ಆರೋಗ್ಯ

ಚಿಯಾ ಬೀಜಗಳ ಸೇವನೆಯ ಆರೋಗ್ಯಕರ ಪ್ರಯೋಜನಗಳು

83

ಈ ಬೀಜಗಳು ಅಧಿಕ ನಾರಿನಂಶವನ್ನು ಹೊಂದಿವೆ. ಈ ಬೀಜಗಳನ್ನು ನೆನೆಸಿದ ನೀರಿನ ಸೇವನೆಯಿಂದ ಜೀರ್ಣಕ್ರಿಯೆ ಉತ್ತಮಗೊಳ್ಳುತ್ತದೆ ಮತ್ತು ಕರುಳುಗಳಲ್ಲಿ ಜೀರ್ಣಗೊಂಡ ಆಹಾರದ ಚಲನೆ ಸುಲಭಗೊಳ್ಳುತ್ತದೆ. ಈ ನೀರಿನ ಸೇವನೆಯ ಇತರ ಮಹತ್ವಗಳನ್ನು ನೋಡೋಣ.

ಚಿಯಾ ಬೀಜಗಳ ಸೇವನೆಯ ಆರೋಗ್ಯಕರ ಪ್ರಯೋಜನಗಳು: ತೂಕ ಇಳಿಕೆಗೆ ಅಪಾರ ನೆರವು ನೀಡುವ ಆರೋಗ್ಯಕರ ವಿಧವೆಂದರೆ ಆಹಾರದಲ್ಲಿ ನಾರಿನಂಶವನ್ನು ಹೆಚ್ಚಿಸುವುದು. ಇದಕ್ಕೆ ಉತ್ತಮ ಆಯ್ಕೆ ಚಿಯಾ ಬೀಜಗಳು. ಇವುಗಳಲ್ಲಿ ಕರಗದ ನಾರು, ಪ್ರೋಟೀನ್, ಆರೋಗ್ಯಕರ ಕೊಬ್ಬುಗಳು, ಕ್ಯಾಲ್ಸಿಯಂ, ಮ್ಯಾಂಗನೀಸ್, ಮೆಗ್ನೀಸಿಯಮ್ ಮತ್ತು ರಂಜಕ ಮೊದಲಾದ ಪೋಷಕಾಂಶಗಳು ಸಮೃದ್ಧವಾಗಿವೆ. ನಿಮ್ಮ ಆಹಾರದಲ್ಲಿ ಚಿಯಾ ಬೀಜಗಳನ್ನು ಅಳವಡಿಸಿಕೊಳ್ಳಲು ಹಲವಾರು ಮಾರ್ಗಗಳಿವೆ.

ನೀರಿನಲ್ಲಿ ನೆನೆಸಿಟ್ಟು ಸೇವಿಸಿ

ನಿಮ್ಮ ಆಹಾರದಲ್ಲಿ ಬೆರೆಸಿ ಗರಿಮುರಿಯಾಗಿಸಬಹುದು ಅಥವಾ ನೀವು ಅವುಗಳನ್ನು ನಿಮ್ಮ ಸಲಾಡ್‌ಗಳ ಮೇಲೆ ಸಿಂಪಡಿಸಬಹುದು, ಅಥವಾ ನೀವು ಅವುಗಳನ್ನು ಒಣಬೀಜಗಳ ಮಿಶ್ರಣದ ಭಾಗವಾಗಿ ಹೊಂದಬಹುದು. ಚಿಯಾ ಬೀಜಗಳನ್ನು ಸೇವಿಸುವ ಮತ್ತೊಂದು ಆಸಕ್ತಿದಾಯಕ ವಿಧಾನವೆಂದರೆ ಅವುಗಳನ್ನು ನೀರಿನಲ್ಲಿ ನೆನೆಸಿಟ್ಟು ಬಳಿಕ ಸೇವಿಸುವುದು.

