ಜ್ಯೋತಿಷ್ಯ

ಸೋಮವಾರ ನಿಮ್ಮ ರಾಶಿ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ…ಶೇರ್ ಮಾಡಿ

397

*ನಮ್ಮ ಪೇಜ್ ಲೈಕ್ ಮಾಡಿ ಶೇರ್ ಮಾಡಿ*

ಸೋಮವಾರ, 16 ಏಪ್ರಿಲ್ 2018, ಇಂದಿನ ನಿಮ್ಮ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ…ಪಂಡಿತ್ ಸುದರ್ಶನ್ ಭಟ್  ದೈವಜ್ಞ ಜ್ಯೋತಿಷ್ಯರು ಹಾಗೂ ಆಧ್ಯಾತ್ಮಿಕ ಚಿಂತಕರು ನಿಮ್ಮ ಜೀವನದ ನಿಖರವಾದ ಭವಿಷ್ಯ ತಿಳಿಸುತ್ತಾರೆ ಹಾಗೂ ಸಮಸ್ಯೆಗಳಾದ ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕುಟುಂಬ ವಿದ್ಯೆ ಉದ್ಯೋಗ ಮಕ್ಕಳು ವ್ಯವಹಾರ ಹಣಕಾಸು ಸಮಸ್ಯೆಗಳಿಗೆ ಪರಿಹಾರ ಸೂಚಿಸುವರು 9663542672

ಸೂರ್ಯೋದಯ06:06:55
ಸೂರ್ಯಾಸ್ತ18:46:52
ಹಗಲಿನ ಅವಧಿ12:39:56
ರಾತ್ರಿಯ ಅವಧಿ11:19:11
ಚಂದ್ರೋದಯ06:33:51
ಚಂದ್ರಾಸ್ತ19:10:54

ಋತು:ವಸಂತ
ಆಯನ:ಉತ್ತರಾಯಣ
ಸಂವತ್ಸರ:ವಿಲಂಬಿ
ಸಂವತ್ಸರ (ಉತ್ತರ):ವಿರೋಧಿಕೃತ್
ತಿಂಗಳು (ಅಮಾವಾಸ್ಯಾಂತ್ಯ):ಚೈತ್ರ
ತಿಂಗಳು (ಹುಣ್ಣಿಮಾಂತ್ಯ):ವೈಶಾಖ
ಪಕ್ಷ : ಕೃಷ್ಣ ಪಕ್ಷ
ತಿಥಿ : ಪ್ರಥಮ
ನಕ್ಷತ್ರ : ಅಶ್ವನಿ
ಯೋಗ : ವೆಷ್ಕುಂಭ
ಪ್ರಥಮ ಕರಣ : ನಾಗವ ಭವ
ಸೂರ್ಯ ರಾಶಿ : ಮೇಷ
ಚಂದ್ರ ರಾಶಿ : ಮೇಷ

ಮುಹೂರ್ತ

ರಾಹು ಕಾಲ07:42 – 09:17ಅಶುಭ
ಯಮಘಂಡ ಕಾಲ10:52 – 12:27ಅಶುಭ
ಗುಳಿಕ ಕಾಲ14:02 – 15:37
ಅಭಿಜಿತ್12:02 -12:52ಶುಭ
ದುರ್ಮುಹೂರ್ತ12:52 – 13:43ಅಶುಭ
ದುರ್ಮುಹೂರ್ತ15:24 – 16:15ಅಶುಭ

ಮೇಷ:-

ಆರೋಗ್ಯದ ಬಗ್ಗೆ ಎಚ್ಚರ ಇದ್ದರೆ ಸಾಕು. ಉಳಿದ ಕಿರಿಕಿರಿಗಳನ್ನು ನಿಯಂತ್ರಿಸಬಹುದು. ವಿಷ್ಣು ಸಹಸ್ರನಾಮ ಪಾರಾಯಣದಿಂದ ಸಂಕಷ್ಟ ದೂರವಾಗುವುದು. ಕಾರ್ಯಸಿದ್ಧಿಯ ಭಾವನಾತ್ಮಕ ದುಗುಡತೆಯಿಂದ ದೂರ ಉಳಿಯುವುದು ಒಳ್ಳೆಯದು. ಆರ್ಥಿಕ ಸ್ಥಿತಿ ಉತ್ತಮವಾಗಿರುವುದು.

