ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಭಾರತದ ಮಹಿಳಾ ರಿಕರ್ವ್ ಆರ್ಚರಿ ತಂಡ ಚೀನಾದ ಶಾಂಘೈನಲ್ಲಿ ನಡೆದ ಆರ್ಚರಿ ವಿಶ್ವಕಪ್ ಸ್ಟೇಜ್-2 ಟೂರ್ನಿಯಲ್ಲಿ ಐತಿಹಾಸಿಕ ಸಾಧನೆ ಮಾಡಿದೆ. ಅನುಭವಿ ಆರ್ಚರ್ Deepika Kumari, Ankita Bhakat ಹಾಗೂ ಯುವ ಪ್ರತಿಭೆ Kumkum Mohod ಒಳಗೊಂಡ ಭಾರತೀಯ ಮಹಿಳಾ ತಂಡ ಆತಿಥೇಯ ಚೀನಾವನ್ನು ಅದರದೇ ನೆಲದಲ್ಲಿ ಸೋಲಿಸಿ ಚಿನ್ನದ ಪದಕ ಗೆದ್ದಿದೆ.
ಫೈನಲ್ ಪಂದ್ಯದಲ್ಲಿ ಭಾರತ ಮತ್ತು ಚೀನಾ ನಡುವಿನ ಹೋರಾಟ ಕೊನೆಯ ಕ್ಷಣದವರೆಗೆ ರೋಚಕತೆಯಿಂದ ಕೂಡಿತ್ತು. ನಾಲ್ಕು ಸೆಟ್‌ಗಳ ಅಂತ್ಯಕ್ಕೆ ಎರಡೂ ತಂಡಗಳು 4-4 ಸಮಬಲ ಸಾಧಿಸಿದ್ದವು. ಬಳಿಕ ನಡೆದ ಶೂಟ್-ಆಫ್‌ನಲ್ಲಿ ಭಾರತೀಯ ವನಿತೆಯರು ಅದ್ಭುತ ಆತ್ಮವಿಶ್ವಾಸ ತೋರಿಸಿ 28-26 ಅಂತರದಿಂದ ಗೆದ್ದು 5-4 ಅಂತರದಲ್ಲಿ ಚಿನ್ನದ ಪದಕ ತಮ್ಮದಾಗಿಸಿಕೊಂಡರು.
ಈ ಚಿನ್ನದ ಸಾಧನೆ ಇನ್ನಷ್ಟು ವಿಶೇಷವಾಗಲು ಪ್ರಮುಖ ಕಾರಣವೆಂದರೆ, ಸೆಮಿಫೈನಲ್‌ನಲ್ಲಿ ಭಾರತ 10 ಬಾರಿ ಒಲಿಂಪಿಕ್ ಚಾಂಪಿಯನ್ ಆಗಿರುವ ಬಲಿಷ್ಠ ದಕ್ಷಿಣ ಕೊರಿಯಾವನ್ನೇ 5-1 ಅಂತರದಲ್ಲಿ ಸೋಲಿಸಿತ್ತು. ಇದು ಭಾರತೀಯ ಆರ್ಚರಿಯ ದೊಡ್ಡ ಸಾಧನೆಗಳಲ್ಲಿ ಒಂದಾಗಿ ಪರಿಗಣಿಸಲಾಗಿದೆ.
ತಂಡದ ಹಿರಿಯ ಆಟಗಾರ್ತಿ ದೀಪಿಕಾ ಕುಮಾರಿ ಒತ್ತಡದ ಕ್ಷಣಗಳಲ್ಲಿ ಅದ್ಭುತ ನಾಯಕತ್ವ ಪ್ರದರ್ಶಿಸಿದರು. ನಿರ್ಣಾಯಕ ಶೂಟ್-ಆಫ್‌ನಲ್ಲಿ ಭಾರತಕ್ಕೆ ಅಗತ್ಯವಿದ್ದ ಪ್ರಮುಖ ಶಾಟ್ ಅನ್ನು ಅವರು ಯಶಸ್ವಿಯಾಗಿ ಹೊಡೆದು ತಂಡಕ್ಕೆ ಚಿನ್ನ ತಂದುಕೊಟ್ಟರು. ಈ ಮೂಲಕ ದೀಪಿಕಾ ತಮ್ಮ ಕರಿಯರ್‌ನ ಏಳನೇ ವಿಶ್ವಕಪ್ ತಂಡ ಚಿನ್ನದ ಪದಕವನ್ನು ಗೆದ್ದ ಸಾಧನೆ ಮಾಡಿದ್ದಾರೆ.