ನೀವು ಮಾಡಬೇಕಾಗಿರುವುದು ಏನೆಂದರೆ ಚಿಯಾ ಬೀಜಗಳನ್ನು ನೀರಿನಲ್ಲಿ ರಾತ್ರಿ ಮಲಗುವ ಮುನ್ನ ತಣ್ಣೀರಿನಲ್ಲಿ ನೆನೆಸಿಟ್ಟು ಮರುದಿನ ಬೆಳಿಗ್ಗೆ ದಿನದ ಮೊದಲ ಆಹಾರದ ರೂಪದಲ್ಲಿ ಅಥವಾ ದಿನದ ಇತರ ಯಾವುದೇ ಸಮಯದಲ್ಲಿ ನೀರಿನ ಜೊತೆಗೇ ಸೇವಿಸಬೇಕು.

ಈ ಮೂಲಕ ನೀವು ಈ ಬೀಜಗಳ ಹಲವಾರು ಆರೋಗ್ಯದ ಪ್ರಯೋಜನಗಳನ್ನು ಪಡೆಯಬಹುದು. ನೆನೆಸಿಟ್ಟ ಚಿಯಾ ಬೀಜಗಳ ಸೇವನೆ: ಇದರ ಆರೋಗ್ಯಕರ ಪರಿಣಾಮಗಳು ನಿಮಗೆ ಅಚ್ಚರಿ ಮೂಡಿಸಬಹುದು.

ಕ್ಯಾನ್ಸರ್ ರೋಗಕ್ಕೂ ರಾಮಬಾಣ

ಚಿಯಾ ಬೀಜಗಳು ಆಂಟಿ ಆಕ್ಸಿಡೆಂಟು ಅಥವಾ ಉತ್ಕರ್ಷಣ ನಿರೋಧಕ ಗುಣಗಳ ಸಮೃದ್ಧ ಮೂಲವಾಗಿದೆ. ಈ ಉತ್ಕರ್ಷಣ ನಿರೋಧಕಗಳು ಬೀಜಗಳಲ್ಲಿನ ಸೂಕ್ಷ್ಮ ಕೊಬ್ಬಗಳು ರಾನ್ಸಿಡ್ (rancid-ನಾತದ ಜಿಡ್ಡು) ಆಗಿ ಪರಿವರ್ತನೆಯಾಗದಂತೆ ರಕ್ಷಿಸುತ್ತದೆ.

ಇದಕ್ಕಿಂತಲೂ ಹೆಚ್ಚಾಗಿ, ಈ ಉತ್ಕರ್ಷಣ ನಿರೋಧಕಗಳು ದೇಹಕ್ಕೆ ಕ್ಯಾನ್ಸರ್ ಆವರಿಸಲು ಕಾರಣವಾಗುವ ಫ್ರೀ ರ್‍ಯಾಡಿಕಲ್ ಎಂಬ ಕಣಗಳ ಧಾಳಿಯಿಂದ ಎದುರಾಗಬಹುದಾದ ಹಾನಿಯಿಂದ ರಕ್ಷಣೆ ನೀಡುತ್ತದೆ. ಬನ್ನಿ, ನಿತ್ಯವೂ ಈ ನೀರಿನ ಸೇವನೆಯಿಂದ ಪಡೆಯುವ ಪ್ರಯೋಜನಗಳ ಬಗ್ಗೆ ಅರಿಯೋಣ.

ಜೀರ್ಣಕ್ರಿಯೆಗೆ ನೆರವು

ಚಿಯಾ ಬೀಜಗಳಲ್ಲಿ ಉತ್ತಮ ಪ್ರಮಾಣದ ಕರಗದ ನಾರಿನಂಶವಿದೆ. ಚಿಯಾ ಬೀಜಗಳನ್ನು ನೆನೆಸಿಟ್ಟ ನೀರನ್ನು ಬೆಳಿಗ್ಗೆ ಪ್ರಥಮ ಆಹಾರವಾಗಿ ಸೇವಿಸುವುದರಿಂದ ನಿಮ್ಮ ಜೀರ್ಣಕ್ರಿಯೆಗೆ ಉತ್ತೇಜನ ನೀಡುತ್ತದೆ ಮತ್ತು ಕರುಳಿನಲ್ಲಿ ಆಹಾರದ ಚಲನೆ ಸುಗಮಗೊಳ್ಳುತ್ತದೆ.

