ಜೀವನಶೈಲಿ

ಖಾಲಿ ಹೊಟ್ಟೆಯಲ್ಲಿ ಚಹಾ(ಟೀ) ಕುಡಿದರೆ ಏನಾಗುತ್ತೆ ಗೊತ್ತಾ?

5321

ನಾವು ದಿನಾಲು ಬೆಳಿಗ್ಗೆ ಎದ್ದ ತಕ್ಷಣ ನಮಗೆ ಏನಿಲ್ಲಾ ಅಂದ್ರು ಬಿಸಿ ಬಿಸಿ ಚಹಾ(ಟೀ) ಬೇಕೇ ಬೇಕು.  ಒಂದು ಸಮೀಕ್ಷೆಯ ಪ್ರಕಾರ ಶೇ. ತೊಂಬತ್ತಕ್ಕೂ ಹೆಚ್ಚು ಭಾರತೀಯರು ನಿತ್ಯವೂ ಕನಿಷ್ಠ ಮೂರು ಕಪ್ ಚಹಾ ಕುಡಿಯುತ್ತಾರೆ.  ಆದರೆ ಚಹಾ ಕುಡಿಯುವವರಲ್ಲಿ ಹೆಚ್ಚಿನವರು ದಿನದ ಪ್ರಥಮ ಆಹಾರವಾಗಿ ಒಂದು ಟೀ ಸೇವಿಸುತ್ತಾರೆ. ಕೆಲವರಂತೂ ಹಾಸಿಗೆಯಿಂದ ಏಳುವ ಮುನ್ನವೇ ಬೆಡ್ ಟೀ ಎಂದು ಕುಡಿಯುತ್ತಾರೆ.

ಆದರೆ ಇದು ಆರೋಗ್ಯಕರವೇ? ತಜ್ಞರಲ್ಲಿ ಈ ಪ್ರಶ್ನೆಯನ್ನು ಕೇಳಿದರೆ ಖಾಲಿ ಹೊಟ್ಟೆಯಲ್ಲಿ ಟೀ ಸೇವಿಸುವುದು ಅತ್ಯಂತ ಅನಾರೋಗ್ಯಕರ ಅಭ್ಯಾಸ ಎಂಬ ಉತ್ತರ ಸಿಗುತ್ತದೆ.ಹಾಗಾದರೆ ಟೀ ಯಾವಾಗ ಕುಡಿಯಬೇಕು ಎಂಬ ಪ್ರಶ್ನೆಗೆ ತಜ್ಞರು ಬೆಳಗ್ಗಿನ ಉಪಾಹಾರದ ಬಳಿಕ ಸೇವಿಸುವುದು ಉತ್ತಮ ಎಂಬ ಉತ್ತರ ನೀಡುತ್ತಾರೆ. ಆದರೆ ಟೀ ಸೇವನೆಯ ಪ್ರಮಾಣ ಇಡಿಯ ದಿನದಲ್ಲಿ ಮಿತವಾಗಿರುವುದೂ ಅಗತ್ಯ.

ಹಾಗಾದ್ರೆ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಟೀ ಕುಡಿಯಬಹುದೇ? ಮುಂದೆ ಓದಿ….

 ವಾಕರಿಕೆ ಬರುತ್ತದೆಯೇ?

ಟೀ ಕ್ಷಾರೀಯವೂ ಆಗಿದೆ ಕೊಂಚ ಆಮ್ಲೀಯವೂ ಆಗಿದೆ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಟೀ ಕುಡಿಯುವುದರಿಂದ ಹೊಟ್ಟೆಯಲ್ಲಿರುವ ಜೀರ್ಣರಸಗಳ ಪ್ರಭಾವ ಏರುಪೇರಾಗುತ್ತದೆ. ಈ ಏರುಪೇರು ವಾಕರಿಕೆ ಬರಿಸುತ್ತದೆ.

ಕಪ್ಪು (ಬ್ಲಾಕ್) ಟೀ ಸುರಕ್ಷಿತವೇ?

