ಸ್ಪೂರ್ತಿ

19 ವರ್ಷದ ಈ ಯುವತಿ ತನ್ನ ಓದಿಗಾಗಿ ಮಾಡಿದ್ದು ಏನು ಗೊತ್ತಾ..!ಮುಂದೆ ಓದಿ ಶಾಕ್…

507

ಜೀವನ ನಾವು ಅಂದುಕೊಂಡಷ್ಟು ಸುಲಭವೂ ಅಲ್ಲ, ಹಾಗೆಯೇ ಕಷ್ಟವೆಂದು ಕುಳಿತು ಕೊಳ್ಳುವಷ್ಟು ಕಷ್ಟವು ಅಲ್ಲ. ಜೀವನದಲ್ಲಿ ಕಷ್ಟ ಸುಖ ಎರಡು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಒಮ್ಮೆ ಕಷ್ಟ ಬಂದರೆ ಮತ್ತೊಮ್ಮೆ ಸುಖ ಬರುತ್ತದೆ. ಕಷ್ಟ ಬಂದಾಗ ಕುಗ್ಗದೆ, ಸುಖ ಬಂದಾಗ ಹಿಗ್ಗದೇ ಜೀವನವನ್ನ ನಡೆಸ ಬೇಕು. ಕಷ್ಟಗಳು ಬಂದವೆಂದು ತಲೆ ಮೇಲೆ ಕೈ ಹೊತ್ತು ಕುಳಿತುಕೊಳ್ಳುವ ಬದಲು ಛಲದಿಂದ ಕಷ್ಟಗಳನ್ನ ಎದುರಿಸಿ ಮುಂದೆ ಸಾಗಬೇಕು. ನಾವೀಗ ಹೇಳಲಿರುವ ಯುವತಿ ಸಹ ಇದೇ ಪಟ್ಟಿಗೆ ಸೇರುತ್ತಾಳೆ. ನಿತ್ಯ ಕಷ್ಟಗಳೊಂದಿಗೆ ಸಹವಾಸ ಮಾಡುತ್ತಾ ತಾನು ಅಂದುಕೊಂಡ ಗುರಿಯೆಡೆಗೆ ಯಶಸ್ವಿಯಾಗಿ ಮುಂದೆ ಸಾಗುತ್ತಿದ್ದಾರೆ.

ಆಕೆ ಹೆಸರು ನೀತೂ. ವಯಸ್ಸು 19 ವರ್ಷಗಳು. ಈಕೆಯದ್ದು ಬಡ ಕುಟುಂಬ. ತಂದೆ ಸಂಪಾದಿಸುವ ಅಲ್ಪಸ್ವಲ್ಪ ಆದಾಯದಲ್ಲಿ ಅವರು ಸಂಸಾರ ತೂಗಬೇಕು. ಕೆಲಸ ಇಲ್ಲ ಅಂದರೆ ಕಷ್ಟ. ಇನ್ನು ಆಕೆಯ ಓದಿನ ಸಂಗತಿ? ಆಕೆ 8ನೇ ಕ್ಲಾಸಲ್ಲಿ ಇರಬೇಕಾದರೆ ತಂದೆ ಹೇಳಿದ, ಶಾಲೆ ಬಿಡಬೇಕೆಂದು. ಇದರಿಂದ ನೀತೂ ಶಾಕ್‌ ಗೆ ಗುರಿಯಾದಳು. ಯಾವುದೇ ಕಾರಣಕ್ಕೂ ಓದು ಬಿಡಬಾರದೆಂದು, ಓದುವುದೆಂದರೆ ನನಗೆ ತುಂಬಾ ಇಷ್ಟವೆಂದು, ದಯವಿಟ್ಟು ಶಾಲೆ ಬಿಡಿಸಬೇಡಿ ಎಂದು ತಂದೆಯನ್ನು ಕೇಳಿಕೊಂಡಳು.

