inspirational

ಹಣ ಉಳಿಸುವ ಸುಲಭ ಮಾರ್ಗಗಳು

6
Money

ದುಡ್ಡಿನ ಅಗತ್ಯ ಯಾವಾಗ ಹೇಗೆ ಬೀಳುತ್ತದೆ ಎಂದು ಹೇಳಲು ಅಸಾಧ್ಯ. ಬದುಕಿನಲ್ಲಿ ಎಲ್ಲವೂ ಸರಿಯಾಗಿದೆ ಎಂದು ಅಂದುಕೊಳ್ಳುತ್ತಿರುವಾಗಲೇ ದುಡ್ಡಿನ ಅನಿವಾರ್ಯತೆ ಎದುರಾಗಬಹುದು. ಅದನ್ನು ಇಷ್ಟೇ ಅಂತ ಹೇಳಲು ಬರುವುದಿಲ್ಲ. ಹೀಗಾಗಿ ಎಲ್ಲಾ ಉಳಿಕೆ, ಹೂಡಿಕೆಗಳ ಬಳಿಕವೂ ತುರ್ತು ಸಂದರ್ಭದಲ್ಲಿ ಅನುಕೂಲವಾಗಲು ನಿಮ್ಮಲ್ಲಿ ಹಣ ಇರಲೇ ಬೇಕಾಗುತ್ತದೆ. ಆರೋಗ್ಯ ವಿಮೆ, ವಾಹನ ವಿಮೆಗಳನ್ನೆಲ್ಲಾ ಅಂದುಕೊಂಡ ಕಾಲಕ್ಕೆ ಪಾವತಿಯಾಗುವುದಿಲ್ಲವಾದದ್ದರಿಂದ ಟರ್ನ್ ಓರ್ವ ಮಾಡಲು ಸಾಧ್ಯವಾಗುವಂತಹ ಪ್ಲಾನ್ ಗಳನ್ನು ಮಾಡಿಕೊಳ್ಳುವುದು ಬಹಳ ಮುಖ್ಯ. ಈ ಉಳಿಕೆಯನ್ನು ನಿರ್ದಿಷ್ಟವಾಗಿ ಇಷ್ಟೇ ಎಂದು ಹೇಳಲು ಬಾರದು. ಆದರೂ ಒಬ್ಬ ವ್ಯಕ್ತಿ ತನ್ನ 3ರಿಂದ 6 ತಿಂಗಳ ದಿನವಹಿ ಖರ್ಚಿಗಾಗುವಷ್ಟು ದುಡ್ಡನ್ನು ಸುರಕ್ಷಿತವಾಗಿಡುವುದು ಮುಖ್ಯ. ಏನಿಲ್ಲವೆಂದರೂ ಉದ್ಯೋಗ ಕಳೆದುಕೊಳ್ಳಬೇಕಾದ ಅನಿವಾರ್ಯತೆ ಎದುರಾದಾಗ ಇನ್ನೊಂದು ಕೆಲಸ ಹುಡುಕಿಕೊಳ್ಳುವವರೆಗೆ ಇದು ಉಪಯೋಗಕ್ಕೆ ಬರುತ್ತದೆ.

ನಿವೃತ್ತ ಬದುಕಿಗೆಷ್ಟು?: ದುಡಿಯುವುದು ಮತ್ತು ಖರ್ಚು ಮಾಡುವ ನೀತಿಯನ್ನು ಜೀವನಪೂರ್ತಿ ಮಾಡುತ್ತಾ ಕೂರಲಾಗುವುದಿಲ್ಲ. ಉದ್ಯೋಗದಿಂದ ನಿವೃತ್ತಿಯಾದ ಮೇಲೆ ಖರ್ಚು ಮಾಡುವುದಷ್ಟೇ ಪಾಲಿಗೆ ಉಳಿಯುವುದರಿಂದ ಆಗಿನ ಬದುಕಿಗೂ ಕೊಂಚ ಉಳಿಸಿಡುವುದು ಅಗತ್ಯ. ಸ್ವಯಂ ಉದ್ಯೋಗಿಗಳಾದವರು ತಮಗೆ ತಾವೇ ನಿವೃತ್ತಿಯ ವಯಸ್ಸನ್ನು ನಿರ್ಧರಿಸಿಕೊಂಡುಬಿಡಬೇಕು. ವ್ಯಕ್ತಿಯೊಬ್ಬ ತನ್ನ ವಾರ್ಷಿಕ ಆದಾಯದ 20 ಪಟ್ಟು ದುಡ್ಡನ್ನು ನಿವೃತ್ತ ಬದುಕಿಗೆ ಎತ್ತಿಡುವ ಗುರಿ ಹೊಂದಿರಬೇಕು.

