ಕೋಲಾರ: ತಾಲೂಕಿನ ಐತರಾಸನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ವಿಜ್ಞಾನ ಸಹ ಶಿಕ್ಷಕರಾದ ಸಿ.ಮುನಿರಾಜು ಅವರಿಗೆ ಕರ್ನಾಟಕದಲ್ಲಿ ಏಕಕಾಲಕ್ಕೆ ಅತೀ ಹೆಚ್ಚು ಕೌಶಲ್ಯ ಆಧಾರಿತ ತರಬೇತಿ ಕಾರ್ಯಕ್ರಮಗಳನ್ನು ಕರ್ನಾಟಕದ ವಿವಿಧ ವಿಭಾಗಗಳಲ್ಲಿ ಒಂದೇ ಬಾರಿಗೆ ಆಯೋಜಿಸಿ ಅನುಷ್ಠಾನಗೊಳಿಸಿದ್ದಕ್ಕೆ ಏಷ್ಯಾ ಬುಕ್ ಆಫ್ ರೆಕಾರ್ಡ್ 2023 ಅವಾರ್ಡ್ ನೀಡಲಾಗಿದೆ.

ಈ ರೆಕಾರ್ಡನ್ನು ಕರ್ನಾಟಕ ಜೂನಿಯರ್ ಚೆಂಬರ್ ಇಂಟರ್‌ನ್ಯಾಷನಲ್ ಕರ್ನಾಟಕ ತಂಡದಿಂದ ಆಯೋಜಿಸಿದ್ದು, ಕರ್ನಾಟಕದ 253 ಶಾಲೆಗಳಲ್ಲಿ 13 ರಿಂದ 18 ವರ್ಷದೊಳಗಿನ ಮಕ್ಕಳಿಗೆ “ಬದುಕಿನಲ್ಲಿ ನಿರ್ಧಾರ ತೆಗೆದುಕೊಳ್ಳು ವಿಕೆ” ಕುರಿತು ತರಬೇತಿ ನೀಡಲಾಗಿದೆ. ಈ ತರಬೇತಿಯು ಮಕ್ಕಳಲ್ಲಿ ಕೌಶಲ್ಯ ಮತ್ತು ವ್ಯಕ್ತಿತ್ವ ಬೆಳವಣಿಗೆ ಹೆಚ್ಚಿಸುವಲ್ಲಿ ಕಾರಣವಾಗಿದ್ದು, ಜಿಲ್ಲೆಯಿಂದ ಸಿ.ಮುನಿರಾಜುರವರು ಭಾಗವಹಿಸಿ ಈ ಯಶಸ್ಸು ಪಡೆದಿರುತ್ತಾರೆ. ಇತ್ತೀಚೆಗೆ ತುಮಕೂರು ಜಿಲ್ಲೆಯಲ್ಲಿ ನಡೆದ ಸಮಾರಂಭದಲ್ಲಿ ಏಷ್ಯಾ ಬುಕ್ ಆಫ್ ರೆಕಾರ್ಡ್ 2023 ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಪ್ರಶಸ್ತಿ ಸ್ವೀಕರಿಸಿ ಸಿ.ಮುನಿರಾಜು ಮಾತನಾಡಿ, ನನ್ನ ಈ ಸಾಧನೆಗೆ ಸಹಕಾರ ನೀಡಿದ ಜೆಸಿಐ ಸಂಸ್ಥೆ, ಮನೋಬಲ ತಂಡಕ್ಕೆ ಹಾಗೂ ಡಿಡಿಪಿಐ ಕೃಷ್ಣಮೂರ್ತಿರವರಿಗೆ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಕನ್ನಯ್ಯರವರಿಗೆ, ಹಾಗೂ ಸಿಆರ್‌ಪಿ ಮಧುಸೂದನ್‌ರವರಿಗೆ ಹಾಗೂ ಐತರಸನಹಳ್ಳಿ ಶಾಲೆಯ ಶಿಕ್ಷಕ ವರ್ಗ, ಸಿಬ್ಬಂದಿ ಹಾಗೂ ಶಾಲಾ ಮಕ್ಕಳಿಗೆ ಆಭಾರಿಯಾಗಿರುತ್ತೇನೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಜೆ.ಸಿ.ಐ.ನ ಪದಾಧಿಕಾರಿಗಳು ಹಾಗೂ ನಿರ್ದೇಶಕರಾದ ಜೆ.ಸಿ. ಜನಾರ್ಧನ, ಯೋಜನಾ ನಿರ್ದೇಶಕರಾದ ಜೆ.ಸಿ, ನಯನಾ ಜನಾರ್ಧನ, ಜೆ.ಸಿ, ಉಮಾಮಹೇಶ, ಅಧ್ಯಕ್ಷರಾದ ಜೆ.ಸಿ, ಕುನಾಲ್ ಮಾಣಿಕಚಂದ, ಶಾಲಿನಿ ಮುನಿರಾಜು ಮತ್ತಿತರರು ಹಾಜರಿದ್ದರು.