ತೂಕ ಇಳಿಸುವ ಪ್ರಯತ್ನದಲ್ಲಿರುವ ವ್ಯಕ್ತಿಗಳಿಗೆ ಆರೋಗ್ಯಕರ ಜೀರ್ಣಕ್ರಿಯೆ ಅತಿ ಮಹತ್ವದ್ದಾಗಿದ್ದು ಚಿಯಾ ಬೀಜಗಳು ಈ ಪ್ರಯತ್ನಕ್ಕೆ ಅತಿ ಹೆಚ್ಚಿನ ಬೆಂಬಲವನ್ನು ಒದಗಿಸುತ್ತವೆ

ತೂಕ ಇಳಿಕೆಗೆ ನೆರವು

ಚಿಯಾ ಬೀಜಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕರಗುವ ನಾರಿನಂಶವೂ ಇದೆ. ಈ ಬೀಜಗಳ ಇನ್ನೊಂದು ಮಹತ್ವವೆಂದರೆ ನೆನೆಸಿಟ್ಟ ಬಳಿಕ ಇವು ತಮ್ಮ ಮೂಲ ಗಾತ್ರಕ್ಕೂ 10-12 ಪಟ್ಟು ನೀರನ್ನು ಹೀರಿಕೊಂಡು ಉಬ್ಬಿಕೊಳ್ಳುತ್ತವೆ. ಹೀಗೆ ನೀರಿನಿಂದ ಉಬ್ಬಿಕೊಂಡ ಬೀಜಗಳು ಸ್ನಿಗ್ಧ ದ್ರವ ಅಥವಾ ಜೆಲ್ ನಂತೆ ಇರುತ್ತದೆ.

ಜೀರ್ಣಕ್ರಿಯೆಯಲ್ಲಿ ಈ ಬೀಜಗಳಿಂದ ನೀರಿನಂಶ ಅತಿ ನಿಧಾನವಾಗಿ ಬಿಡುಗಡೆಯಾಗುತ್ತಾ ತನ್ನೊಂದಿಗೆ ಪೋಷಕಾಂಶ ಮತ್ತು ನಾರಿನಂಶಗಳನ್ನೂ ಜೀರ್ಣಾಂಗಗಳಿಗೆ ಲಭಿಸುವಂತೆ ಮಾಡುತ್ತದೆ.

ಈ ಮೂಲಕ ಹೊಟ್ಟೆ ಸದಾ ತುಂಬಿರುವ ಭಾವನೆ ಮೂಡುತ್ತದೆ ಹಾಗೂ ಅನಗತ್ಯ ಆಹಾರ ಸೇವನೆಯಿಂದ ತಡೆಯುತ್ತದೆ. ಈ ಮೂಲಕ ನೀವು ಕಡಿಮೆ ಕ್ಯಾಲೋರಿಗಳನ್ನು ಸೇವಿಸುತ್ತೀರಿ ಹಾಗೂ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಇದು ತೂಕ ಇಳಿಕೆಯ ಪ್ರಯತ್ನಗಳಿಗೆ ಹೆಚ್ಚಿನ ನೆರವು ನೀಡುತ್ತದೆ.

ಪ್ರೋಟೀನ್ ಲಭ್ಯತೆ

ಚಿಯಾ ಬೀಜಗಳು 14% ಪ್ರೋಟೀನ್‌ನಿಂದ ಕೂಡಿದೆ. ಇವುಗಳಲ್ಲಿ ಪ್ರಭಾವಶಾಲಿ ಅಮೈನೋ ಆಮ್ಲಗಳೂ ಇವೆ. ಪ್ರೋಟೀನ್ ತೂಕ ಇಳಿಕೆ ಮತ್ತು ಸ್ನಾಯುಗಳ ಬೆಳವಣಿಗೆ ಎರಡಕ್ಕೂ ಅಗತ್ಯವಾದ ಸೂಕ್ಷ್ಮ ಪೋಷಕಾಂಶ ಅಥವಾ ಮ್ಯಾಕ್ರೋನ್ಯೂಟ್ರಿಯೆಂಟ್ ಆಗಿದೆ. ಪ್ರೋಟೀನ್ ಭರಿತ ಆಹಾರವನ್ನು ಸೇವಿಸುವುದರಿಂದ ಹೊಟ್ಟೆ ತುಂಬಿರುವ ಭಾವನೆ ಉಂಟಾಗುತ್ತದೆ ಮತ್ತು ಅನಗತ್ಯ ಕ್ಯಾಲೊರಿ ಸೇವನೆಯಿಂದ ತಡೆಯುತ್ತದೆ..