ಮನೆಸಾಲದ ಸರಿದೂಗಿಸುವಿಕೆ: ಬದುಕಿನಲ್ಲಿ ಮನೆ ಕಟ್ಟುವುದು ಪ್ರತಿಯೊಬ್ಬನ ಕನಸು. ಆ ಕನಸು ನನಸಾಗಿಸುವ ಹಾದಿಯಲ್ಲಿ ಎಡವಬಾರದು. ಮನೆ ಕೊಳ್ಳುವಾಗ ಶೇ.20ರಷ್ಟು ಡೌನ್ ಪೇಮೆಂಟ್ ಕಟ್ಟಬೇಕಾಗುತ್ತದೆ. ಉಳಿದ ಮನೆ ಸಾಲವನ್ನು ಕಂತಿನ ರೂಪದಲ್ಲಿ ಕಟ್ಟಬೇಕಾಗುತ್ತದೆ. ಆ ಸಂದರ್ಭದಲ್ಲಿ ಕೈಕಟ್ಟಬಾರದು ಎಂದರೆ ಈ ಮೂರು ಸಂಗತಿಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಕೈಗೆ ಬರುವ ಪಗಾರ, ಡೌನ್ ಪೇಮೆಂಟ್ ಮತ್ತು ಮನೆ ಸಾಲದ ಬಡ್ಡಿದರ. ರಿಯಲ್ ಎಸ್ಟೇಟ್ ಬೆಲೆ ದಿನದಿಂದ ದಿನಕ್ಕೆ ಗಗನಕ್ಕೇರುತ್ತಿರುವ ಇಂದಿನ ದಿನಗಳಲ್ಲಿ ನೀವು ಸಾಧ್ಯವಾದಷ್ಟು ಬೇಗನೇ ಮನೆ ಬಗ್ಗೆ ಯೋಚಿಸುವುದು ಒಳಿತು. ಈಗ ಮನೆಸಾಲದ ಕಂತು ಹೆಚ್ಚು ಅನ್ನಿಸಿದರೂ ನಿಮ್ಮ ಆದಾಯ ಹೆಚ್ಚಾದ ಸಂದರ್ಭದಲ್ಲೂ ಕಂತಿನ ಹಣ ಅಷ್ಚೇ ಇರುವುದುರಿಂದ ಹೊರೆಯಾಗಲಾರದು. ಗೃಹ ಸಾಲದ ಇಎಂಐ ತಿಂಗಳ ಆದಾಯದ ಶೇ.30ಕ್ಕಿಂತ ಕಡಿಮೆ ಇದ್ದರೆ ಒಳಿತು. ಉಳಿದೆಲ್ಲಾ ಸಾಲದ ಕಂತುಗಳೂ ಸೇರಿ ತಿಂಗಳ ಆದಾಯದ ಶೇ.50 ದಾಟಬಾರದು.

About the author / 

DRM

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸಿನಿಮಾ

    ಅಣ್ಣಾವ್ರ ಬಗ್ಗೆ ರಜನಿ ಬಿಚ್ಚಿಟ್ಟರು, ನಮಗ್ಯಾರಿಗೂ ಗೊತ್ತಿಲ್ಲದ ಆ ರಹಸ್ಯ..!

    ಸೂಪರ್ ಸ್ಟಾರ್ ರಜನಿಕಾಂತ್ ರಾಜಕೀಯ ಪ್ರವೇಶಕ್ಕೆ ಪೂರ್ವಭಾವಿಯಾಗಿ ಅಭಿಮಾನಿಗಳೊಂದಿಗೆ ಸಂವಾದ ನಡೆಸುತ್ತಿದ್ದಾರೆ.ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿದ ರಜನಿಕಾಂತ್, ‘ನಾನು ರಾಜಕೀಯಕ್ಕೆ ಬರುತ್ತೇನೆ ಎಂದು ಹೇಳಿಲ್ಲ.

