ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಬೆಳಿಗ್ಗೆ ಎದ್ದಾಗ ನೀವ್ ಮಾಡೋ ಕೆಲಸ ನಿಮ್ಮ ದಿನ ಹೇಗಿರುತ್ತೆ ಅಂತ ನಿರ್ಧಾರ ಮಾಡುತ್ತೆ. ಆದ್ರಿಂದ ಒಳ್ಳೆ ಹವ್ಯಾಸಗಳ್ನ ಬೆಳಗ್ಗಿನ ಹೊತ್ತು ರೂಢಿಸಿಕೊಲ್ಲಿ ಹಾಗೂ ಬೇಗ ಎಚ್ಚರಗೊಳ್ಳಿ. ನೀವು ಇಡೀ ದಿನ ಸಂತೋಷವಾಗಿರುತ್ತೀರಿ.
ಕೆಟ್ಟದಾಗಿ ದಿನ ಶುರುವಾದ್ರೆ ದಿನವಿಡೀ ಏನೋ ಸರಿ ಇಲ್ವಲ್ಲ ಅನ್ನೋಹಾಗೆ ಮಾಡುತ್ತೆ. ರಾತ್ರಿ ನಿದ್ದೆ ಸರಿಯಾಗ್ ಆದ್ರೆ ಬೆಳಿಗ್ಗೆ ಹರ್ಷವಾಗಿರ್ತೀವಿ. ನಿದ್ರೆ ತುಂಬ ಅಗತ್ಯ ನಮ್ಗೆ. ವಿಶ್ರಾಂತಿ ನಂತರ ಒಳ್ಳೆ ಅಭ್ಯಾಸ ರೂಢಿಸಿಕೊಂಡ್ರೆ ದಿನವೆಲ್ಲಾ ಹುಮ್ಮಸ್ಸಿಂದ ಇರ್ತೀವಿ. ಹುರುಪಿಂದ ಕೆಲಸ ಮಾಡ್ತೀವಿ. ಆದ್ರಿಂದ ಈ ಅಭ್ಯಾಸಗಳ್ನ ಶುರು ಹಚ್ಕೊಳಿ.
ಮೊಬೈಲ್ನ ಮಲ್ಗೊವಾಗ ಪಕ್ಕದಲ್ಲೇ ಇಟ್ಕೊಂಡ್ರೆ ಬೆಳಿಗ್ಗೆ ಎದ್ದಾಗ ಬೇಡ ಅಂದ್ರೂ ನೋಡ್ಬೇಕು ಅನ್ಸತ್ತೆ ಅಲ್ವಾ. ಅದ್ಕೆ ಒಂದ್ ಸಣ್ಣ ಪುಸ್ತಕನೋ ಸಣ್ಣ ಚೀಟಿಯನ್ನೋ ಇಟ್ಕೊಳಿ. ಅದ್ರಲ್ಲಿ ನಿಮ್ ಗುರಿ, ನಾಳೆ ಮಾಡ್ಬೇಕಾದ ಕೆಲ್ಸಗಳ್ನ ಬರ್ದಿಟ್ಕೊಳಿ. ಇದನ್ನ ಎದ್ದ ತಕ್ಷಣ ನೋಡಿ.
ಬೆಳಿಗ್ಗೆ ಎದ್ದ ತಕ್ಷಣ ತುಂಬಾ ಕೆಲ್ಸ ಇದೆ ಆದ್ರೆ ಎನ್ ಮಾಡ್ಬೇಕು ಅಂತಾನೇ ಗೊತ್ತಾಗ್ತ ಇಲ್ಲ ಅನ್ನೋ ಗೊಂದಲಕ್ಕೆ ಬೀಳ್ದೇ ನೀವ್ ಮಾಡ್ಕೊಂಡಿರೋ ನೋಟ್ಸಗಳ್ನ ನೋಡಿ, ದಿನ ಹೇಗಿರ್ಬೇಕು ಅಂತ ಪ್ಲಾನ್ ಮಾಡ್ಕೊಂಡು ದಿನ ಆರಂಭಿಸಿ.
