ಆಟೋಮೊಬೈಲ್ಸ್

ಬೈಕ್‌ಗಳ ಮಹಾರಾಜ ರಾಯಲ್ ಎನ್‌ಫೀಲ್ಡ್’ಗೆ ಗೇಲಿ ಮಾಡಿ ಟಾಂಗ್ ಕೊಟ್ಟ, ಬಜಾಜ್ ಡೊಮಿನರ್!

1310

ಬೈಕ್‌ಗಳ ರಾಜ ರಾಯಲ್ ಎನ್‌ಫೀಲ್ಡ್ ಬೈಕ್‌, ಒಂದು ಕಾಲದಲ್ಲಿ ಸಾಮಾನ್ಯ ಜನರಿಗೆ ಇದರ ಹೆಸರು ಕೇಳಿದ್ರೆ ಸಾಕು, ಮೈ ಜುಮ್ಮೆನ್ನುತ್ತಿತ್ತು. ಯಾಕೆಂದ್ರೆ ಈ ಬೈಕ್’ನ್ನು ಒಮ್ಮೆ ಆದ್ರೂ ಓಡಿಸಬೇಕು ಅಂತ ಮನಸ್ಸಿಗೂ ಬಂದ್ರೂ, ಸಾಮಾನ್ಯ ಜನರ ಕೈಗೆ ಇದು ಎಟುಕುತ್ತಿರಲಿಲ್ಲ.

ಆದ್ರೆ ಈಗ ಆಗಿಲ್ಲ. ಎಲ್ಲಿ ನೋಡಿದ್ರು ನಮಗೆ ಬೈಕ್‌ಗಳ ರಾಜ ರಾಯಲ್ ಎನ್‌ಫೀಲ್ಡ್ ಬೈಕ್‌ ನಮ್ಗೆ ಕಣ್ಣಿಗೆ ಕಾಣಲು ಸಿಗುತ್ತದೆ.
ಭಾರತೀಯ ದ್ವಿಚಕ್ರ ವಾಹನ ವಿಭಾಗದಲ್ಲಿ ಅತಿ ಹೆಚ್ಚು ಬೇಡಿಕೆಯ ಬ್ರಾಂಡ್‌ಗಳಲ್ಲಿ ರಾಯಲ್ ಎನ್‌ಫೀಲ್ಡ್ ಒಂದಾಗಿದೆ.

ರಾಯಲ್ ಎನ್‌ಫೀಲ್ಡ್ ಬೈಕ್’ನ್ನು ಗೇಲಿ ಮಾಡಿದ ಬಜಾಜ್ ಆಟೋ:-

ಆದ್ರೆ ಅಂತಹ ಬೈಕ್‌ಗಳ ರಾಜ, ರಾಯಲ್ ಎನ್‌ಫೀಲ್ಡ್ ಬೈಕ್’ನ್ನು ಗೇಲಿ ಮಾಡಿ ಭಾರತದ ಮತ್ತೊಂದು ಮುಂಚೂಣಿಯ ದ್ವಿಚಕ್ರ ವಾಹನ ನಿರ್ಮಾಣ ಸಂಸ್ಥೆ ಬಜಾಜ್ ಆಟೋ ಅತಿ ನೂತನ ಡೊಮಿನರ್ ಜಾಹೀರಾತನ್ನು ಹೊರಗೆಡವಿದೆ.

ನೂತನ ಬಜಾಜ್ ಡೊಮಿನರ್ 400 ಸಿಸಿ ಬೈಕ್ ಹೊರಬಂದಂತೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಪ್ರತಿಕ್ರಿಯೆಗಳು, ವಾದ ವಿವಾದಗಳು ಎದುರಾಗುತ್ತಿದೆ. ಐಕಾನಿಕ್ ಎನ್‌ಫೀಲ್ಡ್ ಬೈಕ್‌ಗಳಿಗೆ ಸೆಡ್ಡು ನೀಡುವಷ್ಟು ಬಜಾಜ್ ಬೆಳೆದಿದೆಯೇ ಎಂಬುದು ಕಟ್ಟಾ ಎನ್‌ಫೀಲ್ಡ್ ಬೈಕ್ ಪ್ರೇಮಿಗಳ ಅಭಿಪ್ರಾಯವಾಗಿದೆ.

