ಜ್ಯೋತಿಷ್ಯ, ಭವಿಷ್ಯ

ಭಾನುವಾರದ ದಿನ ಭವಿಷ್ಯ..ಈ ದಿನದ ನಿಮ್ಮ ನಕ್ಷತ್ರ ಭವಿಷ್ಯ ಶುಭವೋ, ಅಶುಭವೋ ನೋಡಿ ತಿಳಿಯಿರಿ…

150

*ನಮ್ಮ ಪೇಜ್ ಲೈಕ್ ಮಾಡಿ ಶೇರ್ ಮಾಡಿ*

ಭಾನುವಾರ, 15/04/2018, ಇಂದಿನ ನಿಮ್ಮ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ…ಪಂಡಿತ್ ಸುದರ್ಶನ್ ಭಟ್  ದೈವಜ್ಞ ಜ್ಯೋತಿಷ್ಯರು ಹಾಗೂ ಆಧ್ಯಾತ್ಮಿಕ ಚಿಂತಕರು ನಿಮ್ಮ ಜೀವನದ ನಿಖರವಾದ ಭವಿಷ್ಯ ತಿಳಿಸುತ್ತಾರೆ ಹಾಗೂ ಸಮಸ್ಯೆಗಳಾದ ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕುಟುಂಬ ವಿದ್ಯೆ ಉದ್ಯೋಗ ಮಕ್ಕಳು ವ್ಯವಹಾರ ಹಣಕಾಸು ಸಮಸ್ಯೆಗಳಿಗೆ ಪರಿಹಾರ ಸೂಚಿಸುವರು 9663542672

ಸೂರ್ಯೋದಯ06:07:47
ಸೂರ್ಯಾಸ್ತ18:46:28
ಹಗಲಿನ ಅವಧಿ12:38:40
ರಾತ್ರಿಯ ಅವಧಿ11:20:26
ಚಂದ್ರಾಸ್ತ18:12:49
ಚಂದ್ರೋದಯ30:22:33*

ಋತು:ವಸಂತ
ಆಯನ:ಉತ್ತರಾಯಣ
ಸಂವತ್ಸರ:ವಿಲಂಬಿ
ಸಂವತ್ಸರ (ಉತ್ತರ):ವಿರೋಧಿಕೃತ್
ತಿಂಗಳು (ಅಮಾವಾಸ್ಯಾಂತ್ಯ):ಚೈತ್ರ
ತಿಂಗಳು (ಹುಣ್ಣಿಮಾಂತ್ಯ):ವೈಶಾಖ
ಪಕ್ಷ : ಕೃಷ್ಣ ಪಕ್ಷ
ತಿಥಿ : ಚರ್ತುದಶಿ
ನಕ್ಷತ್ರ : ರೇವತಿ
ಯೋಗ : ವೈಧೃತಿ
ಪ್ರಥಮ ಕರಣ : ಶಕುನಿ ಚತುಷ್ಪಾದ
ಸೂರ್ಯ ರಾಶಿ : ಮೇಷ
ಚಂದ್ರ ರಾಶಿ : ಮೀನ

ಮುಹೂರ್ತ

ರಾಹು ಕಾಲ17:12 – 18:46ಅಶುಭ
ಯಮಘಂಡ ಕಾಲ12:27 – 14:02ಅಶುಭ
ಗುಳಿಕ ಕಾಲ15:37 – 17:12
ಅಭಿಜಿತ್12:02 -12:52ಶುಭ
ದುರ್ಮುಹೂರ್ತ17:05 – 17:56ಅಶುಭ

ಮೇಷ:-

ನಿಮಗೆ ಬರಬೇಕಾದ ಅಥವಾ ಕಳೆದುಹೋದ ಹಣವು ಬರುವ ಸೂಚನೆ ನಿಮಗೆ.  ತಲುಪುವುದು. ಇದರಿಂದ ನಿಮ್ಮ ಆರ್ಥಿಕ ಸಂಕಷ್ಟಕ್ಕೆ ತೆರೆಬೀಳಲಿದೆ. ಪ್ರತಿಭಾವಂತರಿಗೆ ಉತ್ತಮ ಅವಕಾಶಗಳು ಬರುವುದು.