ಕಪ್ಪು ಟೀ ಎಂದರೆ ಹೆಚ್ಚು ಕುದಿಸದ ಮತ್ತು ಹಾಲು ಸೇರಿಸದ ಟೀ. ಇದು ತೂಕ ಇಳಿಸಲು ಉತ್ತಮವಾದರೂ ಖಾಲಿ ಹೊಟ್ಟೆಯಲ್ಲಿ ಕುಡಿಯುವ ಮೂಲಕ ಆಮ್ಲೀಯತೆ ಹೆಚ್ಚುತ್ತದೆ, ಇದರಿಂದ ಹೊಟ್ಟೆಯ ಜೀರ್ಣರಸಗಳೂ ಪ್ರಭಾವಕ್ಕೊಳಗಾಗಿ ಹೊಟ್ಟೆಯುಬ್ಬರಿಕೆ ಮತ್ತು ಹೊಟ್ಟೆ ತುಂಬಿರುವ ಹುಸಿಭಾವನೆಯನ್ನು ಮೂಡಿಸುತ್ತದೆ.

ಹಾಲು ಸೇರಿಸಿದ ಟೀ ಕುಡಿದರೆ ಆಗುವ ಅಡ್ಡಪರಿಣಾಮಗಳೇನು?

ಭಾರತದಲ್ಲಿ ಟೀ ಕುಡಿಯುವ ತೊಂಭತ್ತು ಶೇಖಡಾ ಜನರಲ್ಲಿ ಎಂಭತ್ತೊಂಭತ್ತು ಶೇಖಡಾ ಜನರು ಹಾಲು ಸೇರಿಸಿದ ಟೀ ಕುಡಿಯುತ್ತಾರೆ. ಆದರೆ ದಿನಕ್ಕೆ ಮೂರಕ್ಕಿಂತ ಹೆಚ್ಚು ಕಪ್ ಕುಡಿದರೆ ಇದು ಅನಗತ್ಯ ಕೊಬ್ಬು, ಆಮ್ಲೀಯತೆ ಮತ್ತು ಟಿನ್ನಿಟಸ್  ಅಥವಾ ಕಿವಿಗಳಲ್ಲಿ ಗುಂಯ್ಗುಡುವ ತೊಂದರೆಯನ್ನು ತಂದಿಡುತ್ತದೆ.

ಅದರಲ್ಲೂ ಮುಂಜಾನೆ ಖಾಲಿ ಹೊಟ್ಟೆಯಲ್ಲಿ ಕುಡಿದರೆ ಸುಸ್ತಾದ ಭಾವನೆ, ಹೊಟ್ಟೆಯುಬ್ಬರಿಕೆ, ಜೀರ್ಣರಸಗಳು ಪ್ರಭಾವ ಕಳೆದುಕೊಳ್ಳುವುದು ಮೊದಲಾದ ತೊಂದರೆಗಳು ಎದುರಾಗಬಹುದು. ಇಲ್ಲಿ ಓದಿ :- ಗರ್ಭಿಣಿ ಮಹಿಳೆಯರು ಇವನ್ನು ಬಳಸಿದರೆ, ಹುಟ್ಟುವ ಮಕ್ಕಳಿಗೆ ಅಪಾಯ..!

ಸ್ಟ್ರಾಂಗ್ ಟೀ ಕುಡಿದರೆ ಯಾವ ದುಷ್ಪರಿಣಾಮಗಳಾಗುತ್ತವೆ?

ಹೆಚ್ಚಿನ ರುಚಿ ಪಡೆಯಲು ಎರಡು ವಿಧಾನಗಳಿವೆ. ಮೊದಲನೆಯದು ಟೀಪುಡಿಯನ್ನು ಹೆಚ್ಚು ಸಮಯದವರೆಗೆ ಕುದಿಸುವುದು. ಎರಡನೆಯದು ಹೆಚ್ಚಿನ ಪ್ರಮಾಣದ ಟೀ ಪುಡಿಹಾಕಿ ಕೊಂಚ ಸಮಯದ ವರೆಗೆ ಕುದಿಸುವುದು. ಆದರೆ ಖಾಲಿ ಹೊಟ್ಟೆಯಲ್ಲಿ ಕುಡಿಯುವುದಾದರೆ ಎರಡೂ ವಿಧಾನಗಳು ಮಾರಕವಾಗಿವೆ. ಅದರಲ್ಲೂ ಹಾಲಿಲ್ಲದ ಸ್ಟ್ರಾಂಗ್ ಟೀ ಕುಡಿಯುವುದರ ಮೂಲಕ ಜೀರ್ಣವ್ಯವಸ್ಥೆ ಹಾಳಾಗುತ್ತದೆ. ಏಕೆಂದರೆ ಅತಿ ಹೆಚ್ಚಿನ ಪ್ರಮಾಣದಲ್ಲಿರುವ ಆಮ್ಲಗಳು ಜೀರ್ಣರಸಗಳ ರಚನೆಯನ್ನು ಬದಲಿಸಿಬಿಡುತ್ತವೆ. ಇದು ಅಲ್ಸರ್, ಹುಳಿತೇಗು, ಹೊಟ್ಟೆಯುರಿ, ಎದೆಯುರಿ ಮೊದಲಾದವುಗಳಿಗೆ ನೇರವಾಗಿ ಕಾರಣವಾಗುತ್ತದೆ.

