ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಕರ್ನಾಟಕದ ಸುದ್ದಿ ಮಾಧ್ಯಮಗಳಲ್ಲಿ ‘ಉದಯ ನ್ಯೂಸ್’ ವಾಹಿನಿಯು ಒಂದು ಕಾಲದಲ್ಲಿ ತುಂಬಾ ಹೆಸರು ಮಾಡಿತ್ತು.ಆದರೆ ಈಗ ಬಂದಿರುವ ಸುದ್ದಿವಾಹಿನಿಗಳಿಗೆ ಪೈಪೋಟಿ ಕೊಡಲಾಗದೆ ಈ ವಾಹಿನಿಯು ಈಗ ಮುಚ್ಚುವ ಸ್ಥಿತಿಗೆ ತಲುಪಿದೆ.
ಉದಯ ನ್ಯೂಸ್ ಸಿಬ್ಬಂದಿಗಳಿಗೆ ಸಂಚಕಾರ..!
ಕಳೆದ ಐದು ವರ್ಷಗಳಲ್ಲಿ 3,834.95 ಕೋಟಿ ನಿವ್ವಳ ಲಾಭ ಗಳಿಸಿದ ಸನ್ ನೆಟ್ವರ್ಕ್ ತನ್ನ ಅಂಗ ಸಂಸ್ಥೆ ‘ಉದಯ ನ್ಯೂಸ್’ನ್ನು ಮುಚ್ಚಲು ತೀರ್ಮಾನಿಸಿದೆ. ನಷ್ಟದ ಕಾರಣವನ್ನು ಮುಂದಿಟ್ಟ ಸಂಸ್ಥೆಯ ಮಾಲೀಕ ಕಲಾನಿಧಿ ಮಾರನ್ 73 ಸಿಬ್ಬಂದಿಗಳ ಉದ್ಯೋಗ ಖಾತ್ರಿಯನ್ನು ಕಿತ್ತುಕೊಳ್ಳಲು ಮೂರು ತಿಂಗಳ ಕಾಲಾವಕಾಶ ನಿಗದಿ ಮಾಡಿದ್ದಾರೆ. ಕಾರ್ಪೊರೇಟ್ ಭ್ರಮೆಯಲ್ಲಿ ಮಿಂದೇಳುತ್ತಿರುವ ದೇಶದಲ್ಲಿ, ಬೃಹತ್ ಕಾರ್ಪೊರೇಟ್ ಮಾಧ್ಯಮ ಸಂಸ್ಥೆಯೊಂದು ಹೇಗೆ ತನ್ನ ಸಿಬ್ಬಂದಿಗಳನ್ನು ನಡೆಸಿಕೊಳ್ಳುತ್ತದೆ ಎಂಬುದಕ್ಕೆ ಇದೊಂದು ಜ್ವಲಂತ ಸಾಕ್ಷಿಯಾಗಿದೆ.
ಕರ್ನಾಟಕದ ಮೊದಲ ಖಾಸಗಿ ಚಾನೆಲ್…
ಕರ್ನಾಟಕದ ಖಾಸಗಿ ಟಿವಿ ವಲಯಕ್ಕೆ ಮೊದಲು ಕಾಲಿಟ್ಟಿದ್ದು ಉದಯ ಟಿವಿ. ಸುಮಾರು 19 ವರ್ಷಗಳ ಹಿಂದೆ ರಾಜ್ಯದಲ್ಲಿ ಡಿಡಿ 1 ಹಾಗೂ ಚಂದನ ವಾಹಿನಿಗಳು ನೀಡುತ್ತಿದ್ದ ಮನೋರಂಜನೆಯನ್ನು ಸ್ಥಿತ್ಯಂತರಗೊಳಿಸಿದ್ದು ತಮಿಳುನಾಡು ಮೂಲದ ‘ಸನ್ ನೆಟ್ವರ್ಕ್’ ಮಾಧ್ಯಮ ಸಂಸ್ಥೆ. ಉದಯ ಟಿವಿ ಹೆಸರಿನಲ್ಲಿ ಅದು ಮೊದಲು ತನ್ನ ಕಾರ್ಯಾಚರಣೆ ಶುರು ಮಾಡುತ್ತಿದ್ದಂತೆ ಜನ ಕೂಡ ಹೊಸ ಮಾದರಿಯ ಮನೋರಂಜನೆಗೆ ಒಗ್ಗಿಕೊಂಡರು. ಅಲ್ಲಿಂದ ಸುಮಾರು ಒಂದೂವರೆ ದಶಕಗಳ ಕಾಲ ಕರ್ನಾಟಕದ ಮನೋರಂಜನಾ ಲೋಕದ ಅನಭಿಷಕ್ತ ದೊರೆಯಾಗಿ ಉದಯ ಟಿವಿ ಆಳ್ವಿಕೆ ನಡೆಸಿತು.