ಆದರೂ ಅವರೇನು ಮಾಡಲು ಸಾಧ್ಯ, ಒಂದು ಹೊತ್ತಿನ ಊಟಕ್ಕೂ ಕಷ್ಟಪಡಬೇಕಾದ ಪರಿಸ್ಥಿತಿ ಅವರದು. ಇದರಿಂದ ತಂದೆ ನೋವನ್ನು ಆಕೆ ಅರ್ಥ ಮಾಡಿಕೊಂಡಳು. ತನ್ನ ಓದಿನ ಭಾರವನ್ನು ತಂದೆ ಮೇಲೆ ಹಾಕಬಾರದು ಎಂದು, ತನ್ನ ಓದಿಗೆ ಆಗುವ ಖರ್ಚನ್ನು ತಾನೇ ಸಂಪಾದಿಸಿಕೊಳ್ಳಬೇಕು ಎಂದುಕೊಂಡಳು. ತಾನಿರುವ ಮನೆಗೆ 5 ಕಿ.ಮೀ ದೂರದಲ್ಲಿ ಇರುವ ಮನೆಗಳಿಗೆ ನಿತ್ಯ ನೀತೂ ಹಾಲನ್ನು ವಿತರಿಸುವ ಕೆಲಸ ಆಯ್ಕೆ ಮಾಡಿಕೊಂಡಳು.

ನಿತ್ಯ ಬೆಳಗ್ಗೆ 4 ಗಂಟೆಗೆ ಏಳುವುದು, ಹಾಲನ್ನು ತೆಗೆದುಕೊಂಡು ಹೋಗಿ ಕಾಲ್ನಡಿಗೆಯಲ್ಲಿ 5 ಕಿ.ಮೀವರೆಗೂ ಓಡಾಡುತ್ತಾ ಹಾಲು ವಿತರಿಸುವುದು, ಮನೆಗೆ ಮರಳಿ ಶಾಲೆಗೆ ಹೋಗುವುದು…ಇದು ಆಕೆ ನಿತ್ಯದ ಕಾಯಕ. ಆ ರೀತಿ ಆಕೆ ತಾನು ಸಂಪಾದಿಸಿದ ಹಣದಿಂದ ಓದಿಕೊಳ್ಳುವುದನ್ನು ಆರಂಭಿಸಿದರು. ಅದರ ಮೇಲೆ ಸ್ವತಃ ಹಾಲು ಮಾರುತ್ತಾರೆ. ಈಗ ಆಕೆ ತಿಂಗಳಿಗೆ ರೂ.12 ಸಾವಿರವರೆಗೂ ಸಂಪಾದಿಸುತ್ತಾಳೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಆರೋಗ್ಯ

    ಅತಿ ವ್ಯಾಯಾಮ ಮಾಡುವುದರಿಂದ ಆರೋಗ್ಯಕ್ಕೆ ಆಗುವ ತೊಂದರೆಗಳು ನಿಮಗೆ ಗೊತ್ತಾ..? ತಿಳಿಯಲು ಈ ಲೇಖನ ಓದಿ…

    ದೇಹದ ತೂಕವನ್ನು ಇಳಿಸುವುದು ಇತ್ತೀಚಿನ ದಿನಗಳಲ್ಲಿ ಒಂದು ಸವಾಲಾಗಿ ಪರಿಣಮಿಸಿದೆ. ದೇಹಕ್ಕೆ ಶ್ರಮ ನೀಡದಿರುವುದು, ಅನಾರೋಗ್ಯಕರ ಆಹಾರ ಶೈಲಿ, ಅನಿಯಂತ್ರಿತ ಬೊಜ್ಜು ಪದಾರ್ಥಗಳ ಸೇವನೆ, ಒತ್ತಡ ಈ ಎಲ್ಲವೂ ಸೇರಿ ದೇಹದ ತೂಕವನ್ನು ಹೆಚ್ಚಿಸುತ್ತವೆ.

  • ರಾಜಕೀಯ

    ಈ ಸಮೀಕ್ಷೆಯ ಪ್ರಖಾರ ದೇಶದ ಅತ್ಯಂತ ಜನಪ್ರಿಯ ವ್ಯಕ್ತಿ ಮತ್ತು ರಾಜಕಾರಣಿ ಯಾರು ಗೊತ್ತಾ..?

