ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ನಮ್ಮ ಆರೋಗ್ಯದ ಮೇಲೆ, ನಾವು ಸೇವಿಸುವ ಆಹಾರದ ಜೊತೆಗೆ ವಾತಾವರಣ ಹಾಗೂ ಋತುವಿನ ಪ್ರಭಾವವೂ ಉಂಟಾಗುತ್ತದೆ. ಆರೋಗ್ಯದ ದೃಷ್ಟಿಯಿಂದ ಚಳಿಗಾಲ ತುಂಬಾ ಒಳ್ಳೆಯ ಋತು. ಹೀಗಾಗಿ ಈ ಕಾಲವನ್ನು `ಆರೋಗ್ಯಕರ ಋತು’ ಎಂದು ಹೇಳಲಾಗುತ್ತದೆ. ಆಯುರ್ವೇದ ಶಾಸ್ತ್ರದ ಅನುಸಾರವಾಗಿ ಸಂತುಲಿತ ಆಹಾರ ಸೇವನೆ, ನಿಯಮಿತ ವ್ಯಾಯಾಮ, ಬಲವರ್ಧಕ ಆಹಾರ ಸೇವನೆಯಿಂದ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಚಳಿಗಾಲದಲ್ಲಿ ಆರೋಗ್ಯವಂತರಾಗಿ ಇರಲು ಆಯುರ್ವೇದವು ಹಲವು ಸೂತ್ರಗಳನ್ನು ನೀಡಿದೆ. ಅವುಗಳನ್ನು ಪಾಲಿಸುವುದರಿಂದ ಈ ಕಾಲದಲ್ಲಿ ನಿರೋಗಿಗಳಾಗಿ ಇರಬಹುದು.
ಆಯುರ್ವೇದ ಹೇಳುವಂತೆ ಚಳಿಗಾಲದಲ್ಲಿ ನಾವು ಆರೋಗ್ಯವಂತರಾಗಿರಲು ಹೆಚ್ಚಿನ ಭಾಗ ಪ್ರಕೃತಿಯೇ ನಮಗೆ ಸಹಾಯಕವಾಗಿದೆ. ಈ ಕಾಲದಲ್ಲಿ ಸೂರ್ಯನು ದಕ್ಷಿಣಾಯನದಲ್ಲಿ ಇರುವುದರಿಂದ ಹಗಲುಗಳು ಕಿರಿದಾಗಿದ್ದು, ರಾತ್ರಿಗಳು ದೀರ್ಘವಾಗಿರುತ್ತವೆ. ಇದರಿಂದ ದೇಹದ ವಿಶ್ರಾಂತಿಗೆ ಸಾಕಷ್ಟು ಸಮಯ ದೊರೆಯುತ್ತದೆ. ಈ ಋತುವಿನಲ್ಲಿ ಜಠರಾಗ್ನಿಯೂ ಪ್ರಖರವಾಗಿ ಇರುವುದರಿಂದ ಸೇವಿಸಿದ ಆಹಾರ ಚೆನ್ನಾಗಿ ಪಚನವಾಗುತ್ತದೆ.
ನಮ್ಮ ದೇಶದಲ್ಲಿ ಚಳಿಗಾಲವು ಶರದ್ ಋತುವಿನಿಂದ ಆರಂಭವಾಗುತ್ತದೆ. ಆದ್ದರಿಂದ ಶರೀರವನ್ನು ಬೆಚ್ಚಗಿಡಲು ಉಣ್ಣೆ ಬಟ್ಟೆಗಳನ್ನು ಬಳಸುವುದರೊಂದಿಗೆ ದೇಹದಲ್ಲಿ ಶಾಖವನ್ನು ಉತ್ಪತ್ತಿ ಮಾಡುವ ಆಹಾರ ಪದಾರ್ಥಗಳನ್ನು ಸೇವಿಸಬೇಕಾಗುತ್ತದೆ. ಈ ಋತುವಿನಲ್ಲಿ ಹಸಿವು ಜಾಸ್ತಿಯಾಗುವುದರಿಂದ ಕಾಲಕಾಲಕ್ಕೆ ಶರೀರಕ್ಕೆ ಆಹಾರ ಪೂರೈಸಬೇಕಾಗುತ್ತದೆ. ಉದ್ದೇಶಪೂರ್ವಕವಾಗಿ ಹಸಿವನ್ನು ತಡೆಯಲು ಪ್ರಯತ್ನಿಸುವುದು ದೇಹಕ್ಕೆ ಹಾನಿ ಉಂಟು ಮಾಡಬಹುದು. ಹಾಗೆ ಮಾಡುವುದರಿಂದ ಜಠರಾಗ್ನಿಯು ರಕ್ತ, ಮಾಂಸ, ಧಾತು ಹಾಗೂ ರಸಗಳನ್ನು ದಹಿಸಿ ಶರೀರ ಕೃಷವಾಗಬಹುದು ಮತ್ತು ವಾಯುಪ್ರಕೋಪ ಹೆಚ್ಚಬಹುದು.
