ಈಗ ಎಲ್ಲದಕ್ಕೂ ಒಂದೇ ಕಾರ್ಡ್ – ಅದುವೇ ಆಧಾರ್ ಕಾರ್ಡ್.ಸರ್ಕಾರ ಎಲ್ಲ ವ್ಯವಹಾರ ಮತ್ತು ಸೌಲಭ್ಯಗಳಿಗೆ ಆಧಾರ್ ಕಾರ್ಡ್ ಕಡ್ಡಾಯ ಮಾಡುತ್ತಿರುವ ಸಂಗತಿ ನಮಗೆಲ್ಲ ತಿಳಿದಿದೆ. 12 ಅಂಕೆಗಳ ಆಧಾರ್ ನಂಬರ್ ಪ್ರತಿಯೊಬ್ಬ ಭಾರತೀಯನ ಗುರುತು ಹಾಗೂ ಹೆಮ್ಮೆಯ ಸಂಖ್ಯೆಯಾಗಿ ಮಾರ್ಪಟ್ಟಿದೆ.

ಆದರೆ ಆಧಾರ್ ಕಾರ್ಡ್ ಅರ್ಜಿ ತುಂಬುವ ಸಂದರ್ಭದಲ್ಲಿ, ನಮ್ಮ ಹೆಸರು, ವಿಳಾಸ, ಲಿಂಗ, ಹುಟ್ಟಿದ ದಿನ, ಮೊಬೈಲ್ ಸಂಖ್ಯೆ, ಇ-ಮೇಲ್ ಐಡಿ ಮುಂತಾದ ಮಾಹಿತಿಗಳನ್ನು ದಾಖಲಿಸುವಾಗ ಸಹಜವಾಗಿಯೇ ತಪ್ಪುಗಳಾಗಿರುತ್ತವೆ. ಇಂತಹ ತಪ್ಪುಗಳಿಂದಾಗಿ ತುಂಬಾ ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ. ಹಾಗಾದ್ರೆ ಇದಕ್ಕೆ ಬೇರೆ ಏನಾದ್ರೂ ಮಾರ್ಗವಿದಯೇ ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡಿರಬಹುದು.

ಹೌದು, ಇಂತಹ ತಪ್ಪುಗಳನ್ನು ನೀವೇ ಸ್ವತಹ ಅಪ್‌ಡೇಟ್ ಮಾಡಿಕೊಳ್ಳಬಹುದು.ಹೇಗಂತೀರಾ!ಅದಕ್ಕಾಗಿ ಇಲ್ಲೊಂದು ಮಾರ್ಗದರ್ಶಿ ಇದೆ, ಮುಂದೆ ಓದಿ…
ಆಧಾರ್ ಕಾರ್ಡ್‌ನಲ್ಲಿ ತಪ್ಪಾಗಿ ದಾಖಲಾಗಿರುವ ನಿಮ್ಮ ಖಾಸಗಿ ದಾಖಲೆಗಳನ್ನು ಸರಿಪಡಿಸಲು ನೀವು ಪ್ರಪ್ರಥಮವಾಗಿ ಯುಐಡಿಎಐ ವೆಬ್ ಸೈಟ್ ಸಂದರ್ಶಿಸಬೇಕು.

- ಆಧಾರ್ ವೆಬ್ಸೈಟ್’ಗೆ ಭೇಟಿ ನೀಡಿ:-
ಆಧಾರ್ ಕಾರ್ಡ್ ನಲ್ಲಿ ಬದಲಾವಣೆ ಮಾಡಲು ಅಥವಾ ಅಪ್ಡೇಟ್ ಮಾಡಲು ಯುಐಡಿಎಐ ಆಧಾರ್ ಕಾರ್ಡ್ ಸೆಲ್ಪ್ ಸರ್ವಿಸ್ ಅಪ್ಡೇಟ್ ಪೋರ್ಟಲ್ ಪರಿಚಯಿಸಿದೆ.(https://ssup.uidai. gov.in/web/guest/update). ಈ ಪೋರ್ಟಲ್ ಗೆ ಭೇಟಿ ಕೊಟ್ಟ ನಂತರ ನಿಮ್ಮ ಆಧಾರ್ ನಂಬರ್ ಎಂಟರ್ ಮಾಡಿ. ತದನಂತರ ನಿಮ್ಮ ಮೊಬೈಲ್ ನಂಬರ್ ಗೆ ಒಟಿಪಿ ಕೋಡ್ ಬರುತ್ತದೆ.ಕೆಲವೊಂದು ಮುಖ್ಯ ಖಾಸಗಿ ವಿವರಗಳನ್ನು ಸರಿಪಡಿಸಲು ಅಗತ್ಯವಿರುವ ದಾಖಲೆಪತ್ರಗಳನ್ನು ಸಲ್ಲಿಸಬೇಕಾಗುವುದು; ಆದರೆ ಮೊಬೈಲ್ ಸಂಖ್ಯೆ, ಲಿಂಗ, ವಿಳಾಸ ಮುಂತಾದ ವಿವರಗಳಲ್ಲಿನ ತಪ್ಪುಗಳನ್ನು ಸರಿಪಡಿಸಲು ಯಾವುದೇ ದಾಖಲೆ ಪತ್ರಗಳು ಬೇಕಾಗಿಲ್ಲ.

