News

ವಿಜಯನಗರದಲ್ಲಿ ಭಿಕ್ಷಾಟನೆ ಜಾಲ: ಶಾಲೆ ರಜೆ ಎಂದು ಮಕ್ಕಳನ್ನೇ ಭಿಕ್ಷೆಗೆ ಇಳಿಸಿದ್ದ ತಾಯಂದಿರು
ಬ್ಯಾಕ್ ಟು ಬ್ಯಾಕ್ ಟ್ರೋಫಿ ಗೆದ್ದು ಇತಿಹಾಸ ಬರೆದ ಆರ್‌ಸಿಬಿ – ಬೆಂಗಳೂರು
ಶಿಕ್ಷಕರಿಗೆ ಎಐ (AI) ಆಧರಿತ ಹಾಜರಾತಿ ಫಜೀತಿ;
“ಸಿದ್ದರಾಮಯ್ಯ ಸೀಕ್ರೆಟ್ ರಿವೇಂಜ್‌, ಡಿಕೆಶಿ ಮತ್ತು ರಾಹುಲ್‌ ಗಾಂಧಿಗೆ ಸೈಲೆಂಟ್ ಏಟು”
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜೀನಾಮೆ ಘೋಷಣೆ – ಡಿಕೆ ಶಿವಕುಮಾರ್ ಮುಂದಿನ ಸಿಎಂ?
ಸ್ಟೈಲ್‌ಗಾಗಿ ಕಡಿಮೆ ಬೆಲೆಯ ಸನ್‌ಗ್ಲಾಸ್ ಧರಿಸುತ್ತೀರಾ? ಹಾಗಾದರೆ ಈ ಅಪಾಯಗಳ ಬಗ್ಗೆ ತಿಳಿಯಲೇಬೇಕು!
DIGITAL ARREST SCAM : ವೃದ್ಧೆ ಆಸ್ತಿ ಮಾರಿ ಖಾತೆಯಲ್ಲಿಟ್ಟಿದ್ದ 24 ಕೋಟಿ ರೂ ಲೂಟಿ
ಭಾರತದಲ್ಲಿ ಚಿನ್ನದ ಬೇಡಿಕೆಗೆ ದೊಡ್ಡ ಹೊಡೆತ ಬಿದ್ದಿದೆ.
ಸಿಲ್ಕಿ ಮತ್ತು ಶೈನಿಂಗ್ ಕೂದಲಿಗೆ ಬೀಟ್ರೂಟ್‌ನ ಈ ಹೇರ್ ಕೇರ್ ಟಿಪ್ಸ್ ಪ್ರಯತ್ನಿಸಿ
ರಾಜ್ಯದ ಜನತೆಗೆ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆ ಶಾಕ್
ಸುದ್ದಿ

ಆರ್ಥಿಕ ಕುಸಿತ ಎದುರಿಸುವುದು ಹೇಗೆ ಎಂದು ಮೋದಿಗೆ ಆರು ಸಲಹೆ ನೀಡಿದ ಮನಮೋಹನ್ ಸಿಂಗ್,.!