  • ಪ್ರೇಮ, ಸಂಬಂಧ, ಸ್ಪೂರ್ತಿ

    ಸಾವು ಬದುಕಿನ ಮಧ್ಯೆ ಹೋರಾಟ, ತಂದೆಗೆ ಲಿವರ್ ದಾನ ಮಾಡಿ ಪಿತೃಪ್ರೇಮ ಮೆರೆದ ಯುವತಿ.

    ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿರುವ ತಂದೆಗೆ ಲಿವರ್ ಸಿಗುತ್ತಾ ಅಂತ ಮಗಳು ಚಾತಕ ಪಕ್ಷಿಯಂತೆ ಕಾಯುತ್ತಿದ್ದಳು. ಆದರೆ ಕಾದಿದ್ದೆ ಬಂತು. ಲಿವರ್ ಮಾತ್ರ ಸಿಗಲೇ ಇಲ್ಲ. ಲಿವರ್ ಸಿಗದೇ ಇದ್ದರೆ ತಂದೆ ಮೃತ್ಯು ಕಟ್ಟಿಟ್ಟ ಬುತ್ತಿ ಎಂದು ತಿಳಿದ ಮಗಳು ಈಗ ಕೊನೆಗೆ ತನ್ನ ಪಿತ್ತಜನಕಾಂಗವನ್ನೇ ನೀಡುವ ಮೂಲಕ ಜನ್ಮ ನೀಡಿದ ತಂದೆಗೆ ಮರುಜನ್ಮ ನೀಡಿದ್ದಾಳೆ. ಹೌದು. ಐಸಿಯುನಲ್ಲಿ ಹೋರಾಡುತ್ತಿದ್ದ ತನ್ನ ತಂದೆಗಾಗಿ ಮಗಳೊಬ್ಬಳು ಲಿವರ್ ನ ಒಂದು ಭಾಗವನ್ನು ದಾನ ಮಾಡಿರುವ ಘಟನೆ ತಮಿಳುನಾಡಿನ…

  • ಜ್ಯೋತಿಷ್ಯ

    ದಿನ ಭವಿಷ್ಯ ಗುರುವಾರ ಈ ದಿನದ ನಿಮ್ಮ ರಾಶಿ ಭವಿಷ್ಯದ ಜೊತೆಗೆ ಅದೃಷ್ಟದ ಸಂಖ್ಯೆಯನ್ನು ತಿಳಿಯಿರಿ…

    ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕಚಿಂತಕರು 9663218892 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು  ಹಾಗೂನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವುನಿಮ್ಮ ಅನುಮಾನ ಹಾಗೂ ಆತಂಕಗಳನ್ನುಅಳಿಸಬಹುದು ಮತ್ತು ಪ್ರಶ್ನೆಗಳಿಗೆಉತ್ತರಿಸಬಹುದುಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 11 ದಿನದಲ್ಲಿ ಶಾಶ್ವತ ಪರಿಹಾರ9663218892 ಮೇಷ(15 ನವೆಂಬರ್, 2018) ದೊಡ್ಡ ಗುಂಪಿನಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳುವುದು ಅತ್ಯಂತ ಮನರಂಜನಾತ್ಮಕವಾಗಿರುತ್ತದೆ- ಆದರೆ ನಿಮ್ಮ ವೆಚ್ಚಗಳು ಹಚ್ಚಾಗುತ್ತವೆ. ಯುವಕರು ಶಾಲಾ ಯೋಜನೆಗಳಲ್ಲಿ ಕೆಲವುಸಲಹೆ…

  • Uncategorized

    ಬಿಸಿಲು ಬಿಸಿಲು ಬಿಸಿಲು…!!!