ಹೃದಯದ ಆರೋಗ್ಯ ಉತ್ತಮಗೊಳ್ಳುತ್ತದೆ

ಚಿಯಾ ಬೀಜಗಳಲ್ಲಿ ಒಮೆಗಾ -3 ಕೊಬ್ಬಿನಾಮ್ಲಗಳ (alpha-linolenic acid ಅಥವಾ ALA) ಪ್ರಭಾವಶಾಲಿ ಪ್ರಮಾಣವಿದೆ. ಈ ಆಲ್ಫಾ-ಲಿನೋಲೆನಿಕ್ ಆಮ್ಲ ಅತ್ಯಂತ ಹೃದಯಸ್ನೇಹಿ ಪೋಷಕಾಂಶವಾಗಿದೆ.

ತನ್ಮೂಲಕ ಚಿಯಾ ಬೀಜಗಳನ್ನು ಹೃದಯದ ಆರೋಗ್ಯಕ್ಕೆ ಉತ್ತಮವಾದ ಆಹಾರವಾಗಿದೆ. ಚಿಯಾ ಬೀಜಗಳನ್ನು ನೆನೆಸಿಟ್ಟ ನೀರನ್ನು ಕುಡಿಯುವುದು ಅಥವಾ ನಿಮ್ಮ ದೈನಂದಿನ ಆಹಾರದಲ್ಲಿ ಚಿಯಾ ಬೀಜಗಳನ್ನು ಅಳವಡಿಸಿಕೊಳ್ಳುವುದರಿಂದ ಹೃದ್ರೋಗ ಎದುರಾಗುವ ಅಪಾಯವನ್ನು ಅಪಾರ ಮಟ್ಟಿಗೆ ಕಡಿಮೆ ಮಾಡಬಹುದು.

ಮೂಳೆಗಳ ಆರೋಗ್ಯ ಉತ್ತಮಗೊಳ್ಳುತ್ತದೆ

ಚಿಯಾ ಬೀಜಗಳಲ್ಲಿನ ಕ್ಯಾಲ್ಸಿಯಂ, ಮೆಗ್ನೀಸಿಯಮ್ ಮತ್ತು ರಂಜಕಗಳು ಮೂಳೆಯ ಆರೋಗ್ಯವನ್ನು ವೃದ್ದಿಸುತ್ತವೆ. ಚಿಯಾ ಬೀಜಗಳು ದೈನಂದಿನ ಶಿಫಾರಸು ಮಾಡಿದ ಕ್ಯಾಲ್ಸಿಯಂನ 18% ಅನ್ನು ಹೊಂದಿರುತ್ತವೆ. ನೈಸರ್ಗಿಕ ಪ್ರೋಟೀನ್ ಮೂಲದ ಆಹಾರಗಳನ್ನು ಸೇವಿಸದ ವ್ಯಕ್ತಿಗಳು ಅಥವಾ ಸಸ್ಯಾಹಾರಿಗಳಿಗೆ ಚಿಯಾ ಬೀಜಗಳನ್ನು ಕ್ಯಾಲ್ಸಿಯಂನ ಉತ್ತಮ ಮೂಲವೆಂದು ಪರಿಗಣಿಸಬಹುದು.

ರಕ್ತದಲ್ಲಿನ ಸಕ್ಕರೆಯ ಮಟ್ಟದ ನಿಯಂತ್ರಣ

ಚಿಯಾ ಬೀಜಗಳು ಇನ್ಸುಲಿನ್ ಸಂವೇದನೆ ಮತ್ತು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಿಸುವಲ್ಲಿ ನೆರವಾಗುತ್ತವೆ.

ಊಟದ ಬಳಿಕ ರಕ್ತದಲ್ಲಿ ಏರುವ ಸಕ್ಕರೆಯ ಮಟ್ಟವನ್ನು ಸ್ಥಿರಗೊಳಿಸಲು ಚಿಯಾ ಬೀಜಗಳು ಸಹಾಯ ಮಾಡುತ್ತವೆ ಎಂದು ಅಧ್ಯಯನಗಳಿಂದ ಈಗಾಗಲೇ ಸಾಬೀತುಗೊಂಡಿದೆ.