ನಾಲ್ಕೈದು ಬಗೆಯ ಟೀಪುಡಿ ಬೆರೆಸಿದರೆ ಏನಾಗುತ್ತದೆ

ಫ್ಯಾಕ್ಟರಿಯಲ್ಲಿ ತ್ಯಾಜ್ಯವಾಗಿ ಹೋಗಬಹುದಾದ, ಆದರೆ ಕೊಂಚ ಟೀ ಅಂಶವಿರುವ ಪುಡಿಯನ್ನು ಅಲ್ಪ ಪ್ರಮಾಣದಲ್ಲಿ ಟೀಪುಡಿಯಲ್ಲಿ ಬೆರೆಸಿ ಲಾಭ ಮಾಡಿಕೊಳ್ಳಲಾಗುತ್ತದೆ. ಅಗ್ಗದ ಟೀಪುಡಿಯನ್ನು ದುಬಾರಿ ಟೀಪುಡಿಯೊಂದಿಗೂ ಬೆರೆಸಿ ಮಾರಾಟ ಮಾಡುತ್ತಾರೆ.

ಆದರೆ ಪ್ರತಿಷ್ಠಿತ ಸಂಸ್ಥೆಗಳು ನುರಿತ ಚಹಾ ರುಚಿ ನೋಡುವವರ ಮೂಲಕ , ಒಂದು ನಿರ್ದಿಷ್ಟ ಪ್ರಮಾಣದಲ್ಲಿ ಎರಡು ಅಥವಾ ಹೆಚ್ಚು ಪುಡಿಗಳನ್ನು ಬೆರೆಸಿ ಪರೀಕ್ಷಿಸಿ ಸುರಕ್ಷಿತ ಎಂದು ಖಚಿತಪಡಿಸಿದ ಮೇಲೆ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಾರೆ. ಇದಕ್ಕೆ ಬ್ಲೆಂಡ್ಎಂದು ಕರೆಯುತ್ತಾರೆ.

ಈ ಬ್ಲೆಂಡ್ ಟೀಪುಡಿ ಕುಡಿಯುವುದು ಸುರಕ್ಷಿತವೇ ಹೊರತು ನಾವಾಗಿ ನಮ್ಮ ಮನಸ್ಸಿಗೆ ಬಂದಂತೆ ಎರಡು ಅಥವಾ ಹೆಚ್ಚಿನ ಟೀಪುಡಿಗಳನ್ನು ಸೇರಿಸಿ ಕುಡಿಯುವುದು ಆರೋಗ್ಯಕ್ಕೆ ಮಾರಕ ಹಾಗೂ ಇದು ಪಾನಮತ್ತನಾಗಿರುವ ಅನುಭವವನ್ನೂ ನೀಡಬಹುದು ಎಂದು ತಜ್ಞರು ಎಚ್ಚರಿಸುತ್ತಾರೆ. ಮಾರುಕಟ್ಟೆಯಲ್ಲಿ ಸಿಗುವ ಥ್ರೀಮಿಕ್ಸ್, ಸೆವೆನ್ ಮಿಕ್ಸ್ ಎಲ್ಲವೂ ವ್ಯಾಪಾರದ ತಂತ್ರಗಳೇ ಹೊರತು ಆರೋಗ್ಯಕರವಲ್ಲ.