ವೃಷಭ:-

ಉತ್ತಮವಾದ ವಿಷಯದಲ್ಲಿ ಕ್ಲಿಷ್ಟತೆ ಇದ್ದರೂ ಸರಳವಾಗಿ ನಿಭಾಯಿಸಿಕೊಂಡು ಹೋಗುವ ಶಕ್ತಿಯನ್ನು ಭಗವಂತ ನಿಮಗೆ ಒದಗಿಸಿದ್ದಾನೆ. ನಿಮ್ಮಿಂದ ಮಾರ್ಗದರ್ಶನ ಪಡೆಯುವವರಿಗೆ ಬೇಕಾದ ನಿಮ್ಮ ಸಲಹೆ ಸೂಚನೆಗಳನ್ನು ನೀಡಿ.

ಮಿಥುನ:

ಮಾನಸಿಕ ಖಿನ್ನತೆ ಉಂಟಾಗುತ್ತದೆ. ಅಕ್ಕಿ ಮತ್ತು ಬೆಲ್ಲವನ್ನು ಹಸುವಿಗೆ ನೀಡಿ ಮಹತ್ತರ ಕೆಲಸವನ್ನು ಮುಂದಕ್ಕೆ ಹಾಕುವುದು ಒಳ್ಳೆಯದು. ಶಿವ ಮತ್ತು ಆಂಜನೇಯ ಸ್ತುತಿ ಪಠಿಸಿ.

ಕಟಕ :-

ನೀವೇ ಮುಂದಾಗಿ ನಿಂತು ನಡೆಸುವ ಕೆಲಸಕ್ಕೆ ಮನಸ್ಥೈರ್ಯ ಬೇಕಾಗುವುದು. ಏಕಾಗ್ರತೆಯಿಂದ ಕೆಲಸವನ್ನು ಆರಂಭಿಸಿ. ಮನೋಕಾಮನೆಗಳು ಪೂರ್ಣಗೊಳ್ಳುವುದು ಆದಷ್ಟು ತಾಳ್ಮೆಯಿಂದಿರಿ.

 ಸಿಂಹ:

ಪೂಜ್ಯ ದೃಷ್ಟಿಯಿಂದಲೇ ಅತಿಥಿಯನ್ನು ಸ್ವೀಕರಿಸಿರಿ ಮತ್ತು ಅವರ ಸೇವೆಯನ್ನು ಮಾಡಿ. ಇದರಿಂದ ನಿಮ್ಮ ಮನಃಕ್ಷೋಭೆಯು ತಿಳಿಗೊಳ್ಳುವುದು. ಆರ್ಥಿಕ ಪರಿಸ್ಥಿತಿ ಸಾಧಾರಣವಿದ್ದು, ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕಿ.

ಕನ್ಯಾ :-

ಕಚೇರಿಯ ಕೆಲಸಕಾರ್ಯಗಳನ್ನು ವಿವೇಚನೆಯಿಲ್ಲದೆ ಆತುರದಿಂದ ಮಾಡಬೇಡಿ. ಇದರಿಂದ ಹೊಸ ಸಮಸ್ಯೆಯೊಂದು ಉದ್ಭವ ಆಗುವ ಸಾಧ್ಯತೆ ಇದೆ ಹಾಗಾಗಿ ಇಂದು ಮಾಡುವ ಕೆಲಸವನ್ನು ಮುಂದೂಡುವುದು ಒಳ್ಳೆಯದು.

ತುಲಾ:

ಹೆಚ್ಚುನ ಗಳಿಕೆಗೆ ಇಂದು ಶುಭದಿನವಾಗಿದೆ. ಅದು ಹಣಗಳಿಕೆಯಾಗಿರಬಹುದು. ಇಲ್ಲವೇ ವಿದ್ಯೆಯ ಗಳಿಕೆ ಆಗಿರಬಹುದು. ಇದರಿಂದ ಮಾನಸಿಕ ನೆಮ್ಮದಿ ದೊರೆಯಲಿದೆ ಮತ್ತು ಕೌಟುಂಬಿಕ ಜೀವನದಲ್ಲಿ ನೆಮ್ಮದಿಯ ವಾತಾವರಣ ಕಂಡು ಬರುವುದು.