ಈ ಗುಣ ಮಧುಮೇಹ ಇರುವ ವ್ಯಕ್ತಿಗಳಿಗೆ ಅತ್ಯುತ್ತಮವಾಗಿದ್ದು ಮಧುಮೇಹಿಗಳು ತಮ್ಮ ಆಹಾರದಲ್ಲಿ ಚಿಯಾ ಬೀಜಗಳನ್ನು ಸೇರಿಸುವುದರಿಂದ ಹೆಚ್ಚಿನ ಪ್ರಯೋಜನವನ್ನು ಪಡೆಯಬಹುದು.

ಆಹಾರದಲ್ಲಿ ಚಿಯಾ ಬೀಜಗಳನ್ನು ಸೇರಿಸಿಕೊಳ್ಳುವ ಸೂಕ್ತ ಮಾರ್ಗಗಳು

ಚಿಯಾ ಬೀಜಗಳನ್ನು ನೇರವಾಗಿ ಸೇವಿಸಲೂಬಹುದು ಅಥವಾ ಚಿಯಾ ಬೀಜವನ್ನು ನೆನೆಸಿಟ್ಟ ನೀರನ್ನು ನಿಯಮಿತವಾಗಿ ಕುಡಿಯಲೂಬಹುದು. ಇವೆರಡೂ ಸುಲಭ ಮತ್ತು ಪರಿಣಾಮಕಾರಿ. ವಿಧಾನಗಳಾಗಿವೆ. ಅವುಗಳನ್ನು ಹಾಗೇ ಜಗಿದು ತಿನ್ನಬಹುದು ಅಥವಾ ಹಣ್ಣುಗಳ ರಸ, ಪುಡಿಂಗ್, ಗಂಜಿ ಮತ್ತು ಸ್ಮೂಥಿಗಳಿಗೆ ಬೆರೆಸಿಕೊಂಡೂ ಸೇವಿಸಬಹುದು.

ವಿವಿಧ ಪಾಕವಿಧಾನಗಳಲ್ಲಿ ಚಿಯಾ ಬೀಜಗಳನ್ನು ಸೇರಿಸುವುದರಿಂದ ಅವುಗಳ ಪೋಷಣೆಯ ಮೌಲ್ಯವನ್ನು ಸ್ವಯಂಚಾಲಿತವಾಗಿ ಹೆಚ್ಚಿಸಬಹುದು.

ಆದರೂ, ಚಿಯಾ ಬೀಜಗಳನ್ನು ಮಿತ ಪ್ರಮಾಣದಲ್ಲಿ ಸೇವಿಸುತ್ತೀದ್ದೀರೆಂದು ಖಚಿತಪಡಿಸಿಕೊಳ್ಳಿ. ಅತಿಯಾದರೆ ಅಮೃತವೂ ವಿಷ ಎಂಬಂತೆ ಯಾವುದೇ ಆಹಾರ ವಸ್ತುಗಳನ್ನು ಮಿತಿಗಿಂತ ಹೆಚ್ಚು ಸೇವಿಸಬಾರದು.

ಅಧ್ಯಯನಗಳ ಬಳಿಕ ತಜ್ಞರು ಸಲಹೆ ಮಾಡುವ ಪ್ರಮಾಣವೆಂದರೆ ಪ್ರತಿ ಬಾರಿ ಇಪ್ಪತ್ತು ಗ್ರಾಂ ನಷ್ಟು (ಸುಮಾರು ಒಂದೂವರೆ ದೊಡ್ಡ ಚಮಚ) ಪ್ರಮಾಣವನ್ನು ದಿನಕ್ಕೆ ಎರಡು ಬಾರಿ ಸೇವಿಸಿದರೆ ಬೇಕಾದಷ್ಟಾಯಿತು. ಇದಕ್ಕೂ ಹೆಚ್ಚಿನ ಪ್ರಮಾಣವನ್ನು ಸೇವಿಸಬಾರದು.