ಚಳಿಗಾಲದಲ್ಲಿ ವಾಯು ಪ್ರಕೋಪ ಮತ್ತು ಕಫ ಸಂಚಯ ಆಗುವುದರಿಂದ ಅವುಗಳನ್ನು ಹೆಚ್ಚಿಸುವ ಪದಾರ್ಥಗಳ ಸೇವನೆ ವರ್ಜಿಸಬೇಕು. ಸಿಹಿ, ಆಮ್ಲ ಮತ್ತು ಲವಣಯುಕ್ತ ಆಹಾರಗಳನ್ನು ಸೇವಿಸಬೇಕು. ಈ ಕಾಲದಲ್ಲಿ ಬಿಸಿಯಾದ ಪದಾರ್ಥಗಳನ್ನು ಸೇವಿಸುವುದು ಹೆಚ್ಚು ಹಿತ ಎನಿಸುತ್ತದೆ. ಆದ್ದರಿಂದ ಚಹಾ ಹಾಗೂ ಕಾಫಿಯನ್ನು ನಾವು ಹೆಚ್ಚಾಗಿ ಸೇವಿಸುತ್ತೇವೆ. ಆದರೆ ಅದು ಆರೋಗ್ಯಕ್ಕೆ ಒಳ್ಳೆಯದಲ್ಲ. ಚಹಾ, ಕಾಫಿಗಳ ಅತಿಯಾದ ಸೇವನೆ ವಾಯು ಪ್ರಕೋಪವನ್ನು ಹೆಚ್ಚಿಸುತ್ತದೆ. ಅದಕ್ಕೆ ಬದಲಾಗಿ ಬಿಸಿ ಸೂಪ್‌ಗಳನ್ನು ಕುಡಿಯಬಹುದು.
ಚಳಿಗಾಲದಲ್ಲಿ ಕ್ಯಾರೆಟ್, ಮೂಲಂಗಿ, ಗೆಣಸು ಮುಂತಾದ ಗೆಡ್ಡೆಗಳು, ಮೆಂತೆ ಪಲ್ಲೆ, ಬಸಳೆ ಸೊಪ್ಪು, ರಾಜಗಿರಿ ಸೊಪ್ಪು, ಪಾಲಕ್, ಸಬ್ಬಸಿಗೆ ಮುಂತಾದ ಸೊಪ್ಪುಗಳು, ತರಕಾರಿಗಳನ್ನು ಸೇವಿಸುವುದು ಒಳ್ಳೆಯದು. ಈ ಋತುವಿನಲ್ಲಿ ಚರ್ಮದಲ್ಲಿ ಜಿಡ್ಡಿನ ಅಂಶ ಕಡಿಮೆ ಆಗುವುದರಿಂದ ಜಿಡ್ಡನ್ನು ಪೂರೈಸುವ ಆಹಾರ ಪದಾರ್ಥ ಸೇವಿಸಬೇಕು. ಹಾಲು, ತುಪ್ಪ, ಬೆಣ್ಣೆ, ಕೆನೆ, ಗೋಡಂಬಿ, ಕಲ್ಲುಸಕ್ಕರೆ, ಬಾದಾಮಿ, ಗಜ್ಜರಿ ಹಲ್ವ, ಬಾಸುಂದಿ, ಒಣ ಕೊಬ್ಬರಿ, ಬೆಲ್ಲ ಮುಂತಾದ ಪದಾರ್ಥಗಳನ್ನು ಸೇವಿಸಬೇಕು.