ಹೀಗಿರುವಾಗಲೇ, 2000ನೇ ಇಸವಿಯಲ್ಲಿ ನಟ ರಾಜ್ ಕುಮಾರ್ ಅಪಹರಣ ಪ್ರಕರಣ ನಡೆಯಿತು. ತನ್ನ ಬಳಿ ಇದ್ದ ಸುದ್ದಿ ವಾಹಿನಿಯ ಪರವಾನಗಿಯನ್ನು ಅನುಷ್ಠಾನಕ್ಕೆ ಇಳಿಸಲು ‘ಸನ್ ನೆಟ್ವರ್ಕ್’ ಮುಂದಾಯಿತು. ಹಾಗೆ ತರಾತುರಿಯಲ್ಲಿ ಆರಂಭಗೊಂಡಿದ್ದು ‘ಉದಯ ನ್ಯೂಸ್’. “ಅವತ್ತು ಹೆಚ್ಚಿನ ಸಿದ್ದತೆಗಳೂ ಇರಲಿಲ್ಲ.
ಉದಯ ಮನೋರಂಜನಾ ವಾಹಿನಿಯಲ್ಲಿದ್ದ ಸಿಬ್ಬಂದಿಗಳನ್ನೇ ಹೊಸ ನ್ಯೂಸ್ ಚಾನಲ್ಗೆ ವರ್ಗಾವಣೆ ಮಾಡಲಾಯಿತು. ತಾಂತ್ರಿಕ ಉಪಕರಣಗಳನ್ನು ಎರವಲು ಪಡೆಯಲಾಯಿತು. ಮೊನ್ನೆ ಮೊನ್ನೆವರೆಗೂ ಬ್ರೇಕಿಂಗ್ ನ್ಯೂಸ್ ಅಪ್ಡೇಟ್ ಮಾಡಲು ಒದ್ದಾಡುತ್ತಿದ್ದೆವು. ಈಗಿರುವುದು 3 ವಿಡಿಯೋ ಎಡಿಟರ್ಗಳು, ಡೆಸ್ಕ್ನಲ್ಲಿ ಐವರು ಸಿಬ್ಬಂದಿ. ಕಳಪೆ ಮಟ್ಟದ ಸೌಕರ್ಯ ನೀಡಿ ರೇಟಿಂಗ್ ತನ್ನಿ ಎಂದರೆ ಹೇಗೆ ಸಾಧ್ಯ?” ಎನ್ನುತ್ತಾರೆ ಉದಯ ನ್ಯೂಸ್ ಹಿರಿಯ ಸಿಬ್ಬಂದಿಯೊಬ್ಬರು.
