ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಜನಪ್ರಿಯ ರಿಯಾಲಿಟಿ ಶೋ ಕನ್ನಡದ ಬಿಗ್ ಬಾಸ್ ರಿಯಾಲಿಟಿ ಶೋ ಮತ್ತೊಮ್ಮೆ ಕೆಟ್ಟ ಕಾರಣಕ್ಕೆ ಸುದ್ದಿಯಾಗಿದ್ದು, ಶೋಗೆ ಅತಿಥಿಯಾಗಿ ಬಿಗ್ ಬಾಸ್ ಮನೆಗೆ ಬಂದಿದ್ದ ಕಿರಿಕ್ ಹುಡುಗಿ ಸಂಯುಕ್ತ ಹೆಗ್ಡೆ ಬಿಗ್ ಬಾಸ್ ಮನೆಯಲ್ಲೂ ಕಿರಿಕ್ ಮಾಡಿಕೊಂಡು ಹೊರ ಬಂದಿದ್ದಾರೆ.

ಅತಿಥಿಯಾಗಿ ಬಿಗ್ ಬಾಸ್ ಮನೆಗೆ ಬಂದಿದ್ದ, ನಟಿ ಸಂಯುಕ್ತ ಹೆಗಡೆ ಮನೆಗೆ ಬಂದು ಇನ್ನೂ 15 ದಿನಗಳೂ ಕಳೆದಿಲ್ಲ ಆಗಲೇ ಸಹಸ್ಪರ್ಧಿ ಮೇಲೆ ಹಲ್ಲೆ ಮಾಡಿ ಶೋನಿಂದ ಕಿಕ್ ಔಟ್ ಆಗಿದ್ದಾರೆ. ಪ್ರತಿ ದಿನದ ಟಾಸ್ಕ್ ನಂತೆ ಬುಧವಾರ ಸ್ಪರ್ಧಿಗಳಿಗೆ ಟಾಸ್ಕ್ ವೊಂದನ್ನು ನೀಡಲಾಗಿತ್ತು.

ಅದರಂತೆ ಮಹಿಳಾ ತಂಡ ಹಾಗೂ ಪುರುಷ ತಂಡದ ಸ್ಪರ್ಧಿಗಳಿಗೆ ದಾರ ಕಟ್ಟಿದ ಗೋಪುರವನ್ನು ನೀಡಲಾಗಿತ್ತು. ಪುರುಷ ಸ್ಪರ್ಧಿಗಳು ಮಹಿಳಾ ಸ್ಪರ್ಧಿಗಳ ಬಳಿ ಇರುವ ಗೋಪುರದ ದಾರವನ್ನು ಕತ್ತರಿಯಿಂದ ಕತ್ತರಿಸಬೇಕಿತ್ತು. ಈ ವೇಳೆ ತನ್ನನ್ನು ಸಮೀರ್ ಆಚಾರ್ಯ ಮುಟ್ಟಿದ್ರು ಅಂತ ಸಂಯುಕ್ತ ಅವರ ಮೇಲೆ ಕೈ ಮಾಡಿದ್ದಾರೆ. ಅಲ್ಲದೆ ಎರಡುಬಾರಿ ಅವರಿಗೆ ಹೊಡೆದಿದ್ದಾರೆ. ಈ ಕಾರಣದಿಂದ ಟಾಸ್ಕ್ ಅರ್ಧಕ್ಕೆ ನಿಂತಿತು.

ಈ ವೇಳೆ ಇಬ್ಬರನ್ನು ಕನ್ಫೆಶನ್ ರೂಮ್ ಗೆ ಕರೆದ ಬಿಗ್‍ಬಾಸ್ ಸಮೀರ್ ಮತ್ತು ಸಂಯುಕ್ತಾ ಹೇಳಿಕೆಯನ್ನು ಪಡೆದರು. ಕಡೆಗೆ ಸಂಯುಕ್ತಾ ಭಾವಾವೇಷದಿಂದ ಸಮೀರ್ ಮೇಲೆ ಕೈ ಮಾಡಿದ್ದಾರೆಂದು ಹೊರ ಹೋಗುವಂತೆ ಆದೇಶಿದರು.