17 ವರ್ಷದ ಯುವ ಆರ್ಚರ್ ಕುಂಕುಮ್ ಮಹೋಡ್ ಈ ಟೂರ್ನಿಯ ಹೊಸ ಸೆನ್ಸೇಶನ್ ಆಗಿ ಹೊರಹೊಮ್ಮಿದ್ದಾರೆ. ವಿಶ್ವಕಪ್ ಮಟ್ಟದ ಕೆಲವೇ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರೂ ಅವರು ಭಯವಿಲ್ಲದೆ ಪ್ರದರ್ಶನ ನೀಡಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ಭಾರತೀಯ ಮಹಿಳಾ ರಿಕರ್ವ್ ತಂಡಕ್ಕೆ ಇದು 2021ರ ನಂತರದ ಮೊದಲ ವಿಶ್ವಕಪ್ ಚಿನ್ನದ ಪದಕವಾಗಿದೆ. 2023ರಲ್ಲಿ ಪ್ಯಾರಿಸ್ ಹಂತದಲ್ಲಿ ಭಾರತ ಪದಕ ಗೆದ್ದಿದ್ದರೂ, ಈಗ ಮತ್ತೆ ಚಿನ್ನ ಗೆದ್ದು ವಿಶ್ವ ವೇದಿಕೆಯಲ್ಲಿ ಭಾರತದ ಬಲವನ್ನು ತೋರಿಸಿದೆ.

ಶಾಂಘೈನಲ್ಲಿ ನಡೆಯುತ್ತಿರುವ ಆರ್ಚರಿ ವಿಶ್ವಕಪ್‌ನಲ್ಲಿ ಭಾರತ ಈಗಾಗಲೇ ಎರಡು ಪದಕಗಳನ್ನು ತನ್ನ ಖಾತೆಗೆ ಸೇರಿಸಿಕೊಂಡಿದೆ. ಪುರುಷರ ಕಾಂಪೌಂಡ್ ವಿಭಾಗದಲ್ಲಿ ಸಾಹಿಲ್ ಜಾಧವ್ ಕಂಚಿನ ಪದಕ ಗೆದ್ದಿದ್ದರು.
ಈಗ ದೀಪಿಕಾ, ಅಂಕಿತಾ ಮತ್ತು ಕುಂಕುಮ್ ಅವರ ಚಿನ್ನದ ಸಾಧನೆ ಭಾರತೀಯ ಕ್ರೀಡಾಭಿಮಾನಿಗಳ ಹೆಮ್ಮೆಯನ್ನು ಮತ್ತಷ್ಟು ಹೆಚ್ಚಿಸಿದೆ.
ಈ ಗೆಲುವು ಭಾರತಕ್ಕೆ ವಿಶೇಷವಾಗಿದ್ದು, ಸೆಮಿಫೈನಲ್‌ನಲ್ಲಿ 10 ಬಾರಿ ಒಲಿಂಪಿಕ್ ಚಾಂಪಿಯನ್ ಆಗಿರುವ ದಕ್ಷಿಣ ಕೊರಿಯಾವನ್ನು ಸೋಲಿಸಿ ಭಾರತ ಫೈನಲ್‌ಗೆ ಪ್ರವೇಶಿಸಿತ್ತು. 2021ರ ಬಳಿಕ ಮಹಿಳಾ ರಿಕರ್ವ್ ತಂಡಕ್ಕೆ ಇದು ಮೊದಲ ವಿಶ್ವಕಪ್ ಚಿನ್ನದ ಪದಕವಾಗಿದೆ.