47

ನವದೆಹಲಿ, ಆರ್ಥಿಕತೆಯು ಸಹಜ ಸ್ಥಿತಿಗೆ ಬರಲು ಸರ್ಕಾರವು ಮೊದಲು ಜಿಎಸ್‌ಟಿಯನ್ನು ಸರಳ ಹಾಗೂ ಸುಧಾರಣೆ ಮಾಡಬೇಕು. ಗ್ರಾಮೀಣ ಬಳಕೆಯನ್ನು ಹೆಚ್ಚಿಸಬೇಕು ಮತ್ತು ಬಂಡವಾಳ ಸೃಷ್ಟಿಯ ಸಾಲದ ಕೊರತೆಯ ಸಮಸ್ಯೆಯನ್ನು ಪರಿಹರಿಸಬೇಕು ಎಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಸಲಹೆ ನೀಡಿದ್ದಾರೆ. ಭಾರತವು ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿದೆ ಎಂಬ ಸತ್ಯವನ್ನು ನಿರಾಕರಿಸಲು ಸಾಧ್ಯವಿಲ್ಲ. ಈಗಾಗಲೇ ಸಾಕಷ್ಟು ಸಮಯ ಕಳೆದುಹೋಗಿದೆ. ವಲಯವಾರು ಚೂರು ಚೂರು ಗಮನ ನೀಡುವಂತಹ ರಾಜಕೀಯ ಬಂಡವಾಳವನ್ನು ವ್ಯರ್ಥ ಮಾಡುವ ಬದಲು ಅಥವಾ ಅಪನಗದೀಕರಣದಂತಹ ಶಾಶ್ವತ ಬ್ಲಂಡರ್‌ಗಳನ್ನು ಎಸಗುವ ಬದಲು ಈಗ ರಚನಾತ್ಮಕ ಸುಧಾರಣೆಯ ಮುಂದಿನ ಪೀಳಿಗೆಯನ್ನು ನಡೆಸಬೇಕಾದ ಹೊಣೆ ಸರ್ಕಾರದ ಮೇಲಿದೆ ಎಂದು ಮನಮೋಹನ್ ಸಿಂಗ್ ಹೇಳಿದ್ದಾರೆ.

ನಾನು ಹಣಕಾಸು ಸಚಿವನಾಗಿದ್ದಾಗ ಮತ್ತು ಪ್ರಧಾನಿಯಾಗಿದ್ದಾಗ ನಮಗೆ ಸಂಪೂರ್ಣ ಬಹುಮತ ಸಿಕ್ಕಿರಲಿಲ್ಲ. ಈಗ ಮೋದಿ ಸರ್ಕಾರ ಸತತ ಎರಡು ಬಾರಿ ಬೃಹತ್ ಬಹುಮತದೊಂದಿಗೆ ಆಯ್ಕೆಯಾಗಿದೆ. ಹೀಗಿದ್ದರೂ ನಾವು 1991 ಮತ್ತು 2008ರಲ್ಲಿ ಜಾಗತಿಕ ಹಣಕಾಸು ಬಿಕ್ಕಟ್ಟನ್ನು ಸಮರ್ಥವಾಗಿ ಎದುರಿಸಿದ್ದೆವು’ ಎಂದು ಅವರು ತಿಳಿಸಿದ್ದಾರೆ. ‘ದಿ ಬಿಜಿನೆಸ್ ಲೈನ್’ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಮನಮೋಹನ್ ಸಿಂಗ್ ಅವರು ಮೋದಿ ಸರ್ಕಾರದ ಆರ್ಥಿಕ ನೀತಿಗಳನ್ನು ಟೀಕಿಸಿದ್ದಾರೆ.

ಕಳವಳಕಾರಿಆರ್ಥಿಕ ಕುಸಿತ : ಭಾರತವು ಅತ್ಯಂತಕಳವಳಕಾರಿಯಾಗಿ ಆರ್ಥಿಕ ಕುಸಿತ ಅನುಭವಿಸುತ್ತಿದೆ.ಈ ಕುಸಿತ ಆರ್ಥಿಕತೆಯಪ್ರಮುಖ ವಲಯಗಳಿಗೆ ಭಾರಿ ಹೊಡೆತ ನೀಡಿದೆ.ಈ ಸಮಸ್ಯೆಗಳಿಗೆ ಸರ್ಕಾರವುಪಾರದರ್ಶಕ ರೀತಿಯಲ್ಲಿ ಪರಿಹಾರ ಹುಡುಕಲು ಮುಂದಾಗಬೇಕು.ಪರಿಣತರ ಸಲಹೆ ಪಡೆದುಕೊಳ್ಳಬೇಕು. ಮುಖ್ಯವಾಗಿಸರ್ಕಾರವು ಜನರಲ್ಲಿ ಆತ್ಮವಿಶ್ವಾಸ ಮೂಡಿಸಬೇಕು.ಜತೆಗೆ ಜಗತ್ತಿಗೆ ಸ್ಪಷ್ಟ ಸಂದೇಶ ರವಾನಿಸಬೇಕು.ದುರದೃಷ್ಟವಶಾತ್ ಮೋದಿ ಸರ್ಕಾರದಿಂದ ಅಂತಹಯಾವುದೇ ಪ್ರಯತ್ನ ಇದುವರೆಗೂ ನಡೆದಿರುವುದುಕಂಡಿಲ್ಲ ಎಂದು ಸಿಂಗ್ ಟೀಕಿಸಿದರು.