ಇವತ್ತಿಗೂ ಕಡಿಮೆ ಖರ್ಚಿನಲ್ಲಿ ನಡೆಯುತ್ತಿರುವ ಸುದ್ದಿವಾಹಿನಿ…
ಇವತ್ತಿಗೆ ಡಜನ್ ಸಂಖ್ಯೆ ಮುಟ್ಟಿರುವ ಕನ್ನಡದ ಸುದ್ದಿ ವಾಹಿನಿಗಳ ಪೈಕಿ ಅತ್ಯಂತ ಕಡಿಮೆ ಖರ್ಚಿನಲ್ಲಿ ಕಾರ್ಯಚರಣೆ ನಡೆಸುತ್ತಿರುವುದು ‘ಉದಯ ನ್ಯೂಸ್’. ಇಲ್ಲಿನ ಆಂತರಿಕ ಮೂಲಗಳ ನೀಡಿರುವ ಮಾಹಿತಿ ಪ್ರಕಾರ, “ಪ್ರತಿ ತಿಂಗಳು ಸುದ್ದಿ ವಾಹಿನಿಗೆ ಖರ್ಚಾಗುತ್ತಿರುವುದು 25 ಲಕ್ಷ ರೂಪಾಯಿಗಳು. ಇದರಲ್ಲಿ ಸಂಸ್ಥೆಯಲ್ಲಿರುವ 73 ಸಿಬ್ಬಂದಿಗಳಿಗೆ ಸಂಬಳ ರೂಪದಲ್ಲಿ ವೆಚ್ಚ ಮಾಡುತ್ತಿದ್ದದ್ದು 13 ಲಕ್ಷ. ಜತೆಗೆ ಇದಕ್ಕೆ ಪ್ರತ್ಯೇಕವಾದ ಮಾರ್ಕೆಟಿಂಗ್ ವ್ಯವಸ್ಥೆಯನ್ನೂ ಕಲ್ಪಿಸಿಲ್ಲ.”
ಚಾನಲ್ ಮುಚ್ಚುವ ಬಗ್ಗೆ ಸಂಸ್ಥೆ ಲೇಬರ್ ಕಮಿಷನರ್ ಗೆ ಬರೆದ ಪತ್ರ:-
ಕಳೆದ ನಾಲ್ಕು ವರ್ಷಗಳಿಂದ ‘ಉದಯ ನ್ಯೂಸ್’ ಮುಚ್ಚಲಾಗುತ್ತಂತೆ ಅನ್ನುವ ವರ್ತಮಾನ ಇಲ್ಲಿನ ಸಿಬ್ಬಂದಿಗಳಿಗೆ ಸಾಮಾನ್ಯ ಸಂಗತಿಯಾಗಿ ಬದಲಾಗಿತ್ತು. ಮೊದಲು ಬಾಯ್ಮಾತಿನಲ್ಲಿ, ಗಾಳಿ ಸುದ್ದಿ ರೂಪದಲ್ಲಿದ್ದ ಈ ಸುದ್ದಿ ಇತ್ತೀಚೆಗೆ ‘ಸನ್ ನೆಟ್ವರ್ಕ್’ ಕಡೆಯಿಂದ ಕರ್ನಾಟಕ ರಾಜ್ಯ ಸಮಾಜ ಕಲ್ಯಾಣ ಮತ್ತು ಕಾರ್ಮಿಕ ಸಚಿವಾಲಯಕ್ಕೆ ಸಲ್ಲಿಸಿದ ‘ಫಾರ್ಮ್ ಕ್ಯೂ’ ರೂಪದಲ್ಲಿ ವಾಸ್ತವದ ಸ್ವರೂಪ ಪಡೆದುಕೊಂಡಿದೆ.
ಕಾರ್ಮಿಕ ವಿವಾದಗಳ ಕಾಯ್ದೆ ಪ್ರಕಾರ 50 ಜನ ಮೀರಿರುವ ಸಂಸ್ಥೆಯನ್ನು ಮುಚ್ಚುವ ಮುನ್ನ ಸಂಬಂಧಪಟ್ಟ ಇಲಾಖೆಗೆ ಮಾಹಿತಿ ನೀಡಬೇಕಿದೆ. ಇದನ್ನೀಗ ‘ಸನ್ ನೆಟ್ವರ್ಕ್’ ಪಾಲಿಸಿದೆ. ಜತೆಗೆ, ‘ಸಾಕಷ್ಟು ಬಂಡವಾಳ ಹೂಡಿಕೆ ಮಾಡಿದರೂ, ನಷ್ಟದಲ್ಲಿರುವ ಸಂಸ್ಥೆ’ಯನ್ನು ಮುಚ್ಚುವುದಾಗಿ ಕಾರಣವನ್ನೂ ನೀಡಿದೆ.