‘ಹೈಪರ್ ರೈಡಿಂಗ್’ ಎಂಬ ಥೀಮ್ ಇಟ್ಟುಕೊಂಡು ಘಾಟಿ ಪ್ರದೇಶದ ರಸ್ತೆಯಲ್ಲಿ ಇಕ್ಕಟ್ಟಾದ ತಿರುವುಗಳಲ್ಲೂ ಡೊಮಿನರ್ ಸ್ಥಿರತೆಯನ್ನು ಪ್ರಮುಖವಾಗಿಯೂ ಉಲ್ಲೇಖಿಸಲಾಗಿದೆ.

ಬಜಾಜ್ ಆಟೋದಿಂದ ರಾಯಲ್ ಎನ್‌ಫೀಲ್ಡ್ ಬೈಕ್’ನ ವ್ಯಂಗ್ಯ :-

ಬಹು ದೀರ್ಘ ಕಾಲದ ಇತಿಹಾಸವನ್ನು ಹೊಂದಿರುವ ರಾಯಲ್ ಎನ್‌ಫೀಲ್ಡ್ ಬೈಕ್ ಶಬ್ದವನ್ನು ಇಲ್ಲಿ ವ್ಯಂಗ್ಯ ಮಾಡಲಾಗಿದೆ. ಇಲ್ಲಿ ಎನ್‌ಫೀಲ್ಡ್ ಬೈಕ್‌ಗಳನ್ನು ನಿಧಾನವಾಗಿ ಚಲಿಸುವ ಆನೆಗಳ ಹಿಂಡಿನ ಜೊತೆ ಹೋಲಿಸಲಾಗಿದೆ.

ಹಾಗೆಯೇ ಸಿಂಹವನ್ನು ಹೋಲುವ ಡೊಮಿನರ್‌ಗಳ ಮುಂದೆ ಇವೆಲ್ಲವೂ ಲೆಕ್ಕಕ್ಕಿಲ್ಲ ಎಂಬುದನ್ನು ಬಿಂಬಿಸಲಾಗಿದೆ.

ಡೊಮಿನರ್‌ನಿಂದ ಅಪಹಾಸ್ಯ :-

ರಾಯಲ್ ಎನ್‌ಫೀಲ್ಡ್ ಬೈಕ್ ಓಡಿಸುವ ಸವಾರರು ಗಡ್ಡ ಬಿಟ್ಟುಕೊಂಡು ವಿಶೇಷ ರೈಡಿಂಗ್ ಗೇರ್‌ನೊಂದಿಗೆ ಮಿಂಚುತ್ತಾರೆ. ಇವೆಲ್ಲವೂ ಡೊಮಿನರ್‌ನಿಂದ ಅಪಹಾಸ್ಯಕ್ಕೊಳಕ್ಕಾಗಿದೆ.

ಅಷ್ಟಕ್ಕೂ ಆಧುನಿಕ ದೀರ್ಘ ದೂರದ ಪ್ರಯಾಣವನ್ನು ಪರಿಷ್ಕರಿಸಲು ಡೊಮಿನರ್‌ನಿಂದ ಸಾಧ್ಯವೇ ಎಂಬುದು ಯಕ್ಷ ಪ್ರಶ್ನೆಯಾಗಿದೆ. ಈ ಸಂಬಂಧ ನಿಮ್ಮ ಅನಿಸಿಕೆಗಳನ್ನು ನಮ್ಮ ಜೊತೆ ಹಂಚಿಕೊಳ್ಳಿರಿ. ಸದ್ಯಕ್ಕೆ ಡೊಮಿನರ್ ಬೈಕ್‌ನಲ್ಲಿ ಅಂತದ್ದೇನಿದೆ ಎಂಬುದನ್ನು ತಿಳಿದುಕೊಳ್ಳೋಣವೇ…

