ಜ್ಯೋತಿಷ್ಯ

ದಿನ ಭವಿಷ್ಯ ಶುಕ್ರವಾರ..ಈ ದಿನದ ನಿಮ್ಮ ಭವಿಷ್ಯ ಶುಭವೋ ಅಶುಭುವೋ ನೋಡಿ ತಿಳಿಯಿರಿ.. ಶೇರ್ ಮಾಡಿ

333

*ನಮ್ಮ ಪೇಜ್ ಲೈಕ್ ಮಾಡಿ ಶೇರ್ ಮಾಡಿ*

ಶುಕ್ರವಾರ, 20/04/2018, ಇಂದಿನ ನಿಮ್ಮ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ…ಪಂಡಿತ್ ಸುದರ್ಶನ್ ಭಟ್  ದೈವಜ್ಞ ಜ್ಯೋತಿಷ್ಯರು ಹಾಗೂ ಆಧ್ಯಾತ್ಮಿಕ ಚಿಂತಕರು ನಿಮ್ಮ ಜೀವನದ ನಿಖರವಾದ ಭವಿಷ್ಯ ತಿಳಿಸುತ್ತಾರೆ ಹಾಗೂ ಸಮಸ್ಯೆಗಳಾದ ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕುಟುಂಬ ವಿದ್ಯೆ ಉದ್ಯೋಗ ಮಕ್ಕಳು ವ್ಯವಹಾರ ಹಣಕಾಸು ಸಮಸ್ಯೆಗಳಿಗೆ ಪರಿಹಾರ ಸೂಚಿಸುವರು 9663542672

ಮೇಷ:-

ಹೊಸ ಉದ್ಯೋಗಗಳ ಹುಡುಕಾಟದಲ್ಲಿರುವರಿಗೆ ಹೇರಳ ಅವಕಾಶಗಳು ದೊರೆಯಲಿವೆ. ದೈವಕೃಪೆಯಿಂದ ಶುಭಫಲ ನಿಮ್ಮದಾಗಲಿದೆ. ಸ್ನೇಹಿತರು ಸಹಾಯಕೋರಿ ಬರಲಿದ್ದು, ಸಾಧ್ಯವಾದಷ್ಟು ಮಟ್ಟಿಗೆ ಸಹಾಯ ನೀಡಿ. ಹಣಕಾಸಿನ ಸ್ಥಿತಿಯು ಉತ್ತಮಗೊಳ್ಳುವುದು.

ವೃಷಭ:-

ನಿಮ್ಮ ಪ್ರತಿಯೊಂದು ಚಲನ-ವಲನ ಚಟುವಟಿಕೆಯನ್ನು ಬಹಳ ಕುತೂಹಲದಿಂದ ವೀಕ್ಷಿಸುವ ಜನರಿರುತ್ತಾರೆ. ಹಾಗಾಗಿ ಮಹತ್ತರ ಯೋಜನೆಗಳ ಕಾರ್ಯಸಾಧ್ಯ ಸಾಧ್ಯತೆಯ ಬಗ್ಗೆ ಇತರರೊಡನೆ ಚರ್ಚಿಸದಿರಿ.

ಮಿಥುನ:

ದೂರದ ಪ್ರವಾಸ ಕುರಿತಂತೆ ಆಶಾದಾಯಕ ಸಂದೇಶ ತಲುಪುವ ಸಾಧ್ಯತೆ ಇದೆ. ವಿದೇಶ ಪ್ರವಾಸ ಕನಸನ್ನು ಕಾಣುವವರಿಗೆ ಸದಾವಕಾಶ ಮತ್ತು ಆ ಕನಸ್ಸನ್ನು ನನಸಾಗಿಯೂ ಕಾಣುವಿರಿ. ಆರೋಗ್ಯ ಸದೃಢವಾಗಿರುತ್ತದೆ.

ಕಟಕ :-

ಬಹುಪ್ರಮುಖ್ಯವಾದ ನಿರ್ಧಾರ ತೆಗೆದುಕೊಳ್ಳಲು ಅವಕಾಶವೊಂದು ಒದಗಿ ಬರಲಿದೆ. ಜೊತೆಯಲ್ಲಿ ಮುಂದೆ ಬರಬಹುದಾದ ಸಮಸ್ಯೆಗಳ ಬಗ್ಗೆಯೂ ಕೂಲಂಕುಷವಾಗಿ ಚಿಂತನೆಯನ್ನು ಮಾಡುವುದು ಒಳ್ಳೆಯದು. ಹಣಕಾಸಿನ ಪರಿಸ್ಥಿತಿಯು ಸಾಮಾನ್ಯವಾಗಿರುತ್ತದೆ.

