ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ರಾಜ್ಯದಲ್ಲಿ ಕೊರೊನಾ ವೈರಸ್ ಹೆಚ್ಚಾಗುತ್ತಲೇ ಇದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಸಾರ್ವಜನಿಕ ಸ್ಥಳದಲ್ಲಿ ಖಡ್ಡಾಯವಾಗಿ ಮಾಸ್ಕ್ ಧರಿಸಬೇಕು ಎಂದು ಆದೇಶ ಹೊರಡಿಸಿದೆ. ಆದರೂ ಬೆಂಗಳೂರಿನ ವಿವಿಧೆಡೆ ಅನೇಕರು ಮಾಸ್ಕ್ ಧರಿಸದೇ ರಸ್ತೆಯಲ್ಲಿ ಹೊಡಾಡುತಿದ್ದರೆ ಇದನ್ನು ಕಂಡು ದಂಡವನ್ನು ವಿಧಿಸಿದ್ದಾರೆ.

ಬೆಂಗಳೂರು ಪೂರ್ವ, ಪಶ್ಚಿಮ, ದಕ್ಷಿಣ ವಲಯಗಳಲ್ಲಿ ಆರ್.ಆರ್ ನಗರ, ದಾಸರಹಳ್ಳಿ, ಯಲಹಂಕ, ಬೊಮ್ಮನಹಳ್ಳಿ ಸೇರಿದಂತೆ ಹಲವು ಕಡೆ ಒಂದೇ ದಿನದಲ್ಲಿ 69,400 ರೂ ದಂಡ ವಸೂಲಿ ಮಾಡಲಾಗಿದೆ. ಈ ರೀತಿ ಮಾಸ್ಕ್ ಧರಿಸದೇ ರಸ್ತೆಯಲ್ಲಿ ಓಡಾಡುವವರಿಗೆ ಬಿಸಿ ಮುಟ್ಟಿಸಿದ್ದಾರೆ.
ಬೆಂಗಳೂರು ಪೂರ್ವ ವಲಯದ ಕಡೆ 66 ಕೇಸ್ ಗಳು ದಾಖಲಾಗಿದ್ದು 13,200 ರೂ ಅನ್ನು ದಂಡ ವಸೂಲಿ ಮಾಡಿದ್ದಾರೆ, ಬೆಂಗಳೂರು ಪಶ್ಚಿಮ ವಲಯದಲ್ಲಿ 116 ಕೇಸ್ ಕಂಡು ಬಂದಿದ್ದು 23,200 ರೂ ದಂಡ ಪಾವತಿ ಮಾಡಿದ್ದಾರೆ, ಇನ್ನೂ ದಕ್ಷಿಣ ವಲಯದ ಕಡೆ 115 ಕೇಸ್ ಗಳು ಕಂಡು ಬಂದಿದ್ದೂ 23,000 ರೂ ದಂಡವನ್ನು ವಸೂಲಿ ಮಾಡಿದ್ದಾರೆ.

ಮಹದೇವಪುರ ವಲಯದಲ್ಲಿ 20 ಪ್ರಕರಣಗಳು, 4,000 ದಂಡ. ಆರ್. ಆರ್. ನಗರ ವಲಯದಲ್ಲಿ 15 ಕೇಸ್ ಗಳು 3,000 ರೂ ದಂಡ, ಯಲಹಂಕ ವಲಯದಲ್ಲಿ 6 ಕೇಸ್ ಗಳು 1,200 ರೂ ಫೈನ್. ದಾಸರಹಳ್ಳಿ ವಲಯ 4 ಕೇಸ್ 800 ರೂ. ದಂಡ ವಸೂಲಿ. ಬೊಮ್ಮನಹಳ್ಳಿ ವಲಯ 5 ಪ್ರಕರಣಗಳು 1,000 ರೂ. ಫೈನ್ ವಸೂಲಿ ಮಾಡಲಾಗಿದೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಸಿನಿಮಾಗಳಲ್ಲಿ ಸ್ಟಾರ್ಗಳು ಬಳಸುವ ಬಟ್ಟೆಗಳೆಂದರೆ ಅಭಿಮಾನಿಗಳಿಗೆ ತುಂಬಾ ಕ್ರೇಜ್ ಇರುತ್ತದೆ. ಮಾರುಕಟ್ಟೆಗೆ ಬಂದ ಹೊಸ ಡಿಸೈನ್ ಹಾಕಿಕೊಂಡರೆ ಇನ್ನಷ್ಟು ಕ್ರೇಜ್ ಬೆಳೆಯುತ್ತದೆ. ಸದ್ಯಕ್ಕೆ ಹೀರೋಗಳು ಸಹ ಟ್ರೆಂಡ್ ಸೆಟ್ ಮಾಡಬೇಕೆಂಬ ಉದ್ದೇಶದಿಂದ ಟ್ರೆಂಡಿ ಬಟ್ಟೆಗಳನ್ನು ಹಾಕಿಕೊಂಡು ಅವಕ್ಕೆ ಕ್ರೇಜ್ ತರುತ್ತಿರುತ್ತಾರೆ. ಆಗಿನ ಕಾಲದಲ್ಲಿ ಆರತಿ, ಭಾರತಿ, ಕಲ್ಪನಾರ ಸೀರೆ ಅವರಿಟ್ಟುಕೊಳ್ಳುವ ಕುಂಕುಮವನ್ನು ಫಾಲೋ ಆಗುತ್ತಿದ್ದರು.
