ಸುದ್ದಿ

ವಿಚ್ಛೇದನ ನೀಡಿ ಎರಡನೇ ಮದುವೆ ಆದ್ರೂ, ಈ ಮಹಿಳೆ ತನ್ನ ಎರಡನೇ ಗಂಡನ ಜೊತೆಗೇ, ಮೊದಲ ಪತಿಯ ಸೇವೆ ಮಾಡುತ್ತಿದ್ದಾಳೆ..!ಏಕೆ?ತಿಳಿಯಲು ಈ ಲೇಖನ ಓದಿ…

640

ಚೀನಾದಲ್ಲಿ ಮಹಿಳೆಯೊಬ್ಬಳು ತನ್ನ ಪಾರ್ಶ್ವವಾಯು ಪತಿಗೆ ವಿಚ್ಛೇದನ ನೀಡಿದ್ದಾಳೆ. ನಂತ್ರ ತನ್ನ ಸ್ನೇಹಿತನೊಬ್ಬನ ಜೊತೆ ಮದುವೆಯಾಗಿದ್ದಾಳೆ. ಇಷ್ಟಕ್ಕೆ ಕಥೆ ಮುಗಿಯಲಿಲ್ಲ. ಮೊದಲ ಹಾಗೂ 2ನೇ ಪತಿ ಜೊತೆ ಒಂದೇ ಮನೆಯಲ್ಲಿ ವಾಸವಾಗಿದ್ದಾಳೆ. ಮಹತ್ವದ ಉದ್ದೇಶದೊಂದಿಗೆ ಮಹಿಳೆ ಮಾಡಿದ ಈ ಕೆಲಸಕ್ಕೆ ಸಂಬಂಧಿಕರು ಬೇಷ್ ಎಂದಿದ್ದಾರೆ.

ಇದು ಚೀನಾದ ಕುಟುಂಬದ ಕಥೆ…

ಷಿ ಶಿಪ್ಪಿಂಗ್ ಪತಿ ಷು ಶಿಹಾನ್ ಗಣಿಯೊಂದರಲ್ಲಿ ಕೆಲಸ ಮಾಡ್ತಿದ್ದ. ದುರ್ಘಟನೆಯೊಂದರಲ್ಲಿ ಆತನಿಗೆ ಪಾರ್ಶ್ವವಾಯು ಕಾಣಿಸಿದೆ. ನಂತ್ರ ಷು ಶಿಹಾಗ್ ಹಾಸಿಗೆಯಲ್ಲಿಯೇ ಮಲಗುವಂತಾಗಿದೆ. ಘಟನೆ ನಂತ್ರ ಪತ್ನಿ ಶಿಹಾಗ್ ಸೇವೆ ಮಾಡ್ತಿದ್ದಳಂತೆ. ಆದ್ರೆ ಷುಗೆ ಪತ್ನಿ ಬಿಟ್ಟು ಹೋದರೆ ಎಂಬ ಭಯ ಕಾಡುತ್ತಿತ್ತಂತೆ. ಜೊತೆಗೆ ಪತ್ನಿ ಜೀವನ ಇಷ್ಟಕ್ಕೆ ಮುಗಿದು ಹೋದ್ರೆ ಎಂಬ ಚಿಂತೆ  ಕಾಡುತ್ತಿತಂತೆ.

ಈ ಬಗ್ಗೆ ಮಹತ್ವದ ನಿರ್ಧಾರ ತೆಗೆದುಕೊಂಡ ಷು ನನಗೆ ವಿಚ್ಛೇದನ ನೀಡಿ ಬೇರೆ ಮದುವೆ ಆಗುವಂತೆ ಷಿಗೆ ಹೇಳಿದ್ದ. ಅಂತೂ ಇಂತೂ ಷಿ ಇದಕ್ಕೆ ಒಪ್ಪಿದ್ದಳು. ಆದ್ರೆ ಒಂದು ಷರತ್ತು ವಿಧಿಸಿದಳು.ಮದುವೆ ನಂತ್ರವೂ ಮೊದಲ ಪತಿ ಸೇವೆ ಮಾಡುತ್ತೇನೆ ಎಂದು ಷಿ ಹೇಳಿದ್ದಳಂತೆ. ಇದಕ್ಕೆ ಷು ಆಪ್ತ ಸ್ನೇಹಿತ ಒಪ್ಪಿ ಷಿ ಕೈ ಹಿಡಿದನಂತೆ. ಈಗ ಎಲ್ಲರೂ ಒಟ್ಟಿಗೆ ಸಂತೋಷದಿಂದ ಕಾಲ ಕಳೆಯುತ್ತಿದ್ದಾರೆ. ಪಿ ಮಾಜಿ ಪತಿ ಷು ಸೇವೆ ಮುಂದುವರೆಸಿದ್ದಾಳೆ.

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