ವೃಷಭ:-

ನಿಮ್ಮ ವೃತ್ತಿಯಲ್ಲಿನ ಅನುಭವ ಹಾಗೂ ಜಾಣತನ ಎಲ್ಲರ ಪ್ರಶಂಸೆಗೆ ಪಾತ್ರವಾಗಲಿದೆ. ಹಿರಿಯರ ಆರೋಗ್ಯದ ಬಗ್ಗೆ ವಿಶೇಷ ಗಮನವಿರಲಿ. ಏಕಾಂತದಿಂದ ಹೊರ ಬರಲು ಉತ್ತಮ ಗ್ರಂಥಗಳ ಓದುವಿಕೆಯು ಸಹಕಾರಿಯಾಗುವುದು.

ಮಿಥುನ:

ನಿಮ್ಮ ಮಾತಿಗೂ ಕಾರ್ಯವೈಖರಿಗೂ ಅಂತರವಿರದಿರಲಿ. ಕೆಲ ಗ್ರಹಗಳ ಸಂಚಾರದಿಂದ ನಿಮಗೆ ಅಧಿಕ ಒತ್ತಡ ಉಂಟಾಗುವುದು. ಹಾಗಾಗಿ ಆದಷ್ಟು ತಾಳ್ಮೆಯಿಂದ ಇರಿ. ಕುಲದೇವತಾ ಪ್ರಾರ್ಥನೆ ಮಾಡಿ.

ಕಟಕ :-

ಬೆನ್ನು ನೋವು ಅಥವಾ ಮಂಡಿನೋವು ನಿಮ್ಮನ್ನು ಭಾಧಿಸುವ ಸಾಧ್ಯತೆ ಇದೆ. ಕಾಲು ಕೆಜಿಯಷ್ಟು ತೊಗರಿಬೇಳೆಯನ್ನು ದಾನ ಮಾಡಿ ಮತ್ತು ಸುಬ್ರಹ್ಮಣ್ಯ ಸ್ವಾಮಿಯ ಪ್ರಾರ್ಥನೆ ಮಾಡಿ. ಸಂಗಾತಿಯ ಮಾತುಗಳಿಗೆ ಬೆಲೆ ಕೊಡುವುದು ಒಳ್ಳೆಯದು.

 ಸಿಂಹ:

ಧೈರ್ಯಂ ಸರ್ವತ್ರ ಸಾಧನಂ ಎಂದರು ಹಿರಿಯರು. ಆ ಧೈರ್ಯವೇ ನಿಮ್ಮ ಬಹುದೊಡ್ಡ ಅಸ್ತ್ರ. ಹೊಸ ಚಿಗುರು ಹಳೇ ಬೇರು ಕೂಡಿರಲು ಮರ ಸೊಗಸು ಎನ್ನುವಂತೆ ಹಳೆಯ ವಿಚಾರಗಳು ನಿಮಗೆ ಸಂತಸವನ್ನುಂಟು ಮಾಡುವುದು.

ಕನ್ಯಾ :-

ಸಾಮಾಜಿಕ ಜೀವನದ ಹಿನ್ನೆಲೆಯಲ್ಲಿ ನಿಮಗೆ ಗೌರವ ಆತಿಥ್ಯಗಳು ದೊರೆಯುವುದು. ಈ ವಿಚಾರವು ನಿಮ್ಮ ವಿರೋಧಿಗಳಿಗೆ ನುಂಗಲಾರದ ತುತ್ತಾಗಿ ಪರಿಣಮಿಸುವುದು. ಜಯವಿರುವವರೆಗೂ ಭಯವಿಲ್ಲ. ಹಾಗಾಗಿ ನಿಮ್ಮ ಕಾರ್ಯದಲ್ಲಿ ತಲ್ಲೀನರಾಗಿ.

