ದಿವಂಗತ ಅಂಬರೀಶ್ ಅವರ ಜಯಂತಿಯಾದ ಇಂದು ಪತ್ನಿ ಹಾಗೂ ಮಂಡ್ಯ ಸಂಸದೆ ಸುಮಲತಾ ಅವರು ಇಂದು ಕಂಠೀರವ ಸ್ಟುಡಿಯೋದಲ್ಲಿ ಅಂಬರೀಶ್ ಅವರ ಸ್ಮಾರಕಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಮಂಡ್ಯ ಸಂಸದರಾಗಿ ಆಯ್ಕೆ ಆಗಿರುವ ಸುಮಲತಾ ಅವರು ಇಂದು ಬೆಳಿಗ್ಗೆಯೇ ಕಂಠೀರವ ಸ್ಟುಡಿಯೋಕ್ಕೆ ತೆರಳಿ ಅಂಬರೀಶ್ ಸ್ಮಾರಕಕ್ಕೆ ಮಗ ಅಭಿಶೇಕ್ ಅವರೊಂದಿಗೆ ಸೇರಿ ಪೂಜೆ ಸಲ್ಲಿಸಿದರು.
ನೆರೆದಿದ್ದ ಅಭಿಮಾನಿಗಳೊಂದಿಗೂ ಸುಮಲತಾ ಅವರು ಕೆಲ ಕಾಲ ಮಾತನಾಡಿದರು. ಅಭಿಶೇಕ್, ರಾಕ್ಲೈನ್ ವೆಂಕಟೇಶ್ ಇನ್ನೂ ಹಲವು ಅಭಿಮಾನಿಗಳು, ಚಿತ್ರರಂಗದ ಪ್ರಮುಖರು ಈ ಸಂದರ್ಭದಲ್ಲಿ ಅಲ್ಲಿ ಹಾಜರಿದ್ದರು.
ಸ್ಮಾರಕಕ್ಕೆ ಪೂಜೆ ಸಲ್ಲಿಸಿದ ಬಳಿಕ, ಸುಮಲತಾ, ಅಭಿಶೇಖ್, ರಾಕ್ಲೈನ್ ವೆಂಕಟೇಶ್ ಅವರುಗಳು ಮಂಡ್ಯದತ್ತ ತೆರಳಿದರು. ಮಂಡ್ಯದಲ್ಲಿ ಇಂದು ಸ್ವಾಭಿಮಾನಿ ಅಭಿನಂದನಾ ಸಮಾವೇಶ ಆಯೋಜನೆ ಮಾಡಲಾಗಿದ್ದು, ಸುಮಲತಾ ಅವರು ಇಂದು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.
ಭಾರಿ ನಿರೀಕ್ಷೆಯನ್ನು ಈ ಸಮಾವೇಶ ಹುಟ್ಟುಹಾಕಿದ್ದು, ಸುಮಲತಾ ಅವರೊಂದಿಗೆ ದರ್ಶನ್, ಯಶ್ ಅವರೂಗಳೂ ಸಹ ಭಾಗವಹಿಸುತ್ತಿದ್ದಾರೆ. ಮಂಡ್ಯದ ಜಿದ್ದಾ-ಜಿದ್ದಿನ ಲೋಕಸಮರದಲ್ಲಿ ಭಾರಿ ಅಂತರದಲ್ಲಿ ಜಯಿಸಿ ಎದುರಾಳಿಗಳಿಗೆ ಕೃತಿಯ ಮೂಲಕ ಈಗಾಗಲೇ ಉತ್ತರಿಸಿರುವ ಸುಮಲತಾ ಅವರು ಮಾತಿನ ಮೂಲಕ ಇಂದು ಉತ್ತರಿಸಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ.