ಎನ್‌ಫೀಲ್ಡ್ ಬೈಕ್’ನ್ನು  ಇಷ್ಟೆಲ್ಲಾ ಅಪಹಾಸ್ಯ ಮಾಡುತ್ತಿರುವ ಡೊಮಿನರ್ ಬೈಕ್‌ನಲ್ಲಿ ಅಂತದ್ದೇನಿದೆ ಗೊತ್ತಾ?  (ಫೀಚರ್)

ಡೊಮಿನೇಟಿಂಗ್ ಸಾನಿಧ್ಯ (ಪ್ರಾಬಲ್ಯ):
ಸಿಂಹ ಸಾನಿಧ್ಯವೇ ಪ್ರೇರಣೆ,
43ಎಂಎಂ ಟೆಲಿಸ್ಕಾಪಿಕ್ ಫ್ರಂಟ್ ಫಾರ್ಕ್,

ಹ್ಯಾಂಡ್ಲಿಂಗ್ ಮತ್ತು ಕಂಟ್ರೋಲ್:
ವೈಡ್ ಮತ್ತು ತಳಮಟ್ಟದ ರೇಡಿಯಲ್ ಚಕ್ರಗಳು,
ಗರಿಷ್ಠ ವೇಗದಲ್ಲೂ ಸೂಪರ್ ಗ್ರಿಪ್,
ಸ್ಟ್ಯಾಂಪ್ಡ್ ಮೆಟಲ್ ಸ್ವಿಂಗ್ ಆರ್ಮ್,
ಬೀಮ್ ವಿಧದ ಪೆರಿಮೀಟರ್ ಫ್ರೇಮ್,

ಎಂಜಿನ್: 373 ಸಿಸಿ ಫ್ಲ್ಯೂಯಲ್ ಇಂಜೆಕ್ಟಡ್ ಟ್ರಿಪಲ್ ಸ್ಪಾರ್ಕ್ 4 ವಾಲ್ವ್ ಡಿಟಿಎಸ್-ಐ ಎಂಜಿನ್,
ಪವರ್: 35PS, 35Nm torque,
ವೇಗತೆ: 8.23 ಸೆಕೆಂಡುಗಳಲ್ಲೇ ಗಂಟೆಗೆ 0-100 ಕೀ.ಮೀ. ವೇಗ
ಗೇರ್ ಬಾಕ್ಸ್: 6 ಸ್ಪೀಡ್, ಸ್ಲಿಪರ್ ಕ್ಲಚ್
ಇಂಧನ ಟ್ಯಾಂಕ್: 13 ಲೀಟರ್,
ಭಾರ: 182 ಕೆ.ಜಿ
ಚಂಕ್ರಾಂತರ: 1453 ಎಂಎಂ
ಗ್ರೌಂಡ್ ಕ್ಲಿಯರನ್ಸ್: 157 ಎಂಎಂ

ಉಬೆರ್ ರೆಸ್ಪಾನ್ಸಿವ್ ಬ್ರೇಕಿಂಗ್:
ಟ್ವಿನ್ ಚಾನೆಲ್ ಎಬಿಎಸ್,
ದೊಡ್ಡದಾದ 320ಎಂಎಂ ಫ್ರಂಟ್ ಡಿಸ್ಕ್ ಬ್ರೇಕ್,

ಸಂಪೂರ್ಣ ಎಲ್‌ಇಡಿ ಹೆಡ್‌ಲ್ಯಾಂಪ್,
ಆಟೋ ಹೆಡ್‌ಲ್ಯಾಂಪ್ ಆನ್,
ವಿಭಜಿತ ರಿವೆರ್ಸ್ ಎಲ್‌ಸಿಡಿ ಡಿಸ್‌ಪ್ಲೇ,

ಬಣ್ಣಗಳು: ಮಿಡ್ ನೈಟ್ ಬ್ಲೂ, ಟ್ವಿಲೈಟ್ ಪ್ಲಮ್, ಮೂನ್ ವೈಟ್.