ತುಲಾ:

ಧರ್ಮ, ಸತ್ಯ ಹಾಗೂ ನ್ಯಾಯವನ್ನು ರಕ್ಷಿಸುವುದೇ ನಿಮ್ಮ ಮೊದಲನೆಯ ಆದ್ಯತೆ ಆಗಿರುವುದು. ಹಾಗಿದ್ದರೂ ನಿಮ್ಮ ಕೈ ಕೆಳಗೆ ಕೆಲಸ ಮಾಡುವ ಜನರು ನಿಮ್ಮನ್ನು ತಪ್ಪಾಗಿ ಅಥೈರ್‍ಸಿಕೊಂಡು ಕೆಲಸದಿಂದ ದೂರ ಸರಿಯುವರು. ಗುರು ಮಂತ್ರ ಪಠಿಸಿ.

ವೃಶ್ಚಿಕ :-

ನಿಮ್ಮ ಸೇವೆಯ ರೀತಿ-ನೀತಿಗಳಿಂದ ಪ್ರಭಾವದಿಂದ ಜನರು ನಿಮ್ಮನ್ನೆ ಮುಂದಿನ ನಾಯಕನಾಗಬೇಕೆಂದು ಪ್ರಾರ್ಥಿಸುವರು. ಇದು ಶುಭ ಸಮಾಚಾರವೇ ಆದರೂ ನಿಮ್ಮ ವೈಯಕ್ತಿಕ ಕೆಲಸ ಕಾರ್ಯಗಳನ್ನು ಮಾಡಲು ಅಡ್ಡಿವುಂಟಾಗುವುದು.

ಧನಸ್ಸು:

ಉದ್ಯೋಗಧ ಸ್ಥಳದಲ್ಲಿ ನಿಮ್ಮ ಹೆಗಲಿಗೆ ಹೊಸ ರೀತಿಯ ಜವಾಬ್ದಾರಿಗಳು ಏರಲಿವೆ. ಅಂತೆಯೇ ಸಾಕಷ್ಟು ಒತ್ತಡವೂ ಉಂಟಾಗುವ ಸಾಧ್ಯತೆ ಇದೆ. ಹಣಕಾಸಿನ ವಿಷಯದಲ್ಲಿ ನಿಷ್ಠುರತೆಯನ್ನು ತೋರದಿದ್ದಲ್ಲಿ ದೊಡ್ಡ ಸಮಸ್ಯೆಗಳಿಗೆ ಸಿಲುಕಿಕೊಳ್ಳುವಿರಿ.

ಮಕರ :-

ವ್ಯರ್ಥವಾದ ಪ್ರಯತ್ನಗಳಿಂದ ಕಂಗೆಟ್ಟಿರುವ ನೀವು ಬೆಟ್ಟಿಂಗ್‌, ಜೂಜು ಇತ್ಯಾದಿಗಳಲ್ಲಿ ಹಣ ಹೂಡುವುದು ಸರಿಯಲ್ಲ. ಹಣವನ್ನು ಆದಷ್ಟು ಮಟ್ಟಿಗೆ ಕಡಿಮೆ ಖರ್ಚು ಮಾಡುವುದು ಒಳ್ಳೆಯದು.

ಕುಂಭ:-

ನಿಮ್ಮ ಕೈ ಕೆಳಗಿನ ಕೆಲಸಗಾರರನ್ನು ಸಂತ್ರಪ್ತಿಪಡಿಸಿ. ಹಣಖಾಸಿನ ವಿಷಯಗಳಲ್ಲಿ ಎಚ್ಚರ ವಹಿಸುವುದು ಅಗತ್ಯ. ಗುರುಹಿರಿಯರ ಆಶೀರ್ವಾದ ಪಡೆಯಿರಿ. ಕುಲದೇವತಾ ಪ್ರಾರ್ಥನೆ ಮಾಡಿ.