2010ರಿಂದಲೇ ವಿಶ್ವಕಪ್‌ನಲ್ಲಿ ಭಾರತದ ಪ್ರಮುಖ ಬಿಲ್ಲುಗಾರ್ತಿಯಾಗಿ ಗುರುತಿಸಿಕೊಂಡಿರುವ ದೀಪಿಕಾ ಕುಮಾರಿ ಇದೀಗ ತಮ ಖಾತೆಗೆ ಏಳನೇ ವಿಶ್ವಕಪ್ ತಂಡ ಚಿನ್ನದ ಪದಕ ಸೇರಿಸಿಕೊಂಡಿದ್ದಾರೆ. 2021ರಲ್ಲಿ ಗ್ವಾಟೆಮಾಲಾ ಸಿಟಿ ಮತ್ತು ಪ್ಯಾರಿಸ್‌ನಲ್ಲಿ ಗೆದ್ದ ತಂಡದಲ್ಲೂ ಅವರು ಭಾಗಿಯಾಗಿದ್ದರು.
ಶಾಂಘೈನಲ್ಲಿ ಭಾರತದ ಪದಕ ಸಂಖ್ಯೆ ಈಗ ಎರಡುಕ್ಕೇರಿದೆ. ಇದಕ್ಕೂ ಮುನ್ನ ಕಾಂಪೌಂಡ್ ವಿಭಾಗದಲ್ಲಿ ಕಂಚಿನ ಪದಕ ಗೆದ್ದು ಭಾರತದ ಖಾತೆ ತೆರೆಯಿದ್ದರು.ಇನ್ನೊಂದೆಡೆ,ಸಿಮ್ರನ್‌ಜೀತ್ ಕೌರ್ ಮಹಿಳಾ ರಿಕರ್ವ್ ವೈಯಕ್ತಿಕ ವಿಭಾಗದ ಸೆಮಿಫೈನಲ್‌ಗೆ ಪ್ರವೇಶಿಸಿದ್ದು, ಜಯ ಸಾಧಿಸಿದರೆ ತಮ್ಮ ಮೊದಲ ವಿಶ್ವಕಪ್ ವೈಯಕ್ತಿಕ ಪದಕ ಖಚಿತಪಡಿಸಿಕೊಳ್ಳಲಿದ್ದಾರೆ.
ಪೂರ್ಣಕಾಲಿಕ ರಾಷ್ಟ್ರೀಯ ಕೋಚ್ ಇಲ್ಲದ ಪರಿಸ್ಥಿತಿಯಲ್ಲೂ ದೀಪಿಕಾ ಕುಮಾರಿ ತಂಡವನ್ನು ಮುನ್ನಡೆಸಿದ ರೀತಿ ಗಮನಸೆಳೆಯಿತು. ಬ್ರೇಕ್‌ಗಳ ವೇಳೆ ಹಾಗೂ ಬದಲಾವಣೆ ಸಂದರ್ಭಗಳಲ್ಲಿ ಅವರು ಸಹ ಆಟಗಾರ್ತಿಯರಿಗೆ ಧೈರ್ಯ ತುಂಬುತ್ತಾ ತಂಡದ ಆತ್ಮವಿಶ್ವಾಸ ಹೆಚ್ಚಿಸಿದರು.
ಫೈನಲ್ ಆರಂಭದಲ್ಲಿ ಭಾರತ ಮೇಲುಗೈ ಸಾಧಿಸಿತು. ಮೊದಲ ಸೆಟ್‌ನಲ್ಲಿ 54-53 ಅಂತರದಿಂದ ಗೆದ್ದ ಭಾರತಕ್ಕೆ ದೀಪಿಕಾ ಅವರ ನಿರಂತರ 10 ಅಂಕಗಳ ಶಾಟ್‌ಗಳು ಬಲವಾಯಿತು. ಆದರೆ ಎರಡನೇ ಸೆಟ್‌ನಲ್ಲಿ ಚೀನಾ ಬಲಿಷ್ಠ ಪ್ರದರ್ಶನ ನೀಡಿ 55-52 ಅಂತರದಿಂದ ಗೆದ್ದು 2-2 ಸಮಬಲ ಸಾಧಿಸಿತು. ಈ ಸೆಟ್‌ನಲ್ಲಿ ದೀಪಿಕಾ ಕೊನೆಯ ಶಾಟ್‌ನಲ್ಲಿ 7 ಅಂಕ ಮಾತ್ರ ಪಡೆದಿದ್ದರು.
