ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಇತ್ತೀಚೆಗೆ #CHS ಸಮೀಕ್ಷೆ ಹೊರಬಂದಿದ್ದು ಈ ಸಮೀಕ್ಷೆಯಲ್ಲಿ ಮೈಸೂರಿನ #11_ಕ್ಷೇತ್ರಗಳ ಪೈಕಿ ಒಂದು ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ ಗೆಲುವು ಸಾಧಿಸಲಿದ್ದಾರೆ ಎಂದು ವರದಿಯಾಗಿದೆ.
ಆ ಪ್ರಕಾರ ನೋಡುವುದಾದರೆ ಇಡೀ ಮೈಸೂರು ಜಿಲ್ಲೆಯಲ್ಲಿ ಪಕ್ಷೇತರವಾಗಿ ಹಾಗೂ ವೈಯುಕ್ತಿಕ ಹೆಚ್ಚು ವರ್ಚಸ್ಸು ಹೊಂದಿರುವ ಗೆಲ್ಲಬಲ್ಲ ವ್ಯಕ್ತಿ ಚಾಮರಾಜ ಅಭ್ಯರ್ಥಿ ಕೆ ಹರೀಶ್ ಗೌಡರು ಒಬ್ಬರೇ.. ಚಾಮರಾಜ ಕ್ಷೇತ್ರದಲ್ಲಿ ತನ್ನದೇ ಆದ ವೈಯಕ್ತಿಕ ಪ್ರಾಬಲ್ಯ ಹೊಂದಿರುವ ಕೆ ಹರೀಶ್ ಗೌಡರು ಸಮಾಜಸೇವೆ ಮೂಲಕ ಮನೆ ಮನೆ ಮಾತಾಗಿರುವವರು, ಕಳೆದ ಹನ್ನೆರಡು ವರ್ಷಗಳಿಂದಲೂ ಚಾಮರಾಜ ಕ್ಷೇತ್ರದ ಜನತೆಯ ಜೊತೆ ನಿರಂತರ ಸಂಪರ್ಕ ಹೊಂದಿ ಜನರ ಕಷ್ಟ ನೋವುಗಳಿಗೆ ನೆರವಾಗುತ್ತಾ ಜನಾನುರಾಗಿ ಮನ್ನಣೆ ಪಡೆದವರು… ಮೈಸೂರಿನ ಇನ್ಯಾವ ಕ್ಷೇತ್ರಗಳಲ್ಲೂ ಪಕ್ಷೇತರವಾಗಿ ಸ್ಪರ್ಧಿಸಿ ಗೆಲ್ಲುವ ಸಾಮರ್ಥ್ಯ ಹೊಂದಿರುವ ಅಭ್ಯರ್ಥಿ ಇಲ್ಲ ಯಾಕೆಂದರೆ ಇನ್ನೆಲ್ಲಾ ಕ್ಷೇತ್ರಗಳಲ್ಲೂ ಜೆಡಿಎಸ್ ಕಾಂಗ್ರೆಸ್ ಬಿಜೆಪಿ ತಮ್ಮ ಪ್ರಾಬಲ್ಯ ಹೊಂದಿವೆ… ಹೆಮ್ಮೆಯಿಂದ ಶೇರ್ ಮಾಡಿ ಚಾಮರಾಜ ಕ್ಷೇತ್ರದಲ್ಲಿ ಕೆ ಹರೀಶ್ ಗೌಡರ ಗೆಲ್ಲುವ ಖಚಿತ…
ಮೂವತ್ತು ವರ್ಷಗಳ ಜೆಡಿಎಸ್ ಸೋಲು ಮುಂದುವರಿಯುತ್ತಾ? ಮೈಸೂರು ನಗರ ಪ್ರದೇಶದ ಹೃದಯ ಭಾಗ ಎಂದು ಕರೆಸಿಕೊಳ್ಳುವ ಚಾಮರಾಜ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷ ಕಳೆದ ಮೂವತ್ತೆರಡು ವರ್ಷಗಳಿಂದ ಗೆಲ್ಲಲು