ವೃಶ್ಚಿಕ :-

ಕೆಲವು ಗ್ರಹಗಳ ಸಂಚಾರದಿಂದ ಇಂದಿನ ನಿಮ್ಮ ಕೆಲಸಕಾರ್ಯಗಳು ಅಡೆ-ತಡೆಯಿಲ್ಲದೆ ಮುಂದೆ ಸಾಗುವುದು. ಸಾರ್ವಜನಿಕ ಕ್ಷೇತ್ರಗಳಲ್ಲಿ ಸಂಘ ಸಂಸ್ಥೆಗಳಿಂದ ಸನ್ಮಾನ ದೊರೆಯುವ ಸಾಧ್ಯತೆ ಇರುವುದು. ಹಣಕಾಸು ಸ್ಥಿತಿ ಉತ್ತಮವಾಗಿರುತ್ತದೆ.

ಧನಸ್ಸು:

ಕೆಲವು ನಾಟಕೀಯ ಘಟನೆಗಳು ನಿಮ್ಮ ಸುತ್ತಮುತ್ತ ವಾತಾವರಣದಲ್ಲಿ ನಡೆಯುವ ಸಾಧ್ಯತೆ ಇದ್ದು, ಅದನ್ನೇ ನಿಜವೆನ್ನುವ ಭ್ರಮೆಗೆ ಒಳಗಾಗುವಿರಿ. ಈ ಭ್ರಮಾಲೋಕದಿಂದ ಹೊರಬಂದಲ್ಲಿ ನೈಜ ಜೀವನದ ದರ್ಶನವಾಗುವುದು. ಆರ್ಥಿಕ ಸ್ಥಿತಿ ಸಾಧಾರಣವಾಗಿರುತ್ತದೆ.

ಮಕರ :-

ನಿಮ್ಮಲ್ಲೆ ಅನೇಕ ರಕ್ಷಣಾವ್ಯೂಹಗಳನ್ನು ಹೆಣೆದು ಬಿಡಬೇಡಿ. ದೇವಿ ಆರಾಧನೆಯ ಜೊತೆಗೆ ಆಂಜನೇಯ ಸ್ತೋತ್ರವನ್ನು ಪಠಿಸಿ. ಪ್ರಯಾಣಕಾಲದಲ್ಲಿ ಎಚ್ಚರಿಕೆ ಅಗತ್ಯ ಖರ್ಚಿಗೆ ತಕ್ಕಷ್ಟು ಹಣ ಬರುವುದರಿಂದ ಈ ದಿನ ತೊಂದರೆ ಇರುವುದಿಲ್ಲ.

ಕುಂಭ:-

ನೇರ ಮಾತುಗಳಿಂದ ನೀವು ಇಂದು ತಮಾಷೆಗಾಗಿ ಆಡಿದ ಮಾತಿನಿಂದ ಸಂಕಷ್ಟಕ್ಕೆ ಸಿಲುಕಿಕೊಳ್ಳುವಿರಿ. ಈ ಬಗ್ಗೆ ಎರಡು ಬಾರಿ ಚಿಂತಿಸಿ ಕಾರ್ಯಪ್ರವೃತ್ತರಾಗಿ. ಪ್ರಯಾಣದಲ್ಲಿ ಎಚ್ಚರಿಕೆ ಬಹಳ ಅಗತ್ಯ.

ಮೀನ:-

ಕಳೆದ ದಿನಗಳ ಅವಮಾನಗಳನ್ನು ನೆನಪಿಸಿಕೊಂಡು ಹಿಂಸೆಯನ್ನು ಅನುಭವಿಸದಿರಿ. ಹೊಸದಾದ ಸಂಕಲ್ಪ ನಿಮಗೆ ಹೊಸತನ ಮತ್ತು ಹೊಸ ಹುಮ್ಮಸ್ಸನ್ನು ತರುವುದು. ಪ್ರಚಲಿತ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಿ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ಹೈಕೋರ್ಟ್ ಮಹತ್ವದ ತೀರ್ಪು:LLR ಇದ್ದರೂ ಅಪಘಾತವಾದ ವೇಳೆ ಪರಿಹಾರ ನೀಡಬೇಕು…!