ಮೂರನೇ ಸೆಟ್‌ನಲ್ಲಿ ಚೀನಾ 57-56 ಅಂತರದಿಂದ ಗೆದ್ದು 4-2 ಮುನ್ನಡೆ ಪಡೆದಿತು. ನಾಲ್ಕನೇ ಸೆಟ್‌ನಲ್ಲಿ ಭಾರತ 54 ಅಂಕಗಳಿಗೆ ಸೀಮಿತವಾದಾಗ ಚೀನಾಗೆ ಗೆಲುವಿಗೆ ಕೇವಲ ಒಂದು 9 ಅಂಕದ ಶಾಟ್ ಅಗತ್ಯವಿತ್ತು. ಆದರೆ ಯುವ ಆಟಗಾರ್ತಿ ಯು ಕ್ವಿ 8 ಅಂಕ ಮಾತ್ರ ಪಡೆದ ಕಾರಣ ಪಂದ್ಯ ಶೂಟ್‌ಆಫ್‌ಗೆ ತಲುಪಿತು.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಜೀವನದಲ್ಲಿ ಮುಂದೆ ಏಳಿಗೆ ಹೊಂದಬೇಕಾದರೆ ಪಾಲಿಸ ಬೇಕಾದ ನಿಯಮಗಳು,ಇತರರೊಡನೆ ವ್ಯವಹರಿಸ ಬೇಕಾದ ರೀತಿ,ಸಮಾಜದಲ್ಲಿ ನಮ್ಮ ನಡೆ ಹೇಗಿರಬೇಕು.ಮುಂತಾದ ಅನೇಕ ಅಂಶಗಳ ಬಗ್ಗೆ ಚಾಣಕ್ಯನು ನಮಗೆ ಅನೇಕ ನೀತಿಗಳನ್ನು ಬೋಧಿಸಿದ್ದಾನೆ. ನಮ್ಮ ಪ್ರಗತಿಗೆ ಅನೇಕ ಸಂದರ್ಭಗಳಲ್ಲಿ ಇವೆಲ್ಲವೂ ಉಪಯೋಗಕ್ಕೆ ಬರುತ್ತವೆ. ಚಾಣಕ್ಯ ಇವಷ್ಟನ್ನೇ ಅಲ್ಲದೆ,ಸ್ತ್ರೀಯರ ಬಗ್ಗೆಯೂ ಹಲವು ವಿಷಯಗಳನ್ನು ತಿಳಿಸಿದ್ದಾನೆ. 1.ಯಾವುದೇ ವಿಷಯವಾಗಲೀ,ಸ್ತ್ರೀಯು ತನ್ನ ಗಂಡನ ಅನುಮತಿ ಪಡೆದುಕೊಳ್ಳ ಬೇಕಂತೆ.ಇಲ್ಲವಾದಲ್ಲಿ ಗಂಡನ ಆಯುಷ್ಯ ಕಡಿಮೆಯಾಗುತ್ತದಂತೆ. 2.ಸುಳ್ಳುಹೇಳುವುದು, ಸ್ವಾರ್ಥ,ಅಸೂಯೆ,ಕಠಿಣವಾಗಿ ವರ್ತಿಸುವುದು,ಮೂರ್ಖತ್ವ,ಪರಿಶುಭ್ರತೆಯನ್ನು ಪಾಲಿಸದಿರುವುದು,ಕ್ರೂರತ್ವ ಮುಂತಾದ ಆಂಶಗಳು ಸ್ತ್ರೀಯರಲ್ಲಿ ಪ್ರಧಾನವಾಗಿರುತ್ತವೆ. ಇವುಗಳಿಂದಾಗಿ ಅನೇಕ…
ರೈಲು ಅಂದರೆ ಯಾರಿಗೆ ತಿಳಿದಿಲ್ಲ ಹೇಳಿ, ಹೌದು ಜನಸಾಮಾನ್ಯರಿಗೆ ಅತೀ ಕಡಿಮೆ ವೆಚ್ಚದಲ್ಲಿ ಅತೀ ದೂರ ಪ್ರಯಾಣ ಮಾಡಲು ನೆರವಾಗುತ್ತಿರುವ ಸಾರಿಗೆ ಅಂದರೆ ಅದೂ ರೈಲು ಸಾರಿಗೆ ಮಾತ್ರ ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ಒಂದು ರೈಲು ಇಂಜಿನ್ ಬೆಲೆ ಸುಮಾರು 14 ರಿಂದ 17 ಕೋಟಿ ಇರುತ್ತದೆ, ಇನ್ನು ರೈಲುಗಳನ್ನ ಯಾರಿಗೂ ಕೂಡ ಖರೀದಿ ಮಾಡಲು ಸಾಧ್ಯವಿಲ್ಲ, ಹೌದು ರೈಲುಗಳು ಚಲಿಸಲು ಪ್ರಮುಖವಾಗಿ ಬೇಕಾಗಿರುವುದು ರೈಲುಗಳು ಹಳಿಗಳು ಮತ್ತು ಎಲ್ಲಾ ರೈಲುಗಳು ಸರ್ಕಾರದ ಸ್ವಾಮ್ಯಕ್ಕೆ ಒಳಪಟ್ಟಿರುತ್ತದೆ….