    ಇನ್ನೇನು ಲೋಕಸಭಾ ಚುನಾವಣಾ ಹತ್ತಿರ ಆಗುತ್ತಿದ್ದು, ಎಲ್ಲಾ ರಾಜಕೀಯ ಪಕ್ಷಗಳಲ್ಲಿ ಈಗಾಗಲೇ ಭರ್ಜರಿ ತಯಾರಿ ನಡೆಯುತ್ತಿದೆ. ಇದೇ ಸಮಯದಲ್ಲಿ ದೇಶದ ಅತ್ಯಂತ ಜನಪ್ರಿಯ ರಾಜಕಾರಣಿ ಯಾರೆಂದು ಸಮೀಕ್ಷೆ ನಡೆದಿದ್ದು, ಪ್ರಧಾನಿ ನರೇಂದ್ರ ಮೋದಿ ಅತ್ಯಂತ ಜನಪ್ರಿಯ ರಾಜಕಾರಣಿ ಎಂದು ಜನರ ಅಭಿಪ್ರಾಯವಾಗಿದೆ.   ರಾಜಕೀಯ ತಂತ್ರರೂಪಕ ಪ್ರಶಾಂತ್ ಕಿಶೋರ್ ನೇತೃತ್ವದ ಇಂಡಿಯನ್ ಪೊಲಿಟಿಕಲ್ ಆಕ್ಷನ್ ಕಮಿಟಿ(ಐ-ಪ್ಯಾಕ್) ನಡೆಸಿದ ಸಮೀಕ್ಷೆಯಲ್ಲಿ ದೇಶದ 712 ಜಿಲ್ಲೆಗಳ 57 ಲಕ್ಷ ಮಂದಿ ಮತ ನೀಡಿದ್ದು ಪ್ರಧಾನಿ ಮೋದಿ ಅತಿ ಜನಪ್ರಿಯ ಮತ್ತು…

  • ಸುದ್ದಿ

    ಬಿಎಂಟಿಸಿ ಸಾರಿಗೆ ಇಲಾಖೆ ಇಂದ ಮಹಿಳಾ ಪ್ರಯಾಣಿಕರಿಗೊಂದು’ಸಂತಸದ ಸುದ್ದಿ’…!

    ಮಹಿಳಾ ಪ್ರಯಾಣಿಕರಿಗೆ ಸುರಕ್ಷತೆಯ ಅಭಯ ನೀಡಲು ಬಿಎಂಟಿಸಿ ಮುಂದಡಿ ಇಟ್ಟಿದೆ. ಬಸ್‌ಗಳು ಮತ್ತು ನಿಲ್ದಾಣಗಳನ್ನು ಮಹಿಳಾ ಸ್ನೇಹಿಯನ್ನಾಗಿಸಿ, ಸುರಕ್ಷತೆಯ ಭಾವನೆ ಮೂಡಿಸಲು ಹಲವಾರು ಯೋಜನೆಗಳನ್ನು ಕೈಗೆತ್ತಿಕೊಳ್ಳುತ್ತಿದೆ. ಬಿಎಂಟಿಸಿ ನಿಲ್ದಾಣಗಳಲ್ಲಿ ಹಲವು ಸೌಲಭ್ಯ ಒಳಗೊಂಡ ಮಹಿಳಾ ವಿಶ್ರಾಂತಿ ಗೃಹ ನಿರ್ಮಿಸಲು ಯೋಜಿಸಲಾಗಿದೆ. ಖರ್ಚಾಗದೇ ಉಳಿದಿರುವ ನಿರ್ಭಯಾ ನಿಧಿಯನ್ನು ಬಳಕೆ ಮಾಡಿಕೊಳ್ಳಲು ಬಿಎಂಟಿಸಿಯಿಂದ ಮಹಿಳೆಯರ ವಿಶ್ರಾಂತಿ ಗೃಹ ಆರಂಭಿಸಲಾಗುವುದು. ಕೇಂದ್ರ ಸರಕಾರವು ‘ನಿರ್ಭಯಾ’ ಯೋಜನೆಯಡಿ 56.50 ಕೋಟಿ ರೂ. ಅನುದಾನವನ್ನು ಬಿಎಂಟಿಸಿಗೆ ಮಂಜೂರು ಮಾಡಿದೆ. ಈ ಅನುದಾನದಲ್ಲಿ ಮಹಿಳಾ ಪ್ರಯಾಣಿಕರಿಗೆ…