“ಮಾರನ್ ದಂಪತಿ ಸಂಸ್ಥೆಯಿಂದ ಪಡೆದ ಸಂಬಳ, ಭತ್ಯೆಗಳಿಗೆ ಹೋಲಿಸಿದರೆ ಉದಯ ನ್ಯೂಸ್ ಕಾರ್ಯಾಚರಣೆಗೆ ಖರ್ಚಾಗುತ್ತಿರುವುದು ಅತ್ಯಂತ ಕಡಿಮೆ ಹಣ.
ಮಾರನ್ ಮಗಳ ಪಾಕೆಟ್ ಮನಿಯಲ್ಲಿ ಈ ವಾಹಿನಿಯನ್ನು ಮುನ್ನಡೆಸಬಹುದು,” ಎನ್ನುತ್ತಾರೆ ವಾಹಿನಿಯ ಜತೆ ಹಲವು ವರ್ಷಗಳ ಒಡನಾಟ ಹೊಂದಿರುವ ಪತ್ರಕರ್ತರೊಬ್ಬರು.
ಮುಂದೆ ಏನಾಗಬಹುದು…
2010ರಲ್ಲಿ ಕರ್ನಾಟಕದಲ್ಲಿಯೂ ಉದಯ ಟಿವಿ ಸಿಬ್ಬಂದಿ ಆಡಳಿತ ಮಂಡಳಿ ವಿರುದ್ಧ ಸಿಡಿದೆದ್ದಿದ್ದರು. “ಆ ದಿನಗಳಲ್ಲಿ ಸಾಕಷ್ಟು ಸಂಕಷ್ಟಗಳನ್ನು ಎದುರಿಸಿದ್ದೆವು. ನಮ್ಮ ನಾಯಕತ್ವವಹಿಸಿಕೊಂಡ ಕೆಲವರು ಕೊನೆಗೆ ಆಡಳಿತ ಮಂಡಳಿ ಜತೆ ಒಳ ಒಪ್ಪಂದ ಮಾಡಿಕೊಂಡು ಉದ್ಯೋಗಿಗಳನ್ನು ನಡು ನೀರಿನಲ್ಲಿ ಕೈಬಿಟ್ಟರು. ಹೀಗಾಗಿ ಈ ಬಾರಿ ಏನಾಗುತ್ತೆ ಎಂದು ಹೇಳಲು ಸಾಧ್ಯವಿಲ್ಲ.
ಈಗ ನೋಟಿಸ್ ನೀಡಿರುವುದನ್ನು ನೋಡಿದರೆ, ಆಡಳಿತ ಮಂಡಳಿ ಉದ್ಯೋಗಿಗಳ ಮುಂದಿನ ನಡೆ ಏನು ಎಂಬುದನ್ನು ಗಮನಿಸುವ ತಂತ್ರವೂ ಆಗಿರಬಹುದು. ಇಲ್ಲಿ 73 ಸಿಬ್ಬಂದಿಗಳಿದ್ದರೂ ಪೂರ್ಣ ಪ್ರಮಾಣದ ಸಿಬ್ಬಂದಿಗಳ ಸಂಖ್ಯೆ 20 ದಾಟುವುದಿಲ್ಲ,” ಎನ್ನುತ್ತಾರೆ ಉಯದ ನ್ಯೂಸ್ ನ ಮತ್ತೊಬ್ಬ ಹಿರಿಯ ಉದ್ಯೋಗಿ ಒಬ್ಬರು.