ಗಂಗಾ ನದಿಯಲ್ಲಿ ಪ್ಲಾಸ್ಟಿಕ್ ನ ಬಳಕೆ ಅತಿ ಹೆಚ್ಚಾಗಿದ್ದು ನದಿಯ ಮಾಲಿನ್ಯಕ್ಕೆ ತುತ್ತಾಗಿದೆ, ಇಲ್ಲಿಗೆ ಬರುವ ಪ್ರವಾಸಿಗಳು ಕೂಡ ತಾವು ತರುವ ವಸ್ತುಗಳ ಪ್ಲಾಸ್ಟಿಕ್ ಅನ್ನು ಎಲ್ಲೆಂದರೆ ಅಲ್ಲಿ ಬಿಸಾಡಿ ಹೋಗುತ್ತಾರೆ. ಇದು ತೀರಾ ನದಿಯ ಮಾಲಿನ್ಯಕ್ಕೆ ತುತ್ತಾಗಿದೆ. ಆದರೆ ಇಲ್ಲಿ 48 ವರ್ಷದ ಕಾಳಿಪದ ದಾಸ್ ಎಂಬುವವರು ಪ್ರತಿದಿನ ಗಂಗಾ ನದಿಯಲ್ಲಿ ಕಸವನ್ನು ಎತ್ತುವ ಕಾರ್ಯವನ್ನು ಮಾಡುತ್ತಾರೆ. ಇವರು ಮೂಲತಃ ಪಶ್ಚಿಮ ಬಂಗಳಾದವರಾಗಿದ್ದು ಕಾಳಿಪದ ಮೀನುಗಾರರಾಗಿ ಕೆಲಸ ಮಾಡುತ್ತಿದ್ದಾರೆ. ಆದರೆ 3 ವರ್ಷಗಳಿಂದ ಇವರು ಮೀನು ಹಿಡಿಯುವ…
ತಮ್ಮನ್ನು ಹೆತ್ತು ಹೊತ್ತು ಬೆಳೆಸಿದವರನ್ನು ನಿರ್ಲಕ್ಷಿಸುವ ಪರಿಪಾಠ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ. ಇದರ ಪರಿಣಾಮ ವಯೋವೃದ್ಧರು ತಮ್ಮ ಜೀವನ ಸಂಧ್ಯಾಕಾಲದಲ್ಲಿ ಅಸಹಾಯಕರಂತೆ ಬದುಕಬೇಕಾಗಿದೆ. ಇದೀಗ ಇದಕ್ಕೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸಿದೆ. ಈಗಾಗಲೇ ಇರುವ ಹೆತ್ತವರು ಮತ್ತು ಹಿರಿಯ ನಾಗರಿಕರ ಪೋಷಣೆ ಮತ್ತು ಕಲ್ಯಾಣ ಕಾಯ್ದೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಕೆಲವೊಂದು ತಿದ್ದುಪಡಿಗಳನ್ನು ತರಲಾಗಿದ್ದು. ಇದರ ಜೊತೆಗೆ ಹೆತ್ತವರನ್ನು ನಿರ್ಲಕ್ಷಿಸುವವರಿಗೆ ವಿಧಿಸುವ ಶಿಕ್ಷೆಯ ಪ್ರಮಾಣವನ್ನು ಮೂರು ತಿಂಗಳಿನಿಂದ ಆರು ತಿಂಗಳವರೆಗೆ ವಿಸ್ತರಿಸುವ ತೀರ್ಮಾನ ಕೈಗೊಳ್ಳಲಾಗಿದೆ….