source coorgcitizen / whatsapp

About the author / 

Chethan Mardalu

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • Place

    ಕೇದಾರನಾಥ ದೇವಾಲಯ

    ಹಿಂದುಗಳು ನಡೆದುಕೊಳ್ಳುವ ಪವಿತ್ರ ನಾಲ್ಕು ಧಾಮಗಳ ಯಾತ್ರೆಯಲ್ಲಿ ಕೇದಾರನಾಥವೂ ಸಹ ಒಂದು, ಅಲ್ಲದೆ, ಸಮುದ್ರ ಮಟ್ಟದಿಂದ ಅತಿ ಎತ್ತರದಲ್ಲಿ ನೆಲೆಸಿರುವ ದೇವಾಲಯವೂ ಸಹ ಇದೆ. ಮೂಲತಃ ಈ ದೇವಾಲಯವು ಪಾಂಡವರಿಂದ ನಿರ್ಮಿಸಲಾಗಿದೆ ಎನ್ನುತ್ತಾರಾದರೂ ಪ್ರಸ್ತುತ ರಚನೆಯು ಆದಿ ಗುರು ಶಂಕರಾಚಾರ್ಯರಿಂದ ನಿರ್ಮಿಸಲ್ಪಟ್ಟಿದೆ ಎನ್ನಲಾಗುತ್ತದೆ. ಪ್ರಾಯಶ: ಕೇದಾರನಾಥ ತಲುಪುವುದು ಬಹುತೇಕರಿಗೆ ಬಲು ಕಷ್ಟಕರವಾಗಿದೆ. ಏಕೆಂದರೆ ಇಲ್ಲಿರುವ ವಿಪರೀತ ಹವಾಮಾನ. ಒಮ್ಮೊಮ್ಮೆ ಮೇಘಗಳ ಸ್ಫೋಟವಾಯಿತೆಂದರೆ ಸಾಕಷ್ಟಿ ನೀರು ಹಾಗೂ ಕಲ್ಲು ಬಂಡೆಗಳು ಕೇದಾರನಾಥಕ್ಕೆ ನುಗ್ಗುವುದು ಸಾಮಾನ್ಯ. ಕಳೆದ 2013 ರಲ್ಲಿ…

  • ಮನರಂಜನೆ

    ರಿಲಯನ್ಸ್‌ ಬಿಗ್‌ ಟಿವಿ, ಬಿಗ್ ಆಫರ್..ಎಲ್ಲಾ ಚಾನೆಲ್ 5 ವರ್ಷ ಉಚಿತ.!ಇವತ್ತಿನಿಂದಲೇ ಪ್ರೀ ಬುಕ್ಕಿಂಗ್‌ ಶುರು..ಹೆಚ್ಚಿನ ಮಾಹಿತಿಗೆ ಈ ಲೇಖನ ಓದಿ…

    ಇಂದಿನಿಂದ ಡೈರೆಕ್ಟ್ ಟು ಹೋಮ್‌ ರಿಲಯನ್ಸ್‌ ಬಿಗ್‌ ಟಿವಿ ಸೆಟ್ ಆಪ್ ಬಾಕ್ಸ್ ಪ್ರೀ ಬುಕ್ಕಿಂಗ್‌ ಆರಂಭಗೊಂಡಿದೆ. ರಿಲಯನ್ಸ್‌ ಬಿಗ್‌ ಟಿವಿ ಸುಮಾರು 500ಕ್ಕೂ ಹೆಚ್ಚು ಫ್ರೀ-ಟು-ಏರ್‌ ಚ್ಯಾನಲ್‌ಗ‌ಳನ್ನು 5 ವರ್ಷಗಳ ಕಾಲ ಉಚಿತವಾಗಿ ವೀಕ್ಷಿಸಬಹುದಾಗಿದೆ.

