inspirational

ರೋಗ ನಿರೋಧಕ ಶಕ್ತಿ ಹೆಚ್ಚಳ ಹೇಗೆ? ಚರಕ ಸಂಹಿತೆಯ ಉತ್ತರ..

63
Charaka

ಚರಕ ಸಂಹಿತೆ ಇಂದಿಗೂ ವೈದ್ಯಕೀಯ ಕ್ಷೇತ್ರದ ಅತ್ಯುನ್ನತ ಗ್ರಂಥ ಎಂದು ಎಲ್ಲ ವೈದ್ಯರು ಒಕ್ಕೊರಲಿನಿಂದ ಒಪ್ಪುತ್ತಾರೆ , ಹೊಸ ಆರೋಗ್ಯ ಸಮಸ್ಯೆಗಳು , ಜಟಿಲ ಕಾಯಿಲೆಗಳು ಉತ್ಪತ್ತಿ ಆದಾಗ ವೈಜ್ಞಾನಿಕ ಪ್ರಪಂಚ ಆಸೆ ಭರವಸೆಗಳಿಂದ  ನೋಡುವುದು ಈ 2ನೇ ಶತಮಾನದ ಗ್ರಂಥದೆಡೆಗೆ , ಚರಕ ಸಂಹಿತೆಯಲ್ಲಿ ಅಗ್ನಿವೇಶ ಎಂಬ ವಿದ್ಯಾರ್ಥಿಯು ಗುರುವಾದ ಅತ್ರೇಯರಲ್ಲಿ ನಮ್ಮ ಮನಸ್ಸಿನಲ್ಲಿರುವ ಪ್ರಶ್ನೆಯನ್ನೇ ಕೇಳಿದ್ದಾನೆ -ಹಿತಕರವಾದ ಅಥವಾ ಅಹಿತಕರವಾದ ಆಹಾರ ಸೇವಿಸುವ ಎರಡು ತರಹದ ಜನರಲ್ಲಿ ಕೂಡ ಕೆಲವರು ಆರೋಗ್ಯದಿಂದ ಇರುತ್ತಾರೆ ,ಕೆಲವರು ರೋಗಿಗಳಾಗುತ್ತಾರೆ ಅಂತಹ ಸಂಧರ್ಭದಲ್ಲಿ ಹಿತ ಅಥವಾ ಅಹಿತ ಆಹಾರದಿಂದಲೇ ಆರೋಗ್ಯ , ಅನಾರೋಗ್ಯಗಳಾಯಿತು ಎಂದು ಹೇಗೆ ನಾವು ನಿಶ್ಚಯಿಸಿಕೊಳ್ಳಬಹುದು ಎಂಬುದೇ ಆ ಪ್ರಶ್ನೆ.

ಇದಕ್ಕೆ ಉತ್ತರಿಸುತ್ತಾ ಅತ್ರೇಯರು ಹೇಳುತ್ತಾರೆ ಕೇವಲ ಹಿತಾಹಾರ ಸೇವನೆಯಿಂದ ಎಲ್ಲ  ರೋಗಗಳ ಆತಂಕ ನಿವಾರಣೆ ಅಸಾಧ್ಯ. ಏಕೆಂದರೆ ಅಹಿತ ಆಹಾರಕ್ಕೂ ಮಿಗಿಲಾಗಿ ರೋಗದ ಉತ್ಪತ್ತಿಗೆ ಇನ್ನು ಅನೇಕ  ಕಾರಣಗಳಿರುತ್ತವೆ.  ಉದಾಹರಣೆಗೆ-ಕಾಲ ವಿಪರ್ಯಾಯ ಎಂದರೆ ಋತು ಕಾಲಕ್ಕೆ ಅನುಸಾರ  ಗುಣಗಳಾದ ಚಳಿ ಸೆಖೆ ಮಳೆಗಳು ತೀವ್ರವಾಗಿ ಏರು ಪೆರು ಆಗುವುದು ,ಇದು  ರೋಗಕಾರಕ ಕ್ರಿಮಿಗಳನ್ನು ಬಲಪಡಿಸುವುದು ನಮ್ಮ ಶರೀರ ಬಲವನ್ನು ಕಡಿಮೆ ಮಾಡುವುದು.