ಕೃಷಿಗೆ ಹೊಡೆತ ನೀಡಿದ ನೋಟ್ ರದ್ದತಿ : ಆರ್ಥಿಕತೆಯ ಪ್ರಮುಖ ಭಾಗಗಳು ಆರ್ಥಿಕಸಮಸ್ಯೆಗೆ ಸಿಲುಕಿವೆ. ಉದಾಹರಣೆಗೆ ಕೃಷಿ ವಲಯವು ಜಿಡಿಪಿಯ ಶೇ 15ರಷ್ಟು ಕೊಡುಗೆ ನೀಡುತ್ತದೆ. ಅದುಮುಖ್ಯವಾಗಿ ನಡೆಯುವುದು ನಗದು ರೂಪದಲ್ಲಿ. ಮುಖ್ಯವಾಗಿ ಅದು ತೆರಿಗೆ ರಹಿತವಾದದ್ದು. ಆದರೆ ಅಪಗನಗದೀಕರಣದಸಮಯದಲ್ಲಿ ನಗದು ಹಣವನ್ನು ಹಠಾತ್ತಾಗಿ ಹಿಂದಕ್ಕೆ ಪಡೆದುಕೊಂಡ ಪರಿಣಾಮ ಕೃಷಿ ಆರ್ಥಿಕತೆಗೆ ಹೊಡೆತಬಿದ್ದಿತು ಎಂದು ಸಿಂಗ್ ಅರೋಪಿಸಿದ್ದಾರೆ.

ಅಪನಗದೀಕರಣದ ಆತಂಕ ನಿಜವಾಗಿದೆ : ಅಪನಗದೀಕರಣದನಂತರದ ವರ್ಷದಲ್ಲಿ ಜಿಡಿಪಿಯಲ್ಲಿ ಕಾರ್ಪೊರೇಟ್ ಹೂಡಿಕೆಯ ಪ್ರಮಾಣ ಶೇ7.5ರಿಂದ ಶೇ 2.7ಕ್ಕೆ ಕುಸಿದಿದೆ.ಇದು 2010-11ರಲ್ಲಿ ಜಿಡಿಪಿಯ ಶೇ15ರಷ್ಟಿತ್ತು. ಇದರ ಅರ್ಥ, ಕೃಷಿಯಂತಹಅಸಂಘಟಿತ ವಲಯ ಮಾತ್ರವಲ್ಲ, ಸಂಘಟಿತವಲಯ ಕೂಡ ಅಪನಗದೀಕರಣದಿಂದ ಸಂಕಷ್ಟಕ್ಕೆಸಿಲುಕಿದೆ. ಸಣ್ಣ ಮತ್ತು ಮಧ್ಯಮಉದ್ದಿಮೆಗಳು ಅತ್ಯಂತ ಕೆಟ್ಟ ಹೊಡೆತತಿಂದಿವೆ. ಅಪನಗದೀಕರಣದ ನಿರ್ಧಾರದಿಂದ ಉಂಟಾಗುವ ಪರಿಣಾಮವು ದೀರ್ಘಾವಧಿಮತ್ತು ತೀವ್ರವಾಗಿರಲಿದೆ ಎಂಬ ನಮ್ಮ ಕಳವಳಸತ್ಯವಾಗಿದೆ.