 ಸಿಂಹ:

ಕುಟುಂಬದಲ್ಲಿ ಪ್ರತಿಯೊಬ್ಬರ ಜೊತೆಗೆ ಸೌಹಾರ್ದತೆಯನ್ನು ಕಾಪಡಿಕೊಳ್ಳಿ. ಸಿಟ್ಟಿನಿಂದ ನಿಮ್ಮ ಸುತ್ತಮುತ್ತಲಿನ ವಾತವರಣ ಹಾನಿಯಾಗುವುದು ಮತ್ತು ಇದರಿಂದ ದಂಪತಿಗಳಲ್ಲಿ ಕೆಲ ಸಮಯ ವಿರಸ ಉಂಟಾಗುವುದು.

ಕನ್ಯಾ :-

ಪುನಃ ಪುನಃ ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುವುದರಿಂದ ಆಪ್ತರು ನಿಮ್ಮ ಮೇಲೆ ಇಟ್ಟ ಭರವಸೆಗೆ ಧಕ್ಕೆ ಉಂಟಾಗುವುದು. ಹಾಗಾಗಿ ಆದಷ್ಟು ಸರಿಯಾದ ಮತ್ತು ದೃಢ ನಿರ್ಧಾರ ತೆಗೆದುಕೊಳ್ಳಲು ಚಿಂತಿಸುವುದು ಒಳ್ಳೆಯದು.

ತುಲಾ:

ಯಾವುದನ್ನು ಪ್ರಶ್ನಿಸದೆ ಒಪ್ಪಿಕೊಳ್ಳಬೇಡಿ. ಒರಟುತನದಿಂದ ಕೆಲವೊಮ್ಮೆ ಪ್ರಶ್ನಿಸುವುದು ಅನಿವಾರ್ಯವಾಗುವುದು. ಮಾಡುವ ಕೆಲಸವನ್ನು ನಿಷ್ಟೆಯಿಂದ ಮಾಡಿ. ಭಗವಂತ ನಿಮ್ಮ ಕಾರ್ಯದಲ್ಲಿ ಯಶಸ್ಸನ್ನು ನೀಡುವನು.

ವೃಶ್ಚಿಕ :-

ನಿಮ್ಮ ಕರ್ತವ್ಯ ಹಾಗೂ ಜವಾಬ್ದಾರಿಯ ಪಾಲು ದೊಡ್ಡದೇ ಇದೆ. ಬಳಲಿಕೆ ತೋರಿಬರುವುದು. ನಿಮ್ಮ ಮನಸ್ಸಿಗೆ ಒಪ್ಪದ ಕೆಲಸಗಳ ಬಗ್ಗೆ ಚಿಂತಿಸುವುದು ಒಳ್ಳೆಯದಲ್ಲ ಮತ್ತು ನಿಮಗೆ ಸಂಬಂಧಪಡದ ವಿಷಯಗಳಲ್ಲಿ ಮೂಗು ತೂರಿಸದಿರಿ.

ಧನಸ್ಸು:

ಹಿತಶತ್ರುಗಳು ನಿಮ್ಮನ್ನು ಕಾಡಿಸುವಂತಹ ಸಾಧ್ಯತೆಗಳು ಹೇರಳವಾಗಿದೆ ಆದರೆ ಅವರು ಪೀಡಿಸುತ್ತಾರೆ ಎಂಬ ಕಾರಣದಿಂದ ಇರುವ ಜವಾಬ್ದಾರಿ ಸ್ಥಾನದಿಂದ ಕೆಳಗಿಳಿಯುವುದು ತರವಲ್ಲ. ಆದಷ್ಟು ಕುಲದೇವರ ಪ್ರಾರ್ಥನೆ ಮಾಡಿ.

ಮಕರ :-

ನಿಮ್ಮ ಕೆಲಸ ಕಾರ್ಯಗಳ ವಿಷಯದಲ್ಲಿ ಟೀಕೆ ವಿಮರ್ಷೆಗಳು ಬರುವುದು. ನೀವು ಈ ಹಿಂದೆ ಮಾಡಿದ ತಪ್ಪು ನಿರ್ಧಾರಗಳು ನಿಮ್ಮನ್ನು ಭಾದಿಸುತ್ತವೆ. ಹಿರಿಯರ ಸಾನಿಧ್ಯದಲ್ಲಿ ಕೆಲವು ವಿಚಾರಗಳಲ್ಲಿ ರಾಜಿ ಮಾಡಿಕೊಳ್ಳುವುದು ಒಳ್ಳೆಯದು.