    ಬಿಸಿಲು,ಬಿಸಿಲು, ಎಲ್ಲಿ ನೋಡಿದರೂ ಬಿಸಿಲ ಬೇಗೆ, ಧಗೆ. ಇಷ್ಟು ದಿನ ಕಣ್ಣಿಗೆ, ಮನಸಿಗೆ ತಂಪಾಗಿದ್ದ ಬೆಂಗಳೂರು, ಈಗ ಬಿರು ಬಸಿಲಿನ ನಾಡಾಗಿದೆ. ಜನರಿಗೆ ಕುಳಿತಲ್ಲಿ ಕೂರಲಾಗದೆ, ನಿಂತಲ್ಲಿ ನಿಲ್ಲಲಾಗದ ಹಾಗೆ ಮಾಡಿದೆ ಈ ಬಿಸಿಲು. ಬೇಸಿಗೆಯು ಶುಭಾರಂಭವಾಗಿ 4 ದಿನ ಆಗಿಲ್ಲ ಆಗಲೇ ಜನರ ಮೈನೀರಿಳಿಸುತ್ತಿದೆ ಈ ಬೇಸಿಗೆ. ತಂಪು ತಂಪಾದ ತಂಪು ಪಾನೀಯಗಳ ಬಳಕೆ ಹೆಚ್ಚಾಗಿದೆ. ಹಾಗೆ ಕಲ್ಲಂಗಡಿ, ಕಿತ್ತಳೆ ಮತ್ತು ಎಳೆನೀರಿನ ಉಪಯೋಗ ಆಗಲೇ ಶುರುವಾಗಿದೆ. ನೀರಿನ ಕಷ್ಟ ಎದುರಾಗಿದೆ. ಪ್ರಾಣಿಗಳು ಪಕ್ಷಿಗಳಿಗೂ ಈ…

  • ರಾಜಕೀಯ

    ರಾಜ್ಯದಲ್ಲಿ ಯಾವ ಯಾವ ಪಕ್ಷ ಮುನ್ನಡೆ…?

    ಲೋಕಸಭೆ ಚುನಾವಣೆ ಫಲಿತಾಂಶಕ್ಕೆ ಇನ್ನೇನು ಕೆಲವೇ ಕ್ಷಣಗಳು ಬಾಕಿಯಿದೆ. ಆರಂಭಿಕ ಮತ ಎಣಿಕೆಯಲ್ಲಿ ಎನ್ಡಿಎ ಮುನ್ನಡೆ ಕಾಯ್ದುಕೊಂಡಿದ್ದರೆ ಯುಪಿಎ ಹಿನ್ನಡೆ ಅನುಭವಿಸಿದೆ. ಕಾಂಗ್ರೆಸ್ ಬಲ ಪಡೆದಿರುವ ರಾಜ್ಯಗಳಲ್ಲಿ ಕೂಡ ಬಿಜೆಪಿ ಮುನ್ನಡೆ ಕಾಯ್ದುಕೊಂಡಿದೆ. ಉತ್ತರ ಪ್ರದೇಶದ 54 ಸ್ಥಾನಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ. ಮಧ್ಯಪ್ರದೇಶದಲ್ಲಿ 27, ರಾಜಸ್ತಾನದಲ್ಲಿ 23 ಹಾಗೂ ಬಿಹಾರದಲ್ಲಿ ಬಿಜೆಪಿ 32 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಇನ್ನು ಮಹಾರಾಷ್ಟ್ರದಲ್ಲಿ ಬಿಜೆಪಿ 40, ಗುಜರಾತಿನಲ್ಲಿ ಬಿಜೆಪಿ 26, ಪಶ್ಚಿಮ ಬಂಗಾಳದಲ್ಲಿ ಟಿಎಂಸಿ 22 ಕ್ಷೇತ್ರಗಳಲ್ಲಿ ಮುನ್ನಡೆ…

  • ಕವಿ ಪರಿಚಯ

    ಜ್ಞಾನಪೀಠ ಪ್ರಶಸ್ತಿ ಪಡೆದ ದ.ರಾ.ಬೇಂದ್ರೆಯವರ ಒಂದು ಕಿರುಪರಿಚಯದ ಬಗ್ಗೆ, ತಿಳಿಯಲು ಈ ಲೇಖನ ಓದಿ..

    ಅಂಬಿಕಾತನಯ ದತ್ತ ಎಂಬ ಕಾವ್ಯನಾಮ ಹೊಂದಿದ್ದ ಕನ್ನಡದ ವರಕವಿ, ದತ್ತಾತ್ರೇಯ ರಾಮಚಂದ್ರ ಬೇಂದ್ರೆಯವರು ಕನ್ನಡ ಸಾಹಿತ್ಯ ಲೋಕದ ಜ್ಞಾನ ಪೀಠ ಪ್ರಶಸ್ತಿ ಪುರಸ್ಕೃತರಲ್ಲೊಬ್ಬರು.