ಜಿಎಸ್‌ಟಿಯ ಕಳಪೆ ಅನುಷ್ಠಾನ : ಅಪನಗದೀಕರಣದ ಆಘಾತದ ಬಳಿಕವೂ ಸರ್ಕಾರತರಾತುರಿಯಲ್ಲಿ ಜಿಎಸ್‌ಟಿ ಜಾರಿಮಾಡಿತ್ತು ಆರ್ಥಿಕತೆಗೆ ನೀಡಿದ ಮತ್ತೊಂದು ದೊಡ್ಡಪೆಟ್ಟು. ಜಿಎಸ್‌ಟಿ ಒಂದುರಚನಾತ್ಮಕ ಸುಧಾರಣೆ. ಯುಪಿಎ ಸರ್ಕಾರದ ಅವಧಿಯಲ್ಲಿಯೇಅದನ್ನು ಜಾರಿಗೆ ತರಲು ಪ್ರಯತ್ನಿಸಿದ್ದೆವು.ನಾವು ಸುಧಾರಣೆಯ ಬೆಂಬಲಿಗರು. ಆದರೆ, ಅದನ್ನು ತುಂಬಾಕೆಟ್ಟದಾಗಿ ಅಳವಡಿಸಲಾಯಿತು. ದೊಡ್ಡ ಕಂಪೆನಿಗಳು ಜಿಎಸ್‌ಟಿ ರಸೀದಿ ನೀಡಬಲ್ಲಪೂರೈಕೆದಾರರಿಂದ ಖರೀದಿ ಮಾಡಲು ಆದ್ಯತೆನೀಡಿದ್ದರಿಂದ ಸಣ್ಣ, ಅತಿ ಸಣ್ಣಮತ್ತು ಮಧ್ಯಮ ಉದ್ಯಮಗಳು ಸಂಕಷ್ಟಕ್ಕೆಸಿಲುಕಿದವು.

ಸಣ್ಣ ಮತ್ತು ಮಧ್ಯಮ ಉದ್ಯಮ ತತ್ತರ : ಜಿಎಸ್‌ಟಿ ಅಡಿಯಲ್ಲಿತೀರಾ ಕಡಿಮೆ ಪ್ರಮಾಣದಲ್ಲಿ ಅರ್ಹತೆಗಿಟ್ಟಿಸಿಕೊಳ್ಳುವ ಭಾರತದ ಸಣ್ಣ ಕಂಪೆನಿಗಳಿಗೆಹೂಡುವ ಬದಲು ಆಮದಿಗೆ ಆದ್ಯತೆನೀಡಲಾಯಿತು. ಇಡೀ ಪೂರೈಕೆಯ ಸರಪಳಿಯನ್ನೇತುಂಡರಿಸಲಾಯಿತು. ಈಗ ನಮ್ಮ ಮಾರುಕಟ್ಟೆಗಳಲ್ಲಿಚೀನಾದ ಆಮದು ವಸ್ತುಗಳೇ ತುಂಬಿವೆಎನ್ನುವುದು ನಮಗೆ ತಿಳಿದಿದೆ. ಇಷ್ಟಲ್ಲದೆತೆರಿಗೆ ಅಧಿಕಾರಿಗಳು ತೆರಿಗೆದಾರರಿಗೆ ಕಿರುಕುಳ ನೀಡುತ್ತಿರುವ ವರದಿಗಳೂಬಂದಿವೆ. ಜಿಎಸ್‌ಟಿಯ ಸಂಕೀರ್ಣ,ಬಹುಬಗೆಯ ತೆರಿಗೆಗಳು, ನಿರಂತರ ಬದಲಾಗುವ ಮತ್ತುಸೃಷ್ಟಿಯಾಗುವ ನಿಯಮಗಳು ಮುಂತಾದವು ಸಣ್ಣಮತ್ತು ಮಧ್ಯಮ ಗಾತ್ರದ ಉದ್ಯಮಗಳಿಗೆಗಾಸಿಯುಂಟು ಮಾಡಿವೆ.