ಕುಂಭ:-

ಮಾಡುವ ಕೆಲಸವು ಬಹಳ ಮಂದಗತಿಯಲ್ಲಿ ಸಾಗುವುದು. ನೀವು ಅಲಸ್ಯವನ್ನು ತೊರೆದು ಕಾರ್ಯಪ್ರವೃತ್ತರಾದಲ್ಲಿ ಯಶಸ್ಸು. ಕುಟುಂಬದಲ್ಲಿನ ಸೌಹಾರ್ದತೆಯನ್ನು ಉಳಿಸಿಕೊಳ್ಳಿ. ಆಂಜನೇಯ ಸ್ತೋತ್ರ ಪಠಿಸಿ.

ಮೀನ:-

ಬಂಧು-ಬಳಗ ಹಾಗೂ ಸ್ನೇಹಿತರ ಸಹಾಯ ಮತ್ತು ಸಹಕಾರವು ನಿಮ್ಮ ಕಾರ್ಯಸಿದ್ದಿಗೆ ಅನುಕೂಲವಾಗುವಂತೆ ದೊರೆಯುವುದು. ಮನೋಕಾಮನೆಗಳು ಪೂರ್ಣಗೊಳ್ಳುವುದು. ವಿವಿಧ ಮೂಲಗಳಿಂದ ಆದಾಯ ಬರುವುದು.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ಮದುವೆಗೂ ಮುನ್ನ ಯುವತಿಯರು ಮೊಬೈಲ್​​​​ ಬಳಕೆ ಮಾಡಿದರೆ ಪಾಲಕರಿಗೆ ದಂಡ ವಿಧಿಸಲಾಗುವುದು…!

    ಗುಜರಾತ್​ನ ಬನಸ್ಕಾಂತ ಜಿಲ್ಲೆಯ ಠಾಕೂರ್​​ ಸಮುದಾಯದಲ್ಲಿ ಯುವತಿಯರು ಮೊಬೈಲ್​​ ಪೋನ್​​ ಬಳಕೆ ಮಾಡದಂತೆ ನಿಷೇಧವೇರಿದೆ. ಇನ್ನು ಬೇರೆ ಜಾತಿ ಯುವಕರನ್ನು ಮದುವೆಯಾದರೇ ಭಾರಿ ಮೊತ್ತದ ದಂಡವನ್ನು ಪಾಲಕರಿಗೆ ವಿಧಿಸಲಾಗುವುದು ಜಿಲ್ಲೆಯ 12 ಗ್ರಾಮಗಳಲ್ಲಿ ಈ ಕಾನೂನು ಜಾರಿಗೆ ಬರಲಿದೆ ಎಂದು ಸಮುದಾಯದ ನಾಯಕರು ಹಾಗೂ ಸ್ಥಳೀಯ ಶಾಸಕರು ತಿಳಿಸಿದ್ದಾರೆ. ಮದುವೆಗೂ ಮುನ್ನ ಯುವತಿಯರು ಮೊಬೈಲ್​​​​ ಬಳಸಬಾರದು. ಒಂದೆ ವೇಳೆ ಬಳಸಿದರೆ, ಅದಕ್ಕೆ ಹೆತ್ತವರೇ ಜವಾಬ್ದಾರಿಯಾಗಲಿದ್ದಾರೆ. ಇನ್ನು ಸಮುದಾಯದ ಯುವತಿ ಹಾಗೂ ಯುವಕರು ಬೇರೆ ಜಾತಿಯವರನ್ನು ಪ್ರೀತಿಸಿ ಮದುವೆಯಾದರೆ,…

  • ಸುದ್ದಿ

    15 ವರ್ಷಗಳಿಂದ ಕಾಡುತ್ತಿದ್ದ ಮೆದುಳು ತಿನ್ನುವ ಹುಳು ಹೊರತೆಗೆದ ವೈದ್ಯರು,.!

