ತಂತ್ರಜ್ಞಾನ

ಭಾರತದಲ್ಲಿ ಹೀಗೆ ಹಾಗಿದ್ರೆ ಏನಾಗುತ್ತಿತ್ತೋ ಗೊತ್ತಿಲ್ಲ?ಆದ್ರೆ ಇವರು ಕುಸಿದ ಈ ರಸ್ತೆ ಮುಚ್ಚಲು ತೆಗೆದುಕೊಂಡ ಟೈಮ್ ಕೇಳಿದ್ರೆ ನೀವ್ ಶಾಕ್ ಆಗ್ತೀರಾ.!ಓದಿ ಶೇರ್ ಮಾಡಿ…

2839

ಒಮ್ಮೆ  ಜಪಾನಿನ ಫುಕವೋಕಾ ಎನ್ನುವ ಊರಿನಲ್ಲಿ ನಾಲ್ಕು ರಸ್ತೆ ಕೂಡುವ ಸರ್ಕಲ್ ಕೂಡು ರಸ್ತೆ ಕುಸಿದು ಬಿದ್ದಿತ್ತು ! 98 ಅಡಿ ಉದ್ದ, 88 ಅಡಿ ಅಗಲ ಇದ್ದ ರಸ್ತೆ ಇದ್ದಕ್ಕಿದ್ದ ಹಾಗೆ ಕುಸಿದು ಹೋಗಿತ್ತು ,ಕುಸಿದದ್ದು ಎಂದರೆ ನಮ್ಮಲ್ಲಿನಂತೆ ಸಣ್ಣದಾಗಿ ಎರಡಡಿ ಕೆಳಕ್ಕಿಳಿದಿರಲಿಲ್ಲ ಬರೊಬ್ಬರಿ 50 ಅಡಿಯಷ್ಟು ಕೆಳಗೆ ಕುಸಿದು ಹೋಗಿತ್ತು !

ಈ ಭೂಕುಸಿತವು ಅವರಿಗೇನೂ ಹೊಸದಲ್ಲ ಏಕೆಂದರೆ ಎಂತೆತಹಾ ಭೂಕಂಪಗಳನ್ನು ಎದುರಿಸಿದವರಿಗೆ ಇದಾವ ಲೆಕ್ಕ , ಆದರೆ ಈ ಭೂ ಕುಸಿತ ಅಂತರಾಷ್ಟ್ರೀಯ ಮಟ್ಟದಲ್ಲಿಯೂ ಹೆಸರು ಮಾಡಿತು ಏಕೆಂದರೆ ಇದಕ್ಕೂ ಮೊದಲು ಇಂತಹುದೇ ಪರಿಸ್ಥಿತಿ ವಾಸಿಂಗ್ಟನ್ನಿನಲ್ಲಿಯೂ ಎದುರಾಗಿತ್ತು !

ಆದರೆ ಜಪಾನಿನವರು ಈ ಪರಿಸ್ಥಿತಿ ಎದುರಿಸಲು ಸಿದ್ಧವಾಗಿಯೇ ಇದ್ದರೇನೋ ಎಂಬಂತೆ ಕೆಲಸ ಶುರು ಮಾಡಿಬಿಟ್ಟರು ,ಅವರು ಬೇರೆ ದೇಶಗಳಂತೆ ಕುಸಿದ ಗುಂಡಿಯ ಮುಂದೆ ಕೂತು ಸಂತಾಪ ಸೂಚಿಸುವುದೋ ಅಥವಾ ಪರಿಸ್ಥಿತಿಯ ಅವಲೋಕನ ಹಾಗೂ ನೇರ ಮಾಹಿತಿ ಸಂಗ್ರಹಣೆಗೆ ಅಧಿಕಾರಿಗಳನ್ನು ಕಳುಹಿಸಿದ್ದೇವೆ ಎಂದು ಹೇಳಲೇ ಇಲ್ಲ .