ಜಿಎಸ್‌ಟಿಯನ್ನು ಸರಳಗೊಳಿಸಿ: ಪ್ರಧಾನಿಮೋದಿ ಮತ್ತು ಅವರ ಸರ್ಕಾರವುತಮ್ಮ ‘ಶೀರ್ಷಿಕೆ ನಿರ್ವಹಣೆ’ಯ ಹವ್ಯಾಸದಿಂದ ಹೊರಬರಬೇಕು.ತನ್ನ ಆದ್ಯತೆಗಳಲ್ಲಿ ಮೊದಲನೆಯದಾಗಿ ಜಿಎಸ್‌ಟಿಯನ್ನು ಸರಳಮತ್ತು ಸುಧಾರಣೆ ಮಾಡಬೇಕಿದೆ. ಇದರಿಂದಆದಾಯ ಅಲ್ಪಾವಧಿಗೆ ನಷ್ಟವಾದರೂ ತೊಂದರೆಯಿಲ್ಲ. ಎರಡನೆಯದಾಗಿ ಗ್ರಾಮೀಣ ಬಳಕೆಯನ್ನು ವೃದ್ಧಿಸಲುಮತ್ತು ಕೃಷಿಯನ್ನು ಪುನರುಜ್ಜೀವನಗೊಳಿಸಲು ಸೂಕ್ತ ಮಾರ್ಗಗಳನ್ನು ಹುಡುಕಬೇಕು.ಮೂರನೆಯದಾಗಿ, ಬಂಡವಾಳ ಸೃಷ್ಟಿಗೆ ಎದುರಾಗಿರುವಸಾಲದ ಕೊರತೆಯನ್ನು ಬಗೆಹರಿಸಬೇಕು. ಇದು ಸಾರ್ವಜನಿಕವಲಯದ ಬ್ಯಾಂಕುಗಳುಮಾತ್ರವಲ್ಲ, ಎನ್‌ಬಿಎಫ್‌ಸಿಗಳನ್ನೂಉಳಿಸಬೇಕಿದೆ.

ರಫ್ತು ಮಾರುಕಟ್ಟೆ ಪ್ರಯೋಜನ ಬಳಸಿಕೊಳ್ಳಿ : ನಾಲ್ಕನೆಯದಾಗಿಜವಳಿ, ಆಟೋ, ಎಲೆಕ್ಟ್ರಾನಿಕ್ಸ್ ಮತ್ತುದುಬಾರಿಯಲ್ಲದ ಮನೆ ನಿರ್ಮಾಣದಂತಹ ಮುಖ್ಯಉದ್ಯೋಗ ಸೃಷ್ಟಿಯ ವಲಯಗಳನ್ನು ಸುಧಾರಣೆಮಾಡಬೇಕು. ಮುಖ್ಯವಾಗಿ ಎಂಎಸ್‌ಎಂಇಗಳಿಗೆ ಆದ್ಯತೆನೀಡಬೇಕು. ಐದನೆಯದಾಗಿ, ಅಮೆರಿಕ ಮತ್ತು ಚೀನಾನಡುವಿನ ವ್ಯಾಪಾರ ಸಮರದಿಂದಾಗಿ ತೆರೆದುಕೊಂಡಿರುವರಫ್ತು ಮಾರುಕಟ್ಟೆಯನ್ನು ಬಳಸಿಕೊಳ್ಳಲು ಸೂಕ್ತ ಮಾರ್ಗೋಪಾಯಗಳನ್ನು ಕಂಡುಕೊಳ್ಳಬೇಕು.ಕೊನೆಯದಾಗಿ, ಬೃಹತ್ ಮಟ್ಟದ ಸಾರ್ವಜನಿಕಮೂಲಸೌಕರ್ಯದ ಅಭಿವೃದ್ಧಿಗೆ ವಿಶ್ವಾಸಾರ್ಹ ಮಾರ್ಗಸೂಚಿಯನ್ನು ರೂಪಿಸಬೇಕು. ಇದರಲ್ಲಿ ಖಾಸಗಿ ಹೂಡಿಕೆಗೂಗಮನ ಹರಿಸಬೇಕು. ಇವುಗಳು ರಚನಾತ್ಮಕವಾಗಿ ಸುಧಾರಣೆಯಾಗಬೇಕು.ಇವೆಲ್ಲವನ್ನೂ ಸರಿಯಾದ ರೀತಿಯಲ್ಲಿ ನಿಭಾಯಿಸಿದರೆಮುಂದಿನ ಮೂರು ನಾಲ್ಕು ವರ್ಷಗಳಲ್ಲಿಯೇನಾವು ಅತ್ಯುತ್ತಮ ಬೆಳವಣಿಗೆಗೆ ಮರಳಬಹುದು ಎಂದು ಸಿಂಗ್ ತಿಳಿಸಿದ್ದಾರೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ಸಹಕಾರಿ ಬ್ಯಾಂಕ್ ಗಳಿಂದ ಸಾಲದ ನಿರೀಕ್ಷೆಯಲ್ಲಿದ್ದ ರೈತರಿಗೆ ‘ಬಿಗ್ ಶಾಕ್’