ಮನೆಯಿಂದ ಹೊರ ಹೋಗುವ ಮುನ್ನ ಸಂಯುಕ್ತಾ ಸಮೀರ್ ಬಳಿ ಕ್ಷಮೆ ಕೇಳಿದರು. ಸಮೀರ್ ಕೂಡಾ ಸಂಯುಕ್ತಾರನ್ನು ಉದ್ದೇಶಿಸಿ ಇನ್ನೊಮ್ಮೆ ಯಾರ ಬಳಿಯೂ ಹೀಗೆ ಕೋಪ ಮಾಡಿಕೊಳ್ಳಬೇಡಿ ಎಂದು ಹೇಳಿ ಸಂಯುಕ್ತಾರನ್ನು ಮನೆಯಿಂದ ಬೀಳ್ಕೊಟ್ಟರು.

ಬಿಗ್ ಬಾಸ್ ಸೀಸನ್ 4ರ ವಿನ್ನರ್ ಪ್ರಥಮ್ ಪ್ರತಿಕ್ರಿಯೆ:-
ಸಂಯುಕ್ತಾ ಬಿಗ್ ಬಾಸ್ ಮನೆಯಲ್ಲಿ ಸಮೀರ್ ಆಚಾರ್ಯರಿಗೆ ಕಪಾಳಕ್ಕೆ ಹೊಡೆದಿರುವ ವಿಚಾರ ನನ್ನ ಗಮನಕ್ಕೆ ಬಂತು. ಬಿಗ್ ಬಾಸ್ ಜೀವನದ ಪಾಠವನ್ನು ಕಲಿಸುತ್ತದೆ. ಹೇಗಂದ್ರೆ ನಾವು ಅಲ್ಲಿದ್ದಾಗ ನಮ್ಮ ತಂಡದ ಮೇಲೆ ಅಭಿಮಾನ ಪ್ರೀತಿ ಹುಟ್ಟಿಕೊಳ್ಳುತ್ತದೆ. ಸಂಯುಕ್ತಾ ಹೆಗಡೆ ತಾವು ಥ್ರಿಲ್ಲರ್ ಮಂಜು ತಂಗಿ ತರನೋ, ಬ್ರೂಸ್ಲಿ ಬಾಮೈದ ಅಂತಾ ತಿಳಿದುಕೊಂಡು ಸಮೀರ್ ಅವರ ಮೇಲೆ ಕೈ ಮಾಡಿದ್ದು ನನಗ್ಯಾಕೋ ಅದು ಸರಿ ಅನ್ನಿಸುತ್ತಿಲ್ಲ ಅಂತಾ ಪ್ರಥಮ್ ತಿಳಿಸಿದ್ದಾರೆ.

ಸಮೀರ್ ಆಚಾರ್ಯ ಹೊರಗಡೆ ಅಡುಗೆ ಮಾಡಿಕೊಂಡು ತುಂಬಾ ಶಿಸ್ತಿನಿಂದ ಆ ಮನೆಯಲ್ಲಿದ್ದಾರೆ. ಸಮೀರ್ ಅವ್ರಿಗೆ ಮದುವೆಯಾಗಿದ್ದು, ಅಂತಹ ದೊಡ್ಡ ವ್ಯಕ್ತಿಯ ಮೇಲೆ ಚಿಕ್ಕ ಹುಡುಗಿ ಸಂಯುಕ್ತಾ ತುಂಬಾ ಆತುರ ಮಾಡಿಕೊಂಡರೇನೋ ಅಂತಾ ಅನ್ನಿಸಿತು. ಜನರು ಸಂಯುಕ್ತಾರನ್ನು ಕ್ಷಮಿಸುವ ದೊಡ್ಡ ಮನಸ್ಸು ಮಾಡಬೇಕು ಎಂದು ನಾನು ಕೇಳಿಕೊಳ್ಳುತ್ತೇನೆ ಅಂತಾ ಪ್ರಥಮ್ ಮನವಿ ಮಾಡಿಕೊಂಡರು.