ಸಾಧ್ಯವಾಗಿಲ್ಲ, 1986 ರಲ್ಲಿ ನಡೆದ ಉಪಚುನಾವಣೆಯಲ್ಲಿ ಪಿ ಎಂ ಚಿಕ್ಕಬೋರಯ್ಯರವರು ಜನತಾ ಪಕ್ಷದಿಂದ ಸ್ಪರ್ಧಿಸಿ ಗೆದ್ದಿದ್ದಾರೆ ಜನತಾ ಪಕ್ಷ ಜನತಾದಳ ಆದ ನಂತರ ಒಮ್ಮೆಯೂ ಚಾಮರಾಜ ಕ್ಷೇತ್ರ ಜೆಡಿಎಸ್ ವಶವಾಗಿಲ್ಲ, ಮೂವತ್ತು ವರ್ಷಗಳ ಸೋಲಿಗೆ ಕಾರಣ ಹಲವಾರಿವೆ ಆದರೆ ಸೋಲನ್ನು ಮೆಟ್ಟು ನಿಂತು ಗೆಲ್ಲುವ ಕಡೆ ಜೆಡಿಎಸ್ ಪಕ್ಷವನ್ನು ಕೊಂಡೊಯ್ಯುವ ನಿಟ್ಟಿನಲ್ಲಿ ಸರ್ವ ರೀತಿಯಲ್ಲಿ ಶ್ರಮ ಹಾಕಿದ್ದು ಪಕ್ಷ ಕಟ್ಟಿದ್ದು ಜನರು ಜೆಡಿಎಸ್ ಪಕ್ಷದ ಹೆಸರು ಹೇಳುವಂತೆ ಮಾಡಿದ್ದು ಕೆ ಹರೀಶ್ ಗೌಡ…
ಜೆಡಿಎಸ್ ಪಕ್ಷ ನಿಂತಿರುವುದು ದೇವೇಗೌಡ್ರು ಹಾಗೂ ಕುಮಾರಣ್ಣರಿಂದ ಹಾಗೂ ಎರಡನೇ ಹಂತದ ನಾಯಕರು ಹಾಗೂ ಸಾವಿರಾರು ನಿಷ್ಟಾವಂತ ಕಾರ್ಯಕರ್ತರಿಂದ, ಪಕ್ಷ ಕಟ್ಟಲು ವರಿಷ್ಠರ ಶ್ರಮದ ಜೊತೆ ಎರಡನೇ ಹಂತದ ನಾಯಕರ ಶ್ರಮವೂ ಸಹಾ ಇರತ್ತೆ ಎಂಬುದನ್ನು ಮರೆಯಬಾರದು, ಚಾಮರಾಜ ಕ್ಷೇತ್ರದಲ್ಲಿ ಜೆಡಿಎಸ್ ಪ್ರಬಲವಾಗಿದೆ ಎಂಬುದಾದರೆ ಮೂವತ್ತೆರಡು ವರ್ಷದಿಂದ ಯಾಕೆ ಗೆಲ್ಲಲು ಸಾಧ್ಯವಾಗಿಲ್ಲ ಎಂಬ ಪ್ರಶ್ನೆ ಮೂಡತ್ತೆ?? ಒಂದು ವರ್ಷದ ಹಿಂದಿನಿಂದಲೂ ಚಾಮರಾಜ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷ ಗೆಲ್ಲತ್ತೆ ಎಂಬ ಪ್ರಬಲವಾದ ಮಾತಿತ್ತು ಕಾರಣ ಕೆ ಹರೀಶ್ ಗೌಡ ಅಭ್ಯರ್ಥಿಯಾಗುತ್ತಾರೆ ಹರೀಶ್ ಗೌಡ ಪಕ್ಷ ಸಂಘಟನೆ ಮಾಡಿದ್ದಾರೆ ಜನರ ಸೇವೆ ಮಾಡಿದ್ದಾರೆ, ಜನರ ಕಷ್ಟಗಳಿಗೆ ಸ್ಪಂದಿಸಿದ್ದಾರೆ ಹಾಗೂ ಕೆ ಹರೀಶ್ ಗೌಡ ಸ್ಥಳೀಯ ಅಭ್ಯರ್ಥಿ ಜನರ ನಾಡಿಮಿಡಿತ ಅರಿತಿದ್ದಾರೆ ಸಾವಿರಾರು ಜನ ಅಭಿಮಾನಿಗಳು ಬೆಂಬಲಿಗರು ಹೊಂದಿದ್ದಾರೆ.