ಪ್ರಜ್ಞಾಪರಾಧ – ಆರೋಗ್ಯಕ್ಕೆ ಹಾನಿಕರ ಎಂದು ತಿಳಿದು ತಿಳಿದು ಮಾಡುವಂತಹವು ಅನೇಕ ಗುಟ್ಕಾ ,ತಂಬಾಕು ಸೇವನೆಯಿಂದ ಹಿಡಿದು ಐಸ್ ಕ್ರೀಮ್ , ಅತಿ ಮಾಸಲೆಗಳನ್ನು ತಿಂದು ಅಸಿಡಿಟಿ ಮಾಡಿಕೊಳ್ಳುವುದು, ಹಸಿವಿಲ್ಲದಿದ್ದರು ಕೂಡ ಅತಿಯಾಗಿ ತಿನ್ನುವುದು, ಶುಚಿಯಾಗಿ ಕೈ ಕಾಲು ತೊಳೆಯದೆ ಇರುವುದು ,ಸ್ವಚ್ಛ ಬಟ್ಟೆ ಧರಿಸದಿರುವುದು ,  ಎಲ್ಲವು ಪ್ರಜ್ಞಾಪರಾಧಗಳೇ ,ನಮ್ಮ ಜ್ಞಾನೇಂದ್ರಿಯಗಳಿಗೆ ಒಗ್ಗದ ಶಬ್ದ ,ಸ್ಪರ್ಶ ,ರೂಪ , ರುಚಿ , ಹಾಗು ವಾಸನೆಗಳನ್ನು ಅನುಭವಿಸುವುದು ಇತ್ಯಾದಿ. 

ಪ್ರತಿ ವ್ಯಕ್ತಿಯ ಶರೀರದ ರಕ್ತ ಮಾಂಸಾದಿ ಧಾತುಗಳು  ,ವಾಸಿಸುವ ಸ್ಥಳ,ಶರೀರ ಬಲ ,ಕಾಲ- ವಾತಾವರಣ  , ಸ್ಥೂಲ ಜೀರ್ಣ ಶಕ್ತಿ  ಹಾಗು ಸೂಕ್ಷ್ಮವಾದ ಪ್ರತಿ ಕೋಶಗಳ ಮೈಟೊಕಾಂಡ್ರಿಯ ದಲ್ಲಿ ಆಗುವ ಜೀರ್ಣ ಕ್ರಿಯೆ ,ವಯಸ್ಸು , ಅಹಿತದ ಪ್ರಮಾಣ ಇತ್ಯಾದಿ ಅನೇಕ ಕಾರಣಗಳ ವಿವಿಧ ರೀತಿಯ ಸಂಯೋಗದಿಂದ ವ್ಯಾಧಿ ಉತ್ಪತ್ತಿ ಆಗುತ್ತದೆ ಅದಕ್ಕಾಗಿಯೇ ಅದೇ ರೋಗವು ಕೆಲವರಲ್ಲಿ ಶೀಘ್ರವಾಗಿ ಉತ್ಪತ್ತಿ ಆಗಬಹುದು ಕೆಲವರಲ್ಲಿ ನಿಧಾನವಾಗಿ , ಹಾಗು ಸಣ್ಣದಾಗಿಯೂ ಬರಬಹುದು ಅಥವಾ ಉಗ್ರ ರೂಪ ತಾಳಿ ಸಾವಿಗೂಕಾರಣ ಆಗಬಹುದು. ಇದೇ ಕಾರಣಕ್ಕಾಗಿ ಯಾವುದೇ ಕೊರೊನದಂತಹ ಸಾಂಕ್ರಾಮಿಕ ಕಾಯಿಲೆಗಳು ಕೂಡ ಒಂದೇ ಮನೆಯ, ಒಂದೇ ಕಚೇರಿಯ ಎಲ್ಲರಿಗು ಒಂದೇ ತರಹದಲ್ಲಿ ಭಾದಿಸುತ್ತಿಲ್ಲ.