ಕೋಲಾರ ನಗರದ ಪ್ರಧಾನ ಅಂಚೆ ಕಚೇರಿಯಲಿ ಶನಿವಾರ ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಯಡಿ ಕೋಲಾರ ಜಿಲ್ಲೆಯ ಟೊಮೇಟೋ ಕುರಿತು ವಿಶೇಷ ಅಂಚೆ ಲಕೋಟೆಯನ್ನು ಬಿಡುಗಡೆ ಮಾಡಲಾಯಿತು. ಇತ್ತೀಚಿನ ದಿನಗಳಲ್ಲಿ ಟೊಮೇಟೋ ಕೋಲಾರ ಜಿಲ್ಲೆಯ ಪ್ರಧಾನ ತೋಟಗಾರಿಕೆ ಬೆಳೆಯಾಗಿ ಹೊರ ಹೊಮ್ಮಿದೆ. ರೈತರು ವರ್ಷದ ೩೬೫ ದಿನವೂ ಟೊಮೇಟೋವನ್ನು ಬೆಳೆಯುತ್ತಿದ್ದಾರೆ. ಕೋಲಾರದ ಎಪಿಎಂಸಿ ಮಾರುಕಟ್ಟೆಯೂ ಏಷ್ಯಾದ ಎರಡನೇ ಅತಿ ದೊಡ್ಡ ಟೊಮೇಟೋ ಮಾರುಕಟ್ಟೆಯಾಗಿ ಪ್ರಸಿದ್ಧಿ ಪಡೆದಿದೆ. ಈ ಹಿನ್ನೆಲೆಯಲ್ಲಿ ಟೊಮೇಟೋ ಬೆಳೆಯನ್ನು ಕೋಲಾರದ ಒಂದು ಜಿಲ್ಲೆ ಒಂದು…
ಚೈತ್ರಾ ಕೋಟೂರ್ ವೈಲ್ಡ್ ಕಾರ್ಡ್ ಎಂಟ್ರಿಯಾಗಿ ಎರಡನೇ ಬಾರಿಗೆ ಬಿಗ್ ಬಾಸ್ ಮನೆಗೆ ಬಂದಾಗ ಅಲ್ಲಿದ್ದವರೆಲ್ಲರಿಗೂ ತುಂಬಾನೇ ಶಾಕ್ ಆಗಿತ್ತು. ಚೈತ್ರಾ ಅವರು ಬಿಗ್ ಬಾಸ್ ಮನೆಗೆ ಬಂದಾಗ ಅಲ್ಲಿದ್ದವರು ಎಲ್ಲರೂ ಚೈತ್ರಾರವರನ್ನೇ ನೋಡುತ್ತಿದ್ದರು ಅವರು ಧರಿಸಿರುವ ವಸ್ತ್ರವಿನ್ಯಾಸ ಕೂಡ ಬದಲಾಗಿದ್ದೂ, ಬಿಗ್ ಮನೆಯ ಸ್ಪರ್ಧಿಗಳಿಗೆ, ಅಷ್ಟೇ ಅಲ್ಲದೆ ಪ್ರೇಕ್ಷಕರಿಗೂ ಕೂಡ ಶಾಕ್ ನೀಡಿದೆ. ಚೈತ್ರಾ ಡ್ರೆಸ್ಸಿಂಗ್ ಸೆನ್ಸ್ ಬದಲಾಗಿದ್ದೇಕೆ? “ನಾನು, ಚಂದನ್ ಯಾವಾಗಲೂ ಟಾರ್ಗೆಟ್ ಆಗಿರುತ್ತಿದ್ದೆವು, ಏನೆ ಕಮೆಂಟ್ ಬಂದರೂ, ಬಿರುದು ಅದನ್ನು ನಾನು ನಗುನಗುತ್ತ…
ಅಂಬರೀಷ್ ಹಾಗು ಇಂಧನ ಸಚಿವ ಡಿ ಕೆ ಶಿವಕುಮಾರ್ ಅವರ ನಡುವೆ ಎಂದು ವಾಕ್ ಸಮರ ಎರ್ಪಟ್ಟಿದೆ. ಈ ನಿಟ್ಟಿನಲ್ಲಿ ಇಂಧನ ಖಾತೆ ಸಚಿವ ಡಿ.ಕೆ.ಶಿವಕುಮಾರ್ ವಿರುದ್ಧ ಹಿರಿಯ ಕಾಂಗ್ರೆಸ್ ಮುಖಂಡ ಅಂಬರೀಶ್ ಗರಂ ಆಗಿದ್ದಾರೆ.