ಈ ಕಾರಣಕ್ಕಾಗಿ ಜೆಡಿಎಸ್ ಪಕ್ಷ ಗೆಲ್ಲುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂಬ ಅಚಲವಾದ ನಂಬಿಕೆ ಇತ್ತು ಆದರೆ ಈಗ ನಂಬಿಕೆ ಹುಸಿಯಾಗಿದೆ ಜೆಡಿಎಸ್ ಪಕ್ಷ ಗೆಲ್ಲುವ ಅಭ್ಯರ್ಥಿಗೆ ಟಿಕೆಟ್ ನೀಡುವಲ್ಲಿ ಎಡವಿದೆ, ಅಂಗೈಯಲ್ಲಿ ಗೆಲ್ಲುವ ಅಭ್ಯರ್ಥಿ ಇಟ್ಟುಕೊಂಡು ಕ್ಷೇತ್ರಕ್ಕೆ ಸಂಬಂಧ ಇಲ್ಲದವರಿಗೆ ರಾಜಕೀಯ ಗಂಧ ತಿಳಿಯದವರನ್ನು ಅಭ್ಯರ್ಥಿ ಮಾಡಲು ಹೊರಟಿದೆ ಆ ಮೂಲಕ ಜೆಡಿಎಸ್ ಪಕ್ಷ ಹಾಗೂ ನಿಷ್ಠಾವಂತ ಕಾರ್ಯಕರ್ತರ ನಡುವಿನ ಅವಿನಾಭಾವ ಸಂಬಂಧಕ್ಕೆ ಎಳ್ಳುನೀರು ಬಿಟ್ಟಿದೆ, ನಿಷ್ಠಾವಂತ ನಾಯಕ ಕೆ ಹರೀಶ್ ಗೌಡರಿಗೆ ಟಿಕೆಟ್ ಕೈತಪ್ಪಿದ್ದಕ್ಕೆ ನಿಷ್ಠಾವಂತರು ಪಕ್ಷದಿಂದ ದೂರ ಉಳಿದಿದ್ದಾರೆ ಹಾಗೂ ಕ್ಷೇತ್ರಾದ್ಯಂತ ಕೆ ಹರೀಶ್ ಗೌಡರ ಬೆಂಬಲಿಗರು ಹಿತೈಷಿಗಳು ಅಭಿಮಾನಿಗಳು ಕೆ ಹರೀಶ್ ಗೌಡರಿಗೆ ಅನ್ಯಾಯವಾಗಿದೆ ಅವರಿಗೆ ನ್ಯಾಯ ಒದಗಿಸಲು ಪ್ರಾಮಾಣಿಕವಾಗಿ ಕೆಲಸ ಮಾಡಿ ಈ ಭಾರಿ ಶಾಸಕರನ್ನಾಗಿ ಮಾಡಿಯೇ ತಿರುತ್ತೇವೆ ಎಂಬ ದೃಡಸಂಕಲ್ಪ ಮಾಡಿದ್ದಾರೆ.