    ಹೊಸ ಬೆಳೆ ಸಾಲದ ನಿರೀಕ್ಷೆಯಲ್ಲಿದ್ದ ರೈತರಿಗೆ ಸರ್ಕಾರದಿಂದ ಬಿಗ್ ಶಾಕ್ ನೀಡಿದ್ದು, ಸಾಲ ಮನ್ನಾ ಯೋಜನೆ ಅನುಷ್ಠಾನಕ್ಕೆ ಬ್ರೇಕ್ ಹಾಕಲಾಗಿದೆ. ಸಂಪನ್ಮೂಲ ಕೊರತೆ ಕಾರಣದಿಂದ ರೈತರ ಸಾಲ ಮನ್ನಾ ಯೋಜನೆ ಅನುಷ್ಠಾನಕ್ಕೆ ಸರ್ಕಾರ ತಾತ್ಕಾಲಿಕ ಬ್ರೇಕ್ ಹಾಕಿದೆ ಎನ್ನಲಾಗಿದ್ದು, ಇದರಿಂದಾಗಿ ಸಹಕಾರಿ ಬ್ಯಾಂಕುಗಳಿಗೆ ಸಂಕಷ್ಟ ಎದುರಾಗಿದೆ. ಪರಿಣಾಮ ರೈತರು ಹೊಸದಾಗಿ ಬೆಳೆ ಸಾಲ ಸಾಧ್ಯವಾಗುತ್ತಿಲ್ಲ ಎಂದು ಹೇಳಲಾಗಿದೆ. ಸರ್ಕಾರದ ಸೂಚನೆ ಮೇರೆಗೆ ರೈತರ ಸಾಲ ಮನ್ನಾ ಯೋಜನೆಯಡಿ ಮರುಪಾವತಿ ಮೊತ್ತ ಬಿಡುಗಡೆಯನ್ನು ಹಣಕಾಸು ಇಲಾಖೆ ತಡೆಹಿಡಿದಿದೆ. ಸಹಕಾರ…

  • ಸುದ್ದಿ

    ಏಕಕಾಲಕ್ಕೆ ಪಂಚಭಾಷೆಗಳಲ್ಲಿ ರಿಲೀಸ್ ಆಗಲಿರುವ ಶಿವರಾಜ್‌ ಕುಮಾರ್‌ ಭಜರಂಗಿ 2 ಚಿತ್ರ…!

    ಕನ್ನಡ ಚಿತ್ರಗಳನ್ನು ದೇಶಾದ್ಯಂತ ಎಲ್ಲಭಾಷೆಗಳ ಪ್ರೇಕ್ಷಕರು ನೋಡಿ ಮೆಚ್ಚಿಕೊಳ್ಳುತ್ತಿದ್ದಾರೆ. ಇದೇ ಕಾರಣಕ್ಕೆ ಭಜರಂಗಿ-2 ಸಿನಿಮಾವನ್ನು ಪಂಚಭಾಷೆಗಳಲ್ಲಿ ತಯಾರಿಸುವ ಪ್ಲಾನ್‌ ಮಾಡಿದ್ದೇವೆ. ಸೆಪ್ಟೆಂಬರ್‌ 9ರಿಂದ ಶೂಟಿಂಗ್‌ ಆರಂಭವಾಗಲಿದೆ ಎಂದಿದ್ದಾರೆ ನಿರ್ದೇಶಕ ಎ ಹರ್ಷ.ಕೆಜಿಎಫ್‌ ಸಿನಿಮಾದ ಬಂದ ನಂತರ ಪ್ಯಾನ್‌ ಇಂಡಿಯಾ ಸಿನಿಮಾಗಳನ್ನು ಮಾಡುವ ಟ್ರೆಂಡ್‌ ಸ್ಯಾಂಡಲ್‌ವುಡ್‌ನಲ್ಲಿ ಹೆಚ್ಚುತ್ತಿದ್ದು, ಹಿರಿಯ ನಟ ಶಿವರಾಜ್‌ ಕುಮಾರ್‌ ಇದೀಗ ಅಂತಹ ಚಿತ್ರ ಒಂದರಲ್ಲಿ ನಟಿಸುತ್ತಿದ್ದಾರೆ. ಹರ್ಷ ನಿರ್ದೇಶನದ ‘ಭಜರಂಗಿ-2’ ಚಿತ್ರವನ್ನು ಕನ್ನಡ, ತೆಲುಗು, ತಮಿಳು, ಮಲೆಯಾಳಂ ಹಾಗೂ ಹಿಂದಿಯಲ್ಲಿ ಏಕಕಾಲಕ್ಕೆ ತಯಾರಿಸಲಾಗುತ್ತಿದ್ದು, ಈ…