ಧ್ಯಾನ ಮಾಡೊದ್ರಿಂದ ನಮ್ ಮನಸ್ಸಿಗೆ ಖುಷಿ ಸಿಗತ್ತೆ. ರೀಸರ್ಚ್ ಪ್ರಕಾರ ಧ್ಯಾನ ಮಾಡೊದ್ರಿಂದ ಪಾಸಿಟಿವ್ ಆಗಿರ್ತೀವಿ, ನಮ್ಮಲ್ಲಿರೋ ಕ್ರಿಯೀಟಿವಿಟಿ ಹೊರಬರತ್ತೆ.
ಧ್ಯಾನ ಅಂದ ತಕ್ಷಣ ಅರ್ಧ ಗಂಟೆನೋ ಒಂದ್ ಗಂಟೆನೋ ಕಷ್ಟ ಪಟ್ಟು ಕೂತ್ಕೊಬೇಕಿಲ್ಲ. 5-10 ನಿಮಿಷ ಉಸಿರಾಟ ಗಮನಿಸಿ, ಮನ್ಸನ್ನ ಕೇಂದ್ರಿಕರಿಸಿ, ಸ್ವಲ್ಪ ಹೊತ್ತು ಕೂತಿರಿ ಸಾಕು. ನಿಧಾನವಾಗಿ ಅದು 5-10 ನಿಮಿಷದಿಂದ 15-30 ನಿಮಿಷ ಆಗುತ್ತೆ, ಒಂದ್ ಗಂಟೆನೂ ಆಗ್ಬೋದು.
ಇದೊಂತರ ಧ್ಯಾನದ ತರಾನೇ. ತುಂಬಾನೇ ಪರಿಣಾಮಕಾರಿಯಾದ ವಿಧಾನ. ಆಗೋದಕ್ಕಿಂತ ಮುಂಚೆನೇ ಹೀಗೆ ಆಗ್ಬೇಕು ಇಲ್ಲ ಹೀಗೆ ಆಗ್ಬಿಟ್ರೆ ಅದಕ್ಕೆ ಹೇಗೆ ತಯಾರಿರ್ಬೇಕು ಅನ್ನೋದನ್ನ ಕಲ್ಪನೆ ಮಾಡ್ಕೊಳ್ಳೊದು. ನನ್ನ ದಿನ ಪೂರ್ತಿ ಈ ತರಾನೇ ಇರ್ಬೇಕು ಅನ್ನೋ ಕಲ್ಪನೆ ಮಾಡ್ಕೊಂಡ್ರೆ ಅದೇ ತರ ಇರೋ ಹಾಗೆ ನೀವ್ ಪ್ರಯತ್ನಿಸ್ತೀರ.
ಉದಾಹರ್ಣೆಗೆ ಮಾಡ್ಬೇಕಾಗಿರೋ ಕೆಲ್ಸಾನ ಕಲ್ಪಿಸಿಕೊಳ್ಳಿ, ಹೇಗೆ ನಿರ್ವಹಿಸ್ತೀರ ಅಂತ ಮುಂಚೆನೇ ನಿರ್ಧರಿಸಿ. ಇದು ನಿಮಗೆ ಕೆಲಸದ ಬಗ್ಗೆ ಜವಾಬ್ದಾರಿ ಮೂಡ್ಸತ್ತೆ. ತೊಂದ್ರೆ ಇಲ್ದೇ ಕೆಲ್ಸ ಮಾಡಿ ಮುಗಿಸೋಹಾಗಾಗತ್ತೆ.
ಇಷ್ಟೇ ಸಾಕು ದಿನ ಪೂರ್ತಿ ಪಾಸಿಟಿವ್ ಆಗಿರಕ್ಕೆ. ಇದೇನು ಕಷ್ಟದ ಕೆಲ್ಸ ಅಲ್ಲ, ತುಂಬಾನೇ ಪ್ರಯೋಜವಕಾರಿ ವಿಧಾನ.