ಶರೀರದ ಉಷ್ಣತೆ ಕಾಪಾಡಿಕೊಳ್ಳಲು ಹೆಚ್ಚು ಕ್ಯಾಲೊರಿಗಳ ಅವಶ್ಯಕತೆ ಇರುವುದರಿಂದ ಸಿಹಿ ಪದಾರ್ಥಗಳನ್ನು ಹೆಚ್ಚಾಗಿ ಸೇವಿಸಬಹುದು. ಈ ಋತುವಿನಲ್ಲಿ ಬರುವ ಹಣ್ಣುಗಳಾದ ಸೀತಾಫಲ, ಪಪ್ಪಾಯಿ, ಕಿತ್ತಳೆ, ಪೇರು ಮುಂತಾದ ಹಣ್ಣುಗಳನ್ನು ಸೇವಿಸಬೇಕು. ತರಕಾರಿಗಳಲ್ಲಿ ಹೂಕೋಸು ವರ್ಜ್ಯ. ಏಕೆಂದರೆ ಅದು ಕೀಲುನೋವನ್ನು ಉಂಟುಮಾಡುತ್ತದೆ.
ರಾತ್ರಿ ತುಂಬಾ ತಡವಾಗಿ ಊಟಮಾಡುವುದು, ಮುಂಜಾನೆ ತಡಮಾಡಿ ಏಳುವುದು, ಉಪವಾಸ ಮಾಡುವುದು, ತಂಗಳು ಆಹಾರ ಸೇವನೆ ಈ ಋತುವಿಗೆ ತಕ್ಕುದಲ್ಲ. ಇವೆಲ್ಲ ವಾಯು ಪ್ರಕೋಪ ಹೆಚ್ಚಿಸುತ್ತವೆ. ವಾತ ಹಾಗೂ ಪಿತ್ತ ಪ್ರಕೃತಿಯವರಿಗೆ ಈ ಋತು ಸರಿಯಾದುದಲ್ಲ. ಆದ್ದರಿಂದ ಕಫ ಪ್ರಕೃತಿಯವರು ಹುಳಿಯಾದ ಪದಾರ್ಥಗಳು, ಮೊಸರು, ಬಾಳೆಹಣ್ಣನ್ನು ಸೇವಿಸಬಾರದು. ವಾತ ಪ್ರಕೃತಿಯವರು ಅದರಿಂದ ಪಾರಾಗಲು ಮತ್ತು ಶರೀರದಲ್ಲಿ ಸ್ಫೂರ್ತಿ ಹೊಂದಲು ಸಾಸಿವೆ ಎಣ್ಣೆಯಿಂದ ಶರೀರವನ್ನು ಮಸಾಜ್ ಮಾಡಿಕೊಳ್ಳಬೇಕು. ಇದರಿಂದ ಸಂಧಿವಾತ, ಕೀಲುನೋವುಗಳು ಗುಣವಾಗುತ್ತವೆ ಮತ್ತು ತ್ವಚೆಯೂ ಕೋಮಲವಾಗಿ ಇರುತ್ತದೆ. ಕಫ ಮತ್ತು ಶ್ವಾಸಕೋಶಕ್ಕೆ ಸಂಬಂಧಿಸಿದ ರೋಗಿಗಳಿಗೆ ಆಕಳ ತುಪ್ಪದಲ್ಲಿ ಸೈಂಧವ ಲವಣ, ಮೆಂತೆ ಮತ್ತು ಕರ್ಪೂರ ಬೆರೆಸಿ ಎದೆಗೆ ಚೆನ್ನಾಗಿ ಮಾಲೀಷು ಮಾಡಬೇಕು.