  • ಸುದ್ದಿ

    ಬೆಂಗಳೂರಿನಲ್ಲಿ ವಿದ್ಯುತ್‍ಗೆ ಮತ್ತೊಬ್ಬ ಯುವಕ ಬಲಿ

    ಈಗಾಗಲೇ ನಗರದಲ್ಲಿ ವಿದ್ಯುತ್ ತಗಲಿ ಮಕ್ಕಳು ಸೇರಿದಂತೆ ವಯಸ್ಕರು ಮೃತಪಟ್ಟಿದ್ದಾರೆ. ಇಂದು ಕೂಡ ವಿದ್ಯುತ್ ತಗಲಿ ಮತ್ತೊಬ್ಬ ಬಾಲಕ ಮೃತಪಟ್ಟಿದ್ದಾನೆ. ಬೆಂಗಳೂರಿನ ಜೆ.ಪಿ ನಗರದ ಜಂಬೂಸವಾರಿ ದಿಣ್ಣೆ ಬಳಿ ಶನಿವಾರ ಮಧ್ಯಾಹ್ನ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಮುನಿರಾಜು ಎಂಬವರ ಪುತ್ರ ಅಕ್ಷಯ್ (8) ಮೃತ ದುರ್ದೈವಿ. ಬಾಲಕ ಸೆಂಟ್ ಫ್ರಾನ್ಸಿಸ್ ಶಾಲೆಯಲ್ಲಿ ಸ್ನೇಹಿತರ ಜೊತೆ ಆಟವಾಡುತ್ತಿದ್ದನು. ಈ ವೇಳೆ ಸ್ಟೇರ್ ಕೇಸ್ ಹತ್ತುವಾಗ ವಿದ್ಯುತ್ ಶಾಕ್ ಹೊಡೆದಿದೆ. ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ…

  • ಸಿನಿಮಾ, ಸುದ್ದಿ

    ಅಪ್ಪನ ಹುಟ್ಟುಹಬ್ಬಕ್ಕೆ ಸ್ಪೆಷಲ್ ಗಿಫ್ಟ್ ನೀಡಿದ ಐರಾ.

    ಕೆಜಿಫ್ ಸ್ಟಾರ್ ಯಶ್ ಅವರು 34ನೇ ವರ್ಷಕ್ಕೆ ಕಾಲಿಟ್ಟು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ಸಂದರ್ಭದಲ್ಲಿ ಯಶ್ ಮುದ್ದಿನ ಮಗಳು ಐರಾ ತನ್ನ ಅಪ್ಪನ ಹುಟ್ಟುಹಬ್ಬಕ್ಕೆ ಕೇಕ್ ತಯಾರಿಸಿದ್ದಾಳೆ. ರಾಧಿಕಾ ತನ್ನ ಮಗಳು ಐರಾ ಜೊತೆ ಕೇಕ್ ತಯಾರಿಸುತ್ತಿರುವ ವಿಡಿಯೋವನ್ನು ಯಶ್ ಅವರ ಇನ್‍ಸ್ಟಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೆ ಅದಕ್ಕೆ ರಾಧಿಕಾ ಅವರು ಸರ್ಪ್ರೈಸ್ ಹಾಗಿ ಯಶ್ ಗೆ ನಿಮ್ಮ ಜೀವನವನ್ನು ನಾವು ಪಡೆದುಕೊಂಡಂತೆ, ನಿಮ್ಮ ಖಾತೆಯನ್ನು ಸಹ ಪಡೆದುಕೊಂಡಿದ್ದೇವೆ ಎಂದು ನಿಮ್ಮ ದೊಡ್ಡ ಅಭಿಮಾನಿಯಾಗಿ ನಮ್ಮ…