ಈ ಹವ್ಯಾಸ ನಿಮ್ ಮನ್ಸಿಗೂ ನಿಮ್ ದೇಹಕ್ಕೂ ಶಕ್ತಿ ಕೊಡೊವಂತದ್ದು. ಬಿಸಿ ಬಿಸಿಯಾದದ್ದು ಕುಡೀರಿ ಅಂದಾಕ್ಷಣ ಕಾಫಿ ಟೀ ಓಕೆ ನಾ ಅಂತೀರಿ ಅಲ್ವಾ? ಯಾವ್ದಾದ್ರೂ ಆಯ್ತು ಪರವಾಗಿಲ್ಲ ಬಿಸಿ ಬಿಸಿ ಇದ್ರೆ ಸಾಕು. ಪ್ರತಿ ಗುಟುಕು ಕುಡಿಯೋವಾಗ ಅದ್ನ ಆನಂದಿಸಿ. ಬಿಸಿ ಬಿಸಿಯಾಗಿರೋದ್ರಿಂದ ಅದು ಹೊಟ್ಟೆಗೆ ಹೋಗೋದನ್ನ ಗಮನಿಸ್ಬೋದು, ಈ ಅನುಭವನ ಆಸ್ವಾದಿಸಿ.
ಬೆಳಗ್ಗೆ ಹಾಸಿಗೆ ಬಿಟ್ಟು ಬರಕ್ಕೆ ಯಾರ್ಗೂ ಮನಸ್ಸಿರಲ್ಲ. ತುಂಬ ಬೇಜಾರ್ ಮಾಡ್ಕೊಂಡು ಯಾರ್ದೋ ಕಷ್ಟಕ್ಕೆ ಏಳ್ತೀವಿ. ಒಂಚೂರ್ ಮನಸ್ಸು ಮಾಡಿ… ಬಲ್ಗಡೆಗೆ ಹೊರ್ಳಿ ಎದ್ದು ಕೂತ್ಕಳಿ. ನಿಧಾನವಾಗಿ ಎರಡೂ ಕಾಲನ್ನ ನೆಲದ ಮೇಲೆ ಇಟ್ಟು ನೇರವಾಗಿ ನಿಂತ್ಕೊಳ್ಳಿ. ಇದ್ರಿಂದ ನಿಮ್ಮ ಹೃದಯ ಮತ್ತೆ ಬೆನ್ನಿಗೆ ಒಳ್ಳೇದು.
ಬೆಳಿಗ್ಗಿನ ತಿಂಡಿ ಅನ್ನೋದು ನಿಮ್ ದಿನದ ಅತೀ ಮುಖ್ಯವಾದ ಆಹಾರ. ವಿಪರ್ಯಾಸ ಅಂದ್ರೆ ತುಂಬಾ ಜನ್ರು ಕಾಲೇಜು ಆಫಿಸಿಗೆ ಹೋಗೋ ಆತ್ರದಲ್ಲಿ ತಿಂಡಿನ ತಿನ್ನದೇ ಇಲ್ಲ. ಟಿಂಡಿ ದಿನ ಪೂರ್ತಿ ಕೆಲ್ಸ ಮಾಡಕ್ಕೆ ಶಕ್ತಿ ಕೊಡುತ್ತೆ, ಚೈತನ್ಯದಿಂದ ಇರ್ಲಿಕ್ಕೆ ಸಹಾಯ ಮಾಡತ್ತೆ. ಅದಿಕ್ಕೆ ಇನ್ಮೇಲೆ ತಿಂಡಿ ತಿನ್ನದ್ ಮಿಸ್ ಮಾಡ್ಬೇಡಿ.