  • Archive

    ಏಷ್ಯಾ ಬುಕ್ ಆಫ್ ರೆಕಾರ್ಡ್

    ಕೋಲಾರ: ತಾಲೂಕಿನ ಐತರಾಸನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ವಿಜ್ಞಾನ ಸಹ ಶಿಕ್ಷಕರಾದ ಸಿ.ಮುನಿರಾಜು ಅವರಿಗೆ ಕರ್ನಾಟಕದಲ್ಲಿ ಏಕಕಾಲಕ್ಕೆ ಅತೀ ಹೆಚ್ಚು ಕೌಶಲ್ಯ ಆಧಾರಿತ ತರಬೇತಿ ಕಾರ್ಯಕ್ರಮಗಳನ್ನು ಕರ್ನಾಟಕದ ವಿವಿಧ ವಿಭಾಗಗಳಲ್ಲಿ ಒಂದೇ ಬಾರಿಗೆ ಆಯೋಜಿಸಿ ಅನುಷ್ಠಾನಗೊಳಿಸಿದ್ದಕ್ಕೆ ಏಷ್ಯಾ ಬುಕ್ ಆಫ್ ರೆಕಾರ್ಡ್ 2023 ಅವಾರ್ಡ್ ನೀಡಲಾಗಿದೆ. ಈ ರೆಕಾರ್ಡನ್ನು ಕರ್ನಾಟಕ ಜೂನಿಯರ್ ಚೆಂಬರ್ ಇಂಟರ್‌ನ್ಯಾಷನಲ್ ಕರ್ನಾಟಕ ತಂಡದಿಂದ ಆಯೋಜಿಸಿದ್ದು, ಕರ್ನಾಟಕದ 253 ಶಾಲೆಗಳಲ್ಲಿ 13 ರಿಂದ 18 ವರ್ಷದೊಳಗಿನ ಮಕ್ಕಳಿಗೆ “ಬದುಕಿನಲ್ಲಿ ನಿರ್ಧಾರ ತೆಗೆದುಕೊಳ್ಳು…

  • ರಾಜಕೀಯ

    ಮೋದಿ ಅಭಿಮಾನಿಗಳಿಗೆ ಸವಾಲು ಹಾಕಿದ, ನಿಖಿಲ್ ಕುಮಾರಸ್ವಾಮಿ ಅಭಿಮಾನಿಗಳು!ಏನದು ಸವಾಲು ಗೊತ್ತಾ?

    ಸೋಲಿಲ್ಲದ ಸರದಾರ ಅನಂತ್ ಕುಮಾರ್ ಪತ್ನಿ ತೇಜಸ್ವಿನಿ ಅವರಿಗೆ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ನಿಖಿಲ್ ಕುಮಾರಸ್ವಾಮಿ ಅಭಿಮಾನಿಗಳು ಪ್ರಧಾನಿ ಮೋದಿ ಅವರ ಅಭಿಮಾನಿಗಳಿಗೆ ಸವಾಲು ಹಾಕಿದ್ದಾರೆ. ‘ಬಿಜೆಪಿಯ ನಕಲಿ, ಮೋದಿಯ ಫೇಕ್ ಅಕೌಂಟ್ ಭಕ್ತರೇ’ ಬೆಂಗಳೂರು ದಕ್ಷಿಣದಲ್ಲಿ ಅನಂತ್ ಕುಮಾರ್ ಪತ್ನಿ ತೇಜಸ್ವಿನಿ ಅವರಿಗೆ ಟಿಕೆಟ್ ಸಿಕ್ಕಿಲ್ಲ. ಮಂಡ್ಯದಲ್ಲಿ ಕಾಂಗ್ರೆಸ್ಸಿನಿಂದ ಸುಮಲತಾ ಅಂಬರೀಶ್ ಅವರಿಗೆ ಟಿಕೆಟ್ ಕೊಟ್ಟಿಲ್ಲ ಎಂದು ಲೇವಡಿ ಮಾಡಿದ್ರಿ ಈಗ ತೇಜಸ್ವಿನಿಯವರಿಗೆ ಟಿಕೆಟ್ ತಪ್ಪಿದೆ. ಈ ಬಗ್ಗೆ ಯಾರೊಬ್ಬರು ಚಕಾರವೆತ್ತುತ್ತಿಲ್ಲ. ಈಗ ಸ್ವಾಭಿಮಾನಿ ಮೋದಿ…

  • ಉಪಯುಕ್ತ ಮಾಹಿತಿ

    ಬಿಪಿಎಲ್ ಮತ್ತು ಎಪಿಎಲ್ ಪಡಿತರ ಚೀಟಿ ಆನ್‌ಲೈನ್ ಮೂಲಕ ಪಡೆಯಬಹುದು ಹೇಗೆ..?ತಿಳಿಯಲು ಈ ಲೇಖನ ಓದಿ..