ಕಳೆದ ಒಂದು ತಿಂಗಳಿನಿಂದಲೂ ಕ್ಷೇತ್ರದ ಎಲ್ಲಾ ವಾರ್ಡ್ ನಲ್ಲೂ ಹರೀಶ್ ಗೌಡರ ಹಿತೈಷಿಗಳ ಸಭೆ ನಡೆದಿದ್ದು ಎಲ್ಲಾ ಭಾಗದಲ್ಲೂ ಕೆ ಹರೀಶ್ ಗೌಡರಿಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ.. ಹನ್ನೆರಡು ವರ್ಷಗಳಿಂದ ಕ್ಷೇತ್ರದ ಜನರ ಜೊತೆ ನಿಕಟ ಸಂಬಂಧ ಹೊಂದಿರುವ ಹರೀಶ್ ಗೌಡರಿಗೆ ಪಕ್ಷೇತರವಾಗಿ ಚುನಾವಣೆ ಎದುರಿಸುವುದು ಕಷ್ಟವೇನಲ್ಲ ಎಂಬುದು ಸಾರ್ವಜನಿಕರ ಮಾತು.. ಯಾವ ಪಕ್ಷದಲ್ಲಿ ಯಾರು ಅಭ್ಯರ್ಥಿಯಾದರೂ ನಿಷ್ಠಾವಂತ ನಾಯಕ ಜನಾನುರಾಗಿ ಕೆ ಹರೀಶ್ ಗೌಡರನ್ನು ಗೆಲ್ಲಿಸಿಕೊಳ್ಳಬೇಕು ಅವರು ಜನರ ಕೆಲಸ ಮಾಡುತ್ತಾರೆ ಕೆ ಹರೀಶ್ ಗೌಡರಿಂದ ಚಾಮರಾಜ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿ ಸಾಧ್ಯ ಎಂದು ಜನ ತಿರ್ಮಾನಿಸಿದ್ದಾರೆ.
ಚುನಾವಣೆ ಇನ್ನೂ ನೂರು ದಿನ ಇದೆ ಹನ್ನೆರಡು ವರ್ಷಗಳ ಕೆ ಹರೀಶ್ ಗೌಡರ ದುಡಿಮೆಗೆ ಬೆಲೆ ಕೊಡಬೇಕು, ಕೆ ಹರೀಶ್ ಗೌಡರ ವ್ಯಕ್ತಿತ್ವಕ್ಕೆ ಬೆಲ ಕೊಡಬೇಕು ಎಂದು ಮತದಾರ ಮನಸ್ಸು ಮಾಡಿದ್ದಾನೆ ಈ ಚುನಾವಣೆಯಲ್ಲಿ ಚಾಮರಾಜ ಕ್ಷೇತ್ರದ ಜನತೆ ಜಾತಿ ಧರ್ಮ ಪಕ್ಷ ಮರೆತು ನಿಷ್ಠಾವಂತ ನಾಯಕನ ಉಳಿಸುತ್ತಾರೆ ಎಂಬ ಭರವಸೆ ನಮಗೂ ಇದೆ.. ಈಗಲೂ ಜೆಡಿಎಸ್ ಪಕ್ಷದಿಂದ ಕೆ ಹರೀಶ್ ಗೌಡರಿಗೆ ಟಿಕೆಟ್ ನೀಡಿದ್ದಲ್ಲಿ ಜೆಡಿಎಸ್ ಪಕ್ಷ ಮೂವತ್ತೆರಡು ವರ್ಷಗಳ ನಂತರ ಈ ಕ್ಷೇತ್ರದಲ್ಲಿ ಗದ್ದುಗೇರುವುದು ಖಚಿತ, ಈಗಲೂ ಕಾಲ ಮಿಂಚಿಲ್ಲ ವರಿಷ್ಠರು ಮತ್ತೊಮ್ಮೆ ಯೋಚಿಸಿ ಸೂಕ್ತ ನಿರ್ಧಾರಕ್ಕೆ ಬರಲಿ.. ಕಾದು ನೋಡೋಣಾ. ಧನ್ಯವಾದಗಳು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಹಿಂದೂ ಧರ್ಮದಲ್ಲಿ ಶಿವನನ್ನು “ದೇವಾದಿದೇವ” ಮಹಾದೇವ ಎಂದು ಆರಾಧಿಸುತ್ತಾರೆ. ಬ್ರಹ್ಮ ವಿಷ್ಣು ಮಹೇಶ್ವರ ಎಂಬ ತ್ರಿಮೂರ್ತಿಗಳಲ್ಲಿ ಮಹೇಶ್ವರನೇ ಹೆಚ್ಚು ಶಕ್ತಿಶಾಲಿ ಎಂದು ನಂಬುವ ಕಾರಣ ಇತರ ದೇವರುಗಳೂ ಸಂಕಟಬಂದಾಗ ಶಿವನ ಬಳಿ ಸಹಾಯ ಬೇಡಿ ಧಾವಿಸುವ ಹಲವಾರು ದೃಷ್ಟಾಂತಗಳನ್ನು ಪುರಾಣಗಳಲ್ಲಿ ಕಾಣಬಹುದು. ಶಿವನನ್ನು ಭಕ್ತರು ಇನ್ನೂ ಹಲವಾರು ಹೆಸರುಗಳಿಂದ ಕರೆಯುತ್ತಾರೆ.
