ಆರೋಗ್ಯ, ಸರ್ಕಾರಿ ಯೋಜನೆಗಳು

ಇಂದಿರಾ ಕ್ಯಾಂಟೀನ್ ಆಯ್ತು. ಈಗ “ಇಂದಿರಾ ಕ್ಲಿನಿಕ್” ಶುರು!ಇಲ್ಲಿ ಏನೆಲ್ಲಾ ಉಚಿತ ಸೇವೆ ಸಿಗಲಿದೆ ಗೂತ್ತಾ..?

121

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಗಳು, ಇಂದು ಜನಸಾಮಾನ್ಯರನ್ನು ಆಕರ್ಷಿಸುತ್ತಿವೆ. ಇಂದಿರಾ ಕ್ಯಾಂಟೀನ್ ಪ್ರಸಿದ್ದಿಯ ಬಳಿಕ, ಗಾರ್ಮೆಂಟ್ಸ್ ಮಹಿಳೆಯರಿಗೆ, ಕಟ್ಟಡ ಕಾರ್ಮಿಕ ಮಹಿಳೆಯರಿಗೆ ಇಂದಿರಾ ಪಾಸ್ ರಿಯಾಯಿತಿ ದರದಲ್ಲಿ ನೀಡಲಾಗುವುದು ಎಂದು ಸಾರಿಗೆ ಸಚಿವ ಎಚ್.ಎಂ.ರೇವಣ್ಣ ಘೋಷಿಸಿದ್ದರು. ಈ ಬಳಿಕ ಇದೀಗ, ಇಂದಿರಾ ಕ್ಲಿನಿಕ್ ಆರಂಭಗೊಂಡಿದೆ. ರಾಜ್ಯದಲ್ಲಿ ಆರೋಗ್ಯ ಸೇವೆಯನ್ನು ಉತ್ತಮ ಪಡಿಸುವ ನಿಟ್ಟಿನಲ್ಲಿ, ಇಂದಿನಿಂದ ರಾಜ್ಯದ ರಾಜಧಾನಿಯಲ್ಲಿ ಇಂದಿರಾ ಕ್ಲಿನಿಕ್ ಆರಂಭವಾಗಿವೆ.

ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಯೋಜನೆಗಳು, ದಿನದಿಂದ ದಿನಕ್ಕೆ ಪ್ರಸಿದ್ದಿ ಗಳಿಸ್ತಾ ಇವೆ. ಇಂದಿರಾ ಕ್ಯಾಂಟೀನ್ ಪ್ರಸಿದ್ದಿಗೆ ಬಂದ ನಂತ್ರ, ಇಂತಹ ಕ್ಯಾಂಟೀನ್ ಗಳನ್ನು, ರಾಜ್ಯದ ಜಿಲ್ಲಾ ತಾಲ್ಲೂಕು ಕೇಂದ್ರಗಳು ತೆರೆಯುತ್ತಿದೆ. ಈ ಬಳಿಕ ಕಟ್ಟಡ ಕಾರ್ಮಿಕ ಮಹಿಳೆಯರಿಗೆ, ಗಾರ್ಮೆಂಟ್ಸ್ ನಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಇಂದಿರಾ ಪಾಸ್ ರಿಯಾಯಿತಿ ದರದ ಪಾಸ್ ನೀಡಲು ಸಜ್ಜಾಗಿದೆ. ಈ ಎಲ್ಲಾ ಯೋಜನೆಗಳು ಸಾರ್ವಜನಿಕ ವಲಯದಲ್ಲಿ ಬಿಸಿ ಬಿಸಿ ಚರ್ಚೆಯಾಗುತ್ತಿರುವ ಬೆನ್ನಲ್ಲೇ, ಇದೀಗ ರಾಜ್ಯ ಸರ್ಕಾರದಿಂದ ಮತ್ತೊಂದು ಮಹತ್ವದ ಯೋಜನೆ ಇಂದಿನಿಂದ ಆರಂಭವಾಗುತ್ತಿದೆ. ಅದೇ ಇಂದಿರಾ ಕ್ಲಿನಿಕ್.