ಸೇಬು ಗುಲಾಬಿ ಕುಟುಂಬದಲ್ಲಿನ (ರೋಸೇಸೀ) ಜಾತಿಯಾದ ಮೇಲಸ್ ಡೊಮೆಸ್ಟಿಕಾಕ್ಕೆ ಸೇರಿದ ಪೋಮ್ ಲಕ್ಷಣಗಳಿರುವ ಸೇಬಿನ ಮರದ ಹಣ್ಣು ಅದು ಅತ್ಯಂತ ವ್ಯಾಪಕವಾಗಿ ಬೇಸಾಯಮಾಡಲಾದ ಮರಹಣ್ಣುಗಳ ಪೈಕಿ ಒಂದು, ಮತ್ತು ಮಾನವರಿಂದ ಬಳಸಲಾಗುವ ಮೇಲಸ್ಪಂಗಡದ ಅನೇಕ ಸದಸ್ಯಗಳ ಪೈಕಿ ಅತ್ಯಂತ ವ್ಯಾಪಕವಾಗಿ ಪರಿಚಿತವಾಗಿರುವ ಸದಸ್ಯವಾಗಿದೆ. ಈ ಮರವು ಮಧ್ಯ ಏಷ್ಯಾದ ಮೂಲದ್ದು, ಮತ್ತು ಇಂದೂ ಕೂಡ ಇದರ ಕಾಡುಪೂರ್ವಜವನ್ನು ಇಲ್ಲಿ ಕಾಣಬಹುದು. ಸೇಬು ಮೂಲತಃ ಸಮಶೀತೋಷ್ಣ ವಲಯದ ಬೆಳೆ. ಕಪ್ಪು ಸಮುದ್ರ ಮತ್ತು ಕ್ಯಾಸ್ಪಿಯನ್ ಸಮುದ್ರ ನಡುವಿನ ಭೂಭಾಗವು ಇದರ ಮೂಲ ಪ್ರದೇಶವೆಂದು ತಿಳಿಯಲಾಗಿದ್ದು,ನಂತರ ಈ ಬೆಳೆ ಸಮಶೀತೋಷ್ಣ ವಲಯದ ಎಲ್ಲ…
‘ಬಿಗ್ ಬಾಸ್ ಕನ್ನಡ ಸೀಸನ್ 7’ ನಿನ್ನೆ (ಅಕ್ಟೋಬರ್ 13) ಅದ್ದೂರಿಯಾಗಿ ಶುಭಾರಂಭವಾಗಿದೆ. ಒಟ್ಟು 18 ಜನ ಸ್ಪರ್ಧಿಗಳು ಕಾಲಿಟ್ಟಿದ್ದಾರೆ. ಬಿಗ್ ಬಾಸ್ ಮನೆ ಪ್ರವೇಶ ಮಾಡಿದ ಸ್ಪರ್ಧಿಗಳ ಯಾರ್ಯಾರು ಒಂದು ಕಿರು ನೋಟ ಇಲ್ಲಿದೆ. ಕಿರುತೆರೆ ಕಲಾವಿದರು, ಗಾಯಕರು, ಲೇಖಕರು ಈ ಬಾರಿ ಪ್ರವೇಶ ಪಡೆದುಕೊಂಡಿದ್ದಾರೆ.ಹಾಸ್ಯ ನಟ ಕುರಿ ಪ್ರತಾಪ್ ರಿಂದ ಶುರುವಾದ ಬಿಗ್ ಬಾಸ್ ಮನೆ ಪ್ರವೇಶ ನಟ ಹರೀಶ್ ರಾಜ್ ಮೂಲಕ ಅಂತ್ಯವಾಯಿತು. ಹಿರಿಯ ಪತ್ರಕರ್ತ ರವಿ ಬೆಳಗೆರೆ,.. ಹಿರಿಯ ನಟ ಜೈಜಗದೀಶ್, ಹಾಸ್ಯ ನಟ ರಾಜು ತಾಳಿಕೋಟೆ, ಅಗ್ನಿಸಾಕ್ಷಿ ನಟಿ…
ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕಚಿಂತಕರು 9663218892 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗೂನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನುಅಳಿಸಬಹುದು ಮತ್ತು ಪ್ರಶ್ನೆಗಳಿಗೆಉತ್ತರಿಸಬಹುದುಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 11 ದಿನದಲ್ಲಿ ಶಾಶ್ವತ ಪರಿಹಾರ 966 321 8892 ಮೇಷ(28 ಮಾರ್ಚ್, 2019) ನಿಮ್ಮ ಸಾಮಾನ್ಯ ಜ್ಞಾನದ ಜೊತೆಗೆ ನಿಮ್ಮ ನಿರಂತರ ಪ್ರಯತ್ನ ಖಂಡಿತವಾಗಿಯೂ ಯಶಸ್ಸು ತರುವುದರಿಂದ…