ಒಂದು ಬೃಹತ್ ಕಾರ್ಪೊರೇಟ್ ಸಂಸ್ಥೆ, ವರ್ಷದಿಂದ ವರ್ಷಕ್ಕೆ ನಿವ್ವಳ ಲಾಭವನ್ನು ಘೋಷಿಸಿಕೊಂಡು ಬರುತ್ತಿರುವ ಸಾಮ್ರಾಜ್ಯ, ಕೋಟಿ ಲೆಕ್ಕದಲ್ಲಿ ಸಂಬಳ, ಭತ್ಯೆಗಳನ್ನು ಪಡೆಯುವ ಅದರ ಮಾಲೀಕರು ಹೀಗೆ ಕೆಳಹಂತದ ವಿಚಾರದಲ್ಲಿ ಹೀನಾಯವಾಗಿ ನಡೆದುಕೊಳ್ಳುತ್ತಾರೆ ಎಂಬುದನ್ನು ಈ ಬೆಳವಣಿಗೆ ಸ್ಪಷ್ಟವಾಗಿ ಬಿಡಿಸಿಡುತ್ತಿದೆ.
ಸುದ್ದಿವಲಯದ ಸಹೋದ್ಯೋಗಿಗಳ ಸಂಕಷ್ಟಕ್ಕೆ ಸ್ಪಂದಿಸುವವರು ಯಾರು..?
ಊರ ತುಂಬಾ ಅನ್ಯಾಯಗಳು ನಡೆದಾಗ ಧ್ವನಿ ಎತ್ತುತ್ತೀವಿ ಎನ್ನುವ ಮಾಧ್ಯಮಗಳು, ತಮ್ಮದೇ ವಲಯದ ಸಹೋದ್ಯೋಗಿಗಳು ಸಂಕಷ್ಟಕ್ಕೆ ಸಿಕ್ಕಾಗ ಮೌನಕ್ಕೆ ಶರಣಾಗುತ್ತವೆ. ಇದಕ್ಕಿಂತ ಕ್ರೂರವಾದುದ್ದು ಏನೆಂದರೆ, ಒಂದು ವೇಳೆ ಅನ್ಯಾಯವನ್ನು ಪ್ರಶ್ನಿಸಿದರೆ, ಅಂತಹ ಪತ್ರಕರ್ತರನ್ನು ಹಣಿಯುವ ಮಟ್ಟಕ್ಕೂ ಇಳಿದು ಬಿಡುತ್ತಾರೆ. ಇಂತಹ ಅಸಹ್ಯಕರ ಇತಿಹಾಸಗಳನ್ನು ಹೊಂದಿರುವ ಕನ್ನಡ ಸುದ್ದಿ ವಾಹಿನಿಗಳ ಲೋಕದಲ್ಲಿ ಈಗ ಅಭದ್ರತೆಯ ಭಾವಗಳನ್ನು ‘ಉದಯ ನ್ಯೂಸ್’ ಸಿಬ್ಬಂದಿಗಳು ಎದುರಿಸುತ್ತಿದ್ದಾರೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಹೊಸ ವರ್ಷ ಶುರುವಾಗಿದೆ. ಹೊಸ ವರ್ಷ ಒಳ್ಳೆಯದನ್ನು ನೀಡಲಿ ಎಂದು ಎಲ್ಲರೂ ಬಯಸ್ತಾರೆ. ಹೊಸ ವರ್ಷ ಕೆಲವರ ಅದೃಷ್ಟ ಬದಲಿಸಿದ್ರೆ ಮತ್ತೆ ಕೆಲವರ ದುರಾದೃಷ್ಟಕ್ಕೆ ಕಾರಣವಾಗಬಹುದು. ಜ್ಯೋತಿಷ್ಯ ಶಾಸ್ತ್ರದಲ್ಲಿಯೂ ಹೊಸ ವರ್ಷ ಯಾವ ರಾಶಿಗೆ ಯಾವ ಫಲ ನೀಡಲಿದೆ ಎಂಬುದನ್ನು ಹೇಳಲಾಗಿದೆ. ಮಕರ ಸಂಕ್ರಾಂತಿ ನಂತ್ರ ವೃಶ್ಚಿಕ ರಾಶಿಯವರ ಅದೃಷ್ಟ ಬದಲಾಗಲಿದ್ದು ಏನೆಲ್ಲಾ ಬದಲಾವಣೆಗಳು ಆಗಲಿದೆ ನೋಡಿ… ಹೊಸ ವರ್ಷದಲ್ಲಿ ಈ ರಾಶಿಯವರ ಅದೃಷ್ಟ ಬದಲಾಗ್ತಿದೆ. ವ್ಯಾಪಾರದಲ್ಲಿ ವೃದ್ಧಿಯಾಗಲಿದೆ. ಅರ್ಧಕ್ಕೆ ನಿಂತ ಕೆಲಸ ಯಶಸ್ವಿಯಾಗಿ ಪೂರ್ಣಗೊಳ್ಳಲಿದೆ. ಈ…