ಪುಲ್ವಾಮಾ ದಾಳಿಗೆ ಪ್ರತ್ಯುತ್ತರವಾಗಿ ಭಾರತ, ಪಾಕಿಸ್ತಾನದ ಬಾಲಕೋಟ್ನಲ್ಲಿ ನಡೆಸಿದ ಏರ್ಸ್ಟ್ರೈಕ್ ಬಗ್ಗೆ ಓವರ್ಸೀಸ್ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಅಧ್ಯಕ್ಷ ಸ್ಯಾಮ್ ಪಿತ್ರೋಡ ಪ್ರಶ್ನೆ ಎತ್ತಿದ್ದಾರೆ. 300 ಜನರನ್ನ ಕೊಂದಿದ್ದರೆ ಸರಿ. ಆದ್ರೆ ಅದಕ್ಕೆ ಸಾಕ್ಷಿ ಕೊಡ್ತೀರಾ? ಅದನ್ನು ಪ್ರೂವ್ ಮಾಡ್ತೀರಾ? ಎಂದು ಕೇಳಿದ್ದಾರೆ. ರಾಹುಲ್ ಗಾಂಧಿ ಆಪ್ತ, ಸಾಗರೋತ್ತರ ಕಾಂಗ್ರೆಸ್ ಅಧ್ಯಕ್ಷ ಸ್ಯಾಮ್ ಪಿತ್ರೋಡಾ ಹೇಳಿದ್ದಾರೆ. ಮಾಧ್ಯಮ ಸಂಸ್ಥೆಯ ಜೊತೆ ಮಾತನಾಡಿದ ಅವರು, ಮುಂಬೈ ದಾಳಿ ವಿಚಾರವನ್ನು ಪ್ರಸ್ತಾಪಿಸಿ ಅಲ್ಲಿಂದ ಬಂದ 8 ಮಂದಿ ಇಲ್ಲಿ ಕೃತ್ಯ…
ಚಿತ್ರರಂಗದಲ್ಲಿ ನಡೆಯುತ್ತಿರುವ ಕಾಸ್ಟಿಂಗ್ ಕೌಚ್ ವಿರುದ್ಧ ಧ್ವನಿ ಎತ್ತಿ ಹಲವಾರು ಖ್ಯಾತ ನಟರ ವಿರುದ್ಧ ಗಂಭೀರ ಆರೋಪ ಮಾಡಿದ್ದ ನಟಿ ಶ್ರೀರೆಡ್ಡಿ ಮತ್ತೊಮ್ಮೆ ಬಿರುಗಾಳಿ ಎಬ್ಬಿಸಿದ್ದಾರೆ. ಸಾಕ್ಷಿ ಸಮೇತವಾಗಿ ತಮ್ಮ ಟ್ವಿಟರ್ ಖಾತೆಯಲ್ಲಿ ಫೋಟೋ ಅಪ್ಲೋಡ್ ಮಾಡಿರುವ ಶ್ರೀ ರೆಡ್ಡಿ ಹಲ್ ಚಲ್ ಸೃಷ್ಟಿಸಿದ್ದಾರೆ. ‘ಬಾಹುಬಲಿ’ ಖ್ಯಾತಿಯ ನಟ ರಾಣಾ ದಗ್ಗುಬಾಟಿ ಮತ್ತು ಬಹುಭಾಷಾ ನಟಿ ತ್ರಿಶಾ ಅವರು ಪರಸ್ಪರ ಚುಂಬಿಸುತ್ತಿರುವ ಫೋಟೋ ಪೋಸ್ಟ್ ಮಾಡಿದ್ದಾರೆ. ಅಲ್ಲದೇ, ಅದರೊಂದಿಗೆ ರಾಣಾ ದಗ್ಗುಬಾಟಿ ಸಹೋದರ ಅಭಿರಾಮ್ ದಗ್ಗುಬಾಟಿ ತಮ್ಮನ್ನು…