ವೃದ್ಧರಿಗೆ ಮತ್ತು ನ್ಯುಮೋನಿಯಾ ಪೀಡಿತ ಚಿಕ್ಕ ಮಕ್ಕಳಿಗೂ ಇದು ಉಪಯುಕ್ತ. ವಾತ ಪೀಡಿತ ರೋಗಿಗಳು ಗೋಧಿ ಹಿಟ್ಟಿನಲ್ಲಿ ಮೆಂತೆ ಸೊಪ್ಪು, ಓಂ ಕಾಳು, ಬೆಳ್ಳುಳ್ಳಿ, ಈರುಳ್ಳಿ ಮತ್ತು ಹಸಿಶುಂಠಿ ಬೆರೆಸಿ ತಯಾರಿಸಿದ ಪರಾಠಾ ಸೇವಿಸಬೇಕು. ನೆಲ್ಲಿಕಾಯಿಯ ಸೇವನೆ ಈ ಋತುವಿಗೆ ತುಂಬಾ ಉಪಯುಕ್ತ. ಆದ್ದರಿಂದ ಯಾವುದೇ ರೂಪದಲ್ಲಾಗಲೀ ನೆಲ್ಲಿಕಾಯಿಯ ಸೇವನೆ ಮಾಡಬೇಕು. ಯಾವುದೇ ಔಷಧಿ ಸೇವಿಸಲು ಚಳಿಗಾಲ ಉತ್ತಮವಾದ ಕಾಲ. ಆದ್ದರಿಂದ ದೀರ್ಘ ಕಾಲದಿಂದ ಬಳಲುತ್ತಿರುವ ರೋಗಿಗಳಿಗೆ ಚಳಿಗಾಲದಲ್ಲಿ ಔಷಧ ಸೇವನೆ ಪ್ರಾರಂಭಿಸಬಹುದು. ಮಕ್ಕಳಿಗೆ ಹಾಲುಣಿಸುವ ತಾಯಂದಿರು ಪ್ರತಿನಿತ್ಯ ಒಂದು ಚಮಚ ಓಂ ಕಾಳನ್ನು ಸೇವಿಸಬೇಕು. ಇದರಿಂದ ಮಗುವಿಗೆ ಅಪಚನ ಆಗುವುದಿಲ್ಲ.
ತಪ್ಪದೆ ಈ ಟಿಪ್ಸ್ ಪಾಲಿಸಿ :
ಕೊಬ್ಬರಿ ಎಣ್ಣೆ ಮಸಾಜ್ ಅಥವಾ ಕೊಬ್ಬರಿ ಎಣ್ಣೆಯನ್ನು ಹಚ್ಚಿಕೊಂಡು ಅರ್ಧ ಗಂಟೆ ಬಳಿಕ ಸ್ನಾನ ಮಾಡುವುದರಿಂದ ಮೈ ಬಿರುಕು, ಒಣ ಚರ್ಮದ ತೊಂದರೆ ಕಡಿಮೆಯಾಗುತ್ತದೆ. ಎಣ್ಣೆ ಸ್ನಾನದಿಂದಲೂ ಚರ್ಮದ ಒಣಗುವಿಕೆ ಹೋಗಿಲ್ಲವಾದಲ್ಲಿ ಸ್ನಾನದ ಬಳಿಕ ಸ್ವಲ್ಪ ಕೊಬ್ಬರಿ ಎಣ್ಣೆಯೊಂದಿಗೆ ಸ್ವಲ್ಪ ಮಾಶ್ಚುರೈಸರ್ ಅಥವಾ ಲೋಶನ್ ನ್ನು ಮಿಶ್ರಣ ಮಾಡಿ ಹಚ್ಚಿಕೊಳ್ಳಬಹುದು. ಬಾದಾಮಿ ಎಣ್ಣೆಯನ್ನು ರಾತ್ರಿ ಹಚ್ಚಿ ಮಲಗಿದರೆ, ಬೆಳಿಗ್ಗೆ ಚರ್ಮ ಒಣಗುವುದಿಲ್ಲ. ಕಾಂತಿಯುತವಾಗಿರುತ್ತದೆ. ಇದು ಡಿ ಜೀವಸತ್ವ ಹೊಂದಿದ್ದು, ಚರ್ಮವನ್ನು ಆರೋಗ್ಯಕರವಾಗಿಡುತ್ತದೆ. ಆದರೆ ಅಲರ್ಜಿ ಇರುವವರು ಇದನ್ನು ಬಳಸದಿರುವುದು ಒಳ್ಳೆಯದು. ದ್ರಾಕ್ಷಿ ಬೀಜದ ಎಣ್ಣೆ ಇದು ವಿಟಮಿನ್ ಇ ಅಂಶವನ್ನು ಹೊಂದಿದ್ದು, ಪೋಷಣೆಯನ್ನು ಒದಗಿಸುವ ಮೂಲಕ ಚರ್ಮವನ್ನು ಆರೋಗ್ಯಕರವಾಗಿಡುತ್ತದೆ.