ಮೂಲ:ಮಾಹಿತಿ ಸಂಗ್ರಹ

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • inspirational

    Chicken Road: Una Nueva Perspectiva en los Juegos de Cross-the-Street

    Si has pasado tiempo navegando por los juegos modernos de casino en línea, probablemente hayas notado un cambio desde las tradicionales reels hacia títulos rápidos y impulsados por decisiones. Chicken Road se sitúa firmemente en esa nueva ola. Es un juego estilo crash basado en una simple y angustiante pregunta: ¿hasta dónde estás dispuesto a…

  • ಉಪಯುಕ್ತ ಮಾಹಿತಿ

    ನೆಲ್ಲಿ ಕಾಯಿ ಜ್ಯೂಸು ಕುಡಿಯೋದ್ರಿಂದ ಇಷ್ಟೆಲ್ಲಾ ಪ್ರಯೋಜನಗಳಿವೆ ಅಂತ ಗೊತ್ತಾದ್ರೆ ನೀವು ಕುಡಿಯದೇ ಸುಮ್ನೆ ಇರೋಲ್ಲ..!

    ಬಾಯಿ ಚಪ್ಪರಿಸುತ್ತ ತಿನ್ನುವ ನೆಲ್ಲಿಕಾಯಿ ಮಾರ್ಕೆಟ್ ನಲ್ಲಿ ಎಲ್ಲಾ ಕಾಲದಲ್ಲೂ ದೊರೆಯುತ್ತದೆ.ನೆಲ್ಲಿಕಾಯಿಯಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ. ಕಿತ್ತಳೆ ಹಣ್ಣಿಗಿಂತ 20 ಪಟ್ಟು ಹೆಚ್ಚು ವಿಟಮಿನ್ ಸಿ ಅಂಶ ನೆಲ್ಲಿಕಾಯಿಯಲ್ಲಿದೆ.ಇದನ್ನು ಪ್ರತಿನಿತ್ಯ ತಿಂದರೆ ದೇಹಕ್ಕೆ ಅಗತ್ಯವಾದ ಪೋಷಕಾಂಶ ದೊರೆಯುತ್ತದೆ, ಕೂದಲು ಉದುರುವ ಸಮಸ್ಯೆ ಕಂಡು ಬರುವುದಿಲ್ಲ.ಎಲ್ಲ ಕಾಯಿಲೆಗಳನ್ನು ನಿಯಂತ್ರಣದಲ್ಲಿಡುವ ಶಕ್ತಿ ಇದಕ್ಕಿದೆ. ಫೈಬರ್, ಪ್ರೋಟೀನ್ ಮತ್ತು ಜೀವಸತ್ವಗಳಿರುವ ನೆಲ್ಲಿಕಾಯಿ, ರಕ್ತವನ್ನು ಶುದ್ಧಗೊಳಿಸಲು ಸಹಕಾರಿ. *ಆಯುರ್ವೇದದ ಪ್ರಕಾರ ಪ್ರತಿದಿನ ನೆಲ್ಲಿಕಾಯಿ ಜ್ಯೂಸ್ ಕುಡಿಯುವುದರಿಂದ ಆರೋಗ್ಯ ವೃದ್ಧಿಸುತ್ತದೆ.ಯಾವುದೇ ಆರ್ಯುವೇದ ಅಂಗಡಿಗಳಲ್ಲಿ ಕೇಳಿದರೆ ಈ…

  • ಸುದ್ದಿ

    40 ಗ್ರಾಂ ಚಿನ್ನವನ್ನೂ ನುಂಗಿದ ಗೂಳಿ ನಂತರ ಏನಾಯ್ತು ಗೊತ್ತೇ,.??