ಮೇಲಿನ ಚಿತ್ರದಲ್ಲಿ ತೋರಿಸದಂತೆ ನಿಮ್ಮ ಆಯ್ಕೆಯನ್ನು ನೀವು ಕ್ಲಿಕ್ ಮಾಡುವ ಮೂಲಕ ಆಯ್ದುಕೊಳ್ಳಬೇಕು.


ನಿಮ್ಮ ಆಧಾರ್ ನಂಬರ್ ಎಂಟರ್ ಮಾಡಿದಾಕ್ಷಣ ನಿಮಗೆ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯ ಪೋನಿಗೆ ಒನ್ ಟೈಮ್ ಪಾಸ್‌ವರ್ಡ್ (ಓಟಿಪಿ) ಬರುತ್ತದೆ.
ಟೆಕ್ಸ್‌ಟ್ ವೆರಿಫಿಕೇಶನ್ ಬಾಕ್ಸ್‌ನಲ್ಲಿ ನೀವು ನಿಮಗೆ ದೊರಕಿರುವ ಓಟಿಪಿಯನ್ನು ಎಂಟರ್ ಮಾಡಬೇಕು. ಅದಕ್ಕಾಗಿ ನಿಮ್ಮ ಕಂಪ್ಯೂಟರ್ ಪರದೆಯಲ್ಲಿ ಈ ಚಿತ್ರವು ಕಾಣಿಸಿಕೊಳ್ಳುತ್ತದೆ :

- ಏನೆಲ್ಲಾ ಅಪ್ಡೇಟ್ ಮಾಡಬಹುದು?
ಯುಐಡಿಎಐ ಆನ್ಲೈನ್ ಪೋರ್ಟಲ್ ಮೂಲಕ ಹೆಸರು, ಲಿಂಗ, ಜನ್ಮದಿನಾಂಕ, ವಿಳಾಸ, ಮೊಬೈಲ್ ನಂಬರ್, ಇ-ಮೇಲ್ ವಿಳಾಸ ಅಪ್ಡೇಟ್ ಅಥವಾ ಬದಲಾವಣೆ ಮಾಡಬಹುದು.

ಬದಲಾವಣೆಯ ಎಲ್ಲ ಪ್ರಕ್ರಿಯೆಗಳು ಮುಗಿದ ಬಳಿಕ ನೀವು “ಸಬ್‌ಮಿಟ್’ ಮಾಡಬೇಕಾಗುತ್ತದೆ. ಅದು ನಿಮ್ಮ ಕಂಪ್ಯೂಟರ್ ಪರದೆಯಲ್ಲಿ ಈ ರೀತಿಯಾಗಿ ಗೋಚರವಾಗುತ್ತದೆ.

ಇದೆಲ್ಲವೂ ಮುಗಿದ ಬಳಿಕ ನಿಮಗೆ ಯುಆರ್‌ಎನ್ ನಂಬರ್ ಸಿಗುತ್ತದೆ. ಈ ನಂಬರನ್ನು ನೀವು ಜಾಗ್ರತೆಯಾಗಿ ಇರಿಸಿಕೊಂಡು ನೀವು ಮಾಡಿರುವ ಬದಲಾವಣೆ/ತಿದ್ದುಪಡಿಗಳು ಕಾರ್ಯಗತವಾಗುವುದನ್ನು ಆನ್‌ಲೈನ್‌ನಲ್ಲೇ ತಿಳಿದುಕೊಳ್ಳಬಹುದು.