ಸೋಯಾ ಎಣ್ಣೆ ಇದು ಚರ್ಮದ ತೇವಾಂಶವನ್ನು ಕಾಪಾಡುವ ಜೊತೆಗೆ ಮೃದುವಾದ ಮತ್ತು ದೀರ್ಘಕಾಲದ ಹೊಳಪನ್ನು ನೀಡುತ್ತದೆ. ಹಾಲಿನ ಕೆನೆ ಅಥವಾ ಮೊಸರಿನ ಕೆನೆಯನ್ನು ಹಚ್ಚಿ ಅರ್ಧ ಗಂಟೆ ಬಳಿಕ ಸ್ನಾನ ಮಾಡುವುದರಿಂದಲೂ ಚರ್ಮದ ರಕ್ಷಣೆ ಮಾದಬಹುದು.
ಒಂದೆರಡು ಚಮಚ ಜೇನಿಗೆ ರೋಸ್ ವಾಟರ್ ಸೇರಿಸಿ ಮುಖಕ್ಕೆ ಹಚ್ಚಿ ಅರ್ಧ ಗಂಟೆ ಬಿಟ್ಟು ತೊಳೆಯುವುದು. ತೆಂಗಿನಕಾಯಿ ತುರಿದು ರುಬ್ಬಿ ರಸ ತೆಗೆಯಿರಿ. ರಸವನ್ನು ಮುಖಕ್ಕೆ ಹಚ್ಚಿ ಮಸಾಜ್ ಮಾಡುವುದು. ಯಥೇಚ್ಛವಾಗಿ ನೀರು ಕುಡಿಯಬೇಕು. ಸಾಕಷ್ಟು ತರಕಾರಿ, ಹಣ್ಣು ಸೇವನೆ ಇದರಿಂದ ಚರ್ಮ ತೇವಾಂಶ ಹೊಂದಲು ಸಹಕಾರಿಯಾಗುತ್ತದೆ. ಸ್ನಾನಕ್ಕೆ ಅತಿ ಬಿಸಿಯಾದ ನೀರಿಗಿಂತ ಉಗುರು ಬೆಚ್ಚಗಿನ ನೀರು ಬಳಸುವುದು. ಶುಷ್ಕತೆ ಹೆಚ್ಚಿಸದ ಸೌಮ್ಯವಾದ ಸೋಪ್ ಗಳ ಉಪಯೋಗ. ಸ್ನಾನದ ನಂತರ ಮೃದು ಬಟ್ಟೆಯಲ್ಲಿ ಮೈ ಒರೆಸಿಕೊಳ್ಳುವುದು ಹಾಗೂ ನಂತರ ಲೋಷನ್ ಹಚ್ಚಿಕೊಳ್ಳುವುದು.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಅನೇಕ ಏಡ್ಸ್ ರೋಗಿಗಳು ಹಸುವಿನ ಮೂತ್ರ ಚಿಕಿತ್ಸೆಯನ್ನು ತೆಗೆದುಕೊಳ್ಳುತ್ತಿದ್ದಾರೆ. ಕಳೆದ 15 ವರ್ಷಗಳಿಂದ ಮೈಗ್ರೇನ್ ಮತ್ತು ತಲೆನೋವಿನ ಬಳಲುತ್ತಿರುವ ಜನರು ಈ ಚಿಕಿತ್ಸೆಯನ್ನು ತೆಗೆದುಕೊಂಡು ಆರು ತಿಂಗಳೊಳಗೆ ಚೇತರಿಸಿಕೊಂಡಿದ್ದಾರೆ. ಕಳೆದ ಕೆಲವು ವರ್ಷಗಳಲ್ಲಿ ಹಸುವಿನ ಮೂತ್ರ ಚಿಕಿತ್ಸೆ ಮತ್ತು ಸಂಶೋಧನಾ ಕೇಂದ್ರ ಇಂದೋರ್ ಸುಮಾರು ಒಂದೂವರೆ ಲಕ್ಷ ಜನರನ್ನು ಚಿಕಿತ್ಸೆಗೆ ಒಳಪಡಿಸಿದ್ದು 85 ರಿಂದ 90 ರಷ್ಟು ಮಲಬದ್ಧತೆ ತೊಂದರೆ ಇರುವ ರೋಗಿಗಳಲ್ಲಿ ಹೊಟ್ಟೆನೋವು ಹಾಗು ಮಲಬದ್ಧತೆ ತಿಳಿದುಬಂದಿದೆ.