    ರಾಜ್ಯದ ಎಲ್ಲಾ ನ್ಯಾಯಬೆಲೆ ಅಂಗಡಿಗಳಲ್ಲಿ ಅಂತರ್ಜಾಲ ಸಂಪರ್ಕವನ್ನು ಕಲ್ಪಿಸಲಾಗುತ್ತಿದ್ದು, ಅಂತರ್ಜಾಲದ ಮೂಲಕ ಪಡಿತರ ಚೀಟಿ ಪಡೆಯಬಹುದಾಗಿದೆ. ಜೊತೆಗೆ ರಾಜ್ಯದ ಯಾವುದೇ ಮೂಲೆಯಲ್ಲಿ ವಾಸವಾಗಿದ್ದರೂ, ಆ ಪ್ರದೇಶದ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ಪಡೆದುಕೊಳ್ಳ ಬಹುದಾಗಿದೆ ಎಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವರಾದ ಯು.ಟಿ.ಖಾದರ್ ಅವರು ತಿಳಿಸಿದ್ದಾರೆ.

  • ಸುದ್ದಿ

    ಒಂದೇ ಒಂದು ಪದವನ್ನು ಕನ್ನಡದಲ್ಲಿ ಮಾತನಾಡಿ ಕನ್ನಡಿಗರ ಹೃದಯವನ್ನು ಗೆದ್ದ ಅನುಷ್ಕಾ ಶರ್ಮಾ…ಅಷ್ಟಕ್ಕೂ ಅನುಷ್ಕಾ ಬಳಕೆ ಮಾಡಿದ ಪದ ಏನು ಗೊತ್ತಾ..?

    ಭಾರತಕ್ರಿಕೆಟ್ ತಂಡದನಾಯಕವಿರಾಟ್ ಕೊಹ್ಲಿ ಪತ್ನಿಹಾಗೂಬಾಲಿವುಡ್ ನಟಿಅನುಷ್ಕಾ ಶರ್ಮಾಕನ್ನಡದಲ್ಲಿ ಪದವೊಂದನ್ನು ಮಾತನಾಡುವ ಮೂಲಕ ಗಮನ ಸೆಳೆದಿದ್ದಾರೆ. ಸದ್ಯ ಪತಿ ಹಾಗೂ ಟೀಮ್ ಇಂಡಿಯಾ ನಾಯಕ ವಿರಾಟ್  ಕೊಹ್ಲಿ ಜತೆ ವೆಸ್ಟ್‌ಇಂಡೀಸ್ ಪ್ರವಾಸದಲ್ಲಿರುವ ಬಾಲಿವುಡ್ ನಟಿ ಅನುಷ್ಕಾ ಶರ್ಮಾ  ಕನ್ನಡದಲ್ಲಿ ಒಂದೇ ಒಂದು ಪದವನ್ನು ಮಾತನಾಡುವ ಮೂಲಕ ಕನ್ನಡಿಗರ ಹೃದಯ ಗೆದ್ದಿದ್ದಾರೆ.  ಅನುಷ್ಕಾ ಮಾಡಿರುವ ತಾಜಾ ಟ್ವೀಟ್‌ನಲ್ಲಿ ಧನಾತ್ಮಕತೆಯ ಬಗ್ಗೆ ಮಾತನಾಡುತ್ತಾ ಸಾಗುತ್ತಾರೆ. ಇಂಟರ್‌ನೆಟ್‌ನಲ್ಲಿ ಧನಾತ್ಮಕತೆಯನ್ನು ಪಸರಿಸುವ ಟ್ವೀಟ್‌ಗಳನ್ನು ಓದುತ್ತಾ ಸಾಗುತ್ತಾರೆ. ಕೊನೆಗೆ ದಟ್ಸ್ ಇಟ್ ಬದಲು ಕನ್ನಡದಲ್ಲೇ ‘ಅಷ್ಟೇ’ ಎಂದು ಹೇಳುವ…