ಆಗ ಹಸ್ತಿನಾಪುರದಲ್ಲಿ ಪರೀಕ್ಷಿತನ ಮಗ ಜನಮೇಜಯನು ರಾಜ್ಯ ಆಳುತಿದ್ದ. ಅವನ ಅಸ್ತಾನಕ್ಕೆ ಉತ್ತಂಕನೆಂಬ ಮುನಿಯು ಆಗಮಿಸಿದ. ಈ ಮುನಿಗೆ ತಾನು ತಕ್ಷಕ ಎಂಬ ಹಾವಿನಿಂದ ಒದಗಿದ ಅನ್ಯಾಯಕ್ಕಾಗಿ ಸೇಡು ತೀರಿಸಿಕೊಳ್ಳಲು ಜನಮೇಜಯನ ಆಸ್ಥಾನಕ್ಕೆ ಬಂದಿದ್ದ. ಹಾಗಾಗಿ ತನಗೆ ನಮಸ್ಕರಿಸಿದ ರಾಜನನ್ನೂ ಅವನ ಪರಿವಾರವನ್ನು ಅಷಿರ್ವದಿಸಿದ. ರಾಜನು ನೀಡಿದ ಆಸನದಲ್ಲಿ ಕುಳಿತು ಅತಿಥ್ಯ ಸ್ವೀಕರಿಸಿದ. ಎಲ್ಲರ ಕುಶಲವನ್ನೂ ವಿಚಾರಿಸಿದ. ಅನಂತರ ರಾಜನನ್ನೂ ಕುರಿತು
ಸಮಸ್ಯೆಯುಳ್ಳ ರೋಗಿಗಳು ಸಾಮಾನ್ಯವಾಗಿ ಇನ್ಹೇಲರ್ ಬಳಕೆ ಮಾಡುತ್ತಾರೆ. ಅಥವಾ ವೈದ್ಯರ ಸಲಹೆ ಮೇರೆಗೆ ಹಲವು ಮಾತ್ರೆಗಳನ್ನು ತೆಗೆದುಕೊಳ್ಳುತ್ತಾರೆ. ಆದರೆ, ಇನ್ಹೇಲರ್ ಬಳಸದೆ ಮನೆಯಲ್ಲೇ ಉಬ್ಬಸದ ತೊಂದರೆಯನ್ನು ನಿವಾರಿಸಲು ಹಲವು ಮಾರ್ಗಗಳಿವೆ. ಈ ಪೈಕಿ, ಪ್ರಮುಖ ಅಥಾ ಸುಲಭವಾದ 6 ವಿಧಾನಗಳ ಮೂಲಕ ಉಬ್ಬಸ ಸಮಸ್ಯೆಗೆ ನಿವಾರಣೆ ಮಾಡಿಕೊಳ್ಳಬಹುದು. ಅದು ಹೇಗೆ ಗೊತ್ತಾ? ಈ ಕೆಳಗಿನ ವಿವರ ನೋಡಿದರೆ ನಿಮಗೆ ಗೊತ್ತಾಗುತ್ತದೆ. ನೀಲಗಿರಿ ಎಣ್ಣೆಯಲ್ಲಿದೆ ಪರಿಹಾರಬಿಸಿ ನೀರಿಗೆ ಸ್ವಲ್ಪ ನೀಲಗಿರಿ ಎಣ್ಣೆ ಹಾಕಿ ಅದರ ಆವಿಯನ್ನು ಉಸಿರಾಟದ ಮೂಲಕ…
ಸರ್ಕಾರಿ ಒಡೆತನದ ಬಿಎಸ್ಎನ್ಎಲ್ ದೇಶದಲ್ಲಿ ಇದೇ ಮೊದಲ ಬಾರಿಗೆ ಸ್ಯಾಟಿಲೈಟ್ ಫೋನ್ ಸೇವೆಯನ್ನು ಆರಂಭಿಸಲಿದೆ. ಬುಧವಾರ ಮೇ.25 ರಿಂದ ಈ ಸೇವೆಗೆ ಚಾಲನೆ ದೊರೆಯಲಿದ್ದು, ನೇರವಾಗಿ ಉಪಗ್ರಹಗಳ ಸಹಾಯದಿಂದ ಈ ಸೇವೆಯನ್ನು ಬಿಎಸ್ಎನ್ಎಲ್ ಓದಗಿಸಲಿದೆ ಎನ್ನಲಾಗಿದೆ.