    ವಾಹನ ಕಲಿಕಾ ಪರವಾನಗಿ (ಎಲ್ಎಲ್ಆರ್) ಹೊಂದಿದ್ದು, ಅಂತಹ ಸಂದರ್ಭದಲ್ಲಿ ಅಪಘಾತವಾದರೆ ವಿಮಾ ಕಂಪನಿಗಳು ಪರಿಹಾರ ನೀಡಬೇಕು ಎಂದು ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಹತ್ತು ವರ್ಷಗಳ ಹಿಂದಿನ ಪ್ರಕರಣವೊಂದರ ತೀರ್ಪು ಈಗ ಹೊರಬಿದ್ದಿದ್ದು, ಎಲ್ಎಲ್ಆರ್ ಇದ್ದ ವೇಳೆ ಅಂತವರು ವಾಹನ ಚಾಲನೆ ಮಾಡುವಾಗ ಡಿಎಲ್ ಹೊಂದಿದ ಪರಿಣಿತರು ಇರಬೇಕೆಂಬ ನಿಯಮವಿದೆ. ಆದರೆ ಇದು ದ್ವಿಚಕ್ರವಾಹನಕ್ಕೋ ಅಥವಾ ನಾಲ್ಕು ಚಕ್ರ ವಾಹನಕ್ಕೋ ಎಂಬುದರ ಕುರಿತು ಸ್ಪಷ್ಟತೆ ಇಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಈ ನಿಯಮ ನಾಲ್ಕು ಚಕ್ರ ವಾಹನಗಳಿಗೆ…

  • ಸುದ್ದಿ

    FlipCart Big Billion Days Offer; 50,000 ಕ್ಕೂ ಹೆಚ್ಚು ನೇರ ಉದ್ಯೋಗಗಳನ್ನು ಸೃಷ್ಟಿಸಿದೆ,.!

    ಸಾಲು ಸಾಲು ಹಬ್ಬಗಳು ಬರುತ್ತಿರುವುದು ಮತ್ತು ಬಿಗ್ ಬಿಲಿಯನ್ ಡೇಗಳು ಬರುತ್ತಿರುವ ಹಿನ್ನೆಲೆಯಲ್ಲಿ ಭಾರತದ ಅತಿ ದೊಡ್ಡ ಇ-ಕಾಮರ್ಸ್ ಮಾರ್ಕೆಟ್‍ಪ್ಲೇಸ್ ಆಗಿರುವ ಫ್ಲಿಪ್‍ಕಾರ್ಟ್ 50,000 ಕ್ಕೂ ಅಧಿಕ ನೇರ ಉದ್ಯೋಗಗಳನ್ನು ಸೃಷ್ಟಿಸಿದೆ. ಫ್ಲಿಪ್‍ಕಾರ್ಟ್‍ನ ಸಪ್ಲೈ ಚೇನ್, ಲಾಜಿಸ್ಟಿಕ್ ಮತ್ತು ಗ್ರಾಹಕ ಬೆಂಬಲ ವಿಭಾಗಗಳಲ್ಲಿ ಈ ಉದ್ಯೋಗಗಳನ್ನು ಸೃಜಿಸಿದೆ. ಇದಲ್ಲದೇ, ಬಿಬಿಡಿ ಅಂದರೆ ಬಿಗ್ ಬಿಲಿಯನ್ ಡೇ ಸಂದರ್ಭದಲ್ಲಿ ಮಾರಾಟ ಜಾಲದಲ್ಲಿ ಶೇ.30 ರಷ್ಟು ಹೆಚ್ಚು ಪರೋಕ್ಷ ಉದ್ಯೋಗಗಳು ಸೃಷ್ಟಿಯಾಗಲಿವೆ. ವರ್ಷದ ದೊಡ್ಡ ಕಾರ್ಯಕ್ರಮವಾದ ಬಿಬಿಡಿ ಸೆಪ್ಟಂಬರ್29 ಕ್ಕೆ…