ಕಿರಿಕ್ ರಾಣಿಯ ಕಿರಿಕ್ ಇದೇ ಮೊದಲಲ್ಲ…
ಬಿಗ್ ಬಾಸ್ ಮನೆ ಪ್ರವೇಶಕ್ಕೂ ಮುನ್ನ ತಮ್ಮ ಅಭಿನಯದ ಕಾಲೇಜ್ ಕುಮಾರ್ ಚಿತ್ರಕ್ಕೆ ಸಂಬಂಧಿಸಿದಂತೆಯೂ ನಿರ್ಮಾಪಕರೊಂದಿಗೆ ಕಿರಿಕ್ ಮಾಡಿಕೊಂಡಿದ್ದ ಸಂಯುಕ್ತ ಚಿತ್ರದ ಪ್ರಚಾರ ಕಾರ್ಯಕ್ರಮಕ್ಕೆ ಆಗಮಿಸಲಿಲ್ಲ ಎಂದು ನಿರ್ಮಾಪಕರು ದೂರಿದ್ದರು. ಇದೀಗ ಮತ್ತೊಮ್ಮೆ ಬಿಗ್ ಬಾಸ್ ಮನೆಯಲ್ಲೂ ಕಿರಿಕ್ ಮಾಡಿಕೊಂಡು ಶೋಯಿಂದ ಹೊರ ನಡೆದಿದ್ದಾರೆ.

ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಭಾರತಕ್ಕೆ ಸ್ವಾತಂತ್ರ್ಯ ಬಂದು 70 ವರ್ಷ ಕಳೆದರೂ ಇಲ್ಲಿಯವರೆಗೆ ಇಸ್ರೇಲ್’ಗೆ ಭಾರತದ ಯಾವ ಪ್ರಧಾನಿಯೂ ಭೇಟಿ ನೀಡಿರಲಿಲ್ಲ, ಕಾರಣ ಇಸ್ರೇಲ್’ಗೆ ಭೇಟಿ ಕೊಟ್ಟರೆ, ಎಲ್ಲಿ ತಮ್ಮ ದೇಶದ ಮುಸಲ್ಮಾನರ ಹಾಗೂ ಅರಬ್ ದೇಶಗಳ ವಿರೋಧ ಕಟ್ಟಿಕೊಳ್ಳಬೇಕಾಗುತ್ತೋ ಅಂತ ಇಲ್ಲಿಯವರೆಗೂ ಇಸ್ರೇಲ್’ಗೆ ಭಾರತದ ಯಾವ ಪ್ರಧಾನಿಯೂ ಭೇಟಿ ಕೊಟ್ಟಿರಲಿಲ್ಲ.
ನಾವು ಮನೆ ಮುಂದೆ ಕೆಲವೊಂದು ಗಿಡ ಗಳನ್ನು ನೆಡುವುದು ಸಾಮಾನ್ಯ. ಆದರೆ ಕೆಲವೊಂದು ಗಿಡಗಳನ್ನು ನೆಟ್ಟರೆ ಶ್ರೀಮಂತಿಕೆ ಬರುತ್ತೆ ಎನ್ನುವ ನಂಬಿಕೆ ಇದೆ. ಅದರಲ್ಲಿ ಒಂದು ಗಿಡದ ಹೆಸರು ಮನಿಪ್ಲಾಂಟ್.
ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಆಧ್ಯಾತ್ಮಿಕಚಿಂತಕರು 9663218892 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗೂನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವುನಿಮ್ಮ ಅನುಮಾನ ಹಾಗೂ ಆತಂಕಗಳನ್ನುಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದುಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 11 ದಿನದಲ್ಲಿ ಶಾಶ್ವತ ಪರಿಹಾರ 9663218892 Raghavendrastrology@gmail.com ಮೇಷ(27 ಡಿಸೆಂಬರ್, 2018) ವಿಳಂಬಿತ ಪಾವತಿಗಳನ್ನು ಮಾಡುತ್ತಿದ್ದ ಹಾಗೆ ಹಣದ ಪರಿಸ್ಥಿತಿ ಸುಧಾರಿಸುತ್ತದೆ. ಕುಟುಂಬದ ಸದಸ್ಯರು ನಿಮ್ಮ ಜೀವನದಲ್ಲಿ ಒಂದು…
ಇದು ಪ್ಲಾಸ್ಟಿಕ್ ಯುಗ ಮನುಷ್ಯ ಪ್ರತಿಯೊಂದಕ್ಕೂ ಪ್ಲಾಸ್ಟಿಕ್ ಮೇಲೆ ಅವಲಂಬಿತವಾಗಿದ್ದಾರೆ. ತಾನು ಬಳಸುವ ದಿನನಿತ್ಯದ ಹಲವು ವಸ್ತುಗಳು ಅಷ್ಟಲ್ಲದೆ ತಿನ್ನಲು, ಕುಡಿಯಲು ಬಳಸುವ ವಸ್ತು ಸಹ ಪ್ಲಾಸ್ಟಿಕ್ ನಿಂದಲೇ ಕೂಡಿರುತ್ತದೆ. ಆದರೆ ಈ ಪ್ಲಾಸ್ಟಿಕ್ ಮನುಷ್ಯನ ಜೀವಕ್ಕೆ ಮುಂದೊಂದು ದಿನ ಕುತ್ತು ತರುತ್ತದೆ ಎಂದು ತಿಳಿದು ಎಚ್ಚೆತ್ತುಕೊಳ್ಳುವುದು ಬಹಳ ಮುಖ್ಯ. ಮನುಷ್ಯನ ಆರೋಗ್ಯ ಹದಗೆಡದಂತೆ ಕಾಪಾಡಿಕೊಳ್ಳಬೇಕಾದ ಸಣ್ಣದೊಂದು ಈ ಸಲಹೆಯನ್ನು ಅನುಸರಿಸಿ. ಏನಾದು ಅಂತೀರಾ? ಹೌದು ನಾವು ದಿನನಿತ್ಯ ಬಳಸುವ ಕೆಲವು ಪ್ಲಾಸ್ಟಿಕ್ ತಟ್ಟೆ, ಪ್ಲಾಸ್ಟಿಕ್ ಲೋಟ,…
ಮಂಗಳೂರು ಹಾಗೂ ಮುಂಬೈಗೆ ಭಾರೀ ಅಪಾಯವೊಂದು ಕಾದಿದೆ. ಸಮುದ್ರ ತೀರಕ್ಕೆ ಎರಡೂ ನಗರಗಳು ಹತ್ತಿರದಲ್ಲಿರುವುದರಿಂದ ಅಪಾಯದ ಅಂಚಿನಲ್ಲಿದೆ. ಅಂಟಾರ್ಕಿಟಿಕಾದಲ್ಲಿ ಹಿಮ ಕರುಗುತ್ತಿರುವುದರಿಂದ ಸಮುದ್ರ ಮಟ್ಟ ದಿನೇ ದಿನೇ ಹೆಚ್ಚಾಗುತ್ತಿದ್ದು ಸಮುದ್ರದ ಅಕ್ಕಪಕ್ಕ ಇರುವ ನಗರಗಳಿಗೆ ಅಪಾಯ ಕಾದಿದೆ ಎಂದು ನಾಸಾ ಹೊರ ತಂದಿರುವ ಡೇಟಾ ಪ್ರಕಾರ ನ್ಯೂಯಾರ್ಕ್ ಪತ್ರಿಕೆ ವರದಿ ಮಾಡಿದೆ.
ಪತಿಗೆ ಆಯಸ್ಸು ಆರೋಗ್ಯ, ಅಭಿವೃದ್ಧಿ ನೀಡಲೆಂದು ಬೇಡಿಕೊಂಡು ದೀರ್ಘಕಾಲ ಸುಮಂಗಲಿಯಾಗಿರುವಂತೆ ಹರಸಲು ಬೇಡುವ ಹಬ್ಬವೇ ‘ಭೀಮನ ಅಮವಾಸ್ಯೆ.