ಮೀನ:-

ನೀವು ಸರ್ಕಾರಿ ಉದ್ಯೋಗದಲ್ಲಿ ಉನ್ನತ ಹುದ್ದೆಯಲ್ಲಿದ್ದರೆ ಮುಂಬಡ್ತಿ ಇಷ್ಟರಲ್ಲೆ ದೊರೆಯುವ ಸಾಧ್ಯತೆ ಇರುತ್ತವೆ. ಇದಕ್ಕೆಲ್ಲಾ ನಿಮ್ಮ ಪ್ರಾಮಾಣಿಕತೆ, ಶ್ರಮ ಹಾಗೂ ಶ್ರದ್ದೆಯೇ ಕಾರಣವಾಗುವುದು. ಅವರಿವರ ಮಾತುಗಳಿಗೆ ಕಿವಿಗೊಡದಿರಿ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ರಾಜಕೀಯ

    ಈ ಬಾರಿ ಯಶವಂತಪುರ ವಿಧಾನಸಭಾ ಕ್ಷೇತ್ರದಲ್ಲಿ ವಿಜಯಲಕ್ಷ್ಮಿ ಯಾರಿಗೆ..?ಈ ವರದಿಯಲ್ಲಿ ಏನಿದೆ ಗೊತ್ತಾ..?

    ಕರ್ನಾಕಟ ವಿಧಾನಸಭಾ ಕ್ಷೇತ್ರಗಳಲ್ಲಿ ಬಹಳ ಮುಖ್ಯ ಪಾತ್ರವಾಯಿಸುವ ಯಶವಂತಪುರ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ಯಾರಿಗೆ ವಿಜಯಲಕ್ಷ್ಮಿ ಒಲಿಯುವುದು ಎನ್ನುವುದೇ ಯಕ್ಷಪ್ರಶ್ನೆಯಾಗಿದೆ

  • ಆಧ್ಯಾತ್ಮ, ದೇವರು-ಧರ್ಮ

    ಸರ್ಪಗಳಿಗೆ ಅವರ ತಾಯಿಯೇ ಕೊಟ್ಟ ಶಾಪ ಏನು ಗೊತ್ತಾ?ಸರ್ಪ ಮತ್ತು ಗರುಡಗಳು ಹುಟ್ಟಿದ್ದು ಹೇಗೆ ಗೊತ್ತಾ? ಈ ಲೇಖನ ಓದಿ ಶೇರ್ ಮಾಡಿ…

    ಪ್ರಜಾಪತಿ ಬ್ರಹ್ಮನಿಗೆ ಕದ್ರು, ವಿನತೆ ಇತ್ಯಾದಿ ಅನೇಕ ಹಣ್ಣು ಮಕ್ಕಳಿದ್ದರು. ಇವರು ವಯಸ್ಸಿಗೆ ಬಂದ ಮೇಲೆ ಪ್ರಜಾವತಿ ಇವರಲ್ಲಿ ಕೆಲವರನ್ನು ಕಶ್ಯಪರೆಂಬ ತಪಸ್ವಿಗಳಿಗೆ ಕೊಟ್ಟು ಮದುವೆ ಮಾಡಿದನು. ಕಾಲಕ್ರಮದಲ್ಲಿ ಕದ್ರುವಿಗೆ ಅನೇಕ ಮಕ್ಕಳಾದುವು. ಇವುಗಳೆ ಸರ್ಪಗಳು. ಇವುಗಳಲ್ಲಿ ಮೊದಲನೆಯವನಾದ ಅದಿಶೇಷನೇ ಭೂಮಿಯನ್ನು ಹೊತ್ತಿರುವವನು.

  • ಸುದ್ದಿ

    ರಜನಿಕಾಂತ್‌ ಬಳಿ ಇರುವ ಆಸ್ಥಿಯ ಮೌಲ್ಯವೆಷ್ಟು ಗೊತ್ತಾ?