  • ಉಪಯುಕ್ತ ಮಾಹಿತಿ

    ಬೆಳ್ಳುಳ್ಳಿ ಒಳ್ಳೆಯ ಔಷಧೀಯ ಗುಣವನ್ನು ಹೊಂದಿದೆ

    ಬೆಳ್ಳುಳ್ಳಿ ಮುಖ್ಯ ತರಕಾರಿಗಳಲ್ಲಿ ಒಂದು. ಕೆಲವರಿಗೆ ಬೆಳ್ಳುಳ್ಳಿ ಇಲ್ಲದ ಆಹಾರ ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ. ಬೆಳ್ಳುಳ್ಳಿ ಆಹಾರವಲ್ಲದೆ ಒಳ್ಳೆಯ ಔಷಧೀಯ ಗುಣವನ್ನು ಹೊಂದಿದೆ. 1) ಒಂದೆರಡು ಬೆಳ್ಳುಳ್ಳಿಯನ್ನು ಹಾಲಿನೊಂದಿಗೆ ಸೇವಿಸುವುದರಿಂದ ಹೊಟ್ಟೆ ಹುಳು ಮಾಯವಾಗುತ್ತದೆ. 2) ತುಪ್ಪದೊಂದಿಗೆ ಉರಿದು ಸೇವಿಸುವುದರಿಂದ ಅಗ್ನಿ ಮಾಧ್ಯ ಅಥವಾ ಉದರ ಶೂಲೆ ಗುಣವಾಗುತ್ತದೆ. 3) ಅರ್ಧಗಂಟೆಗೆ ಒಮ್ಮೆ ಬೆಳ್ಳುಳ್ಳಿಯ ರಸವನ್ನು ಸೇವಿಸುತ್ತಿದ್ದರೆ ಕಾಲರ ಗುಣವಾಗುತ್ತದೆ ಮತ್ತು ಊರಲ್ಲಿ ಕಾಲರ ಬಂದಾಗ ಮುನ್ನೆಚ್ಚರಿಕೆಗೆ ತೆಗೆದುಕೊಳ್ಳಬಹುದು. 4) ಇದರ ರಸವನ್ನು ಸೇವಿಸುವುದರಿಂದ ಕ್ಯಾನ್ಸರ್ ಕಣಗಳನ್ನು ಸಾಯಿಸಬಹುದು…

  • ಸುದ್ದಿ

    ಕೊಟ್ಟ ಮಾತಿನಂತೆ ನಡೆದುಕೊಂಡ ನಟ ರಜನಿಕಾಂತ್‍,.ಇಷ್ಟಕ್ಕೂ ಆ ಮಾತಾದರೂ ಏನು ಗೊತ್ತಾ ,.??

    ಸೂಪರ್ ಸ್ಟಾರ್ ರಜನಿಕಾಂತ್ ಎಂದರೆ  ಯಾರಿಗೆ ತಾನೇ ಇಷ್ಟ ಇರಲ್ಲ ಹೇಳಿ ಅಂತವರು ತಾವು ಕೊಟ್ಟ ಮಾತನ್ನು ಉಳಿಸಿಕೊಳ್ಳುವುದಕ್ಕಾಗಿ ತಮ್ಮ ಮಾತಿನಂತೆ ತಮಿಳುನಾಡಿನ ನೆರೆ ಸಂತ್ರಸ್ತರಿಗೆ ಮನೆಯನ್ನು ನೀಡುವ ಮೂಲಕ  ಸಹಾಯವನ್ನು ಮಾಡಿದ್ದಾರೆ  ಕಳೆದ ವರ್ಷ ತಮಿಳುನಾಡಿನಲ್ಲಿ ಸಂಭವಿಸಿದ ಸೈಕ್ಲೋನ್‍ ಬಗ್ಗೆ ನಿಮಗೆ ತಿಳಿದೇ  ಇದೆ  ಜನರು ತತ್ತರಿಸಿ ಹೋಗಿದ್ದು, ನೂರಾರು ಜನರು ಮನೆ, ಆಸ್ತಿ ಎಲ್ಲವನ್ನು ಕಳೆದುಕೊಂಡು ನಿರಾಶ್ರಿತರಾಗಿದ್ದರು. ಈ ವೇಳೆ ಅನೇಕ ನಟರು ಅವರಿಗಾಗಿ ತಮ್ಮ ಕೈಲಾದ ಧನ ಸಹಾಯವನ್ನು ಮಾಡಿದ್ದರು. ಆದರೆ ರಜನಿಕಾಂತ್…