ಮುಂದುವರಿದು ಅತ್ರೇಯರು ಸಾಂಧರ್ಭಿಕವಾಗಿ  ಹೇಳುತ್ತಾರೆ “ನಾನಾವೃತ  ಮುಖೋ ಜೃಂಭ ,ಕ್ಷವತು, ಹಾಸ್ಯಾಂ ವಾ ಪ್ರವರ್ತಯೇತ್” ಅಂದರೆ ಬಾಯಿ ಹಾಗು ಮೂಗನ್ನು ಮುಚ್ಚದೆ ಆಕಳಿಸುವುದು ,ಸೀನುವುದು ,ನಗೆಯಾಡುವುದು ಮಾಡಬಾರದು ,ಮೂಗಿನ ಹೊಳ್ಳೆಗಳಿಗೆ ಬೆರಳು ಹಾಕುವುದು ,ಉಗುರು ಕಚ್ಚುವುದು ,ಕಂಡ ಕಂಡಲ್ಲಿ ಉಗುಳುವುದು ,ಮಲಮೂತ್ರಗಳ ವಿಸರ್ಜನೆಯನ್ನು ಕೂಡ ಆರೋಗ್ಯದ ದೃಷ್ಟಿಯಿಂದ ಮಾಡದಂತೆ ಎಚ್ಚರಿಸಿದ್ದಾರೆ ,.

ವ್ಯಾಧಿಕ್ಷಮತ್ವ-  ಆಯುರ್ವೇದದಲ್ಲಿ ವ್ಯಾಧಿಕ್ಷಮತ್ವ  ಎಂಬುದು ಬಹುಚರ್ಚಿತ ವಿಷಯವಾಗಿದ್ದು ಅದನ್ನೇ ಶರೀರ ಬಲ ಅಥವಾ ಈ ದಿನಗಳಲ್ಲಿ ಇಮ್ಯೂನಿಟಿ ಎಂದು ಕರೆಯುತ್ತಾರೆ ,ವ್ಯಾಧಿ ಕ್ಷಮತ್ವ ಎಂದರೆ ವ್ಯಾಧಿ ಬಲವನ್ನು ವಿರೋಧಿಸುವ ಶರೀರ ಹಾಗು ಮನಸ್ಸಿನ ಶಕ್ತಿಯಾಗಿದ್ದು ವ್ಯಾಧಿ ಬರದಂತೆ ತಡೆಯುವುದರೊಂದಿಗೆ ,ಬಂದರೋಗದಿಂದ  ಬೇಗನೆ  ಗುಣಮುಖವಾಗಲು ಪ್ರಧಾನ ಕಾರಣವಾಗಿರುವ ಪ್ರತಿರೋಧಕ ಶಕ್ತಿಯೇ ಆಗಿರುತ್ತದೆ ಅದರ ಕೊರತೆಯಿಂದಾಗಿ ಅನೇಕ ವಯಸ್ಕರು , ಹೃದ್ರೋಗಿಗಳು ಕೊರೋನ ಕ್ಕೆ ಬಲಿಯಾಗುವುದು ಗೋಚರಿಸುತ್ತಿದೆ ,

Charaka

ಶರೀರ ಬಲ ಚರಕ ಸಂಹಿತೆ ಪ್ರಕಾರ ಮೂರು ತರಹದ್ದಾಗಿರುತ್ತದೆ ,

1) ಸಹಜ ಬಲ- ಇದು ಜನ್ಮದಿಂದ ಪ್ರಾಪ್ತಿ ಆಗುವಂತದ್ದು ,ಅಪ್ಪ ಅಮ್ಮನಿಂದ ಉತ್ಪತ್ತಿ ಆದ ವೀರ್ಯ ಅಂಡಾಣು, ಗರ್ಭಿಣಿಯ ಆಹಾರ ಹಾಗು ಅವರ   ಮನಸ್ಸಿಗೆ ಅನುಗುಣವಾಗಿರುತ್ತದೆ , ಸಧೃಡ  ದೇಹ ಇದ್ದು ದುರ್ಬಲ ಮನಸ್ಸಿರಬಹುದು ಅಥವಾ ಬಲಹೀನ ಶರೀರದಲ್ಲಿ ಅಪ್ಪ ಅಮ್ಮನಿಗೆ ಅನುಗುಣವಾಗಿ ಸತ್ವಯುತ ಮನಸ್ಸಿರಬಹುದು.

2) ಎರಡನೆಯದು ಕಾಲಜ ಬಲ- ಎಂದರೆ ಋತುವಿಗೆ ಹಾಗು ವಯಸ್ಸಿಗೆ  ಅನುಸಾರವಾಗಿ ಉದಾಹರಣೆಗೆ ಹೇಮಂತ ಶಿಶಿರ ಋತುಗಳಲ್ಲಿ ಸಹಜವಾಗಿ ಶರೀರ ಬಲ ಹೆಚ್ಚಿದ್ದು ಕಾಯಿಲೆಗಳು ಕಮ್ಮಿ ಇರುವುದು ಕಂಡು ಬರುತ್ತದೆ ಅಂತೆಯೇ  ಬಾಲ್ಯ , ಯೌವನ ಹಾಗು ವೃದ್ಧಾಪ್ಯ ಕಾಲಾನುಸಾರ ಶರೀರ ಬಲ.

3) ಮೂರನೆಯದಾಗಿ ಯುಕ್ತಿ ಕೃತ ಬಲ- ಅಂದರೆ ನಮ್ಮ ಬುದ್ಧಿವಂತಿಕೆಯಿಂದ ಶರೀರ ಬಲವನ್ನು ಪಡೆದುಕೊಳ್ಳುವುದು ಇದರಲ್ಲಿ ವ್ಯಾಯಾಮ, ಹಾಲು , ತುಪ್ಪ, ಹಣ್ಣುಗಳ ಸೇವನೆ , ಒಳ್ಳೆಯ ದಿನಚರಿ ಪಾಲನೆ ,ಲೇಹ್ಯ ರಾಸಾಯನದಂತಹ ಔಷಧಿಗಳು ಇಂದಿನ ಯುಗದ ವ್ಯಾಕ್ಸೀನ್ ಕೂಡ  ಒಳಗೊಂಡಂತೆ ಇದೆ.  

ವ್ಯಾಧಿಕ್ಷಮತ್ವ ಎಂಬುದು ಆಯುರ್ವೇದದ ಸಿದ್ಧಾಂತ  ಪ್ರಕಾರ  ಪೋಲಿಯೋ, ದಡಾರ  ಅಥವಾ ಇತರೆ ಯಾವುದೇ ವ್ಯಾಕ್ಸೀನ್ ನಂತೆ  ಯಾವುದೇ ಒಂದು ನಿರ್ದಿಷ್ಟ ಕ್ರಿಮಿಯ ರೋಗದ  ವಿರುದ್ಧವಾಗಿ ಇರುವುದಿಲ್ಲ, ಇದು ಎರಡು ವಿಷಯಗಳ ಆಧಾರಿತವಾಗಿ ಇದೆ.

ಮೊದಲನೆಯದಾಗಿ ಕಾಯಿಲೆ ತರುವ ಕ್ರಿಮಿಗೆ ಅನುಕೂಲಕರವಾಗುವಂತೆ ನಮ್ಮ ದೇಹ ಇದ್ದಾಗ ಕಾಯಿಲೆ ಆಗುತ್ತದೆ  ಹಾಗು ಎರಡನೆಯದಾಗಿ  ಎಲ್ಲ ವ್ಯಕ್ತಿಗಳು  ಕೂಡ ಒಂದೇ ಮಟ್ಟಕ್ಕೆ ಕಾಯಿಲೆಗೆ ಒಳಪಡುವುದಿಲ್ಲ. ,ತಾತ್ಪರ್ಯ ಏನೆಂದರೆ ಹೇಗೆ ಅನುಕೂಲವಾದಂತ ಭೂಮಿ ಸಿಗದಿದ್ದರೆ ಬಿತ್ತಿದ ಬೀಜ ತಾನೇ ನಾಶವಾಗುವುದೋ  ,ಇಂಧನ ಇಲ್ಲದ ಅಥವಾ ಗಾಳಿ ಇಲ್ಲದೆ ಬೆಂಕಿ ಹೇಗೆ ಆರುವುದೋ ಅಂತೆಯೇ ವ್ಯಾಧಿಕ್ಷಮತ್ವದಿಂದಾಗಿ ವ್ಯಾಧಿಗೆ  ಅನುಕೂಲ ಪರಿಸ್ಥಿತಿ ನಮ್ಮ ದೇಹದಲ್ಲಿ ಇಲ್ಲದಿದ್ದಾಗ ಸಹಜವಾಗಿ ಸಾಂಕ್ರಾಮಿಕ ಹಾಗು ಇತರೆ ಕಾಯಿಲೆಗಳ ವಿರುದ್ಧ ದೇಹ ಗೆಲ್ಲುತ್ತದೆ , ಕ್ರಿಮಿ ಯಾವುದು ಎಂಬುದು ಮುಖ್ಯ ಅಲ್ಲ ನಮ್ಮ ಶರೀರ ಹೇಗಿದೆ ಎಂಬುದೇ ಅತಿ ಮುಖ್ಯ.