ಭಾರತ ಸ್ವತಂತ್ರ ಪಡೆದ ನಂತರ ಮೊದಲ ಉಗ್ರ ಒಬ್ಬ `ಹಿಂದೂ’ ಆಗಿದ್ದ ಎಂದು ನಟ ಕಮ್ ರಾಜಕಾರಣಿ ಕಮಲ್ ಹಾಸನ್ ಹೇಳುವ ಮೂಲಕ ಹೊಸ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಎಂಎನ್ಎಂ ಪಕ್ಷದ ಸಂಸ್ಥಾಪಕ ಕಮಲ್ ಹಾಸನ್ ಮುಸ್ಲಿಂ ಪ್ರಾಬಲ್ಯ ಹೊಂದಿರುವ ಪ್ರದೇಶ ಎಂಬ ಕಾರಣಕ್ಕೆ ನಾನು ಈ ಮಾತು ಹೇಳುತ್ತಿಲ್ಲ. ಗಾಂಧಿ ಪ್ರತಿಮೆಯ ಮುಂದೆ ನಿಂತು ಈ ಮಾತು ಹೇಳುತ್ತಿದ್ದೇನೆ. ಸ್ವತಂತ್ರ ಭಾರತದ ಮೊದಲ ಉಗ್ರ ಒಬ್ಬ ಹಿಂದೂ ಆಗಿದ್ದನು. ಆತನ ಹೆಸರು ನಾಥೂರಾಮ್ ಗೋಡ್ಸೆ ಎಂದು…
ನಮ್ಮ ಮೆಟ್ರೋ ಪ್ರಯಾಣಿಕರಿಗೆ ಸಿಹಿ ಸುದ್ದಿ. ಮೆಟ್ರೋದಲ್ಲಿ ಕ್ಯೂಆರ್ ಕೋಡ್ ಟಿಕೆಟ್ ವ್ಯವಸ್ಥೆ ಜಾರಿಗೊಳಿಸಲಾಗುತ್ತಿದ್ದು, ಇದರಿಂದ ಸರದಿಯಲ್ಲಿ ನಿಲ್ಲುವ ಬಾದೆ ತಪ್ಪಲಿದ್ದು ಆನ್ ಲೈನ್ ಮೂಲಕ ಟಿಕೆಟ್ ಖರೀದಿಸಬಹುದು. ಪ್ರಯಾಣಿಕರು ಬಿಎಂಆರ್ ಸಿಎಲ್ ಮೊಬೈಲ್ ಆಪ್ ಡೌನ್ಲೋಡ್ ಮಾಡಿಕೊಂಡು ಅಗತ್ಯ ಮೊತ್ತದ ರೀಚಾರ್ಜ್ ಮಾಡಿಸಿಕೊಳ್ಳಬಹುದು. ಮೊಬೈಲ್ ಆಪ್ ನಲ್ಲಿರುವ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿದಲ್ಲಿ ಪ್ಲಾಟ್ ಫಾರಂ ಪ್ರವೇಶಿಸುವ ದ್ವಾರ ಓಪನ್ ಆಗಲಿದೆ. ಇಳಿಯುವ ನಿಲ್ದಾಣದಲ್ಲಿ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿದರೆ ಪ್ರಯಾಣಿಕರಿಗೆ ಹಣ ಕಡಿತವಾಗಲಿದೆ. ಇನ್ನು…
ಕೋಲಾರ: ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡುವ ಸಲುವಾಗಿ ಸರ್ಕಾರದ ಮಟ್ಟದಲ್ಲಿ ಹಾಗೂ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ವತಿಯಿಂದ 01ನೇ ತರಗತಿಯಿಂದ 05 ತರಗತಿಯವರೆಗೆ ಶಾಲಾ ಕಿಟ್‌ಗಳನ್ನು ಕೋಲಾರ ಜಿಲ್ಲೆÀಯ ನೋಂದಾಯಿತ ಕಟ್ಟಡ ಕಾರ್ಮಿಕ ಮಕ್ಕಳಿಗೆ ನೇರವಾಗಿ ಆಯಾ ತಾಲ್ಲೂಕು ಕಾರ್ಮಿಕ ನಿರೀಕ್ಷಕರ ಕಛೇರಿಯಲ್ಲಿ ವಿತರಿಸಲಾಯಿತು. ಈ ಸಂದರ್ಭದಲ್ಲಿ ಕೋಲಾರ ಜಿಲ್ಲಾ ಸೆಂಟ್ರ‍್ರಿAಗ್ ಮತ್ತು ಇತರೆ ಕಟ್ಟಡ ಕಾರ್ಮಿಕರ ಸಂಘ ಅಧ್ಯಕ್ಷರಾದ ನವೀನ್ ಕುಮಾರ್…
ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಆಧ್ಯಾತ್ಮಿಕಚಿಂತಕರು 9663218892ನಿಮ್ಮ ಜೀವನದ ಸಮಸ್ಯೆಗಳಾದ ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕಲಹ ಹಣಕಾಸು ವ್ಯವಹಾರಿಕ ಸಮಸ್ಯೆಗಳಿಗೆ ಅಷ್ಟಮಂಗಳ ಪ್ರಶ್ನೆ, ತಾಂಬೂಲಪ್ರಶ್ನೆ ,ಜಾತಕ ವಿಶ್ಲೇಷಣೆ,ಪಂಚಪಕ್ಷಿ ಪ್ರಶ್ನೆಗಳ ಮುಖಾಂತರ ಸಂಪೂರ್ಣವಾಗಿ ಅವಲೋಕನೇ ಮಾಡಿ ಪರಿಹಾರ ಸೂಚಿಸುವರು ಹಾಗೂ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 11 ದಿನದಲ್ಲಿ ಶಾಶ್ವತ ಪರಿಹಾರ 9663218892 ಮೇಷ(5 ಜನವರಿ, 2019) ನಿಮ್ಮಲ್ಲಿ ಸಾಮರ್ಥ್ಯದ ಕೊರತೆಯಿರದೇ ಇಚ್ಛಾಶಕ್ತಿಯ ಕೊರತೆಯಿದೆಯೆಂದು ನೀವು ಅರ್ಥಮಾಡಿಕೊಳ್ಳಬೇಕು….
ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕಚಿಂತಕರು 9663218892ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗೂನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನುಅಳಿಸಬಹುದು ಮತ್ತು ಪ್ರಶ್ನೆಗಳಿಗೆಉತ್ತರಿಸಬಹುದುಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 11 ದಿನದಲ್ಲಿ ಶಾಶ್ವತ ಪರಿಹಾರ 966 321 8892 ಮೇಷ(23 ಫೆಬ್ರವರಿ, 2019) ದಿನದಲ್ಲಿ ನಂತರ ಹಣಕಾಸುಪರಿಸ್ಥಿತಿಗಳು ಸುಧಾರಿಸುತ್ತವೆ. ಸಂಬಂಧಗಳೊಂದಿಗಿನ ಸಂಬಂಧಗಳು ಹಾಗೂ ಬಂಧಗಳ ನವೀಕರಣದ ಒಂದು ದಿನ….