ರಸ್ತೆ ಕುಸಿದ 17 ನಿಮಿಷದ ಒಳಗೆಯೇ ಹೈವೇ ಅಥೋರಿಟಿ ಮುಖ್ಯಾಧಿಕಾರಿ ಸ್ಥಳಕ್ಕೆ ಹಾಜರಾದ ಹಾಗೂ ಆತ ಅಲ್ಲಿಗೆ ಬರುವಷ್ಟರಲ್ಲಿಯೇ ಕುಸಿತವಾದಲ್ಲಿಗೆ ಗ್ಯಾಸ್ ಪೈಪ್ ಕೆಲಸಗಾರರು.ಆಪ್ಟಿಕಲ್ ಫೈಬರ್ ಕೆಲಸಗಾರರು ,ಒಳಚರಂಡಿ ಸರಿಪಡಿಸಲು ಕೆಲಸಗಾರರು.ವಿದ್ಯುತ್ ಕೆಲಸಗಾರರು ಎಲ್ಲರೂ ಹಾಜರಿದ್ದರು .

ಮುಂದಿನ ಕೆಲವೇ ಗಂಟೆಗಳಲ್ಲಿ ವಿದ್ಯುತ್.ಗ್ಯಾಸ್.ಡ್ರೈನೇಜ್.ಓ.ಎಫ್.ಸಿ. ಎಲ್ಲವನ್ನೂ ಅಸಾಮಾನ್ಯ ವೇಗದಲ್ಲಿ ಸರಿಪಡಿಸಿಬಿಟ್ಟರು . ಅದೇ ಸಮಯದಲ್ಲಿಯೇ ಸ್ಟೇಡಿಯಮ್ಮಿನಲ್ಲಿ ಹಾಕುವ ಫ್ಲಡ್ ಲೈಟ್ ಜೊಡಿಸುವಷ್ಟರಲ್ಲಿಯೇ ಜಪಾನಿನಲ್ಲಿಯೇ ತಯಾರಾದ ಆಧುನಿಕ ಜೆ.ಸಿ.ಬಿ ಹಾಗೂ ಟಿಲ್ಲರ್.ಟಿಪ್ಪರ್ .ಕ್ರೇನ್ ಗಳು ಹಾಜರಾದವು .

ಪ್ರತಿ ಮೂರು ಗಂಟೆಗೆ ಒಂದು ಟೀಮಿನ ಸಿಫ್ಟ್ ಬದಲಾವಣೆ ಮಾಡಲಾಗುತ್ತಿತ್ತು ! ಒಂದೇ ಒಂದು ಕ್ಷಣವನ್ನೂ ಅವರು ಟೀ ಕುಡಿಯುತ್ತಾ ಕಳೆಯಲೇ ಇಲ್ಲ .ಕೆಲಸ ಮುಗಿಸಿಯೇ ಬಿಟ್ಟರು ! ಅದೂ ಕೇವಲ 48 ಗಂಟೆಗಳ ಒಳಗೆಯೇ ರೋಡಿಗೆ ಟಾರು ಬಳಿದು.ಅಲ್ಲಲ್ಲಿ ಬಿಳಿ ನಾಮಗಳನ್ನೆಲ್ಲಾ ಹಚ್ಚಿ ಇಲ್ಲಿ ಈ ಮೊದಲು ಏನೂ ಆಗಿಯೇ ಇರಲಿಲ್ಲವೇನೋ ಎಂಬಂತೆ ಮನೆ ಕಡೆ ಹೊರಟರು.

ಸೈನಿಕರ ಕಾರ್ಯಾಚರಣೆಯಂತೆ ಹಗಲೂರಾತ್ರಿ ನೆಡೆದ ಆ ಕಾಮಗಾರಿ ಪ್ರಪಂಚದ ಹಲವು ಎಂಜನೀಯರುಗಳು ಆಶ್ಚರ್ಯಚಕಿತರಾಗುವಂತೆ ಮಾಡಿತು.ಈಗಲೂ ಸಹ ಹಲವು ವೆಬಸೈಟುಗಳು ಈ ಕೆಲಸಕ್ಕೆ 7 ದಿನ ತೆಗೆದುಕೊಂಡರು ಅಂತ ಬಡಕೊಳ್ಳುತ್ತಿದ್ದಾರೆ ಆದರೆ ಜಪಾನ್ ದೇಶದ ವೇಬಸೈಟುಗಳಲ್ಲಿ ಮಾತ್ರ ಅಧಿಕೃತ ಮಾಹಿತಿ ದೊರಕುತ್ತದೆ !

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