ಟೀ ಮತ್ತು ಬಿಸ್ಕತ್
ಭಾರತದಲ್ಲಿ ಅತಿ ಸಾಮಾನ್ಯವಾದ ಧಿಡೀರ್ ತಿಂಡಿ ಎಂದರೆ ಟೀ ಮತ್ತು ಬಿಸ್ಕತ್.  ಟೀ ಮತ್ತು ಬಿಸ್ಕತ್ ತಿನ್ನುವುದು ಉತ್ತಮ ಅಭ್ಯಾಸ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ. ಬಿಸ್ಕತ್ ಬದಲಿಗೆ ಟೋಸ್ಟ್, ರಸ್ಕ್ ಮೊದಲಾದವುಗಳನ್ನೂ ಸೇವಿಸಬಹುದು. ಇವುಗಳಲ್ಲಿರುವ ಹಿಟ್ಟಿನ ಅಂಶ ಟೀ ಯಲ್ಲಿರುವ ಆಮ್ಲೀಯತೆಯನ್ನು ಹೀರಿಕೊಳ್ಳುವ ಕಾರಣ ಜೀರ್ಣರಸಗಳು ಹೆಚ್ಚು ಪ್ರಭಾವಕ್ಕೊಳಗಾಗುವುದಿಲ್ಲ. ಟೀ ಒಟ್ಟಿಗೆ ಸಿಹಿ ಅಥವಾ ಉಪ್ಪಿನ ಅಂಶವಿರುವ ತಿಂಡಿಗಳನ್ನು ತಿನ್ನುವ ಮೂಲಕ ದೇಹಕ್ಕೆ ಅಗತ್ಯವಾದ ಸೋಡಿಯಂ ಅಂಶವನ್ನು ಪಡೆದುಕೊಂಡು ಹೊಟ್ಟೆಯ ಮತ್ತು ಕರುಳಿನ ಹುಣ್ಣು (ಅಲ್ಸರ್) ನಿಂದ ಪಾರಾಗಬಹುದು

ಟೀ ಕುಡಿಯುವುದರಲ್ಲಿ ಅತಿಕೆಟ್ಟ ಅಭ್ಯಾಸ 

ಆಹಾರ ಸೇವನೆಯ ಬಳಿಕ ಟೀ ಕುಡಿಯುವುದು ಕೆಟ್ಟ ಅಭ್ಯಾಸವಾಗಿದೆ.

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ವಿಚಿತ್ರ ಆದರೂ ಸತ್ಯ

    ಈ ರಾಜ್ಯದಲ್ಲಿ ‘ಹೆಂಡ್ತಿ ಹೊಡಿತಾಳೆಂದು ದೂರು’ ನೀಡಿರುವ ಪ್ರಕರ್ಣಗಳೆ ಜಾಸ್ತಿ..!ತಿಳಿಯಲು ಈ ಲೇಖನ ಓದಿ..

    ವೈವಾಹಿಕ ಹಿಂಸೆ, ಕೌಟುಂಬಿಕ ಕಲಹ ಪ್ರಕರಣಗಳಲ್ಲಿ ಮಹಿಳೆಯರಿಂದ ಹೆಚ್ಚಿನ ದೂರು ದಾಖಲಾಗುವುದು ಸಾಮಾನ್ಯ ಸಂಗತಿ. ಆದರೆ, ಉತ್ತರ ಪ್ರದೇಶದಲ್ಲಿ 6500 ಕ್ಕೂ ಅಧಿಕ ಮಂದಿ ತಮ್ಮ ಪತ್ನಿ ಹೊಡಿತಾಳೆ ಎಂದು ಯು.ಪಿ. -100 ಗೆ ಕರೆ ಮಾಡಿದ್ದಾರೆ.

  • ಸಿನಿಮಾ, ಸುದ್ದಿ

    ಮೆಗಾ ಸ್ಟಾರ್ ಚಿರಂಜೀವಿ ಮನೆಯಲ್ಲಿ ಸಂಭ್ರಮ, 80ರ ದಶಕದ ತಾರೆಯರ ಸಮಾಗಮ!