  • ಜ್ಯೋತಿಷ್ಯ

    ಶಿವರಾತ್ರಿಯೆಂದು ಈ ರಾಶಿಗಳು ಇರುವವರು ಹೀಗೆ ರುದ್ರಾಭಿಷೇಕ ಮಾಡಿದ್ರೆ ಹೆಚ್ಚು ಫಲ..!ಹೇಗೆಂದು ತಿಳಿಯಲು ಈ ಲೇಖನ ಓದಿ…

    ಮಹಾಶಿವರಾತ್ರಿ ದಿನದಂದು ಮಾಡುವ ರುದ್ರಾಭಿಷೇಕಕ್ಕೆ ಬಹಳ ಮಹತ್ವ ಇದೆ.ಅವರವರ ರಾಶಿಗಳಿಗೆ ತಕ್ಕಂತೆ ಮಾಡಿದ್ರೆ ಹೆಚ್ಚು ಪುಣ್ಯ ಪ್ರಾಪ್ತಿಯಾಗುತ್ತೆ ಎಂದು ಹೇಳಲಾಗಿದೆ.

  • ದೇವರು-ಧರ್ಮ

    ದೇವಸ್ಥಾನಗಳಲ್ಲಿ ಹೊಡೆಯುವ ಘಂಟೆಯ ಹಿಂದಿದೆ ನಿಮ್ಗೆ ತಿಳಿಯದ ಈ ರಹಸ್ಯ.!ತಿಳಿಯಲು ಈ ಲೇಖನ ಓದಿ ಮರೆಯದೇ ಶೇರ್ ಮಾಡಿ…

    ಬಹಳಷ್ಟು ಮಂದಿ ನಿತ್ಯ ದೇವಸ್ಥಾನಕ್ಕೆ ಹೋಗುತ್ತಿರುತ್ತಾರೆ.ದೇವಸ್ಥಾನಕ್ಕೆ ಹೋದಾಗ ದೇವರಿಗೆ ಮಂಗಳಾರತಿ ಮಾಡುವ ಸಮಯದಲ್ಲಿ ಸಾಮಾನ್ಯವಾಗಿ ಎಲ್ಲರೂ ಘಂಟೆ ಬಾರಿಸುತ್ತಾರೆ.ಅದರಲ್ಲೂ ಚಿಕ್ಕಮಕ್ಕಳಿಗಂತೂ ಘಂಟೆ ಬಾರಿಸುವುದರಲ್ಲಿ ಎತ್ತಿದ ಕೈ.ಅದರಲ್ಲಿ ಅವರು ಒಂದು ಕೈ ಮುಂದೆನೇ ಇರ್ತಾರೆ. ಆದರೆ ಗುಡಿಯಲ್ಲಿ ಘಂಟೆ ಯಾಕೆ ಹೊಡೀತಾರೆ ಗೊತ್ತಾ..? ಗುಡಿಗೆ ಹೋದವರು ಕಡ್ಡಾಯವಾಗಿ ಘಂಟೆ  ಭಾರಿಸುತ್ತಾರೆ. ಮನೆಯಲ್ಲೂ ಅಷ್ಟೇ ಪೂಜೆ ಮಾಡುತ್ತಿದ್ದಾಗ, ಆರತಿ ಬೆಳಗುತ್ತಿದ್ದಾಗ ಘಂಟೆ  ಹೊಡೆಯುತ್ತಾರೆ… ದೇವಾಲಯಕ್ಕೆ ಹೋದಾಗ ಗಂಟೆ ಹೊಡೆದರೆ ಮನಸ್ಸಿಗೆ ಆಧ್ಯಾತ್ಮಿಕ ಆನಂದ ಸಿಗುವುದಷ್ಟೇ ಅಲ್ಲದೆ ಸಕಲ ಶುಭಗಳು ಸಿದ್ಧಿಸುತ್ತವೆ. ಘಂಟೆಯಲ್ಲಿ…

