ ಮೂಡುತ್ತದೆ. ಕಣ್ಣೀರಿನ ಮೂಲಕ ತನ್ನ ನೋವನ್ನು ಹೊರ ಹಾಕುತ್ತಾರೆ. ಕಣ್ಣ ಮುಂದೆ ಶಾಶ್ವತವಾಗಿ ಮೌನಕ್ಕೆ ಜಾರಿದ ಅಪ್ಪನ ಮುಂದೆ ಮುಖದಲ್ಲಿ ನೋವಿನ ಭಾವನೆ ಇಲ್ಲದಂತೆ ಇರುವುದು ಎಲ್ಲರಿಗೂ…
ಸ್ನೇಹಿತರೆ ಇಂಗ್ಲೆಂಡ್ ದೇಶದಕ್ಕೆ ಸೇರಿದ ಈತನ ಹೆಸರು ಸ್ಟಿವನ್, ಜೀವನದಲ್ಲಿ ತುಂಬಾ ಕಷ್ಟವನ್ನ ಅನುಭವಿಸಿದ ಈತನಿಗೆ 60 ವರ್ಷ ವಯಸ್ಸು, ತನ್ನ 60 ವರ್ಷ ಜೀವನದಲ್ಲಿ ಯಾವತ್ತೂ ಸುಖಕರ ಜೀವನವನ್ನ ಈತ ಅನುಭವಿಸಿರಲಿಲ್ಲ. ಈತ ದಿನದ ಖರ್ಚಿಗಾಗಿ ತುಂಬಾ ಕಷ್ಟಪಡುತ್ತಿದ್ದ ಮತ್ತು ಲಾರಿ ಡ್ರೈವರ್ ಆಗಿ ಕೆಲಸವನ್ನ ಕೂಡ ಮಾಡುತ್ತಿದ್ದ, ಕೆಲವು ಸಮಯದ ನಂತರ ಈತನಿಗೆ ವಯಸ್ಸಾಗಿದೆ ಅನ್ನುವ ಕಾರಣಕ್ಕೆ ಈತನನ್ನ ಡ್ರೈವರ್ ಕೆಲಸದಿಂದ ತಗೆದು ಹಾಕಲಾಯಿತು. ಡ್ರೈವರ್ ಕೆಲಸವನ್ನ ಬಿಟ್ಟ ನಂತರ ಓಕ್ ಮರದ ತೋಟದಲ್ಲಿ…
ಬಹುತೇಕರು ಈಗಂತೂ ಕಂಪ್ಯೂಟರ್ನ ಮುಂದೆ ಕುಳಿತು ಬಿಟ್ಟರೆ ಎಲ್ಲವನ್ನೂ ಮರೆತು ಬಿಡುತ್ತಾರೆ.
ಇಂದು ಬುಧವಾರ, 21/02/2018, ಇಂದಿನ ನಿಮ್ಮ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ…
ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಸೆಕೆಂಡರಿ ಸ್ಕೂಲ್ ಲಿವಿಂಗ್ ಸರ್ಟಿಫಿಕೇಟ್ (ಎಸ್ಎಸ್ಎಲ್ಸಿ)ಪೂರಕ ಪರೀಕ್ಷೆಗೆ ಅರ್ಜಿ ಸಲ್ಲಿಸುವ ಅಂತಿಮ ಗಡುವನ್ನು ವಿಸ್ತರಿಸಿದೆ.ಇದರಂತೆ ಪೂರಕ ಪರೀಕ್ಷೆಗೆ ಅರ್ಜಿ ಸಲ್ಲಿಸಬಯಸುವವರಿಗೆ ಮೇ 20 ಕಡೆಯ ದಿನವಾಗಿದೆ. ವಿದ್ಯಾರ್ಥಿಗಳ ಅನುಕೂಲಕ್ಕಾ ಅಂತಿಮ ದಿನಾಂಕವನ್ನು ಮುಂದೂಡಿದ್ದಾಗಿ ಹೇಳಲಾಗಿದ್ದು ವಿವಿಧ ಶಾಲೆಗಳ ಮುಖ್ಯೋಪಾಧ್ಯಾಯರು ಮತ್ತು ಮುಖ್ಯೋಪಾಧ್ಯಾಯರ ಸಮೂಹವು ದಿನಾಂಕ ಮುಂದುಡುವಂತೆ ಇಲಾಖೆಗೆ ಮನವಿ ಸಲ್ಲಿಸಿತ್ತು. “ಹೆಚ್ಚಿನ ವಿದ್ಯಾರ್ಥಿಗಳು ಇದಾಗಲೇ ತಮ್ಮ ತಮ್ಮ ಊರುಗಳಿಗೆ ತೆರಳಿದ್ದಾರೆ. ಹಾಗಾಗಿ ಪೂರಕ ಪರೀಕ್ಷೆಯ ಲ್ಕುರಿತ ಗಡುವಿನ ವಿಚಾರ ನಮಗೆ…
ಪರಿಸರದ ಎದುರು ಯಾರೂ ದೊಡ್ಡವರಲ್ಲ. ಈ ಮಾತು ಮನುಷ್ಯರಿಗಲ್ಲ ದೇವರಿಗೂ ಅನ್ವಯಿಸುತ್ತೆ. ವಾಯು ಮಾಲಿನ್ಯಕ್ಕೆ ಜನರು ಬೆಚ್ಚಿ ಬೀಳುತ್ತಿದ್ದಾರೆ. ಮನೆಯಿಂದ ಹೊರ ಬರುವುದಕ್ಕೂ ಮೊದಲು ಮುಖಕ್ಕೆ ಮಾಸ್ಕ್ಹಾಕಿಕೊಳ್ಳುವುದು ಸರ್ವೇ ಸಾಮಾನ್ಯ ಆಗಿಬಿಟ್ಟಿದೆ. ಉತ್ತರ ಭಾರತದಲ್ಲಂತೂ ಇದೊಂದು ಸಂಪ್ರದಾಯದಂತೆ ಆಗಿ ಬಿಟ್ಟಿದೆ. ಉತ್ತರ ಪ್ರದೇಶದಲ್ಲಿ ದೇವರಿಗೂ ಪರಿಸರ ಮಾಲಿನ್ಯದ ಪ್ರಭಾವ ತಟ್ಟಿದೆ. ಇಂಥದೊಂದು ಅನುಮಾನ ಹುಟ್ಟಿಕೊಳ್ಳಲು ಕಾರಣವಾಗಿದ್ದೇ ವಾರಣಾಸಿಯಲ್ಲಿ ನಡೆದಿರುವ ಈ ಘಟನೆ. ನವದೆಹಲಿಯಲ್ಲಿ ಪರಿಸರ ಹದಗೆಟ್ಟು ಹೋಗಿರುವ ವಿಚಾರ ಎಲ್ಲರಿಗೂ ಗೊತ್ತೇ ಇದೆ. ದೆಹಲಿಯಲ್ಲಿ ಜನರು ಮುಖಕ್ಕೆ…