ಈ ವಿನೂತನ ಯೋಜನೆಯನ್ನು ರಾಜ್ಯಸರ್ಕಾರ, ಮೊದಲ ಪ್ರಯೋಗಾರ್ಥವಾಗಿ, ರಾಜ್ಯ ರಾಜಧಾನಿ, ಯಶವಂತಪುರ, ಮೆಜೆಸ್ಟಿಕ್ ನಲ್ಲಿ ಎರಡು ಕಡೆಯಲ್ಲಿ ಆರಂಭವಾಗಿದೆ. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಹೆಸರಿನಲ್ಲಿ ಪ್ರಾರಂಭವಾಗಿರುವ ಈ ವಿನೂತನ ಕ್ಲಿನಿಕ್, ವಾರದ ಏಳು ದಿನವೂ ಬೆಳಿಗ್ಗೆ 7 ರಿಂದ ರಾತ್ರಿ 9ರ ವರೆಗೆ ಕಾರ್ಯನಿರ್ವಹಿಸಲಿದೆ. ಪ್ರತಿಯೊಂದು ಕ್ಲಿನಿಕ್ ನಲ್ಲಿ ಒಬ್ಬ ವೈದ್ಯರು, ಒಬ್ಬರು ನರ್ಸ್, ಇಬ್ಬರು ಫಾರ್ಮಸಿಸ್ಟ್ ಕಾರ್ಯ ನಿರ್ವಹಿಸಲಿದ್ದಾರೆ.

ಅಂದಹಾಗೇ, ವೈದ್ಯರು ಇಲ್ಲ, ಚಿಕಿತ್ಸೆ ಲಭ್ಯವಿಲ್ಲ ಎಂಬ ಮಾತೇ ಈ ಕ್ಲಿನಿಕ್ ನಲ್ಲಿ ಇಲ್ಲ. ಇಂತಹ ಕ್ಲಿನಿಕ್ ನಲ್ಲಿ ಉಚಿತವಾಗಿ, ವೈದ್ಯಕೀಯ ಸೇವೆ ಸಾರ್ವಜನಿಕರಿಗೆ ಲಭ್ಯವಾಗಲಿದ್ದು, ವೈದ್ಯಕೀಯ ಸೇವೆಯನ್ನು ಉತ್ತಮ ರೀತಿಯಲ್ಲಿ ನೀಡುವ ರಾಜ್ಯ ಸರ್ಕಾರದ ವಿನೂತನ ಯೋಜನೆ ಇದಾಗಿದೆ. ಆದರೇ ಎಷ್ಟರ ಮಟ್ಟಿಗೆ ಯಶಸ್ಸು ಕಾಣುತ್ತದೋ, ಅಥವಾ ಮಾಮೂಲಿ ಇತರೆ ಸರ್ಕಾರಿ ಆಸ್ಪತ್ರೆಗಳಂತೆ ಆಗುತ್ತವೋ ಎಂದು ಮುಂದಿನ ದಿನಗಳಲ್ಲಿ ಕಾದು ನೋಡಬೇಕಿದೆ.

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ಪ್ರೇಯಸಿಯೊಂದಿಗೆ ಪತ್ನಿಯನ್ನೂ ಮರುಮದ್ವೆಯಾದ ಸಿಆರ್‌ಪಿಎಫ್ ಯೋಧ…ಕಾರಣ?