ವ್ಯಾಧಿಕ್ಷಮತ್ವ ಎಂಬುದು ಸೂಪರ್ ಮಾರ್ಕೆಟ್ ಗಳಲ್ಲಿ ಮಾರಾಟಕ್ಕಿರುವ ವಸ್ತುವಲ್ಲ ,ಆರೋಗ್ಯವನ್ನು ಕಾಪಾಡಲು ಬೇಕಾದ ಆಹಾರ ,ವಿಹಾರ, ನಿದ್ರೆ , ಒತ್ತಡ ರಹಿತ ಜೀವನ ಹಾಗು ದಿನಚರಿಗಳಲ್ಲಿ ಅಡಗಿದೆ ,ಅಂತೆಯೇ ಮನೆ ಮದ್ದಿಗೆ ಹೇಳುವ  ಅರಶಿನ ಇತ್ಯಾದಿ ಮಸಾಲೆಗಳು ಮಾತ್ರ ಆಯುರ್ವೇದ ಅಲ್ಲ ಅವು ಆಯುರ್ವೇದದ ಔಷಧಿ  ಸಮುದ್ರದಿಂದ ಒಂದು ಹನಿ ತೆಗೆದಂತೆ ಮಾತ್ರ .

  • Mayoon N / Biotechnologist / Director of DRM Career Build Center , kolar

About the author / 

DRM

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    8 ತಿಂಗಳ ಗರ್ಭಿಣಿ ಡ್ಯಾನ್ಸ್ ಮಾಡುತ್ತಿರುವ ವಿಡಿಯೋ ರೆಕಾರ್ಡ, ಜಾಲತಾಣದಲ್ಲಿ ವೈರಲ್.!

    ಗರ್ಭಾವಸ್ಥೆ ಎನ್ನುವುದು ಹೆಣ್ಣಿನ ಜೀವನದ ಬಹಳ ಮಹತ್ವದ ಘಟ್ಟ ಎನ್ನುತ್ತಾರೆ. ಈ ಸಮಯದಲ್ಲಿ ತಾಯಿ ತನ್ನ ಮಗುವಿನ ಬೆಳವಣಿಗೆಗಾಗಿ ಬಹಳ ಜಾಗರೂಕಳಾಗಿರಬೇಕು. ಹೆಚ್ಚು ಕಷ್ಟವಾಗುವ ಕೆಲಸಗಳನ್ನು ಮಾಡಬಾರದು. ಆದರೆ ಇಲ್ಲೊಬ್ಬರು ಮಹಿಳೆ ತಾವು 8ನೇ ತಿಂಗಳ ಗರ್ಭವತಿಯಾಗಿರುವಾಗ ಡ್ಯಾನ್ಸ್ ಮಾಡಿ ಗಮನ ಸೆಳೆದಿದ್ದಾರೆ. ಈ ವಿಡಿಯೋ ಕೆಲವು ದಿನಗಳ ಮುನ್ನವೇ  ಮಾಡಲಾಗಿದ್ದು ಈಗ ಈ ವಿಡಿಯೋ ವೈರಲ್ ಆಗುತ್ತಿದೆ. ಚೂಡಾಮಣಿ ಪತಿ ಸಾಫ್ಟ್‍ವೇರ್ ಎಂಜಿನಿಯರ್. ಪತ್ನಿಗೆ ಅವರ ಸಂಪೂರ್ಣ ಸಹಕಾರ ಇದೆ. ದಂಪತಿಗೆ ಈಗಾಗಲೇ ಒಂದು ಹೆಣ್ಣು ಮಗು…

  • ಉಪಯುಕ್ತ ಮಾಹಿತಿ

    ಇದು ದಕ್ಷಿಣ ಭಾರತದ ವಾಟರ್ ಬಾಂಬ್.!ಈ ಆಣೆಕಟ್ಟು ಒಡೆದ್ರೆ, ಈ ಭಾಗದ ನಗರಗಳು ಗ್ಯಾರಂಟಿ ಜಲಸಮಾಧಿ.!