    ಚಿತ್ರ  ರಂಗದಲ್ಲಿ ಒಬ್ಬರನ್ನು ಕಂಡರೆ ಮತ್ತೊಬ್ಬರಿಗೆ ಆಗುವುದಿಲ್ಲ. ಅವರಿದ್ದ ಜಾಗಕ್ಕೆ ಇವರು ಕಾಲಿಡುವುದೂ ಇಲ್ಲ. ವೃತ್ತಿ ಮತ್ಸರದಿಂದ ಬದುಕುವವರೇ ಜಾಸ್ತಿ ಅಂತ ನಾವೆಲ್ಲರೂ ಮಾತನಾಡುತ್ತೇವೆ ಮತ್ತು ಅವರು ಸಹ ಹಾಗೆಯೇ ಇರುತ್ತಾರೆ ಎಂದು ಹೇಳಿಕೊಳ್ಳುತ್ತಾರೆ  ಮತ್ತು  ಚಿತ್ರರಂಗ ವಲಯದಿಂದ ಸಹ  ಮಾತುಗಳು ಕೇಳಿಬರುತ್ತವೆ. ಆದರೆ, 80ರ ದಶಕದ ತಾರೆಯರು ಈ ಮಾತನ್ನು ಸುಳ್ಳು ಮಾಡಿದ್ದಾರೆ. ಇದಕ್ಕೆ ಸಾಕ್ಷಿ      ‘ಮೆಗಾ ಸ್ಟಾರ್’ ಚಿರಂಜೀವಿ, ಅವರ ಮನೆಯಲ್ಲಿ ನಡೆದ ಪಾರ್ಟಿಯೇ ಸಾಕ್ಷಿ. ಪ್ರತಿವರ್ಷ 80ರ ದಶಕದ ದಕ್ಷಿಣ…

  • ಸಿನಿಮಾ

    ಶೆಟ್ಟರ ಕಥೆಯಲ್ಲಿ, ಬರವಣಿಗೆಯೇ ರಾಜ.. ಗರುಡ ಗಮನ ವೃಷಭ ವಾಹನ ಚಿತ್ರದ ವಿಮರ್ಶೆ

    ಒಬ್ಬೊಬ್ಬ ನಿರ್ದೇಶಕನಿಗೂ ಒಂದೊಂದು ಶೈಲಿ ಇದ್ದರೂ, ಸಿನಿಮಾ ನಿರ್ದೇಶಕರನ್ನು ಎರಡು ವರ್ಗವಾಗಿ ವಿಂಗಡಿಸಬಹುದು. ಮೊದಲನೆಯ ವರ್ಗದ ನಿರ್ದೇಶಕರು ಸಿನಿರಸಿಕರನ್ನು ರಂಜಿಸಲೆಂದೇ ಸಿದ್ದಸೂತ್ರದ ಅಂಶಗಳನ್ನು ಇಟ್ಟುಕೊಂಡು, ಜನ ಬಯಸುವ ಅಂಶಗಳನ್ನೇ ಗ್ರಹಿಸಿ, ಅಳೆದು ತೂಗಿ ಅಂಥದ್ದೇ ಸಿನಿಮಾ ಮೂಲಕ ಜನರನ್ನು ರಂಜಿಸಬಯಸುವವರು. ಹೊಸ ಪ್ರಯೋಗಗಳಿಗೆ ಹಾತೊರೆಯುವ‌ ಮನಸು ಮಾಡದವರು. ಎರಡನೆಯ ವರ್ಗದ ನಿರ್ದೇಶಕರು ತಮ್ಮೊಳಗಿನ‌ ಕಥೆಯನ್ನು ಚೌಕಟ್ಟಿನ ಹಂಗಿಲ್ಲದೆ, ಸಿದ್ಧ ಸೂತ್ರಗಳಿಗೆ ಮೊರೆ ಹೋಗದೇ, ತಮ್ಮದೇ ರೀತಿಯಲ್ಲಿ, ರೂಪಿಸಿ, ನಿರೂಪಿಸಿ ತೆರೆಗೆ ತರುವವರು. ಸದಾ ಹೊಸ ಪ್ರಯೋಗಗಳಿಗೆ‌ ಮಿಡಿಯುವವರು,…