ಇನ್ಮೇಲೆ ಆದರೂ ಎದ್ದಾಗ ಈ ತರದ ಅಭ್ಯಾಸಗಳನ್ನು ಶುರು ಹಚ್ಕೊಳ್ಳಿ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಬೆಕ್ಕುಗಳೆಂದ್ರೆ ಯಾರಿಗಿಷ್ಟ ಇಲ್ಲ ಹೇಳಿ. ಮುದ್ದು ಮುದ್ದಾಗಿ ಮಿಯಾಂವ್ ಮಿಯಾಂವ್ ಅನ್ಕೊಂಡು ಮನೆಯಲ್ಲಿ ಅತ್ತಿಂದಿತ್ತ ಓಡಾಡ್ತಾ, ಮನೆಗೆ ಬಂದ್ರೆ ತನ್ನ ಮೈ ಉಜ್ಕೊಂಡು, ಚೇಷ್ಟೆ ಮಾಡ್ಕೊಂಡಿರುತ್ತೆ. ಅದರ ಈ ಚೇಷ್ಟೆಗಳನ್ನ ನೋಡೋದೇ ಒಂಥರಾ ಖುಷಿ. ಆದ್ರೆ ಇಲ್ಲೊಬ್ರು ಅದೇ ರೀತಿ ಅರ್ಜೆಂಟಿನಾ ಲೋಬೊ ಎಂಬ ಮಹಿಳೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಎರಡು ಪುಟ್ಟ ಪ್ರಾಣಿಗಳು ಮಲಗಿದ್ದನ್ನು ನೋಡಿದರು. ಅವು ತುಂಬ ದುರ್ಬಲವಾಗಿದ್ದವು. ಹತ್ತಿರ ಹೋಗಿ ನೋಡಿದ ಲೋಬೋ ಅವರಿಗೆ ಪುಟ್ಟಪುಟ್ಟ ಬೆಕ್ಕಿನಮರಿಗಳಂತೆ ಕಂಡುಬಂದವು. ಲೋಬೊ ಅವರಿಗೆ ಮೊದಲಿನಿಂದಲೂ ಪ್ರಾಣಿಗಳೆಂದರೆ…
ಇತ್ತೀಚೆಗಷ್ಟೇ ಅತ್ಯಾಚಾರ ಪ್ರಕರಣದಲ್ಲಿ ಜೈಲು ಪಾಲಾಗಿರುವ ಸ್ವಯಂಘೋಷಿತ ದೇವಮಾನವ ಗುರ್ಮೀತ್ ರಾಮ್ ರಹಿಮ್ ಸಿಂಗ್ ಜೈಲು ಪಾಲಾಗಿದ್ದಾರೆ.ಇದರ ಬೆನ್ನಲ್ಲೇ ಸ್ವಯಂಘೋಷಿತ ದೇವ ಮಹಿಳೆಯೊಬ್ಬರು ಸಂಕಷ್ಟಕ್ಕೀಡಾಗಿದ್ದಾರೆ.
ಅಪಾರ ಔಷಧ ಗುಣ ಹೊಂದಿರುವ ನುಗ್ಗೆ ಸೊಪ್ಪನ್ನು ನೇರವಾಗಿ ಮಾರಾಟ ಮಾಡಿದರೆ ಮಾರುಕಟ್ಟೆಯಲ್ಲಿ ಬೆಲೆ ಕಡಿಮೆ ಎಂದು ತಿಳಿದ, ತಾಲೂಕಿನ ತಾವರಗೇರಾ ಪ್ರದೇಶದ ರೈತರೊಬ್ಬರು, ಸೊಪ್ಪಿನಿಂದ ತಯಾರಿಸಿದ ಪುಡಿಯನ್ನು ವಿದೇಶಗಳಿಗೆ ರಫ್ತುಮಾಡಿ ಗಮನಸೆಳೆದಿದ್ದಾರೆ. ಮೂಲತಃ ಗಂಗಾವತಿ ತಾಲೂಕಿನವರಾದ ಬಸಯ್ಯ ಹಿರೇಮಠ, ತಾವರಗೇರಾ ಪ್ರದೇಶದಲ್ಲಿ 30ಎಕರೆ ಜಮೀನು ಖರೀದಿಸಿ, ನುಗ್ಗೆ ಬೇಸಾಯದಲ್ಲಿ ತೊಡಗಿದ್ದಾರೆ. ತೋಟಗಾರಿಕೆ ಕೃಷಿಯನ್ನು ವಿಶಿಷ್ಟ ರೀತಿಯಲ್ಲಿ ಕೈಗೊಳ್ಳಲು ಅವರಿಗೆ ಸಾಮಾಜಿಕ ಜಾಲತಾಣ ನೆರವಿಗೆ ಬಂದಿದೆ. ನುಗ್ಗೆ ಸೊಪ್ಪನ್ನು ನಿಗದಿತ ಉಷ್ಣಾಂಶದಲ್ಲಿ ಒಣಗಿಸಿ ಪೌಡರ್ ಆಗಿ ಪರಿವರ್ತಿಸಿದರೆ…
ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಭಿನಯದ ‘ಅಂಜನಿಪುತ್ರ’ ಚಿತ್ರ ಪ್ರದರ್ಶನಕ್ಕೆ ಸೆಷೆನ್ಸ್ ಕೋರ್ಟ್ ಶನಿವಾರ ತಡೆಯಾಜ್ಞೆ ನೀಡಿದೆ.ಅಂಜನಿಪುತ್ರ ಚಿತ್ರದಲ್ಲಿ ವಕೀಲರ ಬಗ್ಗೆ ಅವಹೇಳನಕಾರಿ ಸಂಭಾಷಣೆ ಇರುವ ಹಿನ್ನೆಲೆಯಲ್ಲಿ ಸಿನಿಮಾ ಪ್ರದರ್ಶನಕ್ಕೆ ಸಿವಿಲ್ ಕೋರ್ಟ್ ತಡೆ ನೀಡಿದೆ.