  • ಸುದ್ದಿ

    ನೂತನ ಸ್ಪೀಕರ್ ಆಗಿ​ ವಿಶ್ವೇಶ್ವರ ಹೆಗಡೆ ಕಾಗೇರಿ ಆಯ್ಕೆ

    ಬಿ.ಎಸ್​.ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ನಿನ್ನೆ ಸದನದಲ್ಲಿ ಬಹುಮತ ಕೂಡ ಸಾಬೀತು ಮಾಡಿದ್ದಾರೆ. ಬಿಎಸ್​ವೈ ನೇತೃತ್ವದ ಬಿಜೆಪಿ ಸರ್ಕಾರದಲ್ಲಿ ಸ್ಪೀಕರ್​ ಯಾರಾಗಲಿದ್ದಾರೆ ಎಂಬ ಕುತೂಹಲಕ್ಕೆ ಕೊನೆಗೂ ತೆರೆ ಬಿದ್ದಿದೆ. ವಿಶ್ವೇಶ್ವರ ಹೆಗಡೆ ಕಾಗೇರಿ ನೂತನ ಸ್ಪೀಕರ್​ ಆಗಿ ಆಯ್ಕೆಯಾಗಿದ್ದು, ನಾಳೆ ಸದನದಲ್ಲಿ ಈ ಬಗ್ಗೆ ಅಧಿಕೃತ ಘೋಷಣೆ ಆಗಲಿದೆ. ಕಾಂಗ್ರೆಸ್​  ಮತ್ತು ಜೆಡಿಎಸ್​ ನಾಯಕರು ಸ್ಪೀಕರ್​ ಚುನಾವಣೆಯಿಂದ ಹಿಂದೆ ಸರಿದಿದ್ದು, ಯಾವುದೇ ನಾಮಪತ್ರ ಸಲ್ಲಿಸಿರಲಿಲ್ಲ. ಬಿಜೆಪಿಯಿಂದ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತ್ರ ನಾಮಪತ್ರ ಸಲ್ಲಿಕೆ ಮಾಡಿದ್ದರು. ಹೀಗಾಗಿ ಕಾಗೇರಿ…

  • ಜ್ಯೋತಿಷ್ಯ

    ಪರಾಶಕ್ತಿ ಕೃಪೆಯಿಂದ ಈ ರಾಶಿಗಳಿಗೆ ವಿಪರೀತ ಧನಲಾಭವಿದ್ದು ಇದರಲ್ಲಿ ನಿಮ್ಮ ರಾಶಿಯೂ ಇದೆಯಾ ನೋಡಿ

    ದಿನಭವಿಷ್ಯ.22/2/2019 ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕಚಿಂತಕರು 9663218892 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು  ಹಾಗೂನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನುಅಳಿಸಬಹುದು ಮತ್ತು ಪ್ರಶ್ನೆಗಳಿಗೆಉತ್ತರಿಸಬಹುದುಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 11 ದಿನದಲ್ಲಿ ಶಾಶ್ವತ ಪರಿಹಾರ 966 321 8892 ಮೇಷ ನಿಮ್ಮ ಸಂಗಾತಿ ಬೆಂಬಲ ನೀಡುತ್ತಾರೆಹಾಗೂ ಸಹಾಯಮಾಡುತ್ತಾರೆ. ಇಂದುಪ್ರಣಯದ ಯಾವುದೇ ಆಸೆಯಿಲ್ಲ ಇಂದು ಕೆಲಸದಲ್ಲಿ ನಿಮಗೆ…