    ನಿಮಗೆ ಆಟಂಬಾಂಬ್ ಗೊತ್ತು, ಹೈಡ್ರೋಜನ್  ಬಾಂಬು ಬಗ್ಗೆ ಗೊತ್ತು. ಆದರೆ ನೀವು ವಾಟರ್ ಬಾಂಬ್  ಬಗ್ಗೆ ಕೇಳಿದ್ದೀರಾ! ಅದರಲ್ಲಿ ಕೂಡ ನೀರಾವರಿಗೆ ಅಂತ ಕಟ್ಟಿರೋ ಡ್ಯಾಮ್, ಲಕ್ಷಾಂತರ ಜನರ ಆತಂಕಕ್ಕೆ ಎಡೆಮಾಡಿಕೊಟ್ಟಿದೆ, ಎಂಬುದರ ಬಗ್ಗೆ ನಿಮಗೆ ಗೊತ್ತಾದ್ರೆ ಶಾಕ್ ಆಗ್ತೀರಾ… ಅದಕ್ಕಿಂತ ಹೆಚ್ಚಾಗಿ ನೀರನ್ನು ಬಳಸುತ್ತಿರುವ ಕೇರಳ ರಾಜ್ಯ ಡ್ಯಾಮ್ ಕಟ್ಟಿರುವ ಜನರ ಜೀವಗಳನ್ನು ಪಣಕ್ಕಿಟ್ಟು ಆಟ ಆಡುತ್ತಿದೆ ಅಂದ್ರೆ ನಿಮಗೆ ನಂಬದೆ ಇರೋಕ್ಕೆ ಆಗಲ್ಲ.ಹೀಗೆ ಜನರ ಜೀವನದ ಜೊತೆ ಆಟವಾಡುತ್ತಿರುವ ಅಪಾಯಕಾರಿ ಡ್ಯಾಮ್ ಎಲ್ಲಿದೆ ಗೊತ್ತಾ?ನಮ್ಮ…

  • ಜ್ಯೋತಿಷ್ಯ

    ದಿನ ಭವಿಷ್ಯ ಶುಕ್ರವಾರ, ಈ ದಿನದ ನಿಮ್ಮ ರಾಶಿ ಭವಿಷ್ಯದ ಜೊತೆಗೆ ಅದೃಷ್ಟದ ಸಂಖ್ಯೆ ತಿಳಿಯಿರಿ…

    ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕಚಿಂತಕರು 9663218892 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು  ಹಾಗೂನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನುಅಳಿಸಬಹುದು ಮತ್ತು ಪ್ರಶ್ನೆಗಳಿಗೆಉತ್ತರಿಸಬಹುದುಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 11 ದಿನದಲ್ಲಿ ಶಾಶ್ವತ ಪರಿಹಾರ 966 321 8892 ಮೇಷ 25 ಜನವರಿ, 2019 ಏಕೆಂದರೆ ಅದು ಮಗುವನ್ನು ಬಾಧಿಸಬಹುದು. ರಿಯಲ್ ಎಸ್ಟೇಟ್ ಮತ್ತು ಆರ್ಥಿಕ ವ್ಯವಹಾರಗಳಿಗೆ…

  • ಜ್ಯೋತಿಷ್ಯ

    ದಿನ ಭವಿಷ್ಯ …..ಪಂಡಿತ್ ವಿಶ್ವರೂಪ ಆಚಾರ್ಯರವರಿಂದ..ನಿಮ್ಮ ರಾಶಿ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ…ಶೇರ್ ಮಾಡಿ

    ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ಜ್ಯೋತಿಷ್ಯ ಭವನ ನಿಮ್ಮ ಸಮಸ್ಯೆಯನ್ನು ಇರಲಿ ಎಷ್ಟೇ ಕಠಿಣವಾಗಿರಲಿ ಉಚಿತ ಭವಿಷ್ಯ ಖಚಿತ ಪರಿಹಾರ ತುಳು ನಾಡಿನ ಹಿರಿಯ ಬ್ರಾಹ್ಮಣರಾದ ಗುರುಗಳಾದ ಶ್ರೀ ವಿಶ್ವರೂಪ ಆಚಾರ್ಯರು ಯರು  9739124121ಶ್ರೀ ಕ್ಷೇತ್ರ ಧರ್ಮಸ್ಥಳ ನುಡಿದಂತೆ ನಡೆಯುವುದು ಮೇಷ ಮಕ್ಕಳು ಶುಭ ವಾರ್ತೆಯನ್ನು ತರಲಿದ್ದಾರೆ. ವಿಶೇಷವಾದ ಸಂತೋಷ ಸಮಾಧಾನಗಳು ನಿಮ್ಮದಾಗುವುದು. ಬಾಕಿ ಬರಬೇಕಾಗಿದ್ದ ಹಣಕಾಸು ಬರುವ ಸಾಧ್ಯತೆ ಇರುತ್ತದೆ. ಆರೋಗ್ಯ ಉತ್ತಮವಾಗಿರುವುದು.ನಿಮ್ಮ ಸಮಸ್ಯೆ.ಏನೇ .ಇರಲಿ ಎಷ್ಟೇ ಕಠಿಣವಾಗಿರಲಿ ಉಚಿತ ಭವಿಷ್ಯ ಖಚಿತ ಪರಿಹಾರ…