    ರಾಯ್ಪುರ್: ಸಿಆರ್‌ಪಿಎಫ್ ಯೋಧನೊಬ್ಬ ಪ್ರೇಯಸಿ ಮತ್ತು ಪತ್ನಿಯನ್ನು ಮರು ವಿವಾಹವಾಗುವ ಮೂಲಕ ಇಬ್ಬರನ್ನೂ ಏಕಕಾಲಕ್ಕೆ ಮದುವೆಯಾಗಿರುವ ಅಪರೂಪದ ಘಟನೆ ಛತ್ತೀಸ್‍ಗಢದ ಜಾಷ್ಪುರ್ ಜಿಲ್ಲೆಯ ಬಗ್ದೋಲ್ ಗ್ರಾಮ ಪಂಚಾಯಿತಿಯಲ್ಲಿ ನಡೆದಿದೆ. ಜಾಷ್ಪುರ್ ಮೂಲದ ಅನಿಲ್ ಪೈಕ್ರಾ ಇಬ್ಬರು ಮಹಿಳೆಯರನ್ನು ಮದುವೆಯಾದ ಸಿಆರ್‌ಪಿಎಫ್ ಯೋಧ. ಇವರು ಉತ್ತರ ಪ್ರದೇಶದ ವಾರಣಾಸಿಯಲ್ಲಿ ಸಿಆರ್‌ಪಿಎಫ್ ಯೋಧನಾಗಿ ಕಾರ್ಯನಿರ್ವಹಿಸುತ್ತಿದ್ದರು. ಅನಿಲ್ ಪೈಕ್ರಾ ನಾಲ್ಕು ವರ್ಷಗಳ ಹಿಂದೆ ತಮ್ಮ ಗ್ರಾಮದ ಪಕ್ಕದ ಗ್ರಾಮದ ಯುವತಿ ಜೊತೆ ಮದುವೆಯಾಗಿದ್ದರು. ಮದುವೆಯಾಗಿದ್ದರೂ ಅಂಗನವಾಡಿ ಕಾರ್ಯಕರ್ತೆಯಾಗಿ ಕೆಲಸ ಮಾಡುತ್ತಿದ್ದ ಯುವತಿಯನ್ನು…

  • ಕರ್ನಾಟಕ

    ರಾಜ್ಯದ 6000 ಶಿಕ್ಷಕರು ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ..!

    ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ಹೊರಡಿಸಿರುವ ಸೂಚನೆಯೊಂದು ರಾಜ್ಯದ ಶಿಕ್ಷಕರನ್ನು ಆತಂಕಕ್ಕೀಡು ಮಾಡಿದೆ. ಸರ್ಕಾರಿ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳ ಸೇವೆಯಲ್ಲಿರುವ ಶಿಕ್ಷಕರು ಉತ್ತಮ ರೀತಿಯಲ್ಲಿ ವೃತ್ತಿ ತರಬೇತಿ ಮಾಡಿದ್ದಾರೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವಂತೆ, ಇಲ್ಲದಿದ್ದರೆ ಅವರನ್ನು ವಜಾಗೊಳಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ.

  • ಗ್ಯಾಜೆಟ್

    ಈಗ ಬರುತ್ತಿದೆ jio DTH ಬೇರೆ DTH ಸರ್ವಿಸ್ ಗಳಿಗೆ ಶುರುವಾಗಿದೆ ಭಯ..!ತಿಳಿಯಲು ಈ ಲೇಖನ ಓದಿ…

    ಜಿಯೋ ಸೆಟ್‌ ಟಾಪ್‌ ಬಾಕ್ಸ್‌ನ ಚಿತ್ರಗಳು ಈಗಾಗಲೇ ಮಾಧ್ಯಮಗಳಿಗೆ ಸೋರಿ ಹೋಗಿವೆ. ಜಿಯೋ ಸ್ಯಾಟಲೈಟ್‌ ಸೇವೆಯು 50ಕ್ಕೂ ಹೆಚ್ಚು ಎಚ್‌ಡಿ ಚ್ಯಾನಲ್‌ಗ‌ಳು ಸೇರಿದಂತೆ 300ಕ್ಕೂ ಹೆಚ್ಚು ಚ್ಯಾನಲ್‌ಗ‌ಳನ್ನು ಒಳಗೊಂಡಿರುತ್ತವೆ ಎನ್ನಲಾಗಿದೆ.