    ನೋಡುವುದಕ್ಕೆ ಸಣ್ಣ ದಾರದಂತಿದೆ… ಆದರೆ, ಇದು ಮಾಡುವ ಕೆಲಸ ಅತಿ ಭಯಾನಕ. ಮನುಷ್ಯನ ಮೆದುಳನ್ನು ಸ್ವಲ್ಪ ಸ್ವಲ್ಪವೇ ತಿನ್ನುವುದು ಈ ಹುಳುವಿನ ಕೆಲಸ. ವೈದ್ಯಕೀಯ ಪರಿಭಾಷೆಯಲ್ಲಿ ಇದನ್ನು `ಟೇಪ್ ವರ್ಮ್’ ಎಂದು ಕರೆಯುತ್ತಾರೆ. ಇಂತಹ ವಿಚಿತ್ರ ಹುಳುವನ್ನು ವ್ಯಕ್ತಿಯೊಬ್ಬರ ಮೆದುಳಿನಿಂದ ವೈದ್ಯರು ಯಶಸ್ವಿ ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆದಿದ್ದಾರೆ ಆಗ್ನೇಯ ಚೀನಾದ 36 ವರ್ಷದ ವಾಂಗ್ ಎಂಬವರು ಬರೋಬ್ಬರಿ 15 ವರ್ಷಗಳಿಂದ ಈ ದಾರದಂತಹ ಹುಳುವಿನ ಕಾಟದಿಂದ ನಲುಗಿದ್ದರು. ಸುಮಾರು 12 ಸೆಂಟಿ ಮೀಟರ್‌ನಷ್ಟು ಉದ್ದವಿದ್ದ ಈ ಹುಳು…

  • Sports, ಕ್ರೀಡೆ

    ಹಿರಿಯರ ಆಟ ನೋಡಲು ತುಂಬಾ ಕಾತುರರಾಗೀದ್ದೀರಾ ನೋಡಿ ಲೆಜೆಂಡ್ಸ್ ಲೀಗ್

    ಲೆಜೆಂಡ್ಸ್ ಲೀಗ್ ಕ್ರಿಕೆಟ್ (LLC) ನ ಉದ್ಘಾಟನಾ ಆವೃತ್ತಿಯು ಜನವರಿ 20 ರಂದು ಪ್ರಾರಂಭವಾಗಲಿದೆ ಮತ್ತು ಪಂದ್ಯಾವಳಿಯ ಅಧಿಕೃತ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಎಲ್ಲಾ ಪಂದ್ಯಗಳು ಓಮನ್‌ನ ಮಸ್ಕತ್‌ನಲ್ಲಿರುವ ಅಲ್ ಅಮರತ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿವೆ.       LLC ಎರಡು ಸುತ್ತುಗಳು ಮತ್ತು ಫೈನಲ್‌ಗಳನ್ನು ಹೊಂದಲಿದ್ದರೆ, ಆಟಗಳ ಸಮಯದಲ್ಲಿ ಮೂರು ವಿಶ್ರಾಂತಿ ದಿನಗಳು ಸಹ ಇರುತ್ತವೆ. ಮೂರನೇ ಮತ್ತು ಅಂತಿಮ ವಿಶ್ರಾಂತಿ ದಿನವು ಗ್ರ್ಯಾಂಡ್ ಫಿನಾಲೆಗೆ ಒಂದು ದಿನ ಮೊದಲು ಇರುತ್ತದೆ. ಪ್ರತಿ ಎರಡು…

    Loading

  • ಸುದ್ದಿ

    ಅರವತ್ತರ ವಯಸ್ಸದರು,ಸೂಪರ್ ಮಾಡೆಲ್….!

    ಅರವತ್ತರ ವಯಸ್ಸಿನಲ್ಲೂ ಕಟ್ಟುಮಸ್ತಾಗಿದ್ದು ಸೂಪರ್ ಮಾಡೆಲ್‌ನಂತಿರುವ ದಿನೇಶ್ ಮೋಹನ್ ಈಗ ಹಲವರ ಗಮನ ಸೆಳೆಯುತ್ತಿದ್ದಾರೆ. ಹರ್ಯಾಣ ಸರ್ಕಾರದ ಶಿಕ್ಷಣ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ದಿನೇಶ್ ಮೋಹನ್ ಅತಿಯಾದ ತೂಕದಿಂದ ಬಳಲಿ ಹಾಸಿಗೆ ಹಿಡಿದಿದ್ದರು. ಅಲ್ಲಿಂದ ಚೇತರಿಸಿಕೊಂಡರೂ ದಢೂತಿ ದೇಹ ಇಳಿಸಿಕೊಳ್ಳಲು 50 ಕೆ.ಜಿ. ತೂಕ ಕಡಿಮೆ ಮಾಡಿಕೊಂಡ ಅವರು 2016ರಲ್ಲಿ ಫೋಟೋಶೂಟ್ ಮಾಡಿದ ಬಳಿಕ ಅಂಗಸೌಷ್ಠವ ರಕ್ಷಣೆ ನಿರಂತರವಾಗಿಸಿಕೊಂಡರು. ಈಗ ಅವರಿಂದ ಯುವಕರು ಮಾತ್ರವಲ್ಲ ವಯಸ್ಸಾದವರೂ ಸೆಳೆಯಲ್ಪಡುತ್ತಿದ್ದಾರೆ. ಯಾವ ವಯಸ್ಸಿನಲ್ಲಿ ಬೇಕಿದ್ದರೂ ಫಿಟ್‌ನೆಸ್ ಕಾಪಾಡಿಕೊಳ್ಳಬಹುದು ಎಂಬುದಕ್ಕೆ ಅವರು…

