ಸುದ್ದಿ

ಅಮ್ಮನಿಗೆ ಪತ್ರವನ್ನು ಬರೆದು ಮನೆ ಬಿಟ್ಟು ಹೋದಂತಹ ಬಾಲಕಿಯ ಬಣ್ಣವನ್ನು ಬಯಲು ಮಾಡಿದ ಪೊಲೀಸರು…!

306

ಅಪ್ಪನ ವರ್ತನೆಯಿಂದ ಬೇಸರಗೊಂಡು ಮನೆ ಬಿಟ್ಟು ಹೋಗ್ತಿದ್ದೇನೆ ಅಂತಾ ಅಮ್ಮನಿಗೆ ಪತ್ರ ಬರೆದು ಹೋದ ಮಗಳ ನಿಜವಾದ ಬಣ್ಣವನ್ನು ಪೊಲೀಸರು ಬಯಲು ಮಾಡಿದ್ದಾರೆ.

ಮುಂಬೈನಲ್ಲಿ 14 ವರ್ಷದ ಬಾಲಕಿಯೊಬ್ಬಳು ತನ್ನ ಅಮ್ಮನಿಗೆ ಈ ರೀತಿ ಪತ್ರ ಬರೆದಿದ್ದಾಳೆ. “ಅಮ್ಮಾ ನಾನು ಅಪ್ಪನ ವರ್ತನೆಯಿಂದ ಬೇಸರಗೊಂಡು ಮನೆ ಬಿಟ್ಟು ಹೋಗುತ್ತಿದ್ದೇನೆ. ನನ್ನ ಬಗ್ಗೆ ಯೋಚನೆ ಮಾಡಬೇಡಿ. ಹಾಗಂತ ನಾನು ಯಾವುದೋ ಹುಡುಗನೊಂದಿಗೆ ಓಡಿ ಹೋಗುತ್ತಿಲ್ಲ. ನೀವು ಆತ್ಮಹತ್ಯೆ ಮಾಡಿಕೊಳ್ಳಲ್ಲ ಅಂತಾ ದೇವರ ಮೇಲೆ ಆಣೆ ಮಾಡು” ಎಂದು ಪತ್ರದಲ್ಲಿ ಬರೆದಿದ್ದಾಳೆ.

ಪತ್ರ ಓದಿದ ಬಳಿಕ ಬಾಲಕಿ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ. ದೂರು ಕೊಟ್ಟು 8 ತಾಸಿನೊಳಗೆ ಬಾಲಕಿಯನ್ನು ಹುಡುಕಿ ಪೊಲೀಸರು ಮನೆಗೆ ಕರೆ ತಂದಿದ್ದಾರೆ.

ಆದ್ರೆ ಬಾಲಕಿ ಹೇಳಿಕೆಯಲ್ಲಿ ಸಂಪೂರ್ಣ ಸತ್ಯ ಇಲ್ಲ ಎಂದು ತಿಳಿದ ಪೊಲೀಸರು, ಆಕೆಯ ಸ್ನೇಹಿತರನ್ನು ವಿಚಾರಿಸಿದಾಗ, ಆ ಬಾಲಕಿ ನೇಪಾಳದ ಟಿಕ್‍ ಟಾಕ್‍ ಸ್ಟಾರ್ ರಿಯಾಝ್‍ ಆಫ್ರಿನ್‍ ಎಂಬುವನನ್ನು ಭೇಟಿಯಾಗಲು ನೇಪಾಳಕ್ಕೆ ಹೋಗಲು ಪ್ಲಾನ್ ಮಾಡಿದ್ದಳು ಎಂದು ತಿಳಿದು ಬಂದಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