  • ಸುದ್ದಿ

    ಇಲ್ಲಿ ಮದ್ವೆ ಆಗ್ದೆ ಇರೋ ಯುವಕ,ಯುವತಿ ಒಂದೇ ಗಾಡಿಯಲ್ಲಿ ಓಡಾಡಿದ್ರೆ ಮುಗೀತು..?ತಿಳಿಯಲು ಈ ಲೇಖನ ಓದಿ…

    *ನಮ್ಮ ಪೇಜ್ ಲೈಕ್ ಮಾಡಿ ಶೇರ್ ಮಾಡಿ* ಕೆಲವೊಂದು ದೇಶಗಳ ಕಾನೂನುಗಳೇ ತುಂಬಾ ವಿಚಿತ್ರ ನೋಡಿ.ಯಾಕಂದ್ರೆ ಈ ದೇಶದಲ್ಲಿ ಮದುವೆ ಆಗದೆ ಇರೋ ಹುಡುಗ ಹುಡುಗಿ ಜೊತೆಯಲ್ಲಿ ಒಂದೇ ಬೈಕಿನಲ್ಲಿ ಕುಳಿತು ಓಡಾಡುವ ಹಾಗಿಲ್ಲವಂತೆ.ಒಂದು ವೇಳೆ ಓಡಾಡಿದ್ರೆ ಕಾನೂನಿನ ಪ್ರಕಾರ ಅಪರಾಧವಂತೆ. ಇದಕ್ಕೆ ಕಾರಣ ಇದೆ. ಅವಿವಾಹಿತ ಯುವಕ ಯುವತಿಯರು ಒಂದೇ ಬೈಕಿನಲ್ಲಿ ಪ್ರಯಾಣಿಸಿದರೆ ಯೌವ್ವನ ಸಹಜವಾದ ತಪ್ಪುಗಳು ನಡೆಯಬಹುದೆಂಬ ಕಾರಣಕ್ಕೆ ಈ ದೇಶದಲ್ಲಿ ನಿಷೇಧವನ್ನು ಹೇರಲಾಗಿದೆಯಂತೆ. ಈ ಕಾನೂನು ಮಾಡಿರುವುದು ಎಲ್ಲಿ..? ಈ ಕಾನೂನನ್ನು ಇಂಡೋನೇಷ್ಯಾದಲ್ಲಿ…

  • ಸುದ್ದಿ

    ಪೊಲೀಸ್ ಠಾಣೆಯಲ್ಲಿ ಆರೋಪಿಯ ಬರ್ತ್‌ಡೇ ಸೆಲೆಬ್ರೇಷನ್….!

    ಇಲ್ಲಿನ ವಿದ್ಯಾರಣ್ಯ ಪೊಲೀಸ್ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿ, ಆತನ ಬರ್ತ್‌ಡೇ ಪಾರ್ಟಿ ಆಚರಿಸಿದ್ದಾರೆ. ತಾನು ಪೊಲೀಸ್ ಎಂದು ಯಾಮಾರಿಸುತ್ತಿದ್ದ ಆರೋಪಿಯನ್ನು ಬಂಧಿಸಿ, ಠಾಣೆಗೆ ಕರೆದೊಯ್ದ ವಿದ್ಯಾರಣ್ಯಪುರ ಪೊಲೀಸರು, ಠಾಣೆಯಲ್ಲಿ ಕೇಕ್ ಕತ್ತರಿಸಿ, ಆತನ ಬರ್ತ್‌ಡೇ ಸೆಲೆಬ್ರೇಟ್ ಮಾಡಿದ್ದಾರೆ. ಅಭಿಷೇಕ್ (25) ಬಂಧಿತ ಆರೋಪಿಯಾಗಿದ್ದು, ಪದವಿಧರನಾಗಿದ್ದಾನೆ. ಈತ ತಾನು ವಿದ್ಯಾರಣ್ಯಪುರ ಕ್ರೈಂ ಪಿಸಿ ಎಂದು ಹೇಳಿಕೊಂಡಿದ್ದ. ಎನಕೌಂಟರ್‌ಗೆ ಹುಬ್ಬಳ್ಳಿ ಮತ್ತು ಗೋವಾಗೆ ಹೋಗ್ಬೇಕು ಗಾಡಿಲಿ ಎಸಿ ಇಲ್ಲ ಎಂದು ಐಡಿ ಕಾರ್ಡ್ ತೋರಿಸಿ ನಂಬಿಸಿದ್ದ. ಈತನ ಮಾತು…