  • ಮನರಂಜನೆ

    ಭೂಮಿಯನ್ನ ಎತ್ಕೊಂಡು ಹೋಗಿ ಗೇಟ್ ಬಳಿ ಬಿಟ್ಟ ವಾಸುಕಿ, ಶೈನ್

    ರಿಯಾಲಿಟಿ ಶೋ ‘ಬಿಗ್‍ಬಾಸ್ ಸೀಸನ್ 7’ ಕೊನೆಯ ಹಂತ ತಲುಪಿದ್ದು, ಇನ್ನೂ ಎರಡು ದಿನಗಳಲ್ಲಿ ಫಿನಾಲೆ ನಡೆಯಲಿದೆ. ಆದರೆ ಮನೆಯ ಸದಸ್ಯರು ತಮಾಷೆಗೆ ಭೂಮಿಯನ್ನು ಎತ್ತಿಕೊಂಡು ಹೋಗಿ ಬಿಗ್‍ಬಾಸ್ ಗೇಟ್ ಬಳಿ ಬಿಟ್ಟಿದ್ದಾರೆ. ಗುರುವಾರ ಪ್ರಸಾರವಾದ ಸಂಚಿಕೆಯಲ್ಲಿ ಮನೆಯ ಸದಸ್ಯರು ಎದ್ದೇಳುವ ಮೊದಲೇ ಗಾಯಕ ರಘು ದೀಕ್ಷಿತ್ ಬಿಗ್‍ಮನೆಗೆ ಎಂಟ್ರಿ ಕೊಟ್ಟಿದ್ದರು. ನಂತರ ರಘು ದೀಕ್ಷಿತ್ ಹಾಡುವ ಹೇಳುವ ಮೂಲಕ ಸ್ಪರ್ಧಿಗಳನ್ನು ಎದ್ದೇಳಿಸಿದ್ದಾರೆ. ಸ್ಪರ್ಧಿಗಳು ರಘು ದೀಕ್ಷಿತ್ ನೋಡಿ ಅಚ್ಚರಿ ಪಟ್ಟಿದ್ದು, ಅವರು ಹಾಡಿದ ಹಾಡಿಗೆ ಹೆಜ್ಜೆ…

  • ಉಪಯುಕ್ತ ಮಾಹಿತಿ

    ವೋಟರ್ ಲಿಸ್ಟ್’ನಲ್ಲಿ ನಿಮ್ಮ ಮತ್ತು ಊರಿನವರ ಹೆಸರು ಇದೆಯೇ,ಇಲ್ಲವೆಂಬುದನ್ನು ನಿಮ್ಮ ಮೊಬೈಲ್’ನಲ್ಲೇ ಚೆಕ್ ಮಾಡೋದು ಹೇಗೆ ಗೊತ್ತಾ..?ತಿಳಿಯಲು ಈ ಲೇಖನ ಓದಿ…

    ಇನ್ನೇನು ಕರ್ನಾಟಕ ವಿಧಾನಸಭೆ ಚುನಾವಣೆ ಹತ್ತಿರ ಬರ್ತಿದೆ.ನಮ್ಮಲ್ಲಿ ವೋಟರ್ ಕಾರ್ಡ್ ಇದ್ರೂ ಕೂಡ ಮತದಾರರ ಪಟ್ಟಿಯಲ್ಲಿ ನಮ್ಮ ಹೆಸರು ಇದೆಯೋ,ಇಲ್ಲವೋ ಎಂಬ ಅನುಮಾನ ಕಾಡುವುದು ಸಹಜ.

    ಆದ್ರೆ ನಿಮಗೆ ಅನುಮಾನ ಬೇಡ.ನಿಮ್ಮ ಹೆಸರು ಅಥವಾ ಬೇರೆ ಯಾರದೇ ಹೆಸರಾಗಲಿ ಮತದಾರರ ಪಟ್ಟಿಯಲ್ಲಿ ಇದೆಯೋ ಇಲ್ಲವೆಂಬುದನ್ನು ನಿಮ್ಮ ಮೊಬೈಲ್’ನಲ್ಲಿ ನೀವೇ ನೋಡಬಹುದು.