    ಇಲ್ಲಿನ ಕಲನವಾಲಿ ಪ್ರದೇಶದಲ್ಲಿ ವಾಸವಾಗಿರುವ ಮಹಿಳೆಯೊಬ್ಬರಿಗೆ ಸೇರಿದ ಸುಮಾರು 40 ಗ್ರಾಂ ಚಿನ್ನಾಭರಣವನ್ನು ಗೂಳಿಯೊಂದು ಆಕಸ್ಮಿಕವಾಗಿ ನುಂಗಿರುವ ಘಟನೆ ನಡೆದಿದ್ದು, ಅದನ್ನು ಹೊರತೆಗೆಯಲು ಮಹಿಳೆ ಇನ್ನಿಲ್ಲದಷ್ಟು ಸರ್ಕಸ್ ​ಮಾಡುತ್ತಿದ್ದಾರೆ. ಘಟನೆ ಬಗ್ಗೆ ಮಾತನಾಡಿರುವ ಮಹಿಳೆಯ ಪತಿ ಜನಕರಾಜ್​, ಅಕ್ಟೋಬರ್​ 29ರಂದು ಈ ಘಟನೆ ನಡೆಯಿತು. ತರಕಾರಿ ಕತ್ತರಿಸಿ ತುಂಬಲಾಗಿದ್ದ ಬೌಲ್​ನಲ್ಲಿ ನನ್ನ ಪತಿ ಹಾಗೂ ಸೊಸೆ ತಮ್ಮ ಚಿನ್ನಾಭರಣವನ್ನು ಅದರಲ್ಲಿಟ್ಟಿದ್ದರು. ಆದರೆ, ಆಕಸ್ಮಿಕವಾಗಿ ಚಿನ್ನದಮೇಲೆ ತರಕಾರಿ ತ್ಯಾಜ್ಯವನ್ನು ಇಡಲಾಗಿತ್ತು.ಕೊನೆಯಲ್ಲಿ ಇದರ ಅರಿವಿಲ್ಲದೆ ಅದನ್ನು ಕಸದ ಗುಂಡಿಗೆ ಎಸೆಯಲಾಗಿತ್ತು….

  • ಸರ್ಕಾರದ ಯೋಜನೆಗಳು

    ಸರ್ಕಾರದಿಂದ ಪ್ರತಿ ಕುಟುಂಬದ ಸದಸ್ಯರಿಗೆ 6 ಕೆಜಿ ಅಕ್ಕಿ

    ಬೆಂಗಳೂರು: ರಾಜ್ಯ ಸರ್ಕಾರದಿಂದ ಪ್ರತಿ ಕುಟುಂಬದ ಸದಸ್ಯರಿಗೆ ಐದು ಕೆಜಿ ಅಕ್ಕಿಯನ್ನು ವಿತರಿಸಲಾಗುತ್ತಿತ್ತು. ಇದೀಗ ಈ ತಿಂಗಳಿನಿಂದಲೇ ಜಾರಿಗೆ ಬರುವಂತೆ ಐದು ಕೆ.ಜಿ ಅಕ್ಕಿಯ ಜೊತೆಗೆ ಹೆಚ್ಚುವರಿಯಾಗಿ 1 ಕೆಜಿ ಅಕ್ಕಿಯನ್ನು ವಿತರಿಸಲಿದೆ. 5+1= 6 KG ಈ ಸಂಬಂಧ ಆಹಾರ, ನಾಗರೀಕ ಸರಬರಾಜು, ಗ್ರಾಹಕರ ವ್ಯವಹಾರಗಳ ಮತ್ತು ಕಾನೂನು ಮಾಪನಶಾಸ್ತ್ರ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ನಡವಳಿಯನ್ನು ಹೊರಡಿಸಿದ್ದಾರೆ. ಆ ಆದೇಶದಲ್ಲಿ ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆಯನ್ನು ಡಿಸೆಂಬರ್ 2022ಕ್ಕೆ ಅಂತ್ಯಗೊಂಡ…