    ಟಾಲಿವುಡ್‌ ಸ್ಟಾರ್‌ ರಜಿನಿಕಾಂತ್‌ ಎಲ್ಲರೂ ಮೆಚ್ಚುವ ಬಹುದೊಡ್ಡ ಕಲಾವಿದ. ಅವರು ಚಿತ್ರರಂಗ ಕಾಲಿಟ್ಟ ದಿನದಿಂದ ಇಂದಿನವರೆಗೂ ಅದೇ ಪ್ರಾಮುಖ್ಯತೆಯನ್ನೂ ಮುಂದುವರೆಸಿಕೊಡೇ ಬಂದಿದ್ದಾರೆ. 1975ರಲ್ಲಿ ತೆರೆಕಂಡ ಅಪೂರ್ವ ರಾಗಂಗಳ್ ಚಿತ್ರದಿಂದ ಇದುವರೆಗೂ 150 ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಈ ಹಿಂದೆ ಬೆಂಗಳೂರಿನಲ್ಲಿ ಬಸ್ ಕಂಡಕ್ಟರ್ ಆಗಿದ್ದ ಅವರು ಸೂಪರ್ ಸ್ಟಾರ್ ಆಗಿದ್ದೇ ಒಂದು ಅದ್ಭುತ ಸ್ಟೋರಿ. 45 ವರ್ಷಗಳ ಕಾಲ ಚಿತ್ರರಂಗದಲ್ಲಿ ಮೆರೆದ ರಜಿನಿಕಾಂತ್ ಅವರ ಚಿತ್ರಗಳು ಅನೇಕ ಬಾರಿ ವಿವಾದಗಳಿಗೂ ಕಾರಣವಾಗಿವೆ. ರಜನಿಕಾಂತ್‌ ತಮ್ಮ ನಾಲ್ಕು ದಶಕಗಳ ಚಿತ್ರರಂಗದ…

  • ಸುದ್ದಿ

    ಬ್ರೆಕಿಂಗ್ ಸುದ್ದಿ..ಮುದ್ದಹನುಮೇಗೌಡರು ತಮ್ಮ ನಾಮಪತ್ರ ಹಿಂಪಡೆಯುವುದು ಖಚಿತ.?ಈ ಸುದ್ದಿ ನೋಡಿ

    ತುಮಕೂರು ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ಮುಂದಾಗಿದ್ದ ಕಾಂಗ್ರೆಸ್ ಸಂಸದ ಮುದ್ದಹನುಮೇಗೌಡ, ಪಕ್ಷದ ನಾಯಕರ ಒತ್ತಡಕ್ಕೆ ಮಣಿದಿದ್ದು, ಚುನಾವಣಾ ಕಣದಿಂದ ಹಿಂದೆ ಸರಿಯಲು ಸಮ್ಮತಿಸಿದ್ದಾರೆನ್ನಲಾಗಿದೆ. ಮುದ್ದಹನುಮೇಗೌಡರು ತುಮಕೂರು ಕ್ಷೇತ್ರದ ಹಾಲಿ ಸಂಸದರಾಗಿದ್ದರೂ ಸಹ ಲೋಕಸಭಾ ಚುನಾವಣೆಗೆ ರಾಜ್ಯದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದ ಹಿನ್ನಲೆಯಲ್ಲಿ ಈ ಕ್ಷೇತ್ರವನ್ನು ಜೆಡಿಎಸ್ ಗೆ ಬಿಟ್ಟುಕೊಡಲಾಗಿತ್ತು. ಈ ಹಿನ್ನಲೆಯಲ್ಲಿ ತುಮಕೂರು ಲೋಕಸಭಾ ಕ್ಷೇತ್ರದಿಂದ ಜೆಡಿಎಸ್ ವರಿಷ್ಟ ಹೆಚ್.ಡಿ. ದೇವೇಗೌಡರು ಕಣಕ್ಕಿಳಿದಿದ್ದು, ಮುದ್ದಹನುಮೇಗೌಡರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ಮುಂದಾಗಿದ್ದರಿಂದ ಮೈತ್ರಿ…

  • inspirational, ಸುದ್ದಿ

    ಗಾಂಧಿಜಿ ಪ್ರತಿಮೆಯ ಮುಂದೆ ಧರಣಿಗೆ ಕುಳಿತ ಕಾಂಗ್ರೆಸ್ ಶಾಸಕರು….!