20 ವರ್ಷದ ಯುವತಿಯನ್ನು ಸಾರ್ವಜನಿಕವಾಗಿ ಯುವಕನೊಬ್ಬ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ದೆಹಲಿಯ ಭೋಗಲ್ ಪ್ರದೇಶದಲ್ಲಿ ನಡೆದಿದೆ.ಈ ಘಟನೆ ಭೋಗಲ್ ಬಸ್ ನಿಲ್ದಾಣದ ಬಳಿ ನಡೆದಿದೆ. ಆರೋಪಿಯನ್ನು ಮುನಾಸೀರ್ ಎಂದು ಗುರುತಿಸಲಾಗಿದೆ. ಈ ಘಟನೆಯಲ್ಲಿ ಆತನಿಗೆ ಸಣ್ಣ-ಪುಟ್ಟ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯಕ್ಕೆ ದೆಹಲಿ ಪೊಲೀಸರು ಆರೋಪಿ ಮತ್ತು ಮೃತ ಯುವತಿಗೆ ಸಂಬಂಧ ಇದೆಯೇ ಎಂದು ತನಿಖೆ ನಡೆಸುತ್ತಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆರೋಪಿ ಮೊದಲಿಗೆ ಮೃತ ಯುವತಿಯ ಬಳಿ ಬಂದು ಮಾತನಾಡುತ್ತಿದ್ದನು. ಆದರೆ…
ಬಾಹುಬಲಿ -2’ ಬಂದಿದ್ದೇ ಬಂದಿದ್ದು ಟಾಲಿವುಡ್ ಸ್ಟಾರ್ ಪ್ರಭಾಸ್ ಮನೆ ಮಾತಾಗಿದ್ದಾರೆ. ಈ ವರ್ಷ ಸೋಷಿಯಲ್ ಮೀಡಿಯಾದಲ್ಲಿ ಅತಿ ಹೆಚ್ಚು ಸುದ್ದಿಯಾದ ವಿಷಯಗಳಲ್ಲಿ ಪ್ರಭಾಸ್ ಮದುವೆ ಸುದ್ದಿ ಕೂಡ ಪ್ರಮುಖವಾಗಿದೆ. ಟಾಲಿವುಡ್ ಇಂಡಸ್ಟ್ರಿಯ ಮೋಸ್ಟ್ ಬ್ಯಾಚುಲರ್ ಹೀರೋ ಅಂದ್ರೆ ಪ್ರಭಾಸ್. ಕೆಲವು ದಿನಗಳಿಂದ ಈ ನಟನ ಮದುವೆಯ ಬಗ್ಗೆ ಗಾಸಿಪ್ ಗಳು ಕೇಳಿ ಬರುತ್ತಿದೆ. ಆದರೆ ಈಗ ಟಾಲಿವುಡ್ ಅಂಗಳದಲ್ಲಿ ಮೆಗಾ ಸ್ಟಾರ್ ಚಿರಂಜೀವಿ ಪುತ್ರಿ ನಿಹಾರಿಕಾ ಅವರೊಂದಿಗೆ ಮದುವೆ ಆಗಲಿದ್ದಾರೆ ಎಂಬ ಸುದ್ದಿ ಬಲವಾಗಿ ಕೇಳತೊಡಗಿದೆ….