ಪ್ರತಿಯೊಂದು ಕನಸಿಗೂ ಒಂದೊಂದು ಸಂಕೇತವಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪ್ರತಿ ಕನಸು ನಮ್ಮ ಭವಿಷ್ಯದ ಮೇಲೆ ಪ್ರಭಾವ ಬೀರುತ್ತದೆ. ಮುಂದೆ ಏನಾಗಬಹುದು ಎಂಬುದನ್ನು ಕನಸಿನಲ್ಲಿ ಕಂಡ ವಿಷ್ಯಗಳಿಂದ ಹೇಳಬಹುದಾಗಿದೆ. ಕನಸು ಅನೇಕ ಮುನ್ಸೂಚನೆಗಳನ್ನು ನೀಡುತ್ತದೆ. ಪ್ರತಿಯೊಬ್ಬರೂ ರಾತ್ರಿ ಮಲಗಿದಾಗ ಕನಸು ಕಾಣ್ತಾರೆ. ಪ್ರತಿಯೊಬ್ಬರಿಗೂ ಪ್ರತಿ ದಿನ ಬೇರೆ ಬೇರೆ ಕನಸುಗಳು ಕಾಣ್ತವೆ. ಕೆಲವರಿಗೆ ಕನಸಿನಲ್ಲಿ ಪದೇ ಪದೇ ದೇವರು ಕಾಣಿಸಿಕೊಳ್ತಾನೆ. ಕನಸಿನಲ್ಲಿ ದೇವರು ಕಂಡ್ರೆ ಖುಷಿಪಡಬೇಕು. ಇದು ಶುಭ ಸಂಕೇತ. ಯಾರಿಗೆ ದೇವರ ಕೃಪೆ ಇರುತ್ತದೆಯೋ ಅವ್ರಿಗೆ…
ಹಸ್ತವನ್ನು ಅಧ್ಯಯನ ಮಾಡುವ ಮೂಲಕ ವ್ಯಕ್ತಿಯ ಗುಣ ಲಕ್ಷಣಗಳನ್ನು ಗುರುತಿಸುವ, ಭವಿಷ್ಯ ನುಡಿಯುವ ಕಲೆ, ಇದನ್ನು ಹಸ್ತದ ಓದು ಅಥವಾ ಕೈರೋಲಜಿ ಎಂದು ಕೂಡಾ ಕರೆಯಲಾಗುತ್ತದೆ. ಅನೇಕ ಸಾಂಸ್ಕೃತಿಕ ಭಿನ್ನತೆಗಳೊಂದಿಗೆ ಈ ಪದ್ಧತಿ ಜಗತ್ತಿನಾದ್ಯಂತ ಕಾಣಸಿಗುತ್ತದೆ, ಭಾರತದಲ್ಲಿ ಕೂಡ ಇದೆ ತರಹದ ಹಲವಾರು ಪದ್ದತಿಗಳು ವಿವಿಧ ಪ್ರದೇಶಗಳಲ್ಲಿ ಲಭ್ಯವಿದೆ. ಇಷ್ಟಕ್ಕೂ ಈ ಹಸ್ತದ ರೇಖೆಗಳನ್ನು ಗುರುತಿಸಿ ಹೇಳುವ ಪದ್ದತಿಯನ್ನು ಹಲವರು ನಂಬುತ್ತಾರೆ, ಇನ್ನು ಕೆಲವರು ಬೊಗಳೆ ಎಂದು ನಿರ್ಲಕ್ಷ್ಯ ಮಾಡುತ್ತಾರೆ, ಆದರೆ ಇದು ಅವರವರ ಅನುಭವ ಹಾಗು…