  • ಮನರಂಜನೆ

    ಮಾತಿನ ಮಧ್ಯೆ ತಮ್ಮ ಒಳ ಸಂಚನ್ನು ಹೇಳಿ ಬಿಗ್ ಬಾಸಿಗೆ ಸಿಕ್ಕಿಬಿದ್ದ ಭೂಮಿ ಶೆಟ್ಟಿ..! ಅಷ್ಟಕ್ಕೂ ಅವರು ಹೇಳಿದ್ದೇನು ಗೊತ್ತಾ?ತಿಳಿದರೆ ಶಾಕ್ ಆಗ್ತೀರಾ…

    ಬಿಗ್ ಬಾಸಿಗೆ ಮೋಸ ಮಾಡಲು ಹೋಗಿ ಭೂಮಿ ಶೆಟ್ಟಿ ಅವರು ಸಿಕ್ಕಿಬಿದ್ದಿದ್ದಾರೆ.. ಹೌದು ಈ ವಾರ ಲಕ್ಸುರಿ ಬಡ್ಜೆಟ್ ಗಾಗಿ ಕಳ್ಳ ಪೊಲೀಸ್ ಟಾಸ್ಕ್ ಒಂದನ್ನು ನೀಡಲಾಗಿತ್ತು.. ಅದರಂತೆ ಶೈನ್ ರಾಜು ತಾಳಿಕೋಟೆ ಚಂದನ್ ಪ್ರಿಯಾಂಕ ಪೊಲೀಸರಾದರೆ ಇತ್ತ ವಾಸುಕಿ ದೀಪಿಕಾ ಕುರಿ ಕಳ್ಳರಾಗಿದ್ದರು‌. ಸುಜಾತ ಪತ್ರಕರ್ತೆಯಾಗಿ ಕಾಣಿಸಿಕೊಂಡರು.. ಇನ್ನುಳಿದಂತೆ ಭೂಮಿ ಪೃಥ್ವಿ ಕಿಶನ್ ಚಂದನ ಹರೀಶ್ ರಾಜ್ ಜನ ಸಾಮಾನ್ಯರಾಗಿದ್ದರು. ಆದರೆ ಜನಸಾಮಾನ್ಯರ ನಡುವೆ ಇದ್ದ ಕಳ್ಳರು ಯಾರೆಂದು ಉಳಿದವರಿಗೆ ತಿಳಿದಿರಲಿಲ್ಲ. ಕಿತ್ತಾಟ ಕಿರುಚಾಟ ಹಾಗೂ…

  • ವಿಸ್ಮಯ ಜಗತ್ತು

    ಕೆಲವರು ಯಂಗ್ ಆಗಿ ಕಾಣ್ಬೇಕು ಅಂತ ಏನೆಲ್ಲಾ ಪ್ರಯತ್ನ ಮಾಡ್ತಾರೆ.ಆದ್ರೆ ಈ ಮಹಿಳೆ ಬಗ್ಗೆ ತಿಳಿದ್ರೆ ನೀವ್ ಶಾಕ್ ಆಗ್ತೀರಾ..!

    ವಯಸ್ಸಾಗೋದನ್ನ ತಡೆಯೋಕಾಗಲ್ಲ. ಕೆಲವರು ಯಂಗ್ ಆಗಿ ಕಾಣ್ಬೇಕು ಅಂತ ಏನೆಲ್ಲಾ ಪ್ರಯತ್ನ ಮಾಡ್ತಾರೆ. ಇನ್ನೂ ಕೆಲವರಿಗೆ ಕಾಂತಿಯುತವಾದ ತ್ವಚೆ ಇದ್ದು, ಯಂಗ್ ಆಗಿ ಕಾಣಿಸಿದ್ರೂ ಅವರ ವಯಸ್ಸನ್ನ ಊಹಿಸಿಬಿಡಬಹುದು. ಆದ್ರೆ ಇಂಡೋನೇಷ್ಯಾದಲ್ಲಿ ಮಹಿಳೆಯೊಬ್ಬರಿಗೆ ವಯಸ್ಸು