  • ಸಿನಿಮಾ

    ತನಗೆ ಅನ್ಯಾಯ ಆಗಿದೆಯೆಂದು ಬೆತ್ತಲೆಯಾಗಿ ಪ್ರತಿಭಟನೆ ನಡೆಸಿದ ನಟಿ..?ಯಾರು, ಏಕೆ ಗೊತ್ತಾ.?ತಿಳಿಯಲು ಮುಂದೆ ಓದಿ ಶಾಕ್ ಆಗ್ತೀರಾ…

    ತೆಲುಗು ಚಿತ್ರರಂಗದ ವಿವಾಧಾತ್ಮಕ ನಟಿ ಶ್ರೀರೆಡ್ಡಿ ಕಲಾವಿದರ ಸಂಘದ ಕಟ್ಟಡದ ಎದುರು ಬೆತ್ತಲೆಯಾಗಿ ಪ್ರತಿಭಟನೆ ನಡೆಸಿದ್ದಾರೆ. ಯಾರು ಈ ಶ್ರೀರೆಡ್ಡಿ..? ಕೆಲವು ದಿನಗಳ ಹಿಂದಯೇ ಈ ನಟಿ ಚಿತ್ರರಂಗದಲ್ಲಿ ನಡೆಯುತ್ತಿರುವ ಬೆಳವಣಿಗೆ ಕುರಿತಾಗಿ ಹೇಳಿಕೆ ನೀಡಿದ್ದರು. ‘ನೇನು ನಾನಾ ಅಪದ್ಧಂ’ ಸೇರಿದಂತೆ ಹಲವಾರು ಚಿತ್ರಗಳಲ್ಲಿ ನಟಿಸಿರುವ ಶ್ರೀರೆಡ್ಡಿ, ಮಂಚ ಹಂಚಿಕೊಳ್ಳಲು ಸಿದ್ಧವಿರುವವರಿಗೆ ಮಾತ್ರ ಚಾನ್ಸ್ ಕೊಡಲಾಗ್ತಿದೆ ಎಂದು ಗಂಭೀರ ಆರೋಪ ಮಾಡಿದ್ದರು. ಬೆತ್ತಲೆಯಾಗಿ ಪ್ರತಿಭಟನೆ ನಡೆಸಿದ್ದು ಏಕೆ..? ತೆಲುಗು ಸಿನಿಮ ಕಲಾವಿದರ ಸಂಘದಿಂದ ಗುರುತಿನ ಚೀಟಿ ನೀಡದ ಸಂಭಂದ…

  • ವಿಸ್ಮಯ ಜಗತ್ತು

    ಏಳು ವರ್ಷದ ನಂತರವೂ ತನ್ನ ಪೋಷಕನನ್ನು ಗುರುತು ಹಿಡಿದು ಆತನ ಹಿಂದೆ ಬಿದ್ದ ಜಿಂಕೆ..!ಈ ಲೇಖನ ಓದಿ ಶಾಕ್ ಆಗ್ತೀರಾ…

    ತಮ್ಮನ್ನು ಸಾಕಿದವರನ್ನು ಹಾಗೂ ತಮ್ಮ ಬಗ್ಗೆ ಕಾಳಜಿ ವಹಿಸಿದವರನ್ನು ಪ್ರಾಣಿಗಳು ಎಂದಿಗೂ ವು ರೆಯುವುದಿಲ ಎಂಬ ಮಾತು ನೂರಕ್ಕೆ ನೂರರಷ್ಟು ಸತ್ಯ, ಇದಕ್ಕೆ ಜೀವಂತ ನಿದರ್ಶನ ಬಳ್ಳಾರಿಯ ಜಿಂಕೆ ಮರಿ ಯಾಗಿದೆ.