  • ಜ್ಯೋತಿಷ್ಯ

    ದಿನ ಭವಿಷ್ಯ ಶುಕ್ರವಾರ, ಕಾರ್ತೀಕ ಹುಣ್ಣಿಮೆಯ ದಿನ ನಿಮ್ಮ ರಾಶಿ ಭವಿಷ್ಯ ಹೇಗಿದೆ ನೋಡಿ…

    ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕಚಿಂತಕರು 9663218892 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು  ಹಾಗೂನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವುನಿಮ್ಮ ಅನುಮಾನ ಹಾಗೂ ಆತಂಕಗಳನ್ನುಅಳಿಸಬಹುದು ಮತ್ತು ಪ್ರಶ್ನೆಗಳಿಗೆಉತ್ತರಿಸಬಹುದುಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 11 ದಿನದಲ್ಲಿ ಶಾಶ್ವತ ಪರಿಹಾರ9663218892 ಮೇಷ(23 ನವೆಂಬರ್, 2018) ಸಂಜೆಯಲ್ಲಿ ವಿಶ್ರಾಂತಿ ತೆಗೆದುಕೊಳ್ಳಿ. ವಿಳಂಬಿತ ಪಾವತಿಗಳನ್ನು ಮಾಡುತ್ತಿದ್ದ ಹಾಗೆ ಹಣದ ಪರಿಸ್ಥಿತಿ ಸುಧಾರಿಸುತ್ತದೆ. ಕುಟುಂಬ ಮತ್ತು ಸ್ನೇಹಿತರೊಂದಿಗೆ ಆಹ್ಲಾದಕರ…

  • ಆರೋಗ್ಯ

    ಸಕ್ಕರೆ(ಶುಗರ್) ಕಾಯಿಲೆಗೆ ಉತ್ತಮ ಔಷದಿಯಾಗಿರುವ ಮೆಂತೆ …! ಬಗ್ಗೆ ತಿಳಿಯಲು ಈ ಲೇಖನ ಓದಿ..

    ಮನೆಗಳಲ್ಲಿ ಇಲ್ಲದಿರಲು ಸಾಧ್ಯವೇ ಇಲ್ಲ. ಬಹುತೇಕ ಅಡಿಗೆಗಳಲ್ಲಿ ಮೆಂತೆಕಾಳು ತೀರಾ ಅಗತ್ಯ. ರುಚಿಯಲ್ಲಿ ಕಹಿ ಒಗರಿನ ಅನುಭವ ನೀಡುವುದು. ಅದರಲ್ಲಿ ಅನೇಕಾನೇಕ ಆರೋಗ್ಯಕರ ಗುಣಗಳಿವೆ.

  • ಸುದ್ದಿ

    ಸಿಹಿ ಸುದ್ದಿ : ಗ್ಯಾಸ್ ಸಿಲಿಂಡರ್ ಜೊತೆ ಸಿಗುತ್ತೆ 50 ಲಕ್ಷ ರೂ. ಉಚಿತ ವಿಮೆ

    ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ ಗ್ಯಾಸ್ ಸಿಲಿಂಡರ್ ಪಡೆಯುವವರಿಗೆ ಸಿಲಿಂಡರ್ ಜೊತೆ 50 ಲಕ್ಷ ರೂಪಾಯಿವರೆಗೆ ವಿಮೆ ಸಂಪೂರ್ಣ ಉಚಿತವಾಗಿ ಸಿಗಲಿದೆ. ಅಂದ್ರೆ ಅಡುಗೆ ಮಾಡುವ ವೇಳೆ ಸಿಲಿಂಡರ್ ಸ್ಫೋಟಿಸಿ ಅನಾಹುತ ಸಂಭವಿಸಿದ್ರೆ ಕುಟುಂಬಕ್ಕೆ 50 ಲಕ್ಷ ರೂಪಾಯಿಯವರೆಗೆ ಪರಿಹಾರ ಸಿಗಲಿದೆ. ಸರ್ವೆಯೊಂದರ ಪ್ರಕಾರ, ಭಾರತದಲ್ಲಿ ಪ್ರತಿ ವರ್ಷ 100ಕ್ಕೂ ಹೆಚ್ಚು ಮಂದಿ ಸಿಲಿಂಡರ್ ಸ್ಫೋಟಿಸಿ ಸಾವನ್ನಪ್ಪುತ್ತಾರೆ. ಆದ್ರೆ ಅನೇಕ ಬಾರಿ ಜನರು ಇದ್ರ ಪರಿಹಾರವನ್ನು ಪಡೆಯುವುದಿಲ್ಲ. ಪರಿಹಾರದ ಬಗ್ಗೆ ಅವ್ರಿಗೆ ಮಾಹಿತಿಯಿಲ್ಲದಿರುವುದು ಇದಕ್ಕೆ ಕಾರಣ. ಈ…