ಮುಖದ ಸೌಂದರ್ಯಕ್ಕೆ ವಿವಿಧ ರೀತಿಯ ಮಾಸ್ಕ್ ಗಳು ಹಾಕುವುದು ತಿಳಿದ ಸಂಗತಿ. ಅದರ ಜೊತೆಗೆ ಚಾರ್ ಕೋಲ್ ಫೇಸ್ ಮಾಸ್ಕ್ ಕೂಡ ಎಲ್ಲರ ಬ್ಯೂಟಿ ಪ್ರಾಡಕ್ಟ್ ಲಿಸ್ಟ್ ನಲ್ಲಿ ಇವೆ. ಈ ಮಾಸ್ಕ್ ಒಳ್ಳೆಯದೇ ಆದರೂ, ಕೆಲವು ಜಾಗ್ರತೆ ವಹಿಸಿದರೆ ಸುಂದರ ತ್ವಚೆಯನ್ನು ಪಡೆಯಬಹುದು. ಚಾರ್ ಕೋಲ್ ಮಾಸ್ಕ್ ನಿಂದ ಮುಖದ ಮೇಲಿರುವ ಮೊಡವೆ, ಮಚ್ಚೆಗಳು, ಬ್ಲ್ಯಾಕ್ ಹೆಡ್ಸ್, ಬ್ಯಾಕ್ಟೀರಿಯಾ ಅಂತಹ ಸಮಸ್ಯೆಗಳು ತೊಲಗುತ್ತವೆ. ಚಾರ್ ಕೋಲ್ ಮಾಮೂಲಿ ಇದ್ದಿಲು ಅಲ್ಲ. ಇದನ್ನು ಕೊಬ್ಬರಿ ಚಿಪ್ಪು ಇದ್ದಿಲನ್ನು…
ತಮಗಿರುವ ಸೌಲಭ್ಯಗಳು, ಅವಕಾಶಗಳಿಗಿಂತ ಇತರರಿಗೆ ಉತ್ತಮವಾದ ಸೌಲಭ್ಯಗಳು ಇವೆ ಎಂದು ಕೆಲವರು ಭಾವಿಸುತ್ತಾರೆ. ಹಣ, ಸೌಂದರ್ಯ, ಓದು, ಆಸ್ತಿ, ಹುದ್ದೆ…ಹೀಗೆ ಪ್ರತಿ ವಿಷಯದಲ್ಲೂ ಇತರರ ಜತೆಗೆ ಹೋಲಿಸಿಕೊಳ್ಳುತ್ತಿರುತ್ತಾರೆ. ಈ ರೀತಿ ಇನ್ನೊಬ್ಬರ ಜತೆಗೆ ನಮ್ಮನ್ನು ಹೋಲಿಸಿಕೊಳ್ಳುವ ಅಭ್ಯಾಸ ಒಳ್ಳೆಯದಲ್ಲ.
ರಸ್ತೆ ಮೇಲೆ ಚಲಿಸುವ ಕಾರುಗಳು ಗಗನದಲ್ಲಿ ಹಾರುವಂತಿದ್ದರೆ..? ನೀವು ಹಾಲಿವುಡ್ ಸಿನಿಮಾಗಳಲ್ಲಿ ಅದರಲ್ಲೂ ಜೇಮ್ಸ್ಬಾಂಡ್ ಚಿತ್ರಗಳಲ್ಲಿ ಇದನ್ನು ನೋಡಿರುತ್ತೀರಿ. ಜಪಾನ್ನಲ್ಲಿ ನಿರ್ಮಾಣಗೊಂಡಿರುವ ಫ್ಲೈಯಿಂಗ್ ಕಾರು ತನ್ನ ಮೊದಲ ಪರೀಕ್ಷಾರ್ಥ ಹಾರಾಟದಲ್ಲಿ ಯಶಸ್ವಿಯಾಗಿದೆ. ಈ ವಿಶ್ವ ಬಹು ಕಾತುರದಿಂದ ನಿರೀಕ್ಷಿಸುತ್ತಿರುವ ಹಾರುವ ಕಾರುಗಳು ಇನ್ನು ಕೆಲವೇ ತಿಂಗಳುಗಳಲ್ಲಿ ವಾಣಿಜ್ಯ ಮಾರಾಟಕ್ಕೆ ಲಭ್ಯವಾಗಲಿದೆ. ಜಪಾನಿನ ಪ್ರಸಿದ್ಧ ಎಲೆಕ್ಟ್ರಾನಿಕ್ಸ್ ತಯಾರಿಕೆ ಸಂಸ್ಥೆ ಎನ್ಇಸಿ ಕಾಪೆರ್ರೇಷನ್ ಅಭಿವೃದ್ದಿಗೊಳಿಸಿರುವ ಪುಟ್ಟ ಹಾರುವ ಕಾರಿನ ಪರೀಕ್ಷಾರ್ಥ ಹಾರಾಟ ಯಶಸ್ವಿಯಾಗಿದೆ. ಇದನ್ನು ಇದೇ ಮೊದಲ ಬಾರಿ ಪ್ರಯೋಗಕ್ಕೆ…
ಈ ಸಂಧಿವಾತದಲ್ಲಿ ಅತಿ ಹೆಚ್ಚಾಗಿ ನೋವು, ಮೂಳೆಗಳಲ್ಲಿ ಬಿಗಿತ ಹಾಗೂ ಊತ ಕಂಡು ಬರುತ್ತದೆ. ಈ ಖಾಯಿಲೆಯು ತಂಡಿಯ ವಾತಾವರಣ ಹಾಗೂ ಬೆಳಗಿನ ಕಾಲದಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಇದೊಂದು ವಂಶಪಾರಂಪರಿಕ ರೋಗವಾಗಿದೆ. ಕೀಲುಗಳ ಮಧ್ಯದ ಸೈನೋವಿಯಲ್ ದ್ರವವು ಕಡಿಮೆಯಾದಾಗ ಎರಡು ಮೂಳೆಗಳ ಮಧ್ಯೆತಿಕ್ಕಾಟ ನಡೆಯುವುದರಿಂದ ಈ ಸಮಸ್ಯೆ ಉಂಟಾಗುತ್ತದೆ. ಆಸ್ಟಿಯೋ ಆರ್ಥರೈಟೀಸ್ ಹೆಚ್ಚಾಗಿ ತೂಕ ಹೊರುವ ಮೂಳೆಗಳಲ್ಲಿ ಅಂದರೆ ಮಂಡಿಯ ಮೂಳೆ ಹಾಗೂ ಸೊಂಟದ ಮೂಳೆಗಳಲ್ಲಿ ಕಂಡು ಬರುತ್ತದೆ. ರುಮಾಟೈಡ್ ಆರ್ಥರೈಟೀಸ್ಸಾ ಮಾನ್ಯವಾಗಿ ಚಿಕ್ಕ ವಯಸ್ಸಿನ…
ಬದುಕಿನಲ್ಲಿ ಮನಸಿದ್ದರೆ ಏನಾದರೂ ಸಾಧಿಸಬಹುದು ಎಂಬುದಕ್ಕೆ ಎಂತಹ ಒಳ್ಳೆಯ ಉದಾಹರಣೆಯಾಗಿರುವ ಈ ಯುವತಿ ಕುರಿ ಕಾಯುವವಳು. ವಲಸೆಗಾರರಾಗಿ ಬಂದು, ಬಡತನದಲ್ಲಿ ಬೆಳೆದು, ಆ ದೇಶ – ಭಾಷೆಯನ್ನು ಕಲಿತು, ಸಮಾಜವನ್ನು ತನ್ನದಾಗಿಸಿಕೊಂಡು ಅದೇ ದೇಶದಲ್ಲಿ ಮಂತ್ರಿಯಾಗುವುದು ಸಹಜ ಸಾಧನೆಯಲ್ಲ. ಬದುಕಿನಲ್ಲಿ ಮನಸಿದ್ದರೆ ಏನಾದರೂ ಸಾಧಿಸಬಹುದು ಎಂಬುದಕ್ಕೆ ಇಂತಹ ಒಳ್ಳೆಯ ಉದಾಹರಣೆ. ಇವಳ ಹೆಸರು ನಜತ್ ವಲ್ಲದ್-ಬೆಲ್ಕಾಸೆಮ್. ಇಂದು ಇವಳು ಫ್ರಾನ್ಸ್ ದೇಶದ ಶಿಕ್ಷಣ ಮಂತ್ರಿ. ಶಿಕ್ಷಣ ಇಲಾಖೆಗೆ ಮಂತ್ರಿಯಾಗಿ ಬಂದ ಮೊದಲ ಮಹಿಳೆಯಂತೆ. ನಜತ್ ವಲ್ಲದ್-ಬೆಲ್ಕಾಸೆಮ್(4…