    ಕರ್ನಾಟಕದ ಕಾಂಗ್ರೆಸ್ ನಾಯಕರು ಬಿಜೆಪಿಯ ಪ್ರಜಾಪ್ರಭುತ್ವ ವಿರೋಧಿ ನೀತಿ ಖಂಡಿಸಿ ಧರಣಿ ಆರಂಭಿಸಿದ್ದಾರೆ. ರಾಜೀನಾಮೆ ನೀಡಿರುವ ಕಾಂಗ್ರೆಸ್‌ನ 8 ಶಾಸಕರನ್ನು ಅನರ್ಹಗೊಳಿಸಬೇಕು ಎಂದು ಸ್ಪೀಕರ್‌ಗೆ ದೂರು ನೀಡಲಾಗಿದೆ. ಮಂಗಳವಾರ ವಿಧಾನಸೌಧ, ವಿಕಾಸಸೌಧ ನಡುವಿ ಗಾಂಧಿ ಪ್ರತಿಮೆ ಮುಂದೆ ಕಾಂಗ್ರೆಸ್ ನಾಯಕರು ಪ್ರತಿಭಟನೆ ನಡೆಸುತ್ತಿದ್ದಾರೆ. ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಧರಣಿ ನಡೆಯುತ್ತಿದೆ. ಕರ್ನಾಟಕದ ಮೈತ್ರಿ ಸರ್ಕಾರವನ್ನು ಉರುಳಿಸಲು ‌ಮೋದಿ ಸಂಚು ಮಾಡಿದ್ದಾರೆ. ಮೋದಿ, ಅಮಿತ್ ಶಾ ನೇರವಾಗಿ ಆಪರೇಷನ್ ಕಮಲ ನಡೆಸಿದ್ದಾರೆ….

  • ಸುದ್ದಿ

    ಶಾಲಾ ಮಕ್ಕಳು ನೆಲ ಒರೆಸುತ್ತಿರುವ ಚಿತ್ರ ಸೆರೆ ಇಡಿದಿದ್ದಕ್ಕೆ ಪತ್ರಕರ್ತ ಅರೆಸ್ಟ್…!

    ಉತ್ತರ ಪ್ರದೇಶದ ಅಜಂಘಡ ಜಿಲ್ಲೆಯ ಶಾಲೆಯ ನೆಲವನ್ನು ಒರೆಸುತ್ತಿದ್ದ ಮಕ್ಕಳ ಚಿತ್ರವನ್ನು ಸೆರೆ ಹಿಡಿದ ಪತ್ರಕರ್ತನ ಬಂಧನವಾಗಿ ವಾರ ಕಳೆದ ಬಳಿಕ, ಸ್ಥಳೀಯ ಆಡಳಿತವು ಪ್ರಕರಣ ಸಂಬಂಧ ತನಿಖೆಗೆ ಆದೇಶಿಸಿದೆ. ಜಿಲ್ಲೆಯ ಊದ್ಪುರ ಸರಕಾರಿ ಪ್ರಾಥಮಿಕ ಪಾಠಶಾಲೆಯಲ್ಲಿ ನೆಲವನ್ನು ಒರೆಸುತ್ತಿದ್ದ ಮಕ್ಕಳ ಚಿತ್ರಗಳನ್ನು ಸೆರೆಹಿಡಿದ ಸ್ಥಳೀಯ ಪತ್ರಕರ್ತ ಸಂತೋಷ್‌ ಜೈಸ್ವಾಲ್‌ನನ್ನು ಪೊಲೀಸರು ಬಂಧಿಸಿ, ಆತನ ವಿರುದ್ಧ ಸುಲಿಗೆ ಹಾಗೂ ಸಾರ್ವಜನಿಕ ಸೇವಕರ ಕರ್ತವ್ಯಕ್ಕೆ ಅಡ್ಡಿಯಾದ ಆಪಾದನೆ ಮೇಲೆ ಪ್ರಕರಣ ದಾಖಲು ಮಾಡಲಾಗಿದೆ. ಶಾಲಾ ಪ್ರಾಂಶುಪಾಲರು, ಪತ್ರಕರ್ತನ ವಿರುದ್ದ…