; ಅರ್ಜಿ ಆಹ್ವಾನಭಾರತ್ ಇಲೆಕ್ಟ್ರಾನಿಕ್ಸ್ ಲಿಮಿಟೆಡ್ ಪ್ರಾಜೆಕ್ಟ್ ಇಂಜಿನಿಯರ್ ಮತ್ತು ಟ್ರೇನಿ ಇಂಜಿನಿಯರ್ ಹುದ್ದೆಗಳ ಭರ್ತಿಗಾಗಿ ನೇಮಕಾತಿ ಅಧಿಸೂಚನೆ ಪ್ರಕಟಿಸಿದೆ.ವಿದ್ಯಾರ್ಹತೆಬಿಇ / ಬಿ.ಟೆಕ್ ವಿದ್ಯಾರ್ಹತೆಯನ್ನು ಸಿವಿಲ್, ಇಲೆಕ್ಟ್ರಿಕಲ್, ಮೆಕ್ಯಾನಿಕಲ್, ಕಂಪ್ಯೂಟರ್ ಸೈನ್ಸ್, ಇಲೆಕ್ಟ್ರಾನಿಕ್ಸ್ ಕಂಮ್ಯೂನಿಕೇಷನ್ , ಇಲೆಕ್ಟ್ರಾನಿಕ್ಸ್ ಅಂಡ್ ಟೆಲಿಕಂಮ್ಯೂನಿಕೇಷನ್ ವಿಭಾಗಗಳಲ್ಲಿ ಪಡೆದಿರಬೇಕು.ಪ್ರಾಜೆಕ್ಟ್ ಇಂಜಿನಿಯರ್ ಹುದ್ದೆಗಳಿಗೆ ರೂ.500, ಟ್ರೇನಿ ಇಂಜಿನಿಯರ್ ಹುದ್ದೆಗಳಿಗೆ ರೂ.200. ಅಪ್ಲಿಕೇಶನ್ ಶುಲ್ಕವನ್ನು ಆನ್ಲೈನ್ ಮೂಲಕವೇ ಪಾವತಿಸಬಹುದು.ಪ್ರಾಜೆಕ್ಟ್ ಇಂಜಿನಿಯರ್ ಹುದ್ದೆಗಳಿಗೆ ಗರಿಷ್ಠ 28 ವರ್ಷ, ಟ್ರೇನಿ ಇಂಜಿನಿಯರ್ ಹುದ್ದೆಗಳಿಗೆ ಗರಿಷ್ಠ 25 ವರ್ಷವನ್ನು ದಿನಾಂಕ…
ಒಂದೆಕರೆ ಕ್ಷಣದಲ್ಲೇ ಪರಿಹಾರಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ಜ್ಯೋತಿಷ್ಯ ಭವನ ನಿಮ್ಮ ಸಮಸ್ಯೆಯನ್ನು ಇರಲಿ ಎಷ್ಟೇ ಕಠಿಣವಾಗಿರಲಿ ಉಚಿತ ಭವಿಷ್ಯ ಖಚಿತ ಪರಿಹಾರ ತುಳು ನಾಡಿನ ಹಿರಿಯ ಬ್ರಾಹ್ಮಣರಾದ ಗುರುಗಳಾದ ಶ್ರೀ ವಿಶ್ವರೂಪ ಆಚಾರ್ಯರು ಯರು 9739124121ಶ್ರೀ ಕ್ಷೇತ್ರ ಧರ್ಮಸ್ಥಳ ನುಡಿದಂತೆ ನಡೆಯುವುದು ಮೇಷ:- ನಿಮ್ಮದೇ ಆದ ಭಾವನಾಲೋಕದಲ್ಲಿರುವ ನಿಮಗೆ ವ್ಯವಹಾರ, ವಹಿವಾಟುಗಳು ಕೆಲವು ರೀತಿಯಲ್ಲಿ ತೊಂದರೆಯನ್ನುಂಟು ಮಾಡುವ ಸಾಧ್ಯತೆ ಇದೆ. ಪರಾಕ್ರಮದ ಕೆಲಸ ಅಥವಾ ಸಂವಹನ ಕಾರ್ಯಗಳಲ್ಲಿ ಹಿನ್ನಡೆ ಅನುಭವಿಸಬೇಕಾಗುವುದು..ನಿಮ್ಮ ಸಮಸ್ಯೆಏನೇಇರಲಿ ಎಷ್ಟೇ ಕಠಿಣವಾಗಿರಲಿ…
ಸ್ಯಾಂಡಲವುಡ್ನಲ್ಲಿ ಹೊಸತನದಿಂದ ಗೆದ್ದಿದ್ದ ಚಿತ್ರ ಲೂಸಿಯಾ ಎಲ್ಲರ ಗಮನವನ್ನು ಸೆಳೆದಿದ್ದದ್ದು ಆ ಚಿತ್ರದಲ್ಲಿ ಹೀರೋ ಸತೀಶ್ ತೆಗೆದುಕೊಳ್ಳುತ್ತಿದ್ದ ಮಾತ್ರೆಯಿಂದ. ಇದೀಗಾ ಅಂತಹದ್ದೇ ಮಾತ್ರೆ ಬೆಂಗಳೂರಿಗೆ ಕಾಲಿಟ್ಟಿದ್ದು, ಟೆಕ್ಕಿ ಮತ್ತು ಕಾಲೇಜ್ ಸ್ಟೂಡೆಂಟ್ಗಳನ್ನು ಗಮನದಲ್ಲಿಟ್ಟುಕೊಂಡು ಈ ಗುಳಿಗೆ ಮಾರಾಟ ನಡೆಯುತ್ತಿದೆ ಎನ್ನಲಾಗಿದೆ. ಎಂತಹ ಮನುಷ್ಯನಾದರೂ ಕನಿಷ್ಠ 8-10 ಗಂಟೆಗಳ ಕಾಲ ಅಮಲಿನಲ್ಲಿ ಇಡಬಹುದಾದ ಈ ಮಾತ್ರೆ ಮಾದಕ ವಸ್ತುಗಳನ್ನು ಮೀರಿಸುವಷ್ಟು ಶಕ್ತಿ ಹೊಂದಿದೆ. ವಿದೇಶದಿಂದ ಬರುವ ಈ ಟ್ಯಾಬ್ಲೆಟ್ ಮೂಲ ಬರ್ಮಾ. ಒಂದು ಟ್ಯಾಬ್ಲೆಟ್ನ ಬೆಲೆ 1000 ರೂಪಾಯಿ….
ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕಚಿಂತಕರು 9663218892 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗೂನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನುಅಳಿಸಬಹುದು ಮತ್ತು ಪ್ರಶ್ನೆಗಳಿಗೆಉತ್ತರಿಸಬಹುದುಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ದಿನದಲ್ಲಿ ಶಾಶ್ವತ ಪರಿಹಾರ 966 321 8892 ಮೇಷ(12 ಏಪ್ರಿಲ್, 2019) ಇದು ನಿಮ್ಮ ಆರೋಗ್ಯದ ಬಗ್ಗೆ ಚಿಂತಿಸಬೇಕಾಗಿಲ್ಲ. ನಿಮ್ಮ ಸುತ್ತಲಿನ ಜನರು ನಿಮ್ಮ ಸ್ಥೈರ್ಯ ಮತ್ತು…
ದಕ್ಷಿಣ ಭಾರತದ ಪ್ರಮುಖ ಬ್ರೇಕ್ಫಾಸ್ಟ್ಗಳಲ್ಲಿ ಇಡ್ಲಿ ಕೂಡಾ ಒಂದು. ಪ್ರತಿಯೊಬ್ಬರ ಫೇವರಿಟ್ ತಿಂಡಿಯಾಗಿರುವ ಬಿಸಿ ಬಿಸಿ ಇಡ್ಲಿಗಳು ಆರೋಗ್ಯಕ್ಕೂ ಉತ್ತಮ. ಇದರಲ್ಲಿ ಕೊಬ್ಬು, ಕೊಲೆಸ್ಟ್ರಾಲ್ ಇಲ್ಲ. ಕ್ಯಾಲೊರಿ ಅಂಶವೂ ಅತ್ಯಂತ ಕಡಿಮೆ ಇದೆ. ಹೊಟ್ಟೆಗೂ ಹಿತವಾಗಿರುವ ಈ ಆಹಾರದಲ್ಲಿ ಹಲವಾರು